Just In
Don't Miss
- News
ಹಿರಿಯ ಸಾಹಿತಿ ಡಾ.ಎನ್.ಎಸ್ ಲಕ್ಷ್ಮೀನಾರಾಯಣ ಭಟ್ಟ ನಿಧನ, ಸಿಎಂ ಸಂತಾಪ
- Automobiles
ಎಲೆಕ್ಟ್ರಿಕ್ ಬಸ್ಸುಗಳ ಬಳಕೆಯಲ್ಲಿ ಲಂಡನ್ ನಗರವನ್ನು ಹಿಂದಿಕ್ಕಿದ ಕೋಲ್ಕತ್ತಾ
- Movies
ಬಾಲಿವುಡ್ ಚಿತ್ರದ ಶೂಟಿಂಗ್ ಆರಂಭಿಸಿದ ರಶ್ಮಿಕಾ ಮಂದಣ್ಣ
- Sports
ಭಾರತ vs ಇಂಗ್ಲೆಂಡ್, 4ನೇ ಟೆಸ್ಟ್ ಪಂದ್ಯ, 3ನೇ ದಿನ, Live ಸ್ಕೋರ್
- Lifestyle
ಬೆಂಗಳೂರಿನಲ್ಲಿ ಬಸ್ ಸ್ಟೇರಿಂಗ್ ಹಿಡಿದ ಮೊದಲ ಮಹಿಳೆ ಪ್ರೇಮಾ ರಾಮಪ್ಪ
- Finance
ತೈಲ ಉತ್ಪಾದನೆ ಹೆಚ್ಚಿಸದಿರಲು ಒಪೆಕ್ ತೀರ್ಮಾನ: ಭಾರತದ ಆರ್ಥಿಕ ಚೇತರಿಕೆ ಮೇಲೆ ಪರಿಣಾಮ
- Education
KSCCF Recruitment 2021: 45 ಲೆಕ್ಕಿಗರು, ಎಫ್ಡಿಎ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಪೊಕೊ M3 ಮತ್ತು ರಿಯಲ್‌ಮಿ 7i ಫೋನ್‌ಗಳ ಹೋಲಿಕೆ: ಖರೀದಿಗೆ ಯಾವುದು ಯೋಗ್ಯ?
ಜನಪ್ರಿಯ ಪೊಕೊ ಮೊಬೈಲ್ ಕಂಪನಿಯು ಹೊಸದಾಗಿ ಭಾರತೀಯ ಮಾರುಕಟ್ಟೆಗೆ ಪೊಕೊ M3 ಸ್ಮಾರ್ಟ್‌ಫೋನ್ ಅನ್ನು ಅನಾವರಣ ಮಾಡಿದೆ. ಬಜೆಟ್ ದರದಲ್ಲಿ ಬಿಡುಗಡೆ ಆಗಿರುವ ಈ ಫೋನ್ ಗ್ರಾಹಕರನ್ನು ಆಕರ್ಷಿಸಿದೆ. ಅದೇ ರೀತಿ ರಿಯಲ್‌ಮಿ ಮೊಬೈಲ್ ಕಂಪನಿಯ ರಿಯಲ್ ಮಿ 7i ಸ್ಮಾರ್ಟ್‌ಫೋನ್ ಸಹ ಬಜೆಟ್ ದರದಲ್ಲಿ ಗ್ರಾಹಕರನ್ನು ಸೆಳೆದಿದೆ. ಇವೆರಡರ ಫೀಚರ್ಸ್‌ಗಳೊಂದಿಗೆ ಹೋಲಿಕೆ ಮಾಡಿ ನೋಡಿದರೇ ಯಾವುದು ಬೆಸ್ಟ್?

ಹೌದು, ಪೊಕೊ M3 ಹಾಗೂ ರಿಯಲ್‌ಮಿ 7i ಸ್ಮಾರ್ಟ್‌ಫೋನ್ ಈ ಎರಡು ಸ್ಮಾರ್ಟ್‌ಫೋಣ್‌ಗಳು 12000ರೂ. ಬೆಲೆಯ ಒಳಗೆ ಗಮನ ಸೆಳೆದಿವೆ. ಕೆಲವು ಫೀಚರ್ಸ್‌ಗಳಲ್ಲಿ ಸಾಮ್ಯತೆ ಕಂಡುಬಂದರೂ, ಇವೆರಡು ಫೋನ್‌ಗಳಲ್ಲಿ ಭಿನ್ನತೆ ಇದೆ. ಹಾಗೆಯೇ ಬ್ಯಾಟರಿ, ಲುಕ್, ಕ್ಯಾಮೆರಾ, ಪ್ರೊಸೆಸರ್ ಭಿನ್ನತೆಗಳನ್ನು ಕಾಣಬಹುದು. ಹಾಗಾದರೇ ಪೊಕೊ ಪೊಕೊ M3 ಹಾಗೂ ರಿಯಲ್‌ಮಿ 7i ಸ್ಮಾರ್ಟ್‌ಫೋನ್‌ಗಳಲ್ಲಿ ಖರೀದಿಗೆ ಯಾವುದು ಉತ್ತಮ? ಇವೆರಡು ಫೋನ್‌ಗಳ ಕಂಪ್ಲೀಟ್ ಫೀಚರ್ಸ್ ಮಾಹಿತಿ ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ ರಚನೆ ಹಾಗೂ ಭಿನ್ನತೆಗಳೆನು
ಪೊಕೊ M3 ಸ್ಮಾರ್ಟ್‌ಫೋನ್ 1,080x2,340 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.53-ಇಂಚಿನ ಫುಲ್ ಹೆಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇ 19.5:9 ರಚನೆಯ ಅನುಪಾತವನ್ನು ಹೊಂದಿದ್ದು, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಪ್ರೊಟೆಕ್ಷನ್ ಅನ್ನು ಹೊಂದಿದೆ. ಅದೇ ರೀತಿ ರಿಯಲ್‌ಮಿ 7i ಸ್ಮಾರ್ಟ್‌ಫೋನ್ 6.5 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಮಾದರಿಯನ್ನು ಹೊಂದಿದೆ. ಹಾಗೆಯೇ ಡಿಸ್‌ಪ್ಲೇಯ ಸ್ಕ್ರೀನ್ ರೀಫ್ರೇಶ್ ರೇಟ್ 90Hz ಆಗಿದೆ. ಇದರೊಂದಿಗೆ ಡಿಸ್‌ಪ್ಲೇಯು ಉತ್ತಮ ಪಿಕ್ಸಲ್ ರೆಸಲ್ಯೂಶನ್ ಪಡೆದಿದೆ.

ಪ್ರೊಸೆಸರ್ ಯಾವುದು?..ಕಾರ್ಯ ಹೇಗೆ?
ಪೊಕೊ M3 ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 662 SoC ಪ್ರೊಸೆಸರ್ ಸಾಮರ್ಥ್ಯವನ್ನು ಹೊಂದಿದ್ದು, ಆಂಡ್ರಾಯ್ಡ್ 10 ನಲ್ಲಿ MIUI 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 6GB RAM ಮತ್ತು 64GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. ಇದಲ್ಲದೆ ಮೆಮೊರಿ ಕಾರ್ಡ್ ಮೂಲಕ 512GB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ. ಹಾಗೆಯೇ ರಿಯಲ್‌ಮಿ 7i ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 662 ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 10 ಓಎಸ್ ಸಪೋರ್ಟ್ ಪಡೆದಿದೆ. ಹಾಗೆಯೇ 8GB RAM ಮತ್ತು 128GB ಆಂತರಿಕ ಸ್ಟೋರೇಜ್ ವೇರಿಯಂಟ್ ಆಯ್ಕೆ ಹೊಂದಿದೆ.

ಕ್ಯಾಮೆರಾ ವಿಶೇಷತೆ ಏನು?
ಪೊಕೊ M3 ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಒಳಗೊಂಡಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇನ್ನು ರಿಯಲ್‌ಮಿ 7i ಸ್ಮಾರ್ಟ್‌ಫೋನ್ ಕ್ವಾಡ್ ಕ್ಯಾಮೆರಾ ಸೆಟ್‌ಅಪ್ ರಚನೆಯನ್ನು ಹೊಂದಿದ್ದು, ಮುಖ್ಯ ಕ್ಯಾಮೆರಾವು 64ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಸೆಕೆಂಡರಿ ಕ್ಯಾಮೆರಾವು 8ಎಂಪಿ ಸೆನ್ಸಾರ್ ಪಡೆದಿದ್ದು, ಉಳಿದಂತೆ ತೃತೀಯ ಹಾಗೂ ನಾಲ್ಕನೇ ಕ್ಯಾಮೆರಾಗಳು 2ಎಂಪಿ ಸೆನ್ಸಾರ್‌ನಲ್ಲಿ ಇವೆ. ಇನ್ನು ಸೆಲ್ಫಿ ಕ್ಯಾಮೆರಾವು 16ಎಂಪಿ ಸೆನ್ಸಾರ್ ಪಡೆದಿದೆ.

ಬ್ಯಾಟರಿ ಸಾಮರ್ಥ್ಯ ಹೇಗಿದೆ?
ಪೊಕೊ M3 ಸ್ಮಾರ್ಟ್‌ಫೋನ್ 6,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G VOLTE, ವೈ-ಫೈ, ಬ್ಲೂಟೂತ್, GPS, ಇನ್ಫ್ರಾರೆಡ್ (IR) ಬ್ಲಾಸ್ಟರ್, USB ಟೈಪ್-ಸಿ, ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಸೇರಿವೆ. ಅದೇ ರೀತಿ ರಿಯಲ್‌ಮಿ 7i ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸಾಮರ್ಥ್ಯವನ್ನು ಒಳಗೊಂಡಿದೆ. ಇದರೊಂದಿಗೆ 18W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಪಡೆದಿದೆ. ಹಾಗೆಯೇ ಫಿಂಗರ್‌ಪ್ರಿಂಟ್ ಸೆನ್ಸಾರ್, ಮೈಕ್ರೋ-USB ಪೋರ್ಟ್, ಬ್ಲೂಟೂತ್ v5.0 ಸೌಲಭ್ಯಗಳನ್ನು ಒಳಗೊಂಡಿದೆ.

ಬೆಲೆ ಎಷ್ಟು?
ಭಾರತದಲ್ಲಿ ಪೊಕೊ M3 ಬೆಲೆ 6GB RAM+ 64GB ಶೇಖರಣಾ ರೂಪಾಂತರಕ್ಕೆ 10,999 ರೂ. ಹಾಗೂ 6GB RAM + 128GB ಶೇಖರಣಾ ಮಾದರಿಯ ಬೆಲೆ 11,999 ರೂ. ಆಗಿದೆ. ಇನ್ನು ರಿಯಲ್‌ಮಿ 7i ಸ್ಮಾರ್ಟ್‌ಫೋನ್ 4GB + 64GB ವೇರಿಯಂಟ್ ಬೆಲೆಯು 11,999 ರೂ. ಆಗಿದೆ. 4GB + 128GB ವೇರಿಯಂಟ್ ಬೆಲೆಯು 12,999ರೂ. ಆಗಿದೆ.
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190