ಉಂಗುರದಲ್ಲೇ ಟಿವಿ ನಿಯಂತ್ರಿಸಿ! ಕೊಚ್ಚಿ ಎಂಜಿನಿಯರ್‌‌ ಸಂಶೋಧನೆ

By Ashwath
|

ಇನ್ನು ಮುಂದೆ ಟಿವಿಗಳನ್ನು ನಿಯಂತ್ರಿಸಲು ರಿಮೋಟ್‌ ಕಂಟ್ರೋಲ್‌ ಉಪಯೋಗಿಸಬೇಕಾಗಿಲ್ಲ.ನಿಮ್ಮ ಕೈ ಬೆರಳಿನಲ್ಲಿರುವ ಉಂಗುರದ ಮೂಲಕವೇ ಟಿವಿಗಳನ್ನು ಸಂಪೂರ್ಣ‌ವಾಗಿ ನಿಯಂತ್ರಿಸಬಹುದು.

ಹೌದು. ಕೇರಳದ ಕಂಪೆನಿಯೊಂದು ಹೊಸ ಗೆಶ್ಚರ್‌ ಗ್ಯಾಜೆಟ್‌ನ್ನು ಅಭಿವೃದ್ಧಿ ಪಡಿಸಿದೆ. ಕೈ ಬೆರಳಿಗೆ ಹಾಕುವ ಒಂದು ಉಂಗುರವನ್ನು ಕಂಪೆನಿ ತಯಾರಿಸಿದ್ದು, ಈ ಉಂಗುರದ ಮೂಲಕ ಕೈಯನ್ನು ಅತ್ತಿತ್ತ ಅಲ್ಲಾಡಿಸುತ್ತಾ ನಿಮ್ಮ ಟಿವಿ, ಸ್ಮಾರ್ಟ್‌‌ಫೋನ್‌‌ಗಳನ್ನು,ಮ್ಯೂಸಿಕ್‌ ಪ್ಲೇಯರ್‌,ನಿಯಂತ್ರಿಸಬಹುದು. ವಿಡಿಯೋ ಗೇಮ್ಸ್‌ ಆಡಬಹುದು.

ಈ ಉಂಗುರವನ್ನು ಬೆರಳಿಗೆ ಹಾಕಿಕೊಂಡರೆ ನಿಮ್ಮ ಕೈ ಒಂದು ರೀತಿಯ ಟಚ್‌ಸ್ಕ್ರೀನ್‌ನಂತೆ ಕೆಲಸ ಮಾಡುತ್ತದೆ. ಬ್ಲೂಟೂತ್ ಮೂಲಕ ಕೆಲಸ ಮಾಡುವ ಈ ಉಂಗುರ ಐದು ರೀತಿಯ ಕೈಯ ಆಲುಗಾಡುವಿಕೆಯನ್ನು ಅರ್ಥ‌ಮಾಡಿಕೊಳ್ಳುತ್ತದೆ.

ಈ ಹೊಸ ಗೆಶ್ಚರ್‌ ತಂತ್ರಜ್ಞಾನ ಉಂಗುರವನ್ನು ಕಂಡುಹಿಡಿದ ವ್ಯಕ್ತಿ ರೋಹಿಲ್‌ ದೇವ್.23ನೇ ವಯಸ್ಸಿನ ಕಂಪೆನಿ ಸ್ಥಾಪಿಸಿ ಸದ್ಯ ರೋಹಿಲ್‌ ದೇವ್ ವಿಶ್ವದ ಟೆಕ್‌ ಮಾಧ್ಯಮಗಳಲ್ಲಿ ಹೆಚ್ಚು ಸುದ್ದಿಯಾಗುತ್ತಿದ್ದಾರೆ.ವಿಶ್ವದ ಘಟಾನುಘಟಿ ಟೆಕ್‌ ಪಂಡಿತರು ಭಾಗವಹಿಸುವ ಇದೇ 24 ರಿಂದ 27ರವರೆಗೆ ಸ್ಪೈನ್‌‌ ಬಾರ್ಸಿ‌ಲೋನಾದಲ್ಲಿ ನಡೆಯಲಿರುವ ಮೊಬೈಲ್‌ ವರ್ಲ್ಡ್ ಕಾಂಗ್ರೆಸ್‌‌ನಲ್ಲಿ ಸಮ್ಮೇಳನದಲ್ಲಿ ಈ ಹೊಸ ಗ್ಯಾಜೆಟ್‌ನ ಬಗ್ಗೆ ರೋಹಿಲ್‌ ದೇವ್ ಮಾತನಾಡಲಿದ್ದಾರೆ. ಫೇಸ್‌ಬುಕ್‌ ಸಂಸ್ಥಾಪಕ ಮಾರ್ಕ್ ಜುಕರ್‌‌ಬರ್ಗ್‌,ಸೇರಿದಂತೆ ಹಲವರು ದಿಗ್ಗಜರು ಮಾತನಾಡುವ ಸಮ್ಮೇಳನದಲ್ಲಿ ಮಾತನಾಡಲಿರುವ ಅತ್ಯಂತ ಕಿರಿಯ ವ್ಯಕ್ತಿ ಇವರೇ ಆಗಿರುವುದು ವಿಶೇಷ.

ಮುಂದಿನ ಪುಟದಲ್ಲಿ ಈ ಹೊಸ ಬ್ಲೂಟೂತ್‌ ಗ್ಯಾಜೆಟ್‌ ಹೇಗಿದೆ ಮತ್ತು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ತೋರಿಸುವ ಚಿತ್ರ ಮತ್ತು ವಿಡಿಯೋವಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಇದನ್ನೂ ಓದಿ:ಭಾರತೀಯಳಿಂದ ಟಚ್‌ಫ್ರೀ ಮೊಬೈಲ್‌ ತಂತ್ರಜ್ಞಾನ ಆವಿಷ್ಕಾರ
ಇದನ್ನೂ ಓದಿ:ಆಡುವ ವಯಸ್ಸಿನಲ್ಲೇ ಆಪ್‌ ಕಂಪೆನಿ ಸ್ಥಾಪಿಸಿದ ಸಹೋದರರು

1

1

ಮೊಬೈಲ್‌ ವರ್ಲ್ಡ್ ಕಾಂಗ್ರೆಸ್‌‌ನಲ್ಲಿ ಸಮ್ಮೇಳನದಲ್ಲಿಮಾತನಾಡಲಿರುವ ಅತ್ಯಂತ ಕಿರಿಯ ವ್ಯಕ್ತಿ ರೋಹಿಲ್‌ ದೇವ್

2

2


ಬ್ಲೂಟೂತ್ ಮೂಲಕ ಕೆಲಸ ಮಾಡುವ ಈ ಉಂಗುರ ಐದು ರೀತಿಯ ಕೈಯ ಆಲುಗಾಡುವಿಕೆಯನ್ನು ಅರ್ಥ‌ಮಾಡಿಕೊಳ್ಳುತ್ತದೆ.

3

3

ಈ ಉಂಗುರಕ್ಕೆ ಫಿನ್‌ವೇರ್‌(FIN-Wear) ಎಂದು ಹೆಸರಿಟ್ಟಿದ್ದಾರೆ.

4

4

ಫಿನ್‌ವೇರ್‌ ಉಂಗುರ

5


ಇವರ ಈ ಯೋಜನೆಗೆ ಧನಸಹಾಯ ನೀಡುವವರು www.indiegogo.comನಲ್ಲಿ ನೀಡಬಹುದು

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X