ಇದೇ 27ಕ್ಕೆ ರಿಯಲ್ ಮಿ 2 ಪ್ರೋ ಸ್ಮಾರ್ಟ್‌ಫೋನ್‌ ಫ್ಲಿಪ್‌ಕಾರ್ಟ್‌ನಲ್ಲಿ ಲಾಂಚ್‌..!

|

ರಿಯಲ್ ಮಿ ಸಂಸ್ಥೆಯ ಮೂರನೇ ಸ್ಮಾರ್ಟ್ ಫೋನ್ ರಿಯಲ್ ಮಿ 2 ಪ್ರೋ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದ್ದು ಸೆಪ್ಟೆಂಬರ್ 27 ಕ್ಕೆ ಬಿಡುಗಡೆಗೊಳ್ಳಲಿದೆ. ಕೆಲವು ದಿನಗಳಿಂದ ಈ ಫೋನ್ ಬಗೆಗಿನ ಗಾಸಿಪ್ ಗಳು, ಗಾಳಿಸುದ್ದಿಗಳು ಹತ್ತು ಹಲವು. ಮಿಡ್ ರೇಂಜಿನ ಈ ಸ್ಮಾರ್ಟ್ ಫೋನ್ ನಲ್ಲಿ ಏನಿರಲಿದೆ, ಏನಿರುವುದಿಲ್ಲ ಎಂಬ ಬಗ್ಗೆಗಳು ಸುದ್ದಿಗಳಿಗೆ ರೆಕ್ಕೆಪುಕ್ಕ ಬಂದು ಬಿಟ್ಟಿದೆ.

ಇದೇ 27ಕ್ಕೆ ರಿಯಲ್ ಮಿ 2 ಪ್ರೋ ಸ್ಮಾರ್ಟ್‌ಫೋನ್‌ ಫ್ಲಿಪ್‌ಕಾರ್ಟ್‌ನಲ್ಲಿ ಲಾಂಚ್‌..

ಇದೀಗ ಫ್ಲಿಪ್ ಕಾರ್ಟ್ ಅಧಿಕೃತವಾಗಿ ರಿಯಲ್ ಮಿ 2 ಪ್ರೋ ಗಾಗಿ ಒಂದು ಪೇಜ್ ತೆರೆದಿದ್ದು , ಈ ಡಿವೈಸ್ ಎಕ್ಸ್ ಕ್ಲೂಸೀವ್ ಆಗಿ ನಮ್ಮಲ್ಲಿ ಲಭ್ಯವಾಗುತ್ತದೆ ಎಂದು ತಿಳಿಸಿದೆ. ಇದರಲ್ಲಿ ವಾಟರ್ ಡ್ರಾಪ್ ಡಿಸ್ಪ್ಲೇ ಇರಲಿದೆ ಎಂದು ಹೇಳಿದೆ.

ಡಿಸ್ಪ್ಲೇ ಹೈಲೆಟ್

ಡಿಸ್ಪ್ಲೇ ಹೈಲೆಟ್

ಇತ್ತೀಚೆಗೆ ರಿಯಲ್ ಮಿ 2 ಪ್ರೋ ಜಾಹಿರಾತೊಂದರಲ್ಲಿ ಪ್ರಕಟಿಸಿರುವಂತೆ ಇದರಲ್ಲಿ ವಾಟರ್ ಡ್ರಾಪ್ ನಾಚ್ ನಂತಹ ಡಿಸ್ಪ್ಲೇ ಇರಲಿದ್ದು ಓಪ್ಪೋ ಎಫ್9 ಪ್ರೊ ನಂತೆ ಇರುತ್ತದೆ. ಆದರೆ ಎಫ್ 9 ಪ್ರೋ ಬೆಲೆ 25,000 ರುಪಾಯಿ ಆಗಿದೆ. ರಿಯಲ್ ಮಿ 2 ಪ್ರೊ ಬೆಲೆಯು ಕೇವಲ 20,000 ರುಪಾಯಿ ಒಳಗೆ ಇರಲಿದೆ ಎಂದು ಅಂದಾಜಿಸಲಾಗುತ್ತಿದೆ.

ವಾಟರ್ ಡ್ರಾಪ್ ಡಿಸ್ಪ್ಲೇಯ ಕಡಿಮೆ ಬೆಲೆಯ ಫೋನ್:

ವಾಟರ್ ಡ್ರಾಪ್ ಡಿಸ್ಪ್ಲೇಯ ಕಡಿಮೆ ಬೆಲೆಯ ಫೋನ್:

ಹೌದು ವಾಟರ್ ಡ್ರಾಪ್ ಡಿಸ್ಪ್ಲೇ ಹೊಂದಿರುವ ಅತ್ಯಂತ ಕಡಿಮೆ ಬೆಲೆಯ ಫೋನ್ ರಿಯಲ್ ಮಿ 2 ಪ್ರೋ ಎಂದೆನಿಸಿಕೊಳ್ಳಲಿದೆ. ನಾಚ್ ಬಹಳ ಚಿಕ್ಕದಾಗಿದ್ದು ಇತರೆ ಆಂಡ್ರಾಯ್ಡ್ ಫೋನ್ ಗಳಿಗೆ ಹೋಲಿಸಿದರೆ ಐಫೋನ್ ಎಕ್ಸ್ ನಂತಹ ಅಧ್ಬುತ ನಾಚ್ ನ್ನು ಇದು ಹೊಂದಿರುತ್ತದೆ. ರಿಯಲ್ ಮಿ 2 ಗಿಂತ ದೊಡ್ಡ ಡಿಸ್ಪ್ಲೇಯನ್ನು ರಿಯಲ್ ಮಿ 2 ಪ್ರೊ ಹೊಂದಿರಲಿದೆ.

ಇತರೆ ವೈಶಿಷ್ಟ್ಯತೆಗಳು:

ಇತರೆ ವೈಶಿಷ್ಟ್ಯತೆಗಳು:

6.3 ಇಂಚಿನ ಅಥವಾ 6.4 ಇಂಚಿನ FHD+ ಡಿಸ್ಪ್ಲೇಯನ್ನು ಇದು ಹೊಂದಿರಲಿದ್ದು ರಿಯಲ್ ಮಿ2 ನಂತೆಯೇ ಫಾರ್ಮ್ ಫ್ಯಾಕ್ಟರ್ ನ್ನು ಒಳಗೊಂಡಿರುತ್ತದೆ. ಫ್ಲಿಫ್ ಕಾರ್ಟ್ ಈಗಾಗಲೇ ಹೇಳಿರುವಂತೆ ಇದು ಸ್ನ್ಯಾಪ್ ಡ್ರ್ಯಾಗನ್ 660 ಎಐಇ ಚಿಪ್ ಸೆಟ್ ನ್ನು ಹೊಂದಿದ್ದು ಎಂಐ ಎ2, ವಿವೋ ವಿ11 ಪ್ರೋ ಮತ್ತು ನೋಕಿಯಾ 7 ಪ್ಲಸ್ ನಲ್ಲಿರುವ ಪ್ರೊಸೆಸರ್ ನ್ನೇ ಒಳಗಡೆ ಹೊಂದಿರುತ್ತದೆ.

ಸ್ಟೋರೇಜ್ ಲಭ್ಯತೆ ಎಷ್ಟು?

ಸ್ಟೋರೇಜ್ ಲಭ್ಯತೆ ಎಷ್ಟು?

ಗೀಗ್ಬೆಂಚ್ ಈ ವಾರ ಪಟ್ಟಿ ತಯಾರಿಸಿರುವ ಪ್ರಕಾರವೇ ಹೇಳುವುದಾದರೆ ರಿಯಲ್ ಮಿ 2 ಪ್ರೋ 8ಜಿಬಿ ಮೆಮೊರಿ ಮತ್ತು 128 ಜಿಬಿ ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆಯನ್ನು ಹೊಂದಿರುತ್ತದೆ. ಇದು ಭಾರತದಲ್ಲಿ ಲಭ್ಯವಾಗುವ ಎಸ್ ಡಿ 660 ಯ ಮೊದಲ ಫೋನ್ ಆಗಿರುತ್ತದೆ. ಆಂಡ್ರಾಯ್ಡ್ 8.1 ಓರಿಯೋ ಜೊತೆಗೆ ColourOS 5.2ನ್ನು ಇದು ಹೊಂದಿರುತ್ತದೆ.

ಕ್ಯಾಮರಾ ವೈಶಿಷ್ಟ್ಯತೆಗಳು:

ಕ್ಯಾಮರಾ ವೈಶಿಷ್ಟ್ಯತೆಗಳು:

ರಿಯಲ್ ಮಿ 2 ಪ್ರೋ ಡುಯಲ್ ಕ್ಯಾಮರಾ ಸೆಟ್ ಅಪ್ ನ್ನು ಹಿಂಭಾಗದಲ್ಲಿ ಹೊಂದಿದ್ದು ಮುಂಭಾಗದಲ್ಲಿ ಸೆಲ್ಫೀ ಕ್ಯಾಮರಾ ಒಳಗೊಂಡಿರುತ್ತದೆ. ಆದರೆ ಸೆನ್ಸರ್ ಗಳು ಇರಲಿವೆಯೇ ಎಂಬ ಬಗ್ಗೆ ಇನ್ನೂ ಖಚಿತತೆ ಇಲ್ಲ. ರಿಯಲ್ ಮಿ ಯಲ್ಲಿ 13MP + 2MP ಕ್ಯಾಮರಾವನ್ನು ನಿರೀಕ್ಷಿಸಲಾಗುತ್ತಿದ್ದು, ಮುಂಭಾಗದಲ್ಲಿ 8MP ಕ್ಯಾಮರಾವಿರುವ ಬಗ್ಗೆ ಮಾಹಿತಿ ಇದೆ.

ಎಂಐ ಎ2 ಗೆ ನೀಡಲಿದೆ ನೇರ ಸ್ಪರ್ಧೆ:

ಎಂಐ ಎ2 ಗೆ ನೀಡಲಿದೆ ನೇರ ಸ್ಪರ್ಧೆ:

ದೊಡ್ಡ ಬ್ಯಾಟರಿಯನ್ನು ಇದು ಒಳಗೊಂಡಿದ್ದು ಅದರ ಸಾಮರ್ಥ್ಯ 4,230mAh ಆಗಿರುವ ಸಾಧ್ಯತೆ ಇದೆ ಯಾಕೆಂದರೆ ಈಗಾಗಲೇ ಬಿಡುಗಡೆಗೊಂಡಿರುವ ರಿಯಲ್ ಮಿ 2 ನಲ್ಲಿ ಇದೇ ಸಾಮರ್ಥ್ಯದ ಬ್ಯಾಟರಿ ಇದೆ. ಒಟ್ಟಾರೆ ಈಗ ಸಿಕ್ಕಿರುವ ವೈಶಿಷ್ಟ್ಯತೆಗಳ ಆಧಾರದಲ್ಲಿಯೇ ಹೇಳುವುದಾದರೆ ಎಂಐ ಎ2 ಗೆ ನೇರವಾಗಿ ಸ್ಪರ್ಧೆಯೊಡ್ಡುವ ಫೋನ್ ಇದಾಗಿರುತ್ತದೆ ಎಂಬುದನ್ನು ಮಾತ್ರ ಹೇಳಬಹುದು. ಎಲ್ಲದಕ್ಕೂ ಉತ್ತರ ಸೆಪ್ಟೆಂಬರ್ 27 ರಂದು ಸಿಗುತ್ತದೆ.

Best Mobiles in India

English summary
Realme 2 Pro will be Flipkart exclusive, launch on September 27. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X