ಏಪ್ರಿಲ್ ನಲ್ಲಿ ಬಿಡುಗಡೆಗೊಳ್ಳಲಿದೆ ರಿಯಲ್ ಮಿ3 ಪ್ರೋ: ರೆಡ್ಮಿ ನೋಟ್ 7 ಪ್ರೊ ಜೊತೆಗೆ ಸ್ಪರ್ಧೆ

By Gizbot Bureau
|

ರಿಯಲ್ ಮಿ ಅಧಿಕೃತವಾಗಿ ರಿಯಲ್ ಮಿ 3 ಯನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಸದ್ಯ ಭಾರತದಲ್ಲಿ ಕೈಗೆಟುಕುವ ಬೆಲೆಯಲ್ಲಿ ಸಿಗುವ ಅತ್ಯದ್ಭುತ ಫೋನ್ ಇದಾಗಿದ್ದು ಮೀಡಿಯಾ ಟೆಕ್ ಹೆಲಿಯೋ ಪಿ70 ಸಾಕೆಟ್ ನ್ನು ಇದು ಹೊಂದಿದೆ ಮತ್ತು ಇದರ ಬೆಲೆ ಕೇವಲ 8,999 ರುಪಾಯಿಗಳು.

ಏಪ್ರಿಲ್ ನಲ್ಲಿ ಬಿಡುಗಡೆಗೊಳ್ಳಲಿದೆ ರಿಯಲ್ ಮಿ3 ಪ್ರೋ

ಬಿಡುಗಡೆ ಕಾರ್ಯಕ್ರಮದಲ್ಲಿ ಕಂಪೆನಿಯು ರಿಯಲ್ ಮಿ 3 ಪ್ರೋ ಎಪ್ರಿಲ್ 2019 ರಂದು ಬಿಡುಗಡೆಗೊಳ್ಳುತ್ತದೆ ಎಂಬುದನ್ನು ಕೂಡ ಖಾತ್ರಿಗೊಳಿಸಿದೆ.

ರಿಯಲ್ ಮಿ 3 ಪ್ರೋ ನಾವು ಅಂದುಕೊಂಡಿದ್ದಕ್ಕಿಂತ ಬೇಗನೆ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ಮಾಧವ್ ಸೇಠ್ ಅವರು ಅಭಿಪ್ರಾಯ ಪಡುವಂತೆ ರಿಯಲ್ ಮಿ 3 ಪ್ರೋ ಎಪ್ರಿಲ್ 2019 ಕ್ಕೆ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದ್ದು ರೆಡ್ಮಿ ನೋಟ್ 7 ಪ್ರೊ ಗೆ ಸ್ಪರ್ಧೆಯೊಡ್ಡಲಿದೆ.

ರಿಯಲ್ ಮಿ3 ಪ್ರೋ- ವೇಗದ ಸ್ಮಾರ್ಟ್ ಫೋನ್:

ರಿಯಲ್ ಮಿ3 ಪ್ರೋ- ವೇಗದ ಸ್ಮಾರ್ಟ್ ಫೋನ್:

ರಿಯಲ್ ಮಿ ಸಂಸ್ಥೆ ಈಗಾಗಲೇ ರಿಯಲ್ ಮಿ 3 ಯ ಟೀಸರ್ ಬಿಡುಗಡೆಗೊಳಿಸದೆ ಮತ್ತು ಇದು ರೆಡ್ಮಿ ನೋಟ್ 7 ಪ್ರೊ ಗೆ ಹೋಲಿಸಿದರೆ ಬಹಳ ವೇಗವಾಗಿ ಕಾರ್ಯ ನಿರ್ವಹಿಸುವ ಸ್ಮಾರ್ಟ್ ಫೋನ್ ಎನ್ನಲಾಗಿದೆ. ಈ ಸ್ಮಾರ್ಟ್ ಫೋನ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 675 ಅಥವಾ ಮೀಡಿಯಾ ಟೆಕ್ ಹೆಲಿಯೋ ಪಿ90 ಸಾಕೆಟ್ ನಿಂದ ನಿರ್ಮಾಣವಾಗಿರುತ್ತದೆ ಜೊತೆಗೆ ಕನಿಷ್ಟ 4 GB RAM ಮತ್ತು 64 GB ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆಯನ್ನು ಕೂಡ ಹೊಂದಿರುತ್ತದೆ.

ಡಿಸ್ಪ್ಲೇ ವೈಶಿಷ್ಟ್ಯತೆಗಳು:

ಡಿಸ್ಪ್ಲೇ ವೈಶಿಷ್ಟ್ಯತೆಗಳು:

ಮಾರುಕಟ್ಟೆಯಲ್ಲಿನ ಸ್ಪರ್ಧೆಯನ್ನು ಗಮನಿಸಿ ಇದರಲ್ಲಿ ಡಿಸ್ಪ್ಲೇ ಜೊತೆಗೆ ಇನ್ ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸೆನ್ಸರ್ ನ್ನು ತಯಾರಕರು ಅಳವಡಿಸುವ ಸಾಧ್ಯತೆ ಇದೆ ಜೊತೆಗೆ ಒಟ್ಟಾರೆ ಇದರ ಲುಕ್ ಮತ್ತು ಸ್ಮಾರ್ಟ್ ಫೋನ್ ನಲ್ಲಿ ಅತ್ಯುತ್ತಮ ಅನುಭವವನ್ನು ಗ್ರಾಹಕರಿಗೆ ನೀಡುವಂತೆ ಡಿಸೈನ್ ಮಾಡಲಾಗಿರುತ್ತದೆ.

ಕ್ಯಾಮರಾ ಮತ್ತು ಬ್ಯಾಟರಿ:

ಕ್ಯಾಮರಾ ಮತ್ತು ಬ್ಯಾಟರಿ:

ರಿಯಲ್ ಮಿ3 ಪ್ರೋ ಡುಯಲ್ ಕ್ಯಾಮರಾ ಸೆಟ್ ಅಪ್ ನ್ನು ಹೊಂದಿರಲಿದೆ ಮತ್ತು ಹೈ- ರೆಸಲ್ಯೂಷನ್ನಿನ ಸೆಲ್ಫೀ ಕ್ಯಾಮರಾವನ್ನು ಇದು ಒಳಗೊಂಡಿರಲಿದೆ. ರಿಯಲ್ ಮಿ3ಯಂತೆ ಇದರಲ್ಲೂ ಕೂಡ ದೊಡ್ಡ ಬ್ಯಾಟರಿ ವ್ಯವಸ್ಥೆ ಇರಲಿದ್ದು ಕನಿಷ್ಟ 4000 mAh ಸಾಮರ್ಥ್ಯ ಬ್ಯಾಟರಿಯನ್ನು ಅಳವಡಿಸಲಾಗಿರುವ ಸಾಧ್ಯತೆ ಇದೆ. ಜೊತೆಗೆ ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆಯು USB ಟೈಪ್ C ಪೋರ್ಟ್ ನಿಂದ ಸಾಧ್ಯವಾಗಲಿದೆ.

ಬೆಲೆ:

ಬೆಲೆ:

ಅಂತಿಮವಾಗಿ ಬೆಲೆಯ ವಿಚಾರಕ್ಕೆ ಬಂದರೆ ರಿಯಲ್ ಮಿ 3 ಪ್ರೋ ಅಂದಾಜು Rs 14,000 ರಿಂದ Rs 15,000 ರುಪಾಯಿಯಲ್ಲಿ ಬೇಸ್ ವೇರಿಯಂಟ್ ಸಿಗುವ ಸಾಧ್ಯತೆ ಇದೆ. ರೆಡ್ಮಿ ನೋಟ್ 7 ಪ್ರೋ , ಆಸೂಸ್ ಝೆನ್ ಫೋನ್ ಮ್ಯಾಕ್ಸ್ ಪ್ರೋ ಎಂ2, ಮತ್ತು ಮಿಡ್ ರೇಂಜಿನ ಇತರೆ ಇದೇ ಬೆಲೆಯಲ್ಲಿ ಲಭ್ಯವಾಗುವ ಸ್ಮಾರ್ಟ್ ಫೋನ್ ಗಳೊಂದಿಗೆ ಇದು ಸ್ಪರ್ಧೆಯೊಡ್ಡಲಿದೆ.

Best Mobiles in India

Read more about:
English summary
Realme 3 Pro to launch in April: Competes against the Redmi Note 7 Pro

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X