Subscribe to Gizbot

ರೆಡ್‌ಮಿ 5 ಗಿಂತಲೂ ಬೆಸ್ಟ್ 5000mAh ಬ್ಯಾಟರಿಯ ಮೈಕ್ರೋಮಾಕ್ಸ್ ಭಾರತ್ 5 ಪ್ರೋ..! ಬೆಲೆ ಎಷ್ಟು..?

Written By:

ಭಾರತೀಯ ಮೂಲದ ಸ್ಮಾರ್ಟ್‌ಫೋನ್ ತಯಾರಕ ಕಂಪನಿ ಮೈಕ್ರೋಮಾಕ್ಸ್, ಮಾರುಕಟ್ಟೆಗೆ ಮತ್ತೊಂದು ಸ್ಮಾರ್ಟ್‌ಫೋನ್ ಪರಿಚಯ ಮಾಡಿದೆ. ಮೊನ್ನೆ ಲಾಂಚ್ ಆದ ರೆಡ್‌ಮಿ 5 ಸ್ಮಾರ್ಟ್‌ಫೋನಿಗೆ ಇದು ಪ್ರಬಲ ಸ್ಪರ್ಧೆಯನ್ನು ನೀಡಲಿದೆ ಎನ್ನಲಾಗಿದೆ. ಮೈಕ್ರೋಮಾಕ್ಸ್ ಭಾರತ್ 5 ಪ್ರೋ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಚೀನಾ ಸ್ಮಾರ್ಟ್‌ಫೋನ್‌ಗಳನ್ನು ಹಿಂದಿಕ್ಕಲಿದೆ.

ರೆಡ್‌ಮಿ 5 ಗಿಂತಲೂ ಬೆಸ್ಟ್ 5000mAh ಬ್ಯಾಟರಿಯ ಮೈಕ್ರೋಮಾಕ್ಸ್ ಭಾರತ್ 5 ಪ್ರೋ..!

ರೆಡ್‌ಮಿ 5 ಮತ್ತು ಮೈಕ್ರೋಮಾಕ್ಸ್ ಭಾರತ್ 5 ಪ್ರೋ ಸ್ಮಾರ್ಟ್‌ಫೋನ್‌ನ ವಿಶೇಷತೆಗಳು ಒಂದೇ ಮಾದರಿಯಲ್ಲಿದ್ದು, ಬೆಲೆಯೂ ಸಹ ಒಂದೇ ಆಗಿದೆ. ಆದರೆ ಮೈಕ್ರೋಮಾಕ್ಸ್ ಸ್ಮಾರ್ಟ್‌ಫೋನ್ ದೊಡ್ಡ ಬ್ಯಾಟರಿಯನ್ನು ಹೊಂದಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಮೈಕ್ರೋಮಾಕ್ಸ್ ಭಾರತ್ 5 ಪ್ರೋ ಸ್ಮಾರ್ಟ್‌ಫೋನಿನ ಕುರಿತಾದ ಮಾಹಿತಿಯೂ ಈ ಮುಂದಿನಂತೆ ಇದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
5.2 ಇಂಚಿನ ಸ್ಕ್ರಿನ್:

5.2 ಇಂಚಿನ ಸ್ಕ್ರಿನ್:

ಮೈಕ್ರೋಮಾಕ್ಸ್ ಭಾರತ್ 5 ಪ್ರೋ ಸ್ಮಾರ್ಟ್‌ಫೋನಿನಲ್ಲಿ 5.2 ಇಂಚಿನ ಪರದೆಯನ್ನು ಕಾಣಬಹುದಾಗಿದ್ದು, ಇದು HD ಗುಣಮಟ್ಟದಾಗಿದೆ. ಗೇಮ್ ಆಡಲು ಮತ್ತು ವಿಡಿಯೋಗಳನ್ನು ನೋಡಲು ಈ ಡಿಸ್‌ಪ್ಲೇ ಉತ್ತಮವಾಗಿದೆ.

3GB RAM:

3GB RAM:

ಮೈಕ್ರೋಮಾಕ್ಸ್ ಭಾರತ್ 5 ಪ್ರೋ 3 GB RAM ಮತ್ತು 32GB ಇಂಟರ್ನಲ್ ಮೆಮೊರಿಯೊಂದಿಗೆ ಕಾಣಿಸಿಕೊಂಡಿದ್ದು, 1.3GHz ವೇಗದ ಕ್ವಾಡ್ ಕೋರ್ ಪ್ರೋಸೆಸರ್ ಅನ್ನು ಈ ಸ್ಮಾರ್ಟ್ ಫೋನ್ ಒಳಗೊಂಡಿದೆ.

ಉತ್ತಮ ಕ್ಯಾಮೆರಾ:

ಉತ್ತಮ ಕ್ಯಾಮೆರಾ:

ಮೈಕ್ರೋಮಾಕ್ಸ್ ಭಾರತ್ 5 ಪ್ರೋ ಹಿಂಭಾಗದಲ್ಲಿ 13MP ಕ್ಯಾಮೆರಾವನ್ನು ಒಳಗೊಂಡಿದ್ದು, ಮುಂಭಾಗದಲ್ಲಿ 5MP ಕ್ಯಾಮೆರಾದೊಂದಿಗೆ ಕಾಣಿಸಿಕೊಂಡಿದೆ. ಮುಂಭಾಗ ಮತ್ತು ಹಿಂಭಾಗದಲ್ಲಿ LED ಫ್ಲಾಷ್ ಲೈಟ್ ಅನ್ನು ಸಹ ನೀಡಲಾಗಿದೆ.

ದೊಡ್ಡ ಬ್ಯಾಟರಿ:

ದೊಡ್ಡ ಬ್ಯಾಟರಿ:

ಮೈಕ್ರೋಮಾಕ್ಸ್ ಭಾರತ್ 5 ಪ್ರೋ ಪ್ರಮುಖ ಆಕರ್ಷಣೆಯೇ ಬ್ಯಾಟರಿ. ಈ ಸ್ಮಾರ್ಟ್‌ಫೋನಿನಲ್ಲಿ 5000mAh ಬ್ಯಾಟರಿಯನ್ನು ನೀಡಲಾಗಿದ್ದು, ಇದು ಎರಡು ದಿನಗಳ ಬ್ಯಾಕಪ್ ಅನ್ನು ನೀಡಲಿದೆ.

How to find out where you can get your Aadhaar card done (KANNADA)
ಬೆಲೆ:

ಬೆಲೆ:

ರೆಡ್‌ಮಿ 5ಗೆ ಹೊಲಿಸಿಕೊಂಡರೆ ಮೈಕ್ರೋಮಾಕ್ಸ್ ಭಾರತ್ 5 ಪ್ರೋ ಬೆಲೆ ಕಡಿಮೆ ಇದೆ ಎಂದೆ ಹೇಳಬಹುದಾಗಿದೆ. 2GB/16GB ಆವೃತ್ತಿಯ ರೆಡ್‌ಮಿ 5 ಬೆಲೆ ರೂ.7999 ಆಗಿದ್ದು, ಇದೇ ಮಾದರಿಯಲ್ಲಿ 3GB/32GB ಮೈಕ್ರೋಮಾಕ್ಸ್ ಭಾರತ್ 5 ಪ್ರೋ ಬೆಲೆ ರೂ.7.999 ಆಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Redmi 5 Rival Micromax Bharat 5 Pro With 5000mAh Battery, 3GB RAM Launched at Rs. 7,999. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot