ಇಂದಿನಿಂದ ದೇಶದಲ್ಲಿ ಲಭ್ಯವಿದೆ ವಿಶ್ವದ ಬೆಸ್ಟ್ ಬಜೆಟ್ ಫೋನ್‌ 'P30 ಲೈಟ್'!

|

ಭಾರತದಲ್ಲಿ ಶಿಯೋಮಿ ಸ್ಮಾರ್ಟ್‌ಫೋನ್‌ಗಳಿಗೆ ಸೆಡ್ಡುಹೊಡೆದು ನಿಲ್ಲುವಂತಹ ಹುವಾವೇ 'P30 ಲೈಟ್' ಸ್ಮಾರ್ಟ್‌ಫೋನ್ ಇದೇ ಏಪ್ರಿಲ್ 25 ರಿಂದ ಭಾರತದಲ್ಲಿ ಲಭ್ಯವಿರಲಿದೆ. ಹುವಾವೇ ಕನ್ಸ್ಯೂಮರ್ ಬ್ಯುಸಿನೆಸ್ ಗ್ರೂಪ್ ಇಂಡಿಯಾ ಸಂಸ್ಥೆ ಈ ಬಗ್ಗೆ ಮಾಹಿತಿ ನೀಡಿದ್ದು, ಇ ಕಾಮರ್ಸ್ ತಾಣ ಅಮೆಜಾನ್ ಇಂಡಿಯಾದಲ್ಲಿ ನಾಳೆ ಮಧ್ಯಾಹ್ನದಿಂದಲೇ ಮಾರಾಟ ಆರಂಭವಾಗುತ್ತಿದೆ.

ಹುವಾವೇ 'P30 ಲೈಟ್' ಎರಡು ಮಾದರಿಗಳಲ್ಲಿ ದೇಶದಲ್ಲಿ ಲಭ್ಯವಿದ್ದು, ಮಧ್ಯರಾತ್ರಿಯ ಕಪ್ಪು ಮತ್ತು ಪೀಕಾಕ್ ನೀಲಿಯ ಎರಡು ಬಣ್ಣಗಳಲ್ಲಿ ಸ್ಮಾರ್ಟ್‌ಫೋನ್ ಆಕರ್ಷಿಸಲು ತಯಾರಾಗಿದೆ. 6 + 128 ಜಿಬಿ ರೂಪಾಂತರಕ್ಕಾಗಿ 22,990 ರೂ. ಮತ್ತು 4 + 128 ಜಿಬಿ ರೂಪಾಂತರಕ್ಕಾಗಿ 19,990 ರೂ. ದರಗಳಲ್ಲಿ ಗ್ರಾಹಕರು ಈ ಸ್ಮಾರ್ಟ್‌ಫೋನ್‌ಗಳನ್ನು ಗ್ರಾಹಕರು ಖರೀದಿಸಬಹುದಾಗಿದೆ.

ಇಂದಿನಿಂದ ದೇಶದಲ್ಲಿ ಲಭ್ಯವಿದೆ ವಿಶ್ವದ ಬೆಸ್ಟ್ ಬಜೆಟ್ ಫೋನ್‌ 'P30 ಲೈಟ್'!

6 ತಿಂಗಳ ಕಾಲ ನೋ ಕಾಸ್ಟ್ ಇಎಂಐ ಮತ್ತು ರೂ 2000 ವರೆಗೆ ವಿನಿಮಯ ಆಫರ್‌ಗಳ ಜೊತೆಗೆ ಬಂದಿರುವ ಈ ಸ್ಮಾರ್ಟ್‌ಫೋನ್‌ ಮೇಲೆ ಜಿಯೋ ಗ್ರಾಹಕರು 2.2 ಟೆರಾಬೈಟ್‌ಗಳಷ್ಟು ಉಚಿತ ಡೇಟಾವನ್ನು ಮತ್ತು 2200 ರೂ. ಕ್ಯಾಶ್‌ಬ್ಯಾಕ್ ಅನ್ನು ಸಹ ಪಡೆಯುತ್ತಿದೆ. ಹಾಗಾದರೆ, ಹುವಾವೇ 'P30 ಲೈಟ್' ಸ್ಮಾರ್ಟ್‌ಪೋನ್ ಹೇಗಿದೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

'P30 ಲೈಟ್' ವಿನ್ಯಾಸ!

'P30 ಲೈಟ್' ವಿನ್ಯಾಸ!

19,990 ರೂ. ದರದಲ್ಲಿ ಇಂತಹದೊಂದು ಸ್ಮಾರ್ಟ್‌ಫೋನ್ ಸಿಗಲಿದೆ ಎಂದು ಯಾರು ಅಂದುಕೊಂಡಿರಲಿಲ್ಲ ಎಂದರೆ ಅತಿಶಯೋಕ್ತಿ ಆಗುವುದಿಲ್ಲ. ಏಕೆಂದರೆ, 'P30 ಲೈಟ್' ವಿನ್ಯಾಸ ಅದ್ಬುತವಾಗಿದೆ. ಹಿಂಭಾಗದಲ್ಲಿ ಫಿಂಗರ್ಪ್ರಿಂಟ್, ಮೂರು ರಿಯರ್ ಕ್ಯಾಮೆರಾಗಳು, ಫುಲ್‌ಬಾಡಿ ಸ್ಕ್ರೀನ್ ವಿನ್ಯಾಸದಲ್ಲಿ ಇರುವ ಸ್ಮಾರ್ಟ್‌ಫೋನ್ ಹೈ ಎಂಡ್ ವಿನ್ಯಾಸವನ್ನು ಹೊಂದಿದೆ.

6.15-ಇಂಚಿನ ಎಲ್‌ಸಿಡಿ ಸ್ಕ್ರೀನ್

6.15-ಇಂಚಿನ ಎಲ್‌ಸಿಡಿ ಸ್ಕ್ರೀನ್

ಹುವಾವೇ P15 ಲೈಟ್ ಸ್ಮಾರ್ಟ್‌ಫೋನ್ 6.15-ಇಂಚಿನ ಎಲ್‌ಸಿಡಿ ಸ್ಕ್ರೀನ್ ಎಫ್‌ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದ್ದು, 2312 x 1080 ಪಿಕ್ಸೆಲ್ ರೆಸೆಲ್ಯೂಷನ್ ಮತ್ತು ಟಿಯರ್‌ಡ್ರಾಪ್ ನೋಚ್ ಹೊಂದಿರುವ ವಿನ್ಯಾದಲ್ಲಿದೆ. ಇದು ಸ್ಲಿಮ್ ಬೆಜೆಲ್ ಮುಖಗಳನ್ನು ಹೊಂದಿರುವ ಫೋನ್ ಆಗಿದ್ದು, ಪರದೆಯ-ದೇಹದ ಅನುಪಾತ ಶೇಕಡಾ 90 ರಷ್ಟು ಇರುವುದನ್ನು ನೀವು ನೋಡಬಹುದು.

ಪ್ರೊಸೆಸರ್ ಮತ್ತು RAM!

ಪ್ರೊಸೆಸರ್ ಮತ್ತು RAM!

ಆಕ್ಟಾ ಕೋರ್ ಕಿರಿನ್ 710 (2.2 GHz, ಕ್ವಾಡ್ ಕೋರ್, ಕಾರ್ಟೆಕ್ಸ್ A73 + 1.7 GHz, ಕ್ವಾಡ್ ಕೋರ್, ಕಾರ್ಟೆಕ್ಸ್ A53) ಪ್ರೊಸೆಸರ್, ಮಾಲಿ-ಜಿ 51 ಎಂಪಿ 4 ಜಿಪಿಯು ಆಂಡ್ರಾಯ್ಡ್ v9.0 ಒಎಸ್‌ನಲ್ಲಿ P15 ಲೈಟ್ ಕಾರ್ಯನಿರ್ವಹಣೆ ನೀಡಲಿದ್ದು, 4 ಜಿಬಿ RAM ಮತ್ತು 128 ಜಿಬಿ ಮೆಮೊರಿಯನ್ನು ಹೊಂದಿದೆ. ಮೆಮೊರಿಯನ್ನು 512 ಜಿಬಿ ವರೆಗೆ ವಿಸ್ತರಿಸಬಹುದಾದ ಆಯ್ಕೆ ಇದೆ.

ಹಿಂಬಾಗದಲ್ಲಿ ಮೂರು ಕ್ಯಾಮೆರಾಗಳು

ಹಿಂಬಾಗದಲ್ಲಿ ಮೂರು ಕ್ಯಾಮೆರಾಗಳು

24 ಮೆಗಾಪಿಕ್ಸೆಲ್ ವಿಶಾಲ ಕೋನ ಲೆನ್ಸ್, ವೈಡ್ ಆಂಗಲ್ (120 ಡಿಗ್ರಿ) ಜೊತೆಗೆ ಎಫ್ / 1.8 ದ್ಯುತಿರಂಧ್ರದೊಂದಿಗೆ , 8 ಮೆಗಾಪಿಕ್ಸೆಲ್ ಅಲ್ಟ್ರಾ ವಿಶಾಲ ಲೆನ್ಸ್, ಎಫ್ / 2.4 ದ್ಯುತಿರಂಧ್ರ, ಮತ್ತು 2-ಮೆಗಾಪಿಕ್ಸೆಲ್ ಆಳ-ಸಂವೇದಕ ಮಸೂರಗಳನ್ನು P15 ಲೈಟ್ ಸ್ಮಾರ್ಟ್‌ಫೋನಿನಲ್ಲಿ ನೀಡಲಾಗಿದೆ. ಇದು ಬಜೆಟ್ ಬೆಲೆಯ ಅಡ್ವಾನ್ಸ್ ಕ್ಯಾಮೆರಾ ಸೆಟಪ್ ಆಗಿದೆ ಎನ್ನಬಹುದು.

32 ಮೆಗಾಪಿಕ್ಸೆಲ್ಸ್ ಸೆಲ್ಫೀ ಕ್ಯಾಮೆರಾ!

32 ಮೆಗಾಪಿಕ್ಸೆಲ್ಸ್ ಸೆಲ್ಫೀ ಕ್ಯಾಮೆರಾ!

F/2.0 ದ್ಯುತಿರಂಧ್ರ ಸಾಮರ್ಥ್ಯದಲ್ಲಿ 32 ಮೆಗಾಪಿಕ್ಸೆಲ್ಸ್ ಮುಂಭಾಗದ ಕ್ಯಾಮೆರಾವನ್ನು ನೀಡಲಾಗಿದ್ದು, 20 ಸಾವಿರ ಆಸುಪಾಸಿನಲ್ಲಿ ಇದು ಹೈ ಎಂಡ್ ಸೆಲ್ಫೀ ಕ್ಯಾಮೆರಾವನ್ನು ಹೊಂದಿರುವ ಸ್ಮಾರ್ಟ್‌ಫೋನ್ ಇದಾಗಿದೆ. ಯಾವುದೇ ಸನ್ನಿವೇಶದಲ್ಲಿ ಉತ್ತಮ ಗುಣಮಟ್ಟದ ಸೆಲ್ಫೀ ಚಿತ್ರಗಳನ್ನು ಚಿತ್ರಿಸುವಂತಹ ಈ ಸ್ಮಾರ್ಟ್‌ಫೋನ್ ಅತ್ಯುತ್ತಮ ಕ್ಯಾಮೆರಾ ತಂತ್ರಜ್ಞಾನವನ್ನು ಹೊಂದಿದೆ.

ತಂತ್ರಜ್ಞಾನಗಳು

ತಂತ್ರಜ್ಞಾನಗಳು

ವೈಡ್ ಆಂಗಲ್ ಲೆನ್ಸ್, ನೈಟ್, ಪೋರ್ಟ್ರೇಟ್, ಪ್ರೋ, ಸ್ಲೋ-ಮೊ, ಪನೋರಮಾ, ಲೈಟ್ ಪೇಂಟಿಂಗ್, HDR, ಟೈಮ್-ಲ್ಯಾಪ್ಸ್, 3D ಪನೋರಮಾ, ಸ್ಟಿಕರ್ಗಳು,ಅಲ್ಟ್ರಾ ಸ್ನ್ಯಾಪ್ಶಾಟ್, ಆಡಿಯೋ ಕಂಟ್ರೋಲ್, ಟೈಮರ್ ಹಾಗೂ ಸೆಲ್ಫೀ ಕ್ಯಾಮರಾದಲ್ಲಿ ಪೋರ್ಟ್ರೇಟ್, ಪನೋರಮಾ, ಟೈಮ್-ಲ್ಯಾಪ್ಸ್, ಫಿಲ್ಟರ್, 3D ಪನೋರಮಾ, ಟೈಮರ್ ಮುಂತಾದ ಲಕ್ಷಣಗಳನ್ನು ಕ್ಯಾಮೆರಾ ಹೊಂದಿದೆ.

ಬ್ಯಾಟರಿ ಶಕ್ತಿ ಮತ್ತು ಇತರೆ ಫೀಚರ್ಸ್

ಬ್ಯಾಟರಿ ಶಕ್ತಿ ಮತ್ತು ಇತರೆ ಫೀಚರ್ಸ್

ಬ್ಯಾಟರಿಗೆ ಸಂಬಂಧಿಸಿದಂತೆ ಹುವಾವೇ P15 ಲೈಟ್ ಸ್ಮಾರ್ಟ್‌ಫೋನ್ 3340 mAh ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ಹೊಂದಿದ್ದು, ಇನ್ನುಳಿದಂತೆ ನ್ಯಾನೋ ಸಿಮ್ 2:,ನ್ಯಾನೋ (ಹೈಬ್ರಿಡ್) ಸಿಮ್ ಸೆಟಪ್, ಕ್ವಿಕ್‌ ಚಾರ್ಜೀಂಗ್ ತಂತ್ರಜ್ಞಾನ, ಕ್ಯಾಪಾಸಿಟಿವ್ ಟಚ್‌ಸ್ಕ್ರೀನ್ ಮತ್ತು ಫೇಸ್‌ ಅನ್‌ಲಾಕ್‌ನಂತಹ ವಿಶೇಷ ಫೀಚರ್ಸ್ ಹೊತ್ತು ಬಂದಿರುವುದು ಹೆಚ್ಚು ಗಮನಸೆಳೆಯುತ್ತಿದೆ.

Best Mobiles in India

English summary
Huawei P30 Lite first sale on Amazon today: Price, specifications, launch offers. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X