ನೀವು ರಿಯಲ್ ಮಿ ಫ್ಯಾನ್ಸ್ ಆಗಿದ್ದರೆ ಇಲ್ಲಿದೆ ನೋಡಿ ಬೆಸ್ಟ್ ಆಫರ್ ಧಮಾಕ

By Gizbot Bureau
|

ಫ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇ ಸೇಲ್ ಆರಂಭವಾಗುವುದಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ. ಬಹುಷ್ಯಃ ಯಾವ ಸ್ಮಾರ್ಟ್ ಫೋನ್ ಬ್ರ್ಯಾಂಡ್ ಗಳನ್ನೂ ಬಿಡದಂತೆ ಈ ಸೇಲ್ ನಲ್ಲಿ ಆಫರ್ ಗಳನ್ನು ನೀಡಲಾಗುತ್ತಿದೆ. ಈ ಆನ್ ಲೈನ್ ವೆಬ್ ಸೈಟ್ ನಲ್ಲಿ ರಿಯಲ್ ಮಿ ಫೋನ್ ಗಳಿಗೆ ಭರ್ಜರಿ ರಿಯಾಯಿತಿಯನ್ನು ಘೋಷಿಸಲಾಗಿದೆ.ಅದೂ ಕೂಡ 20,000 ರುಪಾಯಿ ಒಳಗೆ ಅತ್ಯುತ್ತಮ ಫೋನ್ ಗಳು ನಿಮ್ಮ ಕೈಗೆಟುಕುತ್ತವೆ. ಕೆಲವು ವೈಶಿಷ್ಟ್ಯತೆಗಳ ವಿಚಾರಕ್ಕೆ ಬಂದಾಗ ರಿಯಲ್ ಮಿ ಫೋನ್ ಗಳು ನಿಜಕ್ಕೂ ಗ್ರೇಟ್ ಅನ್ನಿಸುತ್ತವೆ.

ರಿಯಲ್ ಮಿ ಫೋನ್

ಟ್ರಿಪಲ್ ಹಿಂಭಾಗದ ಕ್ಯಾಮರಾ ವ್ಯವಸ್ಥೆ ,48ಎಂಪಿ ಪ್ರೈಮರಿ ಸೆನ್ಸರ್ ಜೊತೆಗೆ ರಿಯಲ್ ಮಿ ಎಕ್ಸ್ ಟಿಯಲ್ಲಿ ಮೊದಲ ಬಾರಿಗೆ ಕ್ವಾಡ್ ಹಿಂಭಾಗದ ಕ್ಯಾಮರಾ ವ್ಯವಸ್ಥೆ ಜೊತೆಗೆ 64ಎಂಪಿ ಪ್ರೈಮರಿ ಸೆನ್ಸರ್ ಕೂಡ ಇರಲಿದೆ. ದೊಡ್ಡ ಬ್ಯಾಟರಿ ವ್ಯವಸ್ಥೆಯ ಜೊತೆಗೆ VOOC ಚಾರ್ಜಿಂಗ್ ತಂತ್ರಜ್ಞಾನವನ್ನು ಇದರಲ್ಲಿ ಅಳಡಿಸಲಾಗಿರುತ್ತೆ. ವೇಗವಾಗಿರುವ ಪ್ರೊಸೆಸರ್, ಸೂಪರ್ AMOLED ಡಿಸ್ಪ್ಲೇ ಸೇರಿದಂತೆ ಹಲವು ಫೀಚರ್ ಗಳನ್ನು ಈ ಫೋನ್ ಗಳು ಒಳಗೊಂಡಿರುತ್ತದೆ

ಯಾವೆಲ್ಲ ರಿಯಲ್ ಮಿ ಫೋನ್ ಗಳಿಗೆ ಆಫರ್ ಗಳು ಮತ್ತು ರಿಯಾಯಿತಿಗಳು ಲಭ್ಯವಿದೆ ಫ್ಲಿಪ್ ಕಾರ್ಟ್ ಸೇಲ್ ನಲ್ಲಿ ಎಂಬ ಬಗ್ಗೆ ನಿಮಗೆ ಮಾಹಿತಿ ಬೇಕಿದ್ದಲ್ಲಿ ಖಂಡಿತ ಈ ಲಿಸ್ಟ್ ನ್ನು ಒಮ್ಮೆ ನೋಡಿ.

ರಿಯಲ್ ಮಿ ಸಿ2

ರಿಯಲ್ ಮಿ ಸಿ2

ಈ ಸ್ಮಾರ್ಟ್ ಫೋನ್ ನಿಮಗೆ 5,999 ರುಪಾಯಿ ಬೆಲೆಗೆ ಕೈಗೆಟುಕಲಿದ್ದು 2GB RAM ಮತ್ತು 32GB ROM ಆಯ್ಕೆಯಿರುತ್ತದೆ. ಟಾಪ್ ಎಂಡ್ ವೇರಿಯಂಟ್ 3GB RAM/32GB ROM ನ ಬೆಲೆ 6,999 ರುಪಾಯಿಗಳಾಗಿರುತ್ತದೆ. ಇದರಲ್ಲಿ 13MP + 2MP ಹಿಂಭಾಗದ ಕ್ಯಾಮರಾ ಸೆಟ್ ಅಪ್ ಮತ್ತು 4,000 mAh ಬ್ಯಾಟರಿ ವ್ಯವಸ್ಥೆ ಇದೆ. ಹೆಚ್ಚುವರಿಯಾಗಿ ನಿಮಗೆ 1,000 ರುಪಾಯಿ ರಿಯಾಯಿತಿ ಈ ಡಿವೈಸ್ ಗೆ ಲಭ್ಯವಾಗುತ್ತದೆ.

ರಿಯಲ್ ಮಿ 5

ರಿಯಲ್ ಮಿ 5

ಫ್ಲಿಪ್ ಕಾರ್ಟ್ ನಲ್ಲಿ ಇದರ ಬೆಲೆ 11,999 ರುಪಾಯಿಯಾಗಿದ್ದು, ಈ ಬೆಲೆಗೆ ನಿಮಗೆ 4GB RAM/128GB ROM ವೇರಿಯಂಟ್ ಲಭ್ಯವಾಗುತ್ತದೆ.ಕ್ವಾಡ್ ಹಿಂಭಾಗದ ಕ್ಯಾಮರಾ ವ್ಯವಸ್ಥೆ ಈ ಫೋನಿನಲ್ಲಿದ್ದು 5,000 mAh ಬ್ಯಾಟರಿ ಸಾಮರ್ಥ್ಯವಿದೆ. ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 665 SoC ಸಾಕೆಟ್ ನ್ನು ಇದು ಹೊಂದಿದೆ. ಆಕ್ಸಿಸ್ ಬ್ಯಾಂಕ್ ಬಝ್ ಕ್ರೆಡಿಟ್ ಕಾರ್ಡ್ ಬಳಸಿ ಶಾಪ್ ಮಾಡಿದರೆ ಹೆಚ್ಚುವರಿಯಾಗಿ 5% ರಿಯಾಯಿತಿ ಲಭ್ಯವಾಗುತ್ತದೆ.

ರಿಯಲ್ ಮಿ 5 ಪ್ರೋ

ರಿಯಲ್ ಮಿ 5 ಪ್ರೋ

12,999 ರುಪಾಯಿ ಬೆಲೆಗ 6GB RAM/64GB ROM ಸ್ಟೋರೇಜ್ ಆಯ್ಕೆಯ ರಿಯಲ್ ಮಿ 5 ಪ್ರೋ ನಿಮ್ಮ ಕೈಗೆಟುಕುತ್ತದೆ.ಇದರಲ್ಲಿ VOOC ಫ್ಲ್ಯಾಶ್ ಚಾರ್ಜ್ 3.0 ತಂತ್ರಗಾರಿಕೆ ಇದೆ ಮತ್ತು ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ SDM712 ಪ್ರೊಸೆಸರ್ ನ್ನು ಹೊಂದಿದೆ. ಈ ಸ್ಮಾರ್ಟ್ ಫೋನ್ ಖರೀದಿಸಿದರೆ ನಿಮಗೆ ಫ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇ ಸೇಲ್ ಸಮಯದಲ್ಲಿ ವಿಮಾನ ಪ್ರಯಾಣದ ಬುಕ್ಕಿಂಗ್ ಗೆ 10% ರಿಯಾಯಿತಿ ಸಿಗುತ್ತದೆ.

ರಿಯಲ್ ಮಿ ಎಕ್ಸ್

ರಿಯಲ್ ಮಿ ಎಕ್ಸ್

8GB RAM ಜೊತೆಗೆ 128GB ಡೀಫಾಲ್ಟ್ ಸ್ಟೋರೇಜ್ ವ್ಯವಸ್ಥೆ ಇರುವ ರಿಯಲ್ ಮಿ ಎಕ್ಸ್ ಫೋನ್ ಫ್ಲಿಪ್ ಕಾರ್ಟ್ ಸೇಲ್ ನಲ್ಲಿ 15,999 ರುಪಾಯಿ ಬೆಲೆಗೆ ಸಿಗಲಿದೆ. ಈ ಸ್ಮಾರ್ಟ್ ಫೋನ್ ನಲ್ಲಿ ಪಾಪ್ ಅಪ್ ಕ್ಯಾಮರಾ ಮತ್ತು ಸೂಪರ್ AMOLED ಡಿಸ್ಪ್ಲೇ ವ್ಯವಸ್ಥೆ ಇದೆ. ಹೆಚ್ ಡಿಎಫ್ ಸಿ ಬ್ಯಾಂಕಿನ ಡೆಬಿಟ್ ಕಾರ್ಡ್ ಬಳಸಿ ಖರೀದಿಸಿದರೆ ಹೆಚ್ಚುವರಿಯಾಗಿ 5% ಕ್ಯಾಷ್ ಬ್ಯಾಕ್ ಆಫರ್ ಕೂಡ ಲಭ್ಯವಾಗುತ್ತದೆ.

ರಿಯಲ್ ಮಿ ಎಕ್ಸ್ ಟಿ

ರಿಯಲ್ ಮಿ ಎಕ್ಸ್ ಟಿ

ಈ ಸ್ಮಾರ್ಟ್ ಫೋನಿನ ಹೈಲೆಟ್ ಏನೆಂದರೆ 64MP ಪ್ರೈಮರಿ ಕ್ಯಾಮರಾ ವ್ಯವಸ್ಥೆ. ಇದರಲ್ಲಿ ಕ್ವಾಡ್ ಹಿಂಭಾಗದ ಕ್ಯಾಮರಾ ಸೆಟ್ ಅಪ್ ಇದೆ. ಇದರ ಬೆಲೆ ಫ್ಲಿಪ್ ಕಾರ್ಟ್ ಸೇಲ್ ನಲ್ಲಿ 15,999 ರುಪಾಯಿಗಳು. ನೋ ಕಾಸ್ಟ್ ಇಎಂಐ ಆಯ್ಕೆ ಈ ಫೋನ್ ಖರೀದಿಗೆ ಲಭ್ಯವಿದ್ದು ಮಾಸಿಕ 1,334 ರುಪಾಯಿಗಳನ್ನು ಪಾವತಿಸಿ ಖರೀದಿಸಬಹುದು.

ರಿಯಲ್ ಮಿ 2 ಪ್ರೋ

ರಿಯಲ್ ಮಿ 2 ಪ್ರೋ

ಈ ಫೋನಿನ ಆರಂಭಿಕ ಬೆಲೆ 8,999 ರುಪಾಯಿಗಳು. ಸ್ನ್ಯಾಪ್ ಡ್ರ್ಯಾಗನ್ 660 ಮತ್ತು 16MP ಸೆಲ್ಫೀ ಕ್ಯಾಮರಾ ಫೋನಿನ ಪ್ರಮುಖ ವೈಶಿಷ್ಟ್ಯತೆಗಳಾಗಿವೆ. ಸ್ಟ್ಯಾಂಡರ್ಡ್ ಇಎಂಐ ಆಯ್ಕೆಗಳಲ್ಲಿ ನೀವು ಈ ಸ್ಮಾರ್ಟ್ ಫೋನ್ ನ್ನು ಖರೀದಿಸಬಹುದಾಗಿದೆ. ಜೊತೆಗೆ 10,500 ರುಪಾಯಿವರೆಗಿನ ಎಕ್ಸ್ ಚೇಂಜ್ ಆಫರ್ ಕೂಡ ಲಭ್ಯವಿದೆ.

ರಿಯಲ್ ಮಿ 3ಐ

ರಿಯಲ್ ಮಿ 3ಐ

ಈ ಫೋನ್ 4GB RAM ಮಾಡ್ಯೂಲ್ ನೊಂದಿಗೆ ಲಭ್ಯವಾಗುತ್ತದೆ. ಸದ್ಯ ಇದರ ಬೆಲೆ 7,999 ರುಪಾಯಿಗಳು. ಇದರಲ್ಲಿ 13MP + 2MP ಹಿಂಭಾಗದ ಕ್ಯಾಮರಾ ಸೆಟ್ ಅಪ್ ಮತ್ತು 13MP ಸೆಲ್ಫೀ ಸ್ನ್ಯಾಪರ್ ಇದೆ. ಫ್ಲಿಪ್ ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ 5% ಅನಿಯಮಿತ ಕ್ಯಾಷ್ ಬ್ಯಾಕ್ ಆಫರ್ ನ್ನು ನೀವು ಈ ಫೋನಿಗೆ ಪಡೆದುಕೊಳ್ಳುವ ಸುವರ್ಣಾವಕಾಶ ಫ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇ ಸೇಲ್ ನಲ್ಲಿ ಲಭ್ಯವಿದೆ.

Best Mobiles in India

English summary
Realme Mobiles Offers and Discounts During Flipkart Big Billion Days Sale 2019

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X