Subscribe to Gizbot

ಸ್ಯಾಮ್‌ಸಂಗ್ ಗ್ಯಾಲೆಕ್ಸಿ A5 ಮತ್ತು ಗ್ಯಾಲೆಕ್ಸಿ A7: ಬೆಲೆ, ವಿಶೇಷತೆ ಕುರಿತ ಸಂಪೂರ್ಣ ಮಾಹಿತಿ

Written By:

ಸ್ಯಾಮ್‌ಸಂಗ್ ಮತ್ತೆ ಭಾರತೀಯ ಮಾರುಕಟ್ಟೆಯಲ್ಲಿ ಆಕ್ಟಿವ್ ಆಗಿದ್ದು, ಮತ್ತೆ ಹೊಸ ಹೊಸ ಪೋನುಗಳನ್ನು ಲಾಂಚ್ ಮಾಡಲು ತುದಿಗಾಲಿನಂತೆ ನಿಂತಿದೆ. ಗ್ಯಾಲೆಕ್ಸಿ A5 ಮತ್ತು ಗ್ಯಾಲೆಕ್ಸಿ A7 ಅನ್ನು ಹೊಸದಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಮುಂದಾಗಿದ್ದು, ಲಾಂಚ್ ಆಗುವ ಮುನ್ನ ಮಾಹಿತಿ ಲಭ್ಯವಾಗಿದೆ.

ಸ್ಯಾಮ್‌ಸಂಗ್ ಗ್ಯಾಲೆಕ್ಸಿ A5 ಮತ್ತು ಗ್ಯಾಲೆಕ್ಸಿ A7

ಇದನ್ನು ಓದಿರಿ: ಅತ್ಯಂತ ಕಡಿಮೆ ಬೆಲೆಯ ಜಿಯೋ 4G ಪೋನು ಬಿಡುಗಡೆ..!!

ಸ್ಯಾಮ್‌ಸಂಗ್ ಗ್ಯಾಲೆಕ್ಸಿ A ಸರಣಿಯ ಪೋನುಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ A5 ಮತ್ತು A7 ಸ್ಮಾರ್ಟ್‌ಪೋನುಗಳು ಮಾರುಕಟ್ಟೆಗೆ ಆಗಮಿಸಲಿದೆ. ಇದರಲ್ಲಿ A5 ಸ್ಮಾರ್ಟ್‌ಪೋನು ರೂ.28,999 ಗಳಿಗೆ ಮಾರಾಟವಾಗಲಿದೆ, A7 ಸ್ಮಾರ್ಟ್‌ಪೋನು 33,490 ರೂಗಳಿಗೆ ಲಭ್ಯವಿರಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
A5 ಸ್ಮಾರ್ಟ್‌ಪೋನಿನ ವಿಶೇಷತೆಗಳು:

A5 ಸ್ಮಾರ್ಟ್‌ಪೋನಿನ ವಿಶೇಷತೆಗಳು:

A5 ಸ್ಮಾರ್ಟ್‌ಪೋನಿನಲ್ಲಿ 5.2 ಇಂಚಿನ Super AMOLED Full HD ಡಿಸ್‌ಪ್ಲೇ ಅಳವಡಿಸಲಾಗಿದ್ದು, 1920 x 1080 p ರೆಸಲ್ಯೂಷನ್ ಗುಣಮಟ್ಟವನ್ನು ಹೊಂದಿದೆ. 1.9GHz ವೇಗದ Exynos 7880 ಪ್ರೋಸೆಸರ್ ಈ ಪೋನಿನದಲ್ಲಿದೆ.

A5 ಸ್ಮಾರ್ಟ್‌ಪೋನಿನ ಮತ್ತಷ್ಟು ವಿಶೇಷತೆಗಳು:

A5 ಸ್ಮಾರ್ಟ್‌ಪೋನಿನ ಮತ್ತಷ್ಟು ವಿಶೇಷತೆಗಳು:

3GB of RAM ಮತ್ತು 32GB ಇನ್‌ಟರ್ನಲ್ ಮೆಮೊರಿ ಹೊಂದಿದೆ. ಅಲ್ಲದೇ ಕಾರ್ಡ್ ಮೂಲಕ 256 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳಬಹುದಾಗಿದೆ. ಅಲ್ಲದೇ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲೂ 16MP ಕ್ಯಾಮೆರಾವನ್ನು, ಜೊತೆಗೆ 3000mAh ಬ್ಯಾಟರಿಯನ್ನು ಅಳವಡಿಸಲಾಗಿದೆ.

A7 ಸ್ಮಾರ್ಟ್‌ಪೋನಿನ ವಿಶೇಷತೆಗಳು:

A7 ಸ್ಮಾರ್ಟ್‌ಪೋನಿನ ವಿಶೇಷತೆಗಳು:

A7 ಸ್ಮಾರ್ಟ್‌ಪೋನಿನಲ್ಲಿ 5.7 ಇಂಚಿನ Super AMOLED Full HD ಡಿಸ್‌ಪ್ಲೇ ಇದ್ದು, 1920 x 1080 p ರೆಸಲ್ಯೂಷನ್ ಗುಣಮಟ್ಟವನ್ನು ಹೊಂದಿದೆ. 1920 x 1080 p ರೆಸಲ್ಯೂಷನ್ ಗುಣಮಟ್ಟವನ್ನು ಹೊಂದಿದೆ.

A7 ಸ್ಮಾರ್ಟ್‌ಪೋನಿನ ಮತ್ತಷ್ಟು ವಿಶೇಷತೆಗಳು:

A7 ಸ್ಮಾರ್ಟ್‌ಪೋನಿನ ಮತ್ತಷ್ಟು ವಿಶೇಷತೆಗಳು:

1.9GHz ವೇಗದ Exynos 7880 ಪ್ರೋಸೆಸರ್ ಈ ಪೋನಿನದಲ್ಲಿದ್ದು, 3GB of RAM ಮತ್ತು 32GB ಇನ್‌ಟರ್ನಲ್ ಮೆಮೊರಿ ಹೊಂದಿದೆ. ಅಲ್ಲದೇ ಕಾರ್ಡ್ ಮೂಲಕ 256 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳಬಹುದಾಗಿದೆ. ಅಲ್ಲದೇ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲೂ 16MP ಕ್ಯಾಮೆರಾವನ್ನು ಅಳವಡಿಸಲಾಗಿದೆ. ಅಲ್ಲದೇ 3600mAh ಬ್ಯಾಟರಿಯನ್ನು ನೀಡಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
Samsung finally launched the Galaxy A5 (2017) and Galaxy A7 (2017) smartphones in India. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot