ಜಿಯೋ ಫೋನ್ ಖರೀದಿಸಲು ಇದಕ್ಕಿಂತ ಬೆಸ್ಟ್‌ ಟೈಮ್‌ ಬೇರೆ ಇಲ್ಲ..!

  |

  ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಖ್ಯಾತಿಯನ್ನು ಪಡೆದುಕೊಂಡಿರುವ ಜಿಯೋ, ತನ್ನ ಬಳಕೆದಾರರಿಗೆ ಕಡಿಮೆ ಬೆಲೆಯಲ್ಲಿ ನೀಡಲು ಮುಂದಾಗಿರುವ ಜಿಯೋ ಫೋನ್ ಸಾಕಷ್ಟು ಬೇಡಿಕೆಯನ್ನು ಸೃಷ್ಠಿ ಮಾಡಿಕೊಂಡಿದೆ. ಈ ಹಿನ್ನಲೆಯಲ್ಲಿ ಜಿಯೋ ತನ್ನ ಬಳಕೆದಾರರಿಗೆ ಮತ್ತೊಂದು ಹೊಸ ಮಾದರಿಯ ಫೋನ್ ಅನ್ನು ಲಾಂಚ್ ಮಾಡಿರುವುದು ಎಲ್ಲರಿಗೂ ತಿಳಿದಿದೆ. ಅದೇ ಜಿಯೋ ಫೋನ್ 2. ಈಗಾಗಲೇ ಈ ಪೋನಿನ ಬೇಡಿಕೆಯೂ ಹೆಚ್ಚಾಗಿದೆ.

  ಜಿಯೋ ಫೋನ್ ಖರೀದಿಸಲು ಇದಕ್ಕಿಂತ ಬೆಸ್ಟ್‌ ಟೈಮ್‌ ಬೇರೆ ಇಲ್ಲ..!

  ಈ ಹಿನ್ನಲೆಯಲ್ಲಿ ಜಿಯೋ ತನ್ನ ಬಳಕೆದಾರರಿಗೆ ದೀಪಾವಳಿಯ ಅಂಗವಾಗಿ ಹೊಸದೊಂದು ಆಯ್ಕೆಯನ್ನು ನೀಡಲು ಮುಂದಾಗಿದೆ. ಇದರಿಂದಾಗಿ ಬಳಕೆದಾರರಿಗೆ ಜಿಯೋ ಫೋನ್ ಅನ್ನು ಖರೀದಿ ಮಾಡಲು ಹೊಸ ಮಾದರಿಯ ಆಯ್ಕೆಯೂ ದೊರೆತಂತೆ ಆಗಲಿದೆ ಅಲ್ಲದೇ ಜಿಯೋ ಪೋನ್ ಬೇಡಿಕೆಯೂ ಹೆಚ್ಚಾಗಲಿದೆ ಎನ್ನಲಾಗಿದೆ.

  ಈಗಾಗಲೇ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿರುವ ಜಿಯೋ ಪೋನ್ 2, ವಾಟ್ಸ್ಆಪ್ ಹಾಗೂ ಫೇಸ್ ಬುಕ್ ಸೇರಿದಂತೆ ಹಲವು ಆಪ್ ಗಳನ್ನು ಹಾಕಿಕೊಳ್ಳುವ ಅವಕಾಶ ನೀಡಲಾಗಿದೆ. ಈ ಹಿನ್ನಲೆಯಲ್ಲಿ ಹಲವು ಮಂದಿ ಬಳಕೆದಾರರು ಜಿಯೋ ಪೋನ್ ಖರೀದಿ ಮಾಡಲು ಮುಂದಾಗಿದ್ದಾರೆ. ಈ ಹಿನ್ನಲೆಯಲ್ಲಿ ಬಳಕೆದಾರರಿಗೆ ಜಿಯೋ ಫೋನ್ 2 ಖರೀದಿಸಲು ಆಫರ್ ಅನ್ನು ನೀಡಲು ಮುಂದಾಗಿದೆ.

  ಗ್ರಾಹಕರು jio.com ವೆಬ್ಸೈಟ್ ಮೂಲಕ ಫೋನ್ ಖರೀದಿ ಮಾಡಬಹುದಾಗಿದೆ. ನವೆಂಬರ್ 5 ರಿಂದ 12ರವರೆಗೆ ಫ್ಲಾಶ್ ಸೇಲ್ ನಡೆಯಲಿದೆ. ಗ್ರಾಹಕರು ಪೇಟಿಎಂ ವಾಲಟ್ ನಿಂದ ಹಣ ಪಾವತಿ ಮಾಡಿದ್ರೆ ತಕ್ಷಣ 200 ರೂಪಾಯಿ ಕ್ಯಾಶ್ ಬ್ಯಾಕ್ ಸಿಗಲಿದೆ.
  ರಿಲಯನ್ಸ್ ಇಂಡಸ್ಟ್ರಿಯ 41ನೇ ವಾರ್ಷಿಕೋತ್ಸವದಲ್ಲಿ ಜಿಯೋ ಫೋನ್-2 ಬಿಡುಗಡೆ ಮಾಡಲಾಗಿತ್ತು. ಬಿಡುಗಡೆಯಾದ ಮೇಲೆ ಅನೇಕ ಬಾರಿ ಜಿಯೋ ಫ್ಲಾಶ್ ಸೇಲ್ ನಡೆಸಿದೆ.

  ಜಿಯೋ ಫೋನ್ -2 ಪ್ಲಾಶ್ ಸೇಲ್ ನಲ್ಲಿ ಮಾತ್ರ ಗ್ರಾಹಕರಿಗೆ ಸಿಗಲಿದೆ. ಜಿಯೋ, ಜಿಯೋ ಫೋನ್ ಗ್ರಾಹಕರಿಗೆ ಭರ್ಜರಿ ಆಫರ್ ಕೂಡ ನೀಡ್ತಿದೆ. 49 ರೂಪಾಯಿ ಪ್ಲಾನ್ ನಲ್ಲಿ 1ಜಿಬಿ ಡೇಟಾ ಜೊತೆ ಅನಿಯಮಿತ ವಾಯ್ಸ್ ಕಾಲ್ ಹಾಗೂ 50 ಎಸ್ಎಂಎಸ್ ನೀಡ್ತಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಸ್ಮಾರ್ಟ್ ಫೋನಿಗಿಂತ ಕಮ್ಮಿ ಇಲ್ಲ ‘ಜಿಯೋ ಫೋನ್’.! ಇಲ್ಲಿದೇ ಹೊಸ ಗೂಗಲ್ ಆಯ್ಕೆ...!

  ದೇಶಿಯ ಮಾರುಕಟ್ಟೆಯಲ್ಲಿ ಹೊಸ ಅಧ್ಯಾಯವನ್ನು ಬರೆಯುವ ಮೂಲಕ, ಮಾರುಕಟ್ಟೆಯಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಸೇಲ್ ಆದ ಫೀಚರ್ ಫೋನ್ ಎನ್ನುವ ಖ್ಯಾತಿಗೆ ಪಾತ್ರವಾಗಿದ್ದ ಜಿಯೋ ಫೋನ್, ಸದ್ಯ ಸ್ಮಾರ್ಟ್ ಫೋನಿನಲ್ಲಿ ಇರುವ ಆಯ್ಕೆಗಳನ್ನು ಪಡೆದುಕೊಳ್ಳುತ್ತಿದೆ. ಇದರಿಂದಾಗಿ ಸ್ಮಾರ್ಟ್ ಫೀಚರ್ ಫೋನ್ ಎನ್ನುವ ಹಣೆಪಟ್ಟಿಯನ್ನು ಪಡೆದುಕೊಳ್ಳುತ್ತಿದೆ. ಸದ್ಯ ಮಾರುಕಟ್ಟೆಗೆ ಜಿಯೋ ಫೋನ್ 2 ಆಗಮಿಸುತ್ತಿದ್ದರೂ ಸಹ ಜಿಯೋ ಫೋನ್ ತನ್ನ ಬೆಲೆಯನ್ನು ಕಳೆದುಕೊಳ್ಳುತ್ತಿಲ್ಲ, ಅದರಲ್ಲಿ ಇರುವ ಆಯ್ಕೆಗಳು ಆಪ್ ಡೇಟ್ ಆಗುತ್ತಿದೆ.

  ಇದೇ ಕೆಲವು ದಿನಗಳ ಹಿಂದೆ ಜಿಯೋ ಫೋನ್ ವಾಟ್ಸ್ಆಪ್ ಸಪೋರ್ಟ್ ಮಾಡಲಿದೆ ಎನ್ನುವ ಸುದ್ದಿಯನ್ನು ತಿಳಿಸಲಾಗಿತ್ತು, ಸದ್ಯ ಇದೇ ಮಾದರಿಯ ಮಾಹಿತಿಯೊಂದು ಲೀಕ್ ಆಗಿದ್ದು, ಇನ್ನು ಮುಂದೇ ಜಿಯೋ ಫೋನಿನಲ್ಲಿ ಬಳಕೆದಾರರು ಗೂಗಲ್ ಮ್ಯಾಪ್ ಅನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಇದರಿಂದಾಗಿ ಜಿಯೋ ಫೋನಿನಲ್ಲಿ ರೂಟ್ ಮ್ಯಾಪ್ ಅನ್ನು ಬಳಕೆ ಮಾಡಿಕೊಂಡು ಸಾಗಬಹುದಾಗಿದೆ. ಇದರಿಂದಾಗಿ ಬಳಕೆದಾರರಿಗೆ ಸಾಕಷ್ಟು ಸಹಾಯವಾಗಲಿದೆ.

  ಜಿಯೋ ಸ್ಟೋರಿನಲ್ಲಿದೆ:

  ಜಿಯೋ ಫೋನ್ ಬಳಕೆದಾರರು ತಮ್ಮ ಫೋನಿನಲ್ಲಿರುವ ಜಿಯೋ ಸ್ಟೋರಿನಲ್ಲಿ ಗೂಗಲ್ ಮ್ಯಾಪ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. ಇದರಿಂದಾಗಿ ಬಳಕೆದಾರರಿಗೆ ಸಾಕಷ್ಟು ಲಾಭವಾಗಲಿದ್ದು, ಗೂಗಲ್ ಮ್ಯಾಪ್ ಬಳಕೆಗಾಗಿ ಬೇರೊಂದು ಸ್ಮಾರ್ಟ್ ಫೋನ್ ಅನ್ನು ಬಳಸುವ ಅಗತ್ಯತೆ ಇರುವುದಿಲ್ಲ ಎನ್ನಲಾಗಿದೆ.

  KaiOS ಆಪ್ ಡೇಟ್:

  ಜಿಯೋ ಫೋನಿನಲ್ಲಿ ಬಳಕೆ ಮಾಡಿಕೊಳ್ಳಲಾಗಿರುವಂತಹ KaiOS ಹೆಚ್ಚಿನ ಆಪ್ ಡೇಟ್ ಅನ್ನು ಪಡೆದುಕೊಳ್ಳುತ್ತಿದೆ. ಇದರಿಂದಾಗಿ ಬಳಕೆದಾರರು ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ಇದಲ್ಲದೇ ಸೋಶಿಯಲ್ ಮೀಡಿಯಾಗಳನ್ನು ಬಳಕೆ ಮಾಡಿಕೊಳ್ಳುವ ಅವಕಾಶವು ಇದರಲ್ಲಿ. ಅಲ್ಲದೇ ಬಳಕೆದಾರರು ಇನ್ನು ಹೆಚ್ಚಿನ ಅವಕಾಶಗಳನ್ನು ಮುಂದಿನ ದಿನದಲ್ಲಿ ಪಡೆಯಬಹುದಾಗಿದೆ.

  ಕಡಿಮೆ ಫೀಚರ್ ಗಳು:

  ಸಾಮಾನ್ಯ ಸ್ಮಾರ್ಟ್ ಫೋನಿಗೆ ಹೋಲಿಕೆ ಮಾಡಿಕೊಂಡಲ್ಲಿ ಜಿಯೋ ಫೋನಿನಲ್ಲಿ ನೀಡಲಾಗಿರುವ ಗೂಗಲ್ ಮ್ಯಾಪ್ ಕಡಿಮೆ ಆಯ್ಕೆಗಳನ್ನು ಒಳಗೊಂಡಿದೆ ಎನ್ನಲಾಹಿದೆ. ಇದರಿಂದಾಗಿ ಜಿಯೋ ಫೋನ್ ಬಳಕೆದಾರರು ಅವಶ್ಯವಾಗಿರುವ ಕೆಲವು ಆಯ್ಕೆಗಳನ್ನು ಮಾತ್ರವೇ ಬಳಸಬಹುದಾಗಿದ್ದು, ಹೆಚ್ಚುವರಿ ಆಯ್ಕೆಗಳಿಂದ ವಂಚಿತರಾಗಿದ್ದಾರೆ.

  ಎರಡು ಫೋನಿನಲ್ಲಿಯೂ ಲಭ್ಯ:

  ಸದ್ಯ ಹೊಸದಾಗಿ ನೀಡಲಾಗಿರುವ ಆಯ್ಕೆಯೂ ಮಾರುಕಟ್ಟೆಯಲ್ಲಿ ಲಭ್ಯವಿರುವ ಜಿಯೋ ಫೋನ್ ಮತ್ತು ಶೀಘ್ರವೇ ಮಾರುಕಟ್ಟೆಯನ್ನು ಪ್ರವೇಶಿಸಲಿರುವ ಜಿಯೋ ಫೋನ್ 2 ಎರಡರಲ್ಲಿಯೂ ದೊರೆಯಲಿದೆ ಎನ್ನಲಾಗಿದೆ. ಇದರಿಂದಾಗಿ ಮಾರುಕಟ್ಟೆಯಲ್ಲ ಲಭ್ಯವಿರುವ ಬಜೆಟ್ ಸ್ಮಾರ್ಟ್ ಫೋನ್ ಗಳಿಗೆ ಹೊಡೆತ ಬೀಳಲಿದೆ ಎನ್ನಲಾಗಿದೆ.

  ಜಿಯೋ ಫೋನ್ 2:

  ಜಿಯೋ ಫೋನ್ ಅನ್ನು ಜಿರೋ ಬೆಲೆಗೆ ಮಾರಾಟ ಮಾಡಿತ್ತು. ಇದೇ ಮಾದರಿಯಲ್ಲಿ ಜಿಯೋ ಫೋನ್ 2 ಅನ್ನು ರೂ.2999ಕ್ಕೆ ಮಾರಾಟ ಮಾಡಲು ಮುಂದಾಗಿದೆ. ಜಿಯೋ ಫೋನ್ ಗಿಂತಲೂ ಭಿನ್ನವಾಗಿರುವ ಕ್ವರ್ಟಿ ಕಿಪ್ಯಾಡ್ ಅನ್ನು ಜಿಯೋ ಫೋನ್ 2 ನಲ್ಲಿ ಕಾಣಬಹುದಾಗಿದೆ. ಇದು ಈ ಫೋನಿಗೆ ಹೊಸ ಲುಕ್ ಅನ್ನು ನೀಡಿದೆ.

  ಸೋಶಿಯಲ್ ಮೀಡಿಯಾ:

  ಜಿಯೋ ಪೋನ್ 2 ನಲ್ಲಿ ಈ ಹಿಂದಿನ ಫೋನಿನಲ್ಲಿ 512MB RAM ಅನ್ನು ನೀಡಲಾಗಿದ್ದ ಮಾದರಿಯಲ್ಲಿಯೇ ಇದರಲ್ಲಿಯೂ ಅದೇ ಮಾದರಿಯ RAM ಇದೆ. ಇದಲ್ಲದೇ KaiOS ಅನ್ನು ಇದರಲ್ಲಿ ನೀಡಲಾಗಿದೆ. ಇದು ಗುಣಮಟ್ಟ ಸಾಫ್ಟ್ ವೇರ್ ಆಗಿದ್ದು, ಸೋಶಿಯಲ್ ಮೀಡಿಯಾಗಳನ್ನು ಬಳಕೆ ಮಾಡಿಕೊಳ್ಳುವ ಅವಕಾಶವನ್ನು ನೀಡಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  Read more about:
  English summary
  For the festival season, the company has come up with interesting data plus voice combos. However, as of now, there is no reduction in the price of the JioPhone 2, where a user has to pay Rs 2,999 upfront money to get the device.

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more