Subscribe to Gizbot

ಸ್ಯಾಮ್‌ಸಂಗ್ ಗ್ಯಾಲಕ್ಸಿ ಕೋರ್ ಮಿನಿಗೆ 4 ಜಿ ಬೆಂಬಲ

Written By:

ಸ್ಯಾಮ್‌ಸಂಗ್ ಕಡಿಮೆ ಮೌಲ್ಯದ ಫೋನ್ ತಯಾರಿಕಾ ಕ್ಷೇತ್ರದಲ್ಲಿ ಯಾವುದೇ ಆಸಕ್ತಿಯನ್ನು ತೋರಿಸುತ್ತಿಲ್ಲ ಎಂಬ ಟೀಕೆಗೆ ಇತ್ತೀಚಿನ ದಿನಗಳಲ್ಲಿ ಒಳಗಾಗಿತ್ತು. ಆದರೂ ಸ್ಯಾಮ್‌ಸಂಗ್ ತನ್ನ ಹೆಚ್ಚು ಬೆಲೆಯ ಫೋನ್ ತಯಾರಿಯನ್ನು ನಿಲ್ಲಿಸದೇ ಮಾರುಕಟ್ಟೆಯಲ್ಲಿ ಹೊಸ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತಿದೆ.

ಈ ದಕ್ಷಿಣ ಕೊರಿಯಾದ ಸ್ಮಾರ್ಟ್‌ಫೋನ್ ದಿಗ್ಗಜ ಏನನ್ನಾದರೂ ಹೊಸತನ್ನು ಅನ್ವೇಷಿಸುವ ಮಾರುಕಟ್ಟೆಗೆ ಲಾಂಚ್ ಮಾಡುವ ತನ್ನ ಪ್ರಯತ್ನವನ್ನು ಕೈ ಬಿಟ್ಟಿಲ್ಲ ಎಂಬುದು ಇದರ ಇತ್ತೀಚಿನ ಕೆಲವೊಂದು ಲಾಂಚಿಂಗ್ ಮೂಲಕ ತಿಳಿದುಬರುತ್ತದೆ. ಹೊಸದಾಗಿ ಗ್ಯಾಲಕ್ಸಿ ಕೋರ್ ಮಿನಿ 4 ಜಿಯನ್ನು ಮಾರುಕಟ್ಟೆಯಲ್ಲಿ ತೊಡಗಿಸಿರುವ ಕಂಪೆನಿ ಇದನ್ನು ಕಡಿಮೆ ಬೆಲೆಯಲ್ಲಿ ಗ್ರಾಹಕರಿಗೆ ನೀಡುತ್ತಿದೆ.

ಸ್ಯಾಮ್‌ಸಂಗ್‌ನಿಂದ ಬರಲಿದೆ ಬಜೆಟ್ ಸ್ನೇಹಿ ಫೋನ್

ಇದು 4 ಜಿ ಎಲ್‌ಟಿಇ ಸಂಪರ್ಕ ವ್ಯವಸ್ಥೆಯನ್ನು ಬೆಂಬಲಿಸುತ್ತಿದ್ದು, ಬಜೆಟ್ ಹ್ಯಾಂಡ್‌ಸೆಟ್ ಆಗಿದೆ ಎಂಬುದು ಮಾತ್ರ ಮನಸ್ಸಿಗೆ ಸ್ವಲ್ಪ ಖುಷಿಯನ್ನು ನೀಡುತ್ತದೆ. ಇದು 4.3 ಇಂಚಿನ 480 x 800 ಪಿಕ್ಸೆಲ್‌ಗಳೊಂದಿಗೆ ಬಂದಿದ್ದು 1.2GHz ಕ್ವಾಡ್ ಕೋರ್ ಪ್ರೊಸೆಸರ್ ಇದರಲ್ಲಿದೆ. 1.5ಜಿಬಿ RAM ಇದರಲ್ಲಿದ್ದು 8ಜಿಬಿ ಆನ್‌ಬೋರ್ಡ್ ಸಂಗ್ರಹಣೆಯನ್ನು ಇದು ನೀಡುತ್ತದೆ. ಇದನ್ನು ಎಸ್‌ಡಿ ಕಾರ್ಡ್ ಬಳಸಿ ನಂತರ ವಿಸ್ತರಿಸಬಹುದಾಗಿದೆ.

ಇದರ ದಪ್ಪ 10.6mm ಆಗಿದ್ದು ತೂಕ 136ಗ್ರಾಮ್‌ಗಳಾಗಿದೆ. ಆಂಡ್ರಾಯ್ಡ್‌ನ ಇತ್ತೀಚಿನ ಆವೃತ್ತಿ ಕಿಟ್‌ಕ್ಯಾಟ್ 4.4 ಇದರಲ್ಲಿ ಚಾಲನೆಯಾಗುತ್ತಿದ್ದು ಸ್ಯಾಮ್‌ಸಂಗ್‌ನ ನೇಟೀವ್ UI ಲೇಯರ್ ಇದರ ಮೇಲ್ಭಾಗದಲ್ಲಿದೆ. ಆದರೆ ಈ ಡಿವೈಸ್ ಸದ್ಯಕ್ಕೆ ಚೀನಾದಲ್ಲಿ ಮಾತ್ರ ಲಭ್ಯವಿದ್ದು ಭಾರತದಲ್ಲಿ ಯಾವಾಗ ಕಾಲಿಡುತ್ತದೆ ಎಂಬುದರ ಬಗ್ಗೆ ಮಾಹಿತಿ ದೊರಕಿಲ್ಲ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot