Subscribe to Gizbot

ಹೊಸ ಸ್ಮಾರ್ಟ್‌ಫೋನ್‌ ಬಿಡುಗಡೆ ಪ್ರಭಾವ: ರೆಡ್‌ಮಿ 4 ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಭಾರೀ ಇಳಿಕೆ..!

Written By:

ರೆಡ್‌ಮಿ 5 ಸ್ಮಾರ್ಟ್‌ಫೋನ್ ಅನ್ನು ಮಾರುಕಟ್ಟೆಗೆ ಪರಿಚಯ ಮಾಡಿದ ಬೆನ್ನಲೇ, ಶಿಯೋಮಿ ಸದ್ಯ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ರೆಡ್‌ಮಿ 4 ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಕಡಿಮೆಯನ್ನು ಮಾಡಿದೆ ಎನ್ನಲಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಹೆಚ್ಚು ಮಂದಿಯನ್ನು ತಲುಪಿರುವ ರೆಡ್‌ಮಿ 4 ಸ್ಮಾರ್ಟ್‌ಫೋನ್, ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುವ ಸಾಧ್ಯತೆ ಇದೆ.

ರೆಡ್‌ಮಿ 4 ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಭಾರೀ ಇಳಿಕೆ..!

ಬಿಡುಗಡೆಯಾದ ಸಂದರ್ಭದಲ್ಲಿ ಹೊಸ ಅಲೆಯನ್ನು ಮಾರುಕಟ್ಟೆಯಲ್ಲಿ ಹುಟ್ಟಿಸಿದ್ದ ರೆಡ್‌ಮಿ 4 ಸ್ಮಾರ್ಟ್‌ಫೋನ್, ಮತ್ತೊಮ್ಮೆ ಮಾರುಕಟ್ಟೆಯಲ್ಲಿ ಸದ್ದು ಮಾಡಲು ಈ ಬೆಲೆ ಕಡಿತವೂ ಕಾರಣವಾಗಬಹುದಾಗಿದೆ. ಈಗಾಗಲೇ ಮಿಲಿಯನ್ ಸಂಖ್ಯೆಯಲ್ಲಿ ಮಾರಾಟವಾಗಿರುವ ಈ ರೆಡ್‌ಮಿ 4 ಸ್ಮಾರ್ಟ್‌ಫೋನ್ ಮಾರಾಟ ಮತ್ತೊಮ್ಮೆ ಜೋರಾಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರೂ.500 ಕಡಿಮೆ:

ರೂ.500 ಕಡಿಮೆ:

ಸದ್ಯ ಮಾರುಕಟ್ಟೆಯಲ್ಲಿ ರೆಡ್‌ಮಿ 4 ಸ್ಮಾರ್ಟ್‌ಫೋನ್ ಬೆಲೆಯಲ್ಲಿ ರೂ.500 ಕಡಿತವಾಗಿದ್ದು, 3GB RAM ಮತ್ತು 32GB ಇಂಟರ್ನಲ್ ಮೆಮೊರಿ ಹೊಂದಿರುವ ಸ್ಮಾರ್ಟ್‌ಫೋನ್ ರೂ. 8,499ಕ್ಕೆ ದೊರೆಯುತ್ತಿದ್ದು, ಇದೇ ಮಾದರಿಯಲ್ಲಿ 4GB RAM ಮತ್ತು 64GB ಇಂಟರ್ನಲ್ ಮೆಮೊರಿ ಹೊಂದಿರುವ ಸ್ಮಾರ್ಟ್‌ಫೋನ್ ರೂ.10,999ಕ್ಕೆ ಮಾರಾಟವಾಗಲಿದೆ.

ಹಳೇ ಬೆಲೆ:

ಹಳೇ ಬೆಲೆ:

3GB RAM ಮತ್ತು 32GB ಇಂಟರ್ನಲ್ ಮೆಮೊರಿ ಹೊಂದಿರುವ ಸ್ಮಾರ್ಟ್‌ಫೋನ್ ಬೆಲೆ ರೂ.8,999 ಮತ್ತು 4GB RAM ಮತ್ತು 64GB ಇಂಟರ್ನಲ್ ಮೆಮೊರಿ ಹೊಂದಿರುವ ಸ್ಮಾರ್ಟ್‌ಫೋನ್ ಬೆಲೆ ರೂ.10,999 ಆಗಿತ್ತು,

ಮತ್ತೊಂದು ಆವೃತ್ತಿ ಇಲ್ಲ:

ಮತ್ತೊಂದು ಆವೃತ್ತಿ ಇಲ್ಲ:

ಶಿಯೋಮಿ ರೆಡ್‌ಮಿ 4 ಒಟ್ಟು ಮೂರು ಆವೃತ್ತಿಯಲ್ಲಿ ಲಭ್ಯವಿತ್ತು. ಆದರೆ ಇದರಲ್ಲಿ ರೂ.6,999ಕ್ಕೆ ಲಭ್ಯವಿದ್ದ 2GB RAM ಮತ್ತು 16GB ಇಂಟರ್ನಲ್ ಮೆಮೊರಿಯ ಫೋನ್ ಮೇಲೆ ಯಾವುದೇ ಆಫರ್ ಇಲ್ಲ.

Redmi Note 5 ಬಿಡುಗಡೆಗೆ..! ಬೆಸ್ಟ್, ಬಜೆಟ್, ಬೊಂಬಾಟ್
ಫ್ಲಿಪ್‌ಕಾರ್ಟ್‌ ಮತ್ತು ಮಿ.ಕಾಮ್:

ಫ್ಲಿಪ್‌ಕಾರ್ಟ್‌ ಮತ್ತು ಮಿ.ಕಾಮ್:

ರೆಡ್‌ಮಿ 4 ಸ್ಮಾರ್ಟ್‌ಫೋನ್ ಸದ್ಯ ಫ್ಲಿಪ್‌ಕಾರ್ಟ್‌ ಮತ್ತು ಮಿ.ಕಾಮ್‌ನಲ್ಲಿ ದೊರೆಯಲಿದೆ ಎನ್ನಲಾಗಿದೆ. ಹೊಸ ಬೆಲೆಯಲ್ಲಿ ಗ್ರಾಹಕರು ಈ ಸ್ಮಾರ್ಟ್‌ಫೋನ್‌ ಅನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ. ಎರಡು ಆವೃತ್ತಿಯ ಸ್ಮಾರ್ಟ್‌ಫೋನ್‌ಗಳು ಇಲ್ಲಿ ದೊರೆಯಲಿದೆ.

ಶಿಯೋಮಿ ರೆಡ್‌ಮಿ 4 ವಿಶೇಷತೆ

ಶಿಯೋಮಿ ರೆಡ್‌ಮಿ 4 ವಿಶೇಷತೆ

ಶಿಯೋಮಿ ರೆಡ್‌ಮಿ 4 ಫೋನಿನಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಇದ್ದು, 5 ಇಂಚಿನ HD (720x1280 p) ಡಿಸ್‌ಪ್ಲೇ ಹೊಂದಿದೆ, ಇದಕ್ಕೆ 2.5D ಕರ್ವಡ್ ಗ್ಲಾಸ್ ವಿನ್ಯಾಸ ಮಾಡಲಾಗಿದೆ. ಆಕ್ಟಾ ಕೋರ್ ಸ್ನಾಪ್ ಡ್ರಾಗನ್ 420 ಪ್ರೋಸೆಸರ್ ಜೊತೆಗೆ 128GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗದೆ. ಇದರಲ್ಲಿ 4100mAh ಬ್ಯಾಟರಿಯನ್ನು ಅಳವಡಿಸಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Redmi 4 Price in India Cut. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot