ಇಂದು ರೆಡ್‌ಮಿ ನೋಟ್ 4 ಫ್ಲಾಶ್‌ಸೇಲ್!..ಎಷ್ಟು ಗಂಟೆಗೆ?
ಕಪ್ಪು ಬಣ್ಣದ ಶಿಯೋಮಿ ರೆಡ್‌ಮಿ ನೋಟ್ 4 ಮೊಬೈಲ್ ಮಾರುಕಟ್ಟೆಯಲ್ಲಿ ಹವಾ ಎಬ್ಬಿಸುತ್ತಿದೆ. !!
ಮಾರುಕಟ್ಟೆಯಲ್ಲಿ ಬಿಸಿ ತುಪ್ಪದಂತೆ ಖರ್ಚಾಗುತ್ತಿರುವ, ಕೇವಲ ಹತ್ತು ನಿಮಿಷದಲ್ಲಿ 2,50,000 ಸ್ಮಾರ್ಟ್‌ಫೋನ್ ಮಾರಾಟವಾದ ಶಿಯೋಮಿ ರೆಡ್‌ಮಿ ನೋಟ್ 4 ಇಂದು ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟಕ್ಕಿದೆ.! ಇಂದು ಮಧ್ಯಾಹ್ನ 12 ಗಂಟೆಗೆ ಶಿಯೋಮಿ ರೆಡ್‌ಮಿ ನೋಟ್ 4 ಸ್ಮಾರ್ಟ್‌ಫೋನ್ ಫ್ಲಿಪ್‌ಕಾರ್ಟ್‌ನಲ್ಲಿ ಫ್ಲಾಶ್‌ಸೇಲ್‌ಗಿದೆ !!
ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಸ್ಮಾರ್ಟ್‌ಫೋನ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ರೆಡ್‌ಮಿ ನೋಟ್ 4 ಭಾರತದಲ್ಲಿ ಬಿಸಿತುಪ್ಪದಂತೆ ಖರ್ಚಾಗುತ್ತಿದ್ದು, ಕಪ್ಪು ಬಣ್ಣದ ಶಿಯೋಮಿ ರೆಡ್‌ಮಿ ನೋಟ್ 4 ಮೊಬೈಲ್ ಮಾರುಕಟ್ಟೆಯಲ್ಲಿ ಹವಾ ಎಬ್ಬಿಸುತ್ತಿದೆ. !!
ಕಡಿಮಡ ಬೆಲೆಯಲ್ಲಿ ರೆಡ್‌ಮಿ ಸ್ಮಾರ್ಟ್‌ಫೊನ್‌ಗಳು ಅತ್ಯಂತ ಹೆಚ್ಚು ಫೀಚರ್ಸ್‌ಗಳನ್ನು ಹೊಂದಿದ್ದು, 5.5 ಇಂಚಿನ ಹೆಚ್‌ಡಿ ಡಿಸ್‌ಪ್ಲೇ, ಟೆಕ್ ಹೆಲಿಯೊ X20 ಪ್ರೋಸೆಸರ್ ಹೊಂದಿದ್ದು, ಗುಣಮಟ್ಟದ ವಿಡಿಯೋ ಮತ್ತು ಗೇಮಿಂಗ್‌ಗೆ ಹೇಳಿ ಮಾಡಿಸಿದ್ದಾಗಿದೆ.
ಇನ್ನು ಫ್ಲಾಶ್‌ಸೇಲ್‌ನಲ್ಲಿ 3GB RAM+32GB ಮತ್ತು 4GB RAM+64GB ಸೇರಿದಂತೆ ಮೂರು ವೆರಿಯಂಟ್ ಸ್ಮಾರ್ಟ್‌ಪೊನ್‌ಗಳು ಲಭ್ಯವಿದ್ದು, ಕೆಲವೇ ಸೆಕೆಂಡ್‌ಗಳಲ್ಲಿ ಸೇಲ್ ಆಗುವ ಸ್ಮಾರ್ಟ್‌ಫೋನ್ ಬುಕ್ ಮಾಡಲು ಮೊದಲೇ ಕಾದು ಕುಳಿತುಕೊಳ್ಳಬೇಕಿದೆ.!!
ಪೇಟಿಎಂ ಮುಖ್ಯಸ್ಥನಿಗೆ ಒಲಿದ ಕಿರಿಯ ಬಿಲೇನಿಯರ್ ಪಟ್ಟ!! ಆಸ್ತಿ ಎಷ್ಟು ಗೊತ್ತಾ?


Click it and Unblock the Notifications










