Subscribe to Gizbot

ಮೋಟೋ ಇಗೆ ಭರ್ಜರಿ ಪೈಪೋಟಿ ಗ್ಯಾಲಕ್ಸಿ ಏಸ್ NXT ನಿಂದ

Written By:

ಕೆಲವು ತಿಂಗಳಿನಿಂದೀಚೆಗೆ, ಸ್ಯಾಮ್‌ಸಂಗ್ ಮಿತದರದ ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಕುರಿತು ಯಾವುದೇ ಆಸಕ್ತಿಯನ್ನು ತೋರುತ್ತಿಲ್ಲ ಎಂದಾಗಿತ್ತು. ಆದರೀಗ ಮೋಟೋ ಇಗೆ ಭರ್ಜರಿ ಪೈಪೋಟಿಯನ್ನು ನೀಡುವ ಉದ್ದೇಶದಿಂದ ಸ್ಯಾಮ್‌ಸಂಗ್ ಆಂಡ್ರಾಯ್ಡ್ ನಿರ್ಮಿತ ಫೋನ್‌ಗಳನ್ನು ರೂ 7,000 ದ ಬೆಲೆಯಲ್ಲಿ ಮಾರುಕಟ್ಟೆಗೆ ತರುತ್ತಿದೆ.

ಕಂಪೆನಿಯ ಇತ್ತೀಚಿನ ಡಿವೈಸ್ ಆಗಿ ಹೊರಬಂದಿರುವ ಗ್ಯಾಲಕ್ಸಿ ಏಸ್ NXT ಕಂಪೆನಿಯ ಪ್ರಾರಂಭ ಹಂತದ ಹ್ಯಾಂಡ್‌ಸೆಟ್ ಆಗಿ ರೂಪುಗೊಂಡಿದೆ. ಮುಂಬೈನಲ್ಲಿ ಈ ಹ್ಯಾಂಡ್‌ಸೆಟ್ ಮಾರಾಟಕ್ಕೆ ಲಭ್ಯವಾಗುತ್ತಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಏಸ್ NXT ಭಾರತದಲ್ಲಿ ಲಭ್ಯ

ಮುಂಬೈ ಮೂಲದ ರೀಟೈಲರ್ ಮಹೇಶ್ ಟೆಲಿಕಾಮ್ ಹೇಳುವಂತೆ ಹೊಸ ಬಜೆಟ್ ಫೋನ್ ಈಗಾಗಲೇ ಸ್ಟಾಕ್ ಅನ್ನು ಹೊಂದಿದ್ದು ಇದರ ಬೆಲೆ ರೂ 7,399 ಆಗಿದೆ. ಇದನ್ನು ಚೆನ್ನಾಗಿ ಪ್ರಾಯೋಜಿಸಿದರೆ ಮೋಟೊ ಇ ಯ ನಂತರದ ಸ್ಥಾನ ಇದಕ್ಕೆ ಎಂದೇ ಹೇಳಬಹುದು.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಏಸ್ NXT ವಿಶೇಷಣಗಳನ್ನು ಕುರಿತು ಹೇಳಹೊರಟರೆ, ಇದು 4 ಇಂಚಿನ WVGA ಪರದೆಯನ್ನು ಹೊಂದಿದೆ. ಇದರಲ್ಲಿ 1.2 GHz ಸಿಂಗಲ್ ಕೋರ್ Spreadtrum SC7715 ಪ್ರೊಸೆಸರ್ ಇದ್ದು Mali-400 GPU ಮತ್ತು ಆಂಡ್ರಾಯ್ಡ್ ಕಿಟ್‌ಕ್ಯಾಟ್ ಆವೃತ್ತಿ 4.4.2 ಇದೆ.

ಈ ಡಿವೈಸ್ 4ಜಿಬಿ ಆಂತರಿಕ ಸಂಗ್ರಹಣೆಯನ್ನು ನೀಡುತ್ತಿದ್ದು ಇದರ ವಿಸ್ತರಣೆಯನ್ನು ಎಸ್‌ಡಿ ಕಾರ್ಡ್ ಮೂಲಕ ಮಾಡಬಹುದಾಗಿದೆ. ಈ ಡಿವೈಸ್‌ನ ಒಳಗಡೆ 1500mAh ಬ್ಯಾಟರಿಯನ್ನು ಅಳವಡಿಸಲಾಗಿದ್ದು ರಿಯರ್ ಕ್ಯಾಮೆರಾ ಸಾಮರ್ಥ್ಯ 3 ಮೆಗಾಪಿಕ್ಸೆಲ್‌ಗಳಾಗಿದೆ ಇದು ಸಿಂಗಲ್ ಎಲ್‌ಇಡಿ ಫ್ಲ್ಯಾಶ್ ಅನ್ನು ಹೊಂದಿದೆ. ಡ್ಯುಯೆಲ್ ಸಿಮ್ ಬೆಂಬಲವುಳ್ಳ ಈ ಫೋನ್ ಹೆಚ್ಚು ವೇಗದ 3ಜಿ ಸಂಪರ್ಕಕ್ಕೂ ಬೆಂಬಲವನ್ನು ಒದಗಿಸುತ್ತದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ ಏಸ್ NXT ಕಪ್ಪು ಮತ್ತು ಬಿಳಿ ಬಣ್ಣಗಳಲ್ಲಿ ಲಭ್ಯವಿದೆ.

ಸ್ಯಾಮ್‌ಸಂಗ್ ಈಗಾಗಲೇ ಎರಡು ಕಡಿಮೆ ದರದ ಫೋನ್‌ಗಳನ್ನು ಲಾಂಚ್ ಮಾಡಿದ್ದು ಗ್ಯಾಲಕ್ಸಿ ಯಂಗ್ 2, ಗ್ಯಾಲಕ್ಸಿ ಸ್ಟಾರ್ 2 ಎಂಬ ಹೆಸರಿನಿಂದ ಇದು ಭಾರತೀಯ ಮಾರುಕಟ್ಟೆಗೆ ಕಾಲಿಡಬೇಕಾಗಿದೆ. ಆದರೆ ಇವೆಲ್ಲವೂ ಒಮ್ಮೆಗೆ ಭಾರತೀಯ ಮಾರುಕಟ್ಟೆಗೆ ದಾಳಿ ಮಾಡಿದಾಗ ಉಂಟಾಗುವ ಪರಿಸ್ಥಿತಿ ಏನು ಎಂಬುದನ್ನು ಕಾದು ನೋಡಬೇಕಾಗಿದೆ.

ಹೆಚ್ಚಿನ ಸುದ್ದಿಗಳಿಗಾಗಿ ಗಿಜ್‌ಬಾಟ್‌ಗೆ ಭೇಟಿ ನೀಡುತ್ತಿರಿ!

Read more about:
English summary
This article tells that Samsung galaxy Ace NXT Now available in India.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot