ಮಾರುಕಟ್ಟೆ ಪ್ರವೇಶಿಸುತ್ತಿಲ್ಲ 'ಗ್ಯಾಲಕ್ಸಿ ಫೋಲ್ಡ್'!..ಫೋನಿನಲ್ಲಿ ಸಮಸ್ಯೆ!

|

ಸ್ಯಾಮ್ಸಂಗ್ ಕಂಪನಿಯ ಪ್ರತಿಷ್ಠೆಯ ಕೂಸು ಎಂದೇ ಹೇಳಲಾಗುತ್ತಿರುವ 'ಗ್ಯಾಲಕ್ಸಿ ಫೋಲ್ಡ್' ಫೋನ್ ಶುಕ್ರವಾರ ಜಾಗತಿಕ ಮಾರುಕಟ್ಟೆ ಪ್ರವೇಶಿಸುತ್ತಿಲ್ಲ ಎಂಬ ಶಾಕಿಂಗ್ ಸುದ್ದಿ ಹೊರಬಿದ್ದಿದೆ. ಸ್ಯಾಮ್‌ಸಂಗ್ ಕಂಪೆನಿ ಪೂರ್ವನಿಗದಿಪಡಿಸಿದಂತೆ, ಇದೇ ಶುಕ್ರವಾರ 'ಗ್ಯಾಲಕ್ಸಿ ಫೋಲ್ಡ್' ಫೋನ್ ಬಿಡುಗಡೆಯಾಗಬೇಕಿತ್ತು. ಆದರೆ, ಗ್ಯಾಲಕ್ಸಿ ಫೋಲ್ಡ್' ಫೋನ್ ಬಳಸಲು ಆರಂಭಿಸಿದ ಎರಡೇ ದಿನಗಳಲ್ಲಿ ಫೋನ್ ಪರದೆಯ ಬಗ್ಗೆ ಸಮಸ್ಯೆ ಕಾಣಿಸಿಕೊಂಡಿರುವುದರಿಂದ ಫೋನ್ ಬಿಡುಗಡೆಯನ್ನು ತಡೆಹಿಡಿಯಲಾಗಿದೆ.

ಹೌದು, 'ಗ್ಯಾಲಕ್ಸಿ ಫೋಲ್ಡ್' ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಿಡುಗಡೆ ಮಾಡುವುದಕ್ಕೂ ಮುನ್ನ ಒಂದಷ್ಟು ಹ್ಯಾಂಡ್ ಸೆಟ್‌ಗಳನ್ನು ವಿಮರ್ಶೆಗಾಗಿ ಮಾಧ್ಯಮದವರಿಗೆ ನೀಡಲಾಗಿದ್ದು, ಸ್ಮಾರ್ಟ್‌ಫೋನ್ ಬಳಸಿದ ಕೆಲವರು ಫೋನ್ ಬಳಕೆಯನ್ನು ಆರಂಭಿಸಿದ ಎರಡೇ ದಿನಗಳಲ್ಲಿ ಫೋನ್ ಪರದೆಯ ಬಗ್ಗೆ ಸಮಸ್ಯೆ ಕಾಣಿಸಿಕೊಂಡಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಬಳಸಿ ನೋಡಿದವರು ಈ ಬಗ್ಗೆ ಸರಣಿ ಟ್ವೀಟ್ ಗಳನ್ನು ಮಾಡಿರುವುದರಿಂದ ಸದ್ಯದ ಮಟ್ಟಿಗೆ ಫೋನ್ ಬಿಡುಗಡೆ ದಿನ ಮುಂದೂಡಲಾಗಿದೆ.

ಮಾರುಕಟ್ಟೆ ಪ್ರವೇಶಿಸುತ್ತಿಲ್ಲ 'ಗ್ಯಾಲಕ್ಸಿ ಫೋಲ್ಡ್'!..ಫೋನಿನಲ್ಲಿ ಸಮಸ್ಯೆ!

'ಗ್ಯಾಲಕ್ಸಿ ಫೋಲ್ಡ್' ಬಿಡುಗಡೆಯ ದಿನವನ್ನು ಕಾತರದಿಂದ ಎದುರು ನೋಡುತ್ತಿದ್ದ ಮೊಬೈಲ್ ಪ್ರಿಯರಿಗೆ ಇದರಿಂದ ನಿರಾಸೆಯಾಗಿದ್ದು, ಸ್ಯಾಮ್ಸಂಗ್ ಕಂಪೆನಿ ಮೇಲೆ ಕಿಡಿಕಾರಿದ್ದಾರೆ. ಸ್ಯಾಮ್ಸಂಗ್ ತನ್ನ ಫೋನ್‌ಗಳಸಾಧಕ ಬಾಧಕಗಳನ್ನು ಆರ್ ಅಂಡ್‌ ಡಿ ಯಲ್ಲಿ ಪರೀಕ್ಷೆ ನಡೆಸಿದ ಬಳಿಕ ಗ್ರಾಹಕರಿಗೆ ನೀಡುವುದಿಲ್ಲ.ಈ ಬಾರಿ 'ಸ್ಯಾಮ್ಸಂಗ್ ಕಂಪನಿ ಸದಾ ತನ್ನ ಗ್ರಾಹಕರ ಮೇಲೆ ಪ್ರಯೋಗ ಮಾಡುತ್ತದೆ' ಎನ್ನುವುದು ನಿಜವಾಗಿದೆ ಎಂದು ಹಲವರು ವಿಶ್ವದಾಧ್ಯಂತ ಸ್ಮಾರ್ಟ್‌ಫೋನ್ ಪ್ರಿಯರು ಅಭಿಪ್ರಾಯಪಟ್ಟಿದ್ದಾರೆ.

ಜನಪ್ರಿಯ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಮಾಹಿತಿಯಂತೆ, 'ಗ್ಯಾಲಕ್ಸಿ ಫೋಲ್ಡ್' ಫೋನ್ ಪರದೆಗೆ ಪ್ರೊಟೆಕ್ಟಿವ್ ಲೇಯರ್ ಒಂದನ್ನು ಅಳವಡಿಸಲಾಗಿದ್ದು, ಆದರೆ, ಫೋನ್ ಬಳಸಲು ಆರಂಭಿಸುತ್ತಿದ್ದಂತೆಯೇ ಪರದೆಯ ಕೆಳ ಭಾಗದಲ್ಲಿ ಅದು ಕಿತ್ತುಬರುತ್ತಿದೆ ಎಂದು ಹೇಳಲಾಗಿದೆ. ಫೋನ್ ಬಿಡಿಸಿದಾಗ ಎರಡೂ ಪರದೆಗಳನ್ನು ಮಡಚುವ ಜಾಗದಿಂದ ಹೀಗೆ ಆ ಪ್ರೊಟೆಕ್ಟಿವ್ ಲೇಯರ್ ಸ್ವಲ್ಪವೇ ಕಿತ್ತು ಬರುವಂತೆ ಆಗಿತ್ತು. ಇದರಿಂದ ಪರದೆಗೆ ಹಾನಿಯಾಗಿದೆ ಎಂದು ಸಮಸ್ಯೆಯ ಬಗ್ಗೆ ಹೇಳಲಾಗಿದೆ.

ಮಾರುಕಟ್ಟೆ ಪ್ರವೇಶಿಸುತ್ತಿಲ್ಲ 'ಗ್ಯಾಲಕ್ಸಿ ಫೋಲ್ಡ್'!..ಫೋನಿನಲ್ಲಿ ಸಮಸ್ಯೆ!

ರಿವ್ಯೂಗೆ ಕೊಟ್ಟ 'ಗ್ಯಾಲಕ್ಸಿ ಫೋಲ್ಡ್' ಹ್ಯಾಂಡ್ ಸೆಟ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಹೀಗಾಗಿ ಅದರ ಪರಿಶೀಲನೆ ನಡೆಸಲಾಗುವುದು. ಹೀಗಾಗಿ ಫೋನ್‌ ಅನ್ನು ಸದ್ಯಕ್ಕೆ ಮಾರುಕಟ್ಟೆಗೆ ಬಿಡದೇ ಇರಲು ನಿರ್ಧರಿಸಿ ದ್ದೇವೆ' ಎಂದು ಸ್ಯಾಮ್‌ಸಂಗ್ ಕಂಪನಿ ಹೇಳಿಕೊಂಡಿದೆ. ಜೊತೆಗೆ 'ಫೋಲ್ಡಿಂಗ್ ಫೋನ್ ಬಳಸುವುದು ಹೇಗೆ ಎಂದು ಜನರಿಗೆ ಕೈಪಿಡಿ ನೀಡಲಾಗುವುದು' ಎಂದು ಕಂಪನಿ ತಿಳಿಸಿದೆ. ಇದರಿಂದ ಸ್ಯಾಮ್ಸಂಗ್ ಕಂಪನಿಯ ಪ್ರತಿಷ್ಠೆಯ ಕೂಸು 'ಗ್ಯಾಲಕ್ಸಿ ಫೋಲ್ಡ್'ಗೆ ವಿಘ್ನ ಎದುರಾಗಿದೆ.

ಓದಿರಿ: ಇಂದಿನಿಂದ ದೇಶದಲ್ಲಿ ಲಭ್ಯವಿದೆ ವಿಶ್ವದ ಬೆಸ್ಟ್ ಬಜೆಟ್ ಫೋನ್‌ 'P30 ಲೈಟ್'!

Best Mobiles in India

English summary
Samsung Delays Release of Galaxy Fold Smartphone. Samsung postpones launch of Galaxy Fold over screen breakages.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X