Subscribe to Gizbot

ಸ್ಯಾಂಮ್ಸಂಗ್‌ ಚಾಂಪ್‌ ನಿಯೋ vs ನೋಕಿಯಾ ಆಶಾ 305

Posted By: Vijeth

ಸ್ಯಾಂಮ್ಸಂಗ್‌ ಚಾಂಪ್‌ ನಿಯೋ vs ನೋಕಿಯಾ ಆಶಾ 305
ಭಾರತೀಯ ಮಾರುಕಟ್ಟೆಯಲ್ಲಿ ಇಂದು ಸ್ಥಳೀಯ ಹಾಗೂ ಅಂತರ್ರಾಷ್ಟ್ರೀಯ ತಯಾರಕರುಗಳು ಸಾಲು ಸಾಲು ನೂತನ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತಲೇ ಇದ್ದಾರೆ. ಮಾರುಕಟ್ಟೆಯಲ್ಲಿನ ಬೇಡಿಕೆಗಳಿ ತಕ್ಕಂತೆ ಕಡಿಮೆದರದಲ್ಲಿನ ಸ್ಮಾರ್ಟ್‌ಫೊನ್‌ಗಳನ್ನು ತಯಾರಿಸುವ ಮೂಲಕ ಗ್ರಾಹಕರಿಗಳನ್ನು ತಮ್ಮತ್ತ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ.

ಅಂದಹಾಗೆ ಈ ಸಾಲಿಗೆ ದಕ್ಷಿಣ ಕೊರಿಯಾ ಮೂಲದ ತಯಾರಿಕಾ ಸಂಸ್ಥೆಯಾದ ಸ್ಯಾಮ್ಸಂಗ್‌ ತನ್ನಯ ನೂತನ ನ್ಯಾನೋ ಆಡ್ರಾಯ್ಡ್‌ ಫೋನ್ ಚಾಂಪ್‌ ನಿಯೋ ಡ್ಯುಯೋಸ್‌ ಬಿಡುಗಡೆ ಮಾಡಿದ್ದು ಇದಕ್ಕೆ ಪ್ರಬಲ ಪೈಪೋಟಿ ಎಂಬಂತೆ ನೋಕಿಯ ತನ್ನಯ ಆಶಾ ಸರಣಿಯ ನೋಕಿಯಾ ಆಶಾ 305 ಬಿಡುಗಡೆ ಮಾಡಿದೆ

ನೀವು ಕೂಡ ಕಡಿಮೆ ಬೆಲೆಯಲ್ಲಿನ ಟಚ್‌ಸ್ಕ್ರೀನ್‌ ಫೊನ್‌ ಖರೀದಿಸ ಬೇಕೆಂದಿದ್ದೀರ ಹಾಗಿದ್ದಲ್ಲಿ ಈ ಹೋಲಿಕೆ ಗಮನಿಸಿ ನೀವು ಯಾವ ಮೊಬೈಲ್‌ ಖರೀದಿಸಬೇಕು ಎಂಬುದನ್ನು ನೀವೇ ನಿರ್ಧರಿಸಿ.

ಗಾತ್ರ ಹಾಗೂ ತೂಕ: ಚಾಂಪ್‌ ನಿಯೋ ಡ್ಯುಯೋಸ್‌ 96.9 x 54.3 x 13.5 mm ಸುತ್ತಳತೆ ಯೊಂದಿಗೆ 82 ಗ್ರಾಂ ತೂಕವಿದೆ. ಹಾಗೂ ಆಶಾ 305 ಕೊಂಚ ದೊಡ್ಡದಾಗಿದ್ದು 110.3 x 53.8 x 12.8 mm ಸುತ್ತಳತೆಯೊಂದಿಗೆ 98 ಗ್ರಾಂ ತೂಕವಿದೆ.

ದರ್ಶಕ: ಈ ವಿಚಾರದಲ್ಲಿ ಚಾಂಪ್‌ ನಿಯೋ ಡ್ಯುಯೋಸ್‌ 2.4 ಇಂಚಿನ TFT ಟಚ್‌ ಸ್ರೀನ್‌ ಹೊಂದಿದ್ದು ಹಾಗೂ QVGA 240 x 320 ಪಿಕ್ಸೆಲ್‌ ರೆಸೆಲ್ಯೂಷನ್‌ ಹೊಂದಿದ್ದರೆ, ನೋಕಿಯಾ ಆಶಾ ಕೊಂಚ ದೊಡ್ಡದಾದ 3 ಇಂಚಿನ TFT ಟಚ್‌ಸ್ಕ್ರೀನ್‌ ಹಾಗು 240 x 400 ಪಿಕ್ಸೆಲ್‌ ರೆಸೆಲ್ಯೂಷನ್‌ ಹೊಂದಿದೆ.

ಪ್ರೊಸೆಸರ್‌:ಎರಡೂ ಫೊನ್‌ಗಳಲ್ಲಿ 1GHz ಪ್ರೊಸೆಸರ್‌ ಇದೆ.

ಕ್ಯಾಮೆರಾ: ಚಾಂಪ್‌ ನಿಯೋ ಡ್ಯುಯೋಸ್‌ ನಲ್ಲಿ ಹಿಂಬದಿಯ VGA ಕ್ಯಾಮೆರಾ ಇದ್ದರೆ ಆಶಾ 305 ನಲ್ಲಿ 2MP ಕ್ಯಾಮೆರಾ ಇದೆ. ಅಂದಹಾಗೆ ಎರಡೂ ಫೋನ್‌ಗಳಲ್ಲಿ ಮುಂಬದಿಯ ಕ್ಯಾಮೆರಾ ಇಲ್ಲಾ.

ಸ್ಟೋರೇಜ್‌: ಚಾಂಪ್‌ ನಿಯೋ ಡ್ಯುಯೋಸ್‌ ನಲ್ಲಿ 20MB ಆಂತರಿಕ ಮೆಮೊರಿ ಇದ್ದು ಮೈಕ್ರೋ ಎಸ್‌ಡಿ ಕಾರ್ಡ್‌ನ ಮೂಲಕ 32GB ವರೆಗೂ ಮೆಮೊರಿ ವಿಸ್ತರಿಸ ಬಹುದಾಗಿದೆ. ಮತ್ತೊಂದೆಡೆ ಆಶಾ 305 ನಲ್ಲಿ 10MB ಆಂತರಿಕ ಮೆಮೊರಿ ಹಾಗೂ 32MB RAM ಸೇರಿದಂತೆ ಮೈಕ್ರೋ ಎಸ್‌ಡಿ ಕಾರ್ಡ್‌ನ ಮೂಲಕ 32GB ವರೆಗೂ ಮೆಮೊರಿ ವಿಸ್ತರಿಸಿ ಕೊಳ್ಳಬಹುದಾಗಿದೆ.

ಕನೆಕ್ಟಿವಿಟಿ: ಎರೆಡೂ ಫೋನ್‌ಗಳಲ್ಲಿ ಬ್ಲೂಟೂತ್‌ ಹಾಗೂ ಮೈಕ್ರೋ USB 2.0 ಹೊಂದಿವೆ.

ಬ್ಯಾಟರಿ: ಚಾಂಪ್‌ ನಿಯೋ ಡ್ಯುಯೋಸ್‌ ನಲ್ಲಿ 1,000 mAh Li-ion ಬ್ಯಾಟರಿ ಇದ್ದು 14 ಟಾಕ್‌ ಟೈಮ್‌ ಹಾಗೂ 550 ಗಂಟೆಗಳ ಸ್ಟ್ಯಾಂಡ್‌ ಬೈ ನೀಡುತ್ತದೆ. ಹಾಗೂ ಆಶಾ 305 ನಲ್ಲಿ 1,110 mAh BL-4U ಬ್ಯಾಟರಿ ಇದ್ದು 14 ಗಂಟೆಗಳ ಬ್ಯಾಕಪ್‌ ಹಾಗೂ 528 ಗಂಟೆಗಳ ಸ್ಟ್ಯಾಂಡ್‌ಬೈ ನೀಡುತ್ತದೆ.

ಬೆಲೆ: ಖರೀದಿಸುವುದಾದರೆ ಚಾಂಪ್‌ ನಿಯೋ ಡ್ಯುಯೋಸ್‌ 3,260 ರೂ. ಬೆಲೆಯಲ್ಲಿ ಲಭ್ಯವಿದ್ದು, ಆಶಾ 305 ರೂ.4,668 ರ ಬೆಲೆಯಲ್ಲಿ ಲಭ್ಯವಿದೆ.

Read In English...

ನೋಕಿಯಾ ಆಶಾ 308 vs ಸೋನಿ ಎಕ್ಸಪೀರಿಯಾ ಟಿಪೋ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot