Subscribe to Gizbot

4,499 ರೂ.ಗೆ 5.45 ಇಂಚ್ ಡಿಸ್‌ಪ್ಲೇ, ಡ್ಯುಯಲ್ ಕ್ಯಾಮೆರಾ ಮತ್ತು ಫಿಂಗರ್ಪ್ರಿಂಟ್ ಫೋನ್!!

Written By:

ಅತ್ಯಂತ ಕಡಿಮೆ ಬೆಲೆಗೆ ಹೆಚ್ಚು ಫೀಚರ್ಸ್‌ಗಳನ್ನು ಹೊತ್ತು ಬಂದಿರುವ ಐವೋಮಿ ಕಂಪೆನಿ ನೂತನ ಸ್ಮಾರ್ಟ್‌ಫೋನ್‌ಗಳ ಮೇಲೆ ಐಡಿಯಾ ಟೆಲಿಕಾಂ ಭರ್ಜರಿ ಕ್ಯಾಶ್‌ಬ್ಯಾಕ್ ಆಫರ್ ಘೋಷಿಸಿದೆ.! ಐವೋಮಿ ಐ1 ಮತ್ತು ಐವೋಮಿ ಐ1ಎಸ್ ಸ್ಮಾರ್ಟ್‌ಫೋನ್‌ ಖರೀದಿಸಿದ ಗ್ರಾಹಕರಿಗೆ 1500 ರೂಪಾಯಿಗಳ ಐಡಿಯಾ ಕ್ಯಾಶ್‌ಬ್ಯಾಕ್ ದೊರೆಯಲಿದೆ.!!

ಜನವರಿ 10 ರಂದು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ ಐವೋಮಿ ಐ 1 ಮತ್ತು ಐ 1ಎಸ್ ಸ್ಮಾರ್ಟ್‌ಫೋನ್‌ಗಳು ಕ್ರಮವಾಗಿ 5,999 ಮತ್ತು 6,999 ರೂಪಾಯಿಗಳಿಗೆ ಫ್ಲಿಪಾಕಾರ್ಟ್‌ನಲ್ಲಿ ಮಾರಟಕ್ಕಿದ್ದು, 18:9 ಪ್ರದರ್ಶನ ಮತ್ತು ಡ್ಯುಯಲ್ ಕ್ಯಾಮೆರಾ ಹೊಂದಿರುವ ಅತ್ಯಂತ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳು ಇವಾಗಿವೆ.!!

4,499 ರೂ.ಗೆ 5.45 ಇಂಚ್ ಡಿಸ್‌ಪ್ಲೇ, ಡ್ಯುಯಲ್ ಕ್ಯಾಮೆರಾ ಫೋನ್!!

1500 ರೂಪಾಯಿಗಳ ಐಡಿಯಾ ಕ್ಯಾಶ್‌ಬ್ಯಾಕ್ ಸೇರಿಸಿದರೆ ಐವೋಮಿ ಐ 1 ಫೋನ್ 4,499 ರೂ.ಗೆ ಮತ್ತು ಐ 1ಎಸ್ 5,499 ರೂಪಾಯಿಗಳಿಗೆ ಲಭ್ಯವಿವೆ.!! ಹಾಗಾದರೆ, ಸ್ಮಾರ್ಟ್‌ಫೋನ್‌ಗಳ ಫೀಚರ್ಸ್ ಏನು? ಐಡಿಯಾ ಕ್ಯಾಶ್‌ಬ್ಯಾಕ್ ಪಡೆಯವುದು ಹೇಗೆ? ಖರೀದಿಸಲು ಯೋಗ್ಯವಾದ ಫೋನ್‌ಗಳೇ? ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಡಿಸ್‌ಸ್‌ಪ್ಲೇ ಮತ್ತು ವಿನ್ಯಾಸ!!

ಡಿಸ್‌ಸ್‌ಪ್ಲೇ ಮತ್ತು ವಿನ್ಯಾಸ!!

ಐವೋಮಿ ಮೊಬೈಲ್ ಕಂಪೆನಿ ಹೇಳಿರುವಂತೆ ಐವೋಮಿ ಐ1 ಮತ್ತು ಐ1ಎಸ್ ಎರಡೂ ಸ್ಮಾರ್ಟ್‌ಫೋನ್‌ಗಳು 18:9 ಪ್ರದರ್ಶನವನ್ನು ಹೊಂದಿವೆ. 5.45-ಇಂಚಿನ ಹೆಚ್‌ಡಿ+ ಡಿಸ್‌ಪ್ಲೇ ಹೊಂದಿರುವ ಎರಡೂ ಫೋನ್‌ಗಳು ಹೆಚ್‌ಡಿ ವಿಡಿಯೋಗಳಿಗೆ ಹೇಳಿ ಮಾಡಿಸಿದ್ದಾಗಿದೆ ಎಂದು ಐವೋಮಿ ತಿಳಿಸಿದೆ. ಇನ್ನು ಎರಡೂ ಫೋನ್‌ಗಳ ವಿನ್ಯಾಸ ಒಂದೇ ರೀತಿಯಲ್ಲಿದೆ.!

How to Sharing a Mobile Data Connection with Your PC (KANNADA)
ಪ್ರೊಸೆಸರ್ ಯಾವುದು?

ಪ್ರೊಸೆಸರ್ ಯಾವುದು?

ಐವೋಮಿ ಐ1 ಮತ್ತು ಐ1ಎಸ್ ಎರಡೂ ಸ್ಮಾರ್ಟ್‌ಫೋನ್‌ಗಳು ಮೀಡಿಯಾಟೆಕ್ MT6737m ಚಿಪ್‌ಸೆಟ್ ಹೊಂದಿವೆ.!! ಆಂಡ್ರಾಯ್ಡ್ 7.0 ನೌಗಟ್ ಆಫರೇಟಿಂಗ್ ಸಿಸ್ಟಮ್ ಮೂಲಕ ಕಾರ್ಯನಿರ್ವಹಣೆ ನೀಡುವ ಮೀಡಿಯಾಟೆಕ್ MT6737m ಚಿಪ್‌ಸೆಟ್ ನಾವು ನೀಡುವ ಹಣಕ್ಕೆ ತೃಪ್ತಿದಾಯಕವಾಗಿದೆ.!!

RAM ಮತ್ತು ಮೆಮೊರಿ!!

RAM ಮತ್ತು ಮೆಮೊರಿ!!

RAM ಮತ್ತು ಮೆಮೊರಿ ನಡುವಿನ ವ್ಯತ್ಯಾಸಗಳು ಐವೋಮಿ ಐ1 ಮತ್ತು ಐ1ಎಸ್ ಫೋನ್‌ಗಳು ಬೇರ್ಪಡಿಸಿವೆ. ಐವೋಮಿ ಐ1 2ಜಿಬಿ RAM ಮತ್ತು 16 ಜಿಬಿ ಆಂತರಿಕ ಶೇಖರಣೆಯನ್ನು ಹೊಂದಿದ್ದರೆ, ಐವೋಮಿ ಐ1ಎಸ್3 ಜಿಬಿ RAM ಮತ್ತು 32 ಜಿಬಿ ಆಂತರಿಕ ಮೆಮೊರಿ ಹೊಂದಿದೆ.! ಎರಡೂ ಫೋನ್‌ಗಳಲ್ಲಿ 128 ಜಿಬಿ ವರೆಗೆ ಮೆಮೊರಿ ವಿಸ್ತರಿಸಬಹುದಾಗಿದೆ.!!

 ಡ್ಯುಯಲ್ ರಿಯರ್ ಕ್ಯಾಮೆರಾ!!

ಡ್ಯುಯಲ್ ರಿಯರ್ ಕ್ಯಾಮೆರಾ!!

ಅತ್ಯಂತ ಕಡಿಮೆ ಬೆಲೆಯಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ಹೊಂದಿರುವ ಫೋನ್‌ಗಳ ಸಾಲಿಗೆ ಐವೋಮಿ ಐ1 ಮತ್ತು ಐ1ಎಸ್ ಫೋನ್‌ಗಳು ಸೇರಿಕೊಳ್ಳಲಿವೆ. RGB ಸಂವೇದಕ ಹೊಂದಿರುವ 13MP ಪ್ರಾಥಮಿಕ ಹಾಗೂ 2MP ಸೆನ್ಸಾರ್ ರಿಯರ್ ಕ್ಯಾಮೆರಾಗಳು ಬೊಕೆ ಚಿತ್ರಗಳನ್ನು ತೆಗೆಯಲು ಸಹಾಯವಾಗಿದೆ. ಇನ್ನು ಎರಡೂ ಫೋನ್‌ಗಳೂ 8MP ಸೆಲ್ಫಿ ಕ್ಯಾಮೆರಾಗಳನ್ನು ಹೊಂದಿವೆ.!!

ಇತರೆ ಏನೆಲ್ಲಾ ಫೀಚರ್ಸ್‌ಗಳು?

ಇತರೆ ಏನೆಲ್ಲಾ ಫೀಚರ್ಸ್‌ಗಳು?

ಐವೋಮಿ ಐ1 ಮತ್ತು ಐ1ಎಸ್ ಎರಡೂ ಸ್ಮಾರ್ಟ್‌ಫೋನ್‌ಗಳು ಫಿಂಗರ್ಪ್ರಿಂಟ್ ಸ್ಕ್ಯಾನರ್ ಅನ್ನು ಒಳಗೊಂಡಿವೆ. 3000mAh ಬ್ಯಾಟರಿ 4ಜಿ ಎಲ್ಟಿಇ ವೋಲ್ಟ್, ವೈ-ಫೈ 802, ಮೈಕ್ರೋ ಯುಎಸ್‌ಬಿ ಪೋರ್ಟ್ನಂತಹ ಎಲ್ಲಾ ಫೀಚರ್‌ಗಳನ್ನು ಹೊಂದಿದೆ. ಹಾಗಾಗಿ, ನಾವು ನೀಡುವ ಹಣಕ್ಕೆ ಇದು ಯೋಗ್ಯವಾದ ಫೋನ್ ಎನ್ನಬಹುದು.!

 ಐಡಿಯಾ ಕ್ಯಾಶ್‌ಬ್ಯಾಕ್ ಆಫರ್

ಐಡಿಯಾ ಕ್ಯಾಶ್‌ಬ್ಯಾಕ್ ಆಫರ್

ಹೊಸ ಐವೊಮಿ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸುವುದರ ಜೊತೆಗೆ ಪ್ರತಿತಿಂಗಳು 300 ರೂಪಾಯಿಗಳಂತೆ 24 ತಿಂಗಳು ಹೆಚ್ಚು ಐಡಿಯಾ ರೀಚಾರ್ಜ್ ಮಾಡಿಸಬೇಕು. ಮೊದಲ 12 ನೇ ತಿಂಗಳಲ್ಲಿ ರೂ. 1,500 ಮತ್ತು ಮುಂದಿನ 12 ನೇ ತಿಂಗಳಲ್ಲಿ 1,200 ರೂ.ಗಳಂತೆ ನಿಮಗೆ ಫೋನ್‌ ಮೇಲೆ ಕ್ಯಾಶ್‌ಬ್ಯಾಕ್ ಸಿಗಲಿದೆ.!!

ಓದಿರಿ: ಶೀಘ್ರವೇ ಮಾರುಕಟ್ಟೆಗೆ ಬರುತ್ತಿದೆ ''ಒನ್‌ಪ್ಲಸ್ 6''!!..ಮೊಬೈಲ್ ಪ್ರಪಂಚ ಆಳಲು ಇಷ್ಟು ಫೀಚರ್‌ಗಳು ಸಾಕೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
After the cashback of Rs 1,500, the effective prices of smartphone will come down to Rs 4,499. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot