Subscribe to Gizbot

ಆಂಡ್ರಾಯ್ಡ್ ಕಿಟ್‌ಕ್ಯಾಟ್‌ನೊಂದಿಗೆ ಗ್ಯಾಲಕ್ಸಿ ಕೋರ್ 2

Written By:

ಕಡಿಮೆ ವೆಚ್ಚದ ಫೋನ್ ತಯಾರಿಕೆಯಲ್ಲೂ ತನ್ನ ಅಧಿಕಾರವನ್ನು ನಿರ್ವಹಿಸಿಕೊಂಡು ಸ್ಯಾಮ್‌ಸಂಗ್, ಮಧ್ಯಮ ಶ್ರೇಣಿಯ ಫೋನ್ ಕ್ಷೇತ್ರಕ್ಕೂ ಕಾಲಿಡುತ್ತಿದೆ. ಅದರಲ್ಲೂ ಭಾರತದಲ್ಲೂ, ಸ್ಯಾಮ್‌ಸಂಗ್ ತನ್ನ ಅತ್ಯಾಧುನಿಕ ಮಧ್ಯಮ ಶ್ರೇಣಿಯ ಫೋನ್ ಅನ್ನು ಪ್ರಸ್ತುತಪಡಿಸಿದ್ದು ಇದು ಗ್ಯಾಲಕ್ಸಿ ಕೋರ್ 2, ಏಸ್ 4 ಮತ್ತು ನೆದರ್‌ಲ್ಯಾಂಡ್‌ನಲ್ಲಿ ಯಂಗ್ 2 ಮೂಲಕ ಉತ್ತಮ ಆರಂಭವನ್ನೇ ಮಾಡಿಕೊಂಡಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಕೋರ್ 2: ವಿಶೇಷತೆಗಳು
ಇದು 4.5 ಇಂಚಿನ ಡಿಸ್‌ಪ್ಲೇಯೊಂದಿಗೆ ಬಂದಿದ್ದು ಇದರ ರೆಸಲ್ಯೂಶನ್ 800 x 480 ಪಿಕ್ಸೆಲ್‌ಗಳಾಗಿದೆ ಇದು 1.2 GHz ಕ್ವಾಡ್ ಕೋರ್ ಪ್ರೊಸೆಸರ್ ಅನ್ನು ಒಳಗೊಂಡಿದ್ದು 768 ಎಮ್‌ಬಿ RAM ನೊಂದಿಗೆ ಬಂದಿದೆ. ಇದರಲ್ಲಿ ಆಂಡ್ರಾಯ್ಡ್ ಕಿಟ್‌ಕ್ಯಾಟ್ ಓಎಸ್ ಇದ್ದು ಸ್ಯಾಮ್‌ಸಂಗ್‌ನ ಕಸ್ಟಮ್ ಲೇಯರ್ TouchWiz Essence UI ಇದರಲ್ಲಿದೆ. 5 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ ಸಾಮರ್ಥ್ಯವನ್ನು ಫೋನ್ ಒಳಗೊಂಡಿದ್ದು LED ಫ್ಲ್ಯಾಶ್ ಡಿವೈಸ್‌ನಲ್ಲಿದೆ.

ಕಿಟ್‌ಕ್ಯಾಟ್ ಸುವಾಸಿತ ಸ್ಯಾಮ್‌ಸಂಗ್ ಗ್ಯಾಲಕ್ಸಿ ಕೋರ್ 2

ಇತರ ಅಂಶಗಳೆಂದರೆ ಡ್ಯುಯೆಲ್ ಸಿಮ್, 4 ಜಿಬಿ ಆಂತರಿಕ ಮೆಮೊರಿ ಇದನ್ನು 64 ಜಿಬಿಗೆ ವಿಸ್ತರಿಸಬಹುದು. ಸಂಪರ್ಕ ವೈಶಿಷ್ಟ್ಯಗಳೆಂದರೆ 3G HSPA+, Wi-Fi 802.11 b/g/n,ಬ್ಲ್ಯೂಟೂತ್ 4.0, GPS + GLONASS ಮತ್ತು 2000 mAh ಬ್ಯಾಟರಿ ಫೋನ್‌ನಲ್ಲಿದೆ. ಇದರ ವಿಸ್ತೀರ್ಣ 130.2 x 67.9 x 9.8mm ಆಗಿದ್ದು ತೂಕ 138 ಗ್ರಾಮ್‌ಗಳಾಗಿದೆ.

ಹೆಚ್ಚಿನ ಸುದ್ದಿಗಳಿಗಾಗಿ ಗಿಜ್‌ಬಾಟ್‌ಗೆ ಭೇಟಿ ಕೊಡುತ್ತಿರಿ!

Read more about:
English summary
This article tells about that Samsung galaxy core 2 with android kitkat to launch.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot