'ಗ್ಯಾಲಾಕ್ಸಿ ಎ7' ಲಾಂಚ್...ಮೂರು ಕ್ಯಾಮೆರಾಗಳ ಮೊದಲ ಸ್ಯಾಮ್‌ಸಂಗ್ ಸ್ಮಾರ್ಟ್‌ಪೋನ್!!

|

ವಿಶ್ವ ಮೊಬೈಲ್ ಮಾರುಕಟ್ಟೆಯ ದಿಗ್ಗಜ ಕಂಪೆನಿ 'ಸ್ಯಾಮ್‌ಸಂಗ್' ಇದೇ ಮೊದಲ ಬಾರಿಗೆ ಮೂರು ರಿಯರ್ ಕ್ಯಾಮೆರಾಗಳನ್ನು ಹೊಂದಿರುವ ಸ್ಮಾರ್ಟ್‌ಫೋನ್ ಒಂದನ್ನು ಬಿಡುಗಡೆ ಮಾಡಿ ಮೊಬೈಲ್ ಪ್ರಪಂಚಕ್ಕೆ ಆಶ್ಚರ್ಯ ಮೂಡಿಸಿದೆ. ಸ್ಯಾಮ್‌ಸಂಗ್ ಕಂಪೆನಿಯ ಮೊದಲ ಮೂರು ಕ್ಯಾಮೆರಾ ಸ್ಮಾರ್ಟ್‌ಪೋನ್ 'ಗ್ಯಾಲಾಕ್ಸಿ ಎ7' ನೆನ್ನೆಯಷ್ಟೆ ಮಾರುಕಟ್ಟೆಗೆ ಬಿಡುಗಡೆಯಾಗಿದೆ.

ಹೌದು, ಮೊಬೈಲ್ ಮಾರುಕಟ್ಟೆಯಲ್ಲಿ ಎಂದೂ ಸಹ ಹಿಂದೆ ಬೀಳಿದಂತೆ ನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಸ್ಯಾಮ್‌ಸಂಗ್ ಕಂಪೆನಿ, ಈಗ ಮೂರು ಕ್ಯಾಮೆರಾಗಳಿರುವ ಸ್ಮಾರ್ಟ್‌ಪೋನ್ ತಂತ್ರಜ್ಞಾನದ ಮೇಲೂ ಸಹ ಕಣ್ಣಿಟ್ಟಿದೆ. ಈ ಮೂಲಕ ಚೀನಾ ಮೊಬೈಲ್‌ ಕಂಪೆನಿಗಳಿಗೂ ಸೆಡ್ಡು ಹೊಡೆಯಲು ಸ್ಯಾಮ್‌ಸಂಗ್ ತಯಾರಿ ನಡೆಸಿದೆ ಎಂದು ಹೇಳಲಾಗುತ್ತಿದೆ.

'ಗ್ಯಾಲಾಕ್ಸಿ ಎ7' ಲಾಂಚ್..ಮೂರು ಕ್ಯಾಮೆರಾಗಳ ಮೊದಲ ಸ್ಯಾಮ್‌ಸಂಗ್ ಸ್ಮಾರ್ಟ್‌ಪೋನ್!

6 ಇಂಚುಗಳ ಸಂಪೂರ್ಣ HD+ (1080x2280) ಸೂಪರ್ AMOLED ಇನ್ಫಿನಿಟಿ ಡಿಸ್‌ಪ್ಲೇ, 24 MP ಸೆಲ್ಫಿ ಫಿಕ್ಸೆಡ್ ಫೋಕಸ್ ಸೆಲ್ಫಿ ಕ್ಯಾಮೆರಾಗಳಂತಹ ಅತ್ಯುತ್ತಮ ಫೀಚರ್ಸ್ ಹೊತ್ತು ಬಜೆಟ್ ಬೆಲೆಯಲ್ಲಿ 'ಗ್ಯಾಲಾಕ್ಸಿ ಎ7' ಮಾರುಕಟ್ಟೆಗೆ ಎಂಟ್ರಿ ನೀಡುತ್ತಿದೆ. ಹಾಗಾದರೆ, ಬಹು ನಿರೀಕ್ಷಿತ 'ಗ್ಯಾಲಾಕ್ಸಿ ಎ7' ಸ್ಮಾರ್ಟ್‌ಪೋನ್ ಹೊಂದಿರುವ ಫೀಚರ್ಸ್ ಯಾವುವು ಎಂಬುದನ್ನು ಮುಂದೆ ಓದಿರಿ.

ಗ್ಯಾಲಾಕ್ಸಿ ಎ7 ಡಿಸ್‌ಪ್ಲೇ ಹೇಗಿದೆ?

ಗ್ಯಾಲಾಕ್ಸಿ ಎ7 ಡಿಸ್‌ಪ್ಲೇ ಹೇಗಿದೆ?

ಮೊದಲೇ ಹೇಳಿದಂತೆ 'ಗ್ಯಾಲಾಕ್ಸಿ ಎ7' ಸ್ಮಾರ್ಟ್‌ಪೋನ್ 18.5: 9 ರ ಆಕಾರ ಅನುಪಾತದೊಂದಿಗೆ 6 ಇಂಚುಗಳ ಸಂಪೂರ್ಣ HD+ (1080x2280) ಸೂಪರ್ AMOLED ಇನ್ಫಿನಿಟಿ ಡಿಸ್‌ಪ್ಲೇಯನ್ನು ಹೊಂದಿದೆ. 1080x2220 ಪಿಕ್ಸೆಲ್ ಸಾಮರ್ಥ್ಯದ ಈ ಡಿಸ್‌ಪ್ಲೇ ಮಲ್ಟಿಮೀಡಿಯಾ ಹಾಗೂ ಗೇಮಿಂಗ್ ಸ್ಮಾರ್ಟ್‌ಫೋನ್ ಪ್ರಿಯರಿಗೆ ಹೇಳಿ ಮಾಡಿಸಿದಂತೆ ಇದೆ.

ಪ್ರೊಸೆಸರ್ ಮತ್ತು RAM!

ಪ್ರೊಸೆಸರ್ ಮತ್ತು RAM!

'ಗ್ಯಾಲಾಕ್ಸಿ ಎ7' ಸ್ಮಾರ್ಟ್‌ಪೋನ್ ಒಕ್ಟಾ ಕೋರ್ SoC 2.2GHz ಸಾಮರ್ಥ್ಯದ ಪ್ರೊಸೆಸರ್ ಅನ್ನು ಹೊಂದಿದೆ. ಆದರೆ, ಪ್ರೊಸೆಸರ್ ಯಾವುದು ಎಂಬ ಮಾಹಿತಿಯನ್ನು ಮುಚ್ಚಿಟ್ಟಿರುವ ಸ್ಯಾಮ್‌ಸಂಗ್ 4GB / 6GB RAM ಮತ್ತು 64GB / 128GB ಅಂತರ್ಗತ ಶೇಖರಣಾ ಸಾಮರ್ಥ್ಯದ ಎರಡು ಮಾದರಿಗಳಲ್ಲಿ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆಗೊಳಿಸಿದೆ.

3 ರಿಯರ್ ಕ್ಯಾಮೆರಾಗಳು!

3 ರಿಯರ್ ಕ್ಯಾಮೆರಾಗಳು!

'ಗ್ಯಾಲಾಕ್ಸಿ ಎ7' ಸ್ಮಾರ್ಟ್‌ಪೋನಿನಲ್ಲಿ, 24 MP ಆಟೋಫೋಕಸ್ ಸೆನ್ಸಾರ್ (f/1.7 aperture), 8 MP ಅಲ್ಟ್ರಾ ವೈಡ್ ಸೆನ್ಸಾರ್ (f/2.4 aperture) ಹಾಗೂ 5MP ಡೆಪ್ತ್ ಸೆನ್ಸಾರ್ (f/2.2 aperture)ಸಾಮರ್ಥ್ಯದ ಮೂರು ರಿಯರ್ ಕ್ಯಾಮೆರಾಗಳ ಜೊತೆ 24 MP ಫೋಕಸ್ ಸೆನ್ಸಾರ್ (f/2.0 aperture) ಸೆಲ್ಫಿ ಕ್ಯಾಮೆರಾವನ್ನು ನೀಡಿ ಸ್ಯಾಮ್‌ಸಂಗ್ ಗಮನಸೆಳೆದಿದೆ.

ಬ್ಯಾಟರಿ ಮತ್ತು ಇತರೆ ಫೀಚರ್ಸ?

ಬ್ಯಾಟರಿ ಮತ್ತು ಇತರೆ ಫೀಚರ್ಸ?

ಬಹುತೇಕ ಎಲ್ಲಾ ಹೈ ಎಂಡ್ ಫೀಚರ್ಸ್ ಹೊಂದಿರುವ 'ಗ್ಯಾಲಾಕ್ಸಿ ಎ7' ಸ್ಮಾರ್ಟ್‌ಪೋನಿನಲ್ಲಿ 3300mAh ಬ್ಯಾಟರಿಯನ್ನು ನೀಡಲಾಗಿದೆ. ಸ್ಯಾಮ್ಸಂಗ್ ಪೇ, 4ಜಿ ವೋಲ್ಟ್, ಡ್ಯುಯಲ್ ಬ್ಯಾಂಡ್ ವೈ-ಫೈ 802.11ac, ಬ್ಲೂಟೂತ್ ವಿ5.0, 3.5 mm ಹೆಡ್‌ಫೋನ್ ಜ್ಯಾಕ್, RGB ಸೆನ್ಸರ್ ಹಾಗೂ ಮೌಂಟೆಡ್ ಫಿಂಗರ್ಪ್ರಿಂಟ್ ಸಂವೇದಕಗಳು ಫೋನಿನಲ್ಲಿ ಅಲಂಕೃತವಾಗಿವೆ.

ಬೆಲೆ ಮತ್ತು ಲಭ್ಯತೆ?

ಬೆಲೆ ಮತ್ತು ಲಭ್ಯತೆ?

ಸ್ಯಾಮ್ಸಂಗ್ ಕಂಪೆನಿ ಗ್ಯಾಲಕ್ಸಿ ಎ7 2018) ಬೆಲೆಯನ್ನು 350 ಇಯುಆರ್‌ಗಳು ಎಂದು ಹೇಳಿಕೊಂಡಿದೆ, ಭಾರತದ ರೂಪಾಯಿಗಳ ಬೆಲೆಯಲ್ಲಿ ಅಂದಾಜು 30,000 ರುಪಾಯಿಗಳಲಾಗುತ್ತವೆ. ದಕ್ಷಿಣ ಕೋರಿಯಾದಲ್ಲಿ ಲಾಂಚ್ ಆಗಿರುವ ಈ ಸ್ಮಾರ್ಟ್‌ಫೋನ್ ಅನ್ನು ಸದ್ಯದಲ್ಲೇ ಇತರ ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ವಿಸ್ತರಿಸುವುದಾಗಿ ಸ್ಯಾಮ್ಸಂಗ್ ಹೇಳಿಕೊಂಡಿದೆ.

Best Mobiles in India

English summary
After many leaks, Samsung has officially launched the Galaxy A7, its latest addition to the Galaxy A lineup. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X