Subscribe to Gizbot

ಸ್ಯಾಮ್‌ಸಂಗ್ ಆಪಲ್‌ಗೆ ಕಂಟಕಪ್ರಾಯವಾಗಿರುವ ಸ್ಮಾರ್ಟ್‌ಫೋನ್‌ಗಳು

Written By:

"ಪ್ರಾಬಲ್ಯ" ಎನ್ನವುದಕ್ಕೆ ಬೇರೆ ಯಾವುದಾದರೂ ಹೊಸ ಅರ್ಥವಿದ್ದಲ್ಲಿ ಸ್ಯಾಮ್‌ಸಂಗ್ ಮತ್ತ ಆಪಲ್‌ಗಿಂತ ಹೆಚ್ಚಾಗಿ ಇದನ್ನು ಯಾರಿಗೂ ತಿಳಿದುಕೊಳ್ಳಲು ಸಾಧ್ಯವಿಲ್ಲ ಎಂದೇ ಹೇಳಬಹುದು. ಒಂದು ರೀತಿಯಲ್ಲಿ ಹೇಳುವುದಾದರೆ ಸ್ಮಾರ್ಟ್‌ಫೋನ್ ಮಾರುಕಟ್ಟೆಯ ದೈತ್ಯರು ಎಂದೇ ಇವರುಗಳನ್ನು ಕರೆಯಬಹುದು.

ಸ್ಯಾಮ್‌ಸಂಗ್ ಮತ್ತು ಆಪಲ್ ಕಂಪೆನಿಗಳು ಪ್ರತೀ ವರ್ಷ ಒಂದೊಂದು ಸ್ಮಾರ್ಟ್‌ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸುತ್ತಿವೆ. ಹೊಸ ಸ್ಮಾರ್ಟ್‌ಫೋನ್‌ಗಳ ಪಟ್ಟಿಯಲ್ಲಿ ಇವೆರಡೂ ಕಂಪೆನಿಗಳು ತಮ್ಮ ಹೆಸರನ್ನು ದಾಖಲಿಸಿಕೊಂಡಿವೆ ಎಂದು ಹೇಳಿದರೂ ತಪ್ಪಾಗಲಾರದು.

ವಿಶ್ವದಲ್ಲಿಯೇ (ಏಷ್ಯಾ) ನಂಬರ್ ಒನ್ ಸ್ಮಾರ್ಟ್‌ಫೋನ್ ತಯಾರಕ ಕಂಪೆನಿ ಎಂಬ ಗೌರವಕ್ಕೆ ಪಾತ್ರರಾಗಿರುವ ಸ್ಯಾಮ್‌ಸಂಗ್ ಕೂಡ ಈಗ ತೀವ್ರತರದ ಪೈಪೋಟಿಯನ್ನು ಎದುರಿಸುತ್ತಿದೆ. ಅತಿ ಸಣ್ಣ ಕಂಪೆನಿಗಳೂ ಕೂಡ ಮಾರುಕಟ್ಟೆಯ ಒಳ ಹೊರಗನ್ನು ಅರಿತುಕೊಂಡು ದಕ್ಷಿಣ ಕೊರಿಯಾದ ಈ ದಿಗ್ಗಜನಿಗೆ ಪಾಠವನ್ನು ಕಲಿಸಬೇಕೆಂಬ ನಿಟ್ಟಿನಲ್ಲಿವೆ.

ಹಾಗಿದ್ದರೆ ಇಂದಿನ ಲೇಖನದಲ್ಲಿ ಸ್ಯಾಮ್‌ಸಂಗ್ ಮತ್ತು ಆಪಲ್ ಕಂಪೆನಿಗಳಿಗೆ ಮಾರಕವಾಗಿರುವ ಏಷ್ಯಾದ ಟಾಪ್ ಫೋನ್‌ಗಳತ್ತ ಗಮನ ಹರಿಸೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಏಷ್ಯಾದ ಟಾಪ್ ಸ್ಮಾರ್ಟ್‌ಫೋನ್ ತಯಾರಕರು

#1

ಮೈಕ್ರೋಮ್ಯಾಕ್ಸ್ (ಭಾರತ)
ನಿಮ್ಮ ಸುತ್ತಲೂ ನಿಯಮಿತವಾಗಿ ಹರಿದಾಡುವಂತಹ ಹೆಸರಾಗಿದೆ ಮೈಕ್ರೋಮ್ಯಾಕ್ಸ್. ಇತ್ತೀಚಿನ ದಿನಗಳಲ್ಲಿ ಅತ್ಯಂತ ಜನಪ್ರಿಯವಾಗುತ್ತಿರುವ ಫೋನ್ ಕಂಪೆನಿ ಇದಾಗಿದೆ. ರಷ್ಯಾ ಮತ್ತು ರೊಮಾನಿಯನ್ ಮಾರುಕಟ್ಟೆಗಳನ್ನು ಪ್ರವೇಶಿಸುವ ಮೂಲಕ ದೈತ್ಯ ಫೋನ್‌ಗಳಷ್ಟೇ ಪ್ರಾಬಲ್ಯವನ್ನು ಇದು ಪಡೆದುಕೊಂಡಿದೆ. ಕ್ಯಾನ್‌ವಾಸ್ ನೈಟ್‌ನೊಂದಿಗೆ ಈ ಫೋನ್ ಯಶಸ್ಸಿನ ತುತ್ತು ತುದಿಗೆ ಏರುವತ್ತ ದಾಪುಗಾಲು ಹಾಕುತ್ತಿದೆ.

ಮೈಕ್ರೋಮ್ಯಾಕ್ಸ್ ವಿಶೇಷತೆಗಳು

ಏಷ್ಯಾದ ಟಾಪ್ ಸ್ಮಾರ್ಟ್‌ಫೋನ್ ತಯಾರಕರು

#2

ಕಾರ್ಬನ್ (ಭಾರತ)
ಮೈಕ್ರೋಮ್ಯಾಕ್ಸ್‌ನ ಹಿಂದೆಯೇ ಯಶಸ್ವಿಯಾಗಿ ತನ್ನ ಪರೀಕ್ಷೆಯನ್ನು ಮಾಡಿಕೊಳ್ಳುತ್ತಿರುವ ಇನ್ನೊಂದು ಕಂಪೆನಿಯಾಗಿದೆ ಕಾರ್ಬನ್. 2013 ರ ಕೊನೆಯಲ್ಲಿ ಕಂಪೆನಿಯು ಹತ್ತು ಶೇಕಡದಷ್ಟು ಫೋನ್ ತಯಾರಿಕೆಯನ್ನು ಹೆಚ್ಚಿಸಿದೆ.
ಕಾರ್ಬನ್ ಫೋನ್ ವಿಶೇಷತೆಗಳು

 ಏಷ್ಯಾದ ಟಾಪ್ ಸ್ಮಾರ್ಟ್‌ಫೋನ್ ತಯಾರಕರು

#3

ಒಪ್ಪೊ (ಚೈನಾ)

ತನ್ನ ದೇಶದಲ್ಲಿ ಉತ್ತಮ ಹೆಸರನ್ನು ಗಳಿಸಿಕೊಂಡಿರುವ ಫೋನ್ ಇದಾಗಿದೆ. ಹೆಚ್ಚಿನ ಹಾಲಿವುಡ್ ತಾರೆಯರನ್ನು ತನ್ನ ಜಾಹೀರಾತುಗಳಲ್ಲಿ ಪ್ರದರ್ಶಿಸಿರುವ ಒಪ್ಪೊ ಈ ವರ್ಷ ಉತ್ತಮ ಆರಂಭವಾಗಲಿದೆ.

ಒಪ್ಪೊ ಪೋನ್ ವಿಶೇಷತೆಗಳು

ಏಷ್ಯಾದ ಟಾಪ್ ಸ್ಮಾರ್ಟ್‌ಫೋನ್ ತಯಾರಕರು

#4

ಕ್ಸಯೋಮಿ (ಭಾರತ)
ಏಷ್ಯದಾದ್ಯಂತ ಭಾರೀ ಪ್ರಮಾಣದ ಸ್ಪರ್ಧೆಯನ್ನು ಒಡ್ಡಲಿರುವ ಇತ್ತೀಚಿನ ಆಗಮನವಾಗಿದೆ ಕ್ಸಯೋಮಿ ಫೋನ್. ಇದನ್ನು ಚೀನಾದ ಆಪಲ್ ಎಂದೂ ಕರೆಯುತ್ತಾರೆ.

ಕ್ಸಯೋಮಿ ಫೋನ್ ವಿಶೇಷತೆಗಳು

ಏಷ್ಯಾದ ಟಾಪ್ ಸ್ಮಾರ್ಟ್‌ಫೋನ್ ತಯಾರಕರು

#5

ಕ್ಸೋಲೋ (ಭಾರತ)
ಮೈಕ್ರೋಮ್ಯಾಕ್ಸ್ ಮತ್ತು ಕಾರ್ಬನ್ ಫೋನ್‌ಗಳನ್ನು ನೋಡುವಾಗ ಕ್ಸೋಲೋ ಭಾರತದಲ್ಲಿ ಉತ್ತಮ ಮಾರುಕಟ್ಟೆಯನ್ನು ಪಡೆದುಕೊಂಡಿದೆ ಎಂದೇ ಹೇಳಬಹುದು. ಆದರೆ ತಾನು ಲಾಂಚ್ ಮಾಡಿರುವ ಸ್ಮಾರ್ಟ್‌ಫೋನ್‌ಗಳನ್ನು ಇನ್ನಷ್ಟು ಬಲಿಷ್ಟಗೊಳಿಸುವ ಜವಬ್ದಾರಿ ಕ್ಸೋಲೋಗಿದೆ.

ಕ್ಸೋಲೋ ಫೋನ್ ವಿಶೇಷತೆಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
This article tells about that Samsung and Apple under threat because of new arrival smartphones.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot