ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಫ್ ವಿಶಿಷ್ಟ ಫೋನ್ ಏಕೆ

Posted By:

ನ್ಯೂಯಾರ್ಕ್‌ನಲ್ಲಿ ನಡೆದ ಈವೆಂಟ್‌ನಲ್ಲಿ ಗ್ಯಾಲಕ್ಸಿ ಟ್ಯಾಬ್ ಎಸ್ ಟ್ಯಾಬ್ಲೆಟ್ ಅನ್ನು ಕಂಪೆನಿ ಈಗಾಗಲೇ ಘೋಷಿಸಿದೆ. ಈ ಟ್ಯಾಬ್ಲೆಟ್ ಇತರ ಎಲ್ಲಾ ಡಿವೈಸ್‌ಗಳಿಗಿಂತ ಭಿನ್ನವಾಗಿದ್ದುಇದರಂತೆ ಬೇರೊಂದು ಹ್ಯಾಂಡ್‌ಸೆಟ್ ಇಲ್ಲ ಎಂಬ ಅನುಭವವನ್ನು ಮೂಡಿಸಲಿದೆ.

ಇತ್ತೀಚಿನ ಒಂದು ಸುದ್ದಿಯ ಪ್ರಕಾರ ಈ ಡಿವೈಸ್ ಗೋಲ್ಡನ್ ಬ್ಯಾಕ್ ಪ್ಯಾನಲ್‌ನೊಂದಿಗಿದ್ದು ಬ್ರಶ್ ಮಾಡಿದ ಟೆಕ್ಸಚರ್ ಅನ್ನು ಪ್ರದರ್ಶಿಸಲಿದೆ. ನಿಮಗೆ ಹ್ಯಾಂಡ್‌ಸೆಟ್ ಬಗ್ಗೆ ಮಾಹಿತಿಇಲ್ಲದಿದ್ದರೆ, ಈ ವರ್ಷ ಮೊದಲು ಲಾಂಚ್ ಆಗಿರುವ ಗ್ಯಾಲಕ್ಸಿ ಎಸ್5 ಸ್ಮಾರ್ಟ್‌ಫೋನ್‌ನ ಪ್ರೀಮಿಯಂ ವೇರಿಯೇಂಟ್ ಇದಾಗಿದೆ ಮತ್ತು ಕ್ಯುಎಚ್‌ಡಿ ಗುಣಮಟ್ಟದೊಂದಿಗೆ ಬಂದಿದೆ.ಇದು ಸುಧಾರಿತ ಅಂಶಗಳನ್ನು ಕೂಡ ಹೊಂದಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಫ್ ವೈಶಿಷ್ಟ್ಯವೇನು?

ಇನ್ನಷ್ಟು ವಿಸ್ತಾರವಾಗಿ ಹೇಳಬೇಕೆಂದರೆ, ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಫ್ 5.3 ಇಂಚಿನ ಟಚ್‌ಸ್ಕ್ರೀನ್ ಡಿಸ್‌ಪ್ಲೇಯನ್ನು ಹೊಂದಿದ್ದು ಕ್ವಾಡ್ ಎಚ್‌ಡಿ ರೆಸಲ್ಯೂಶನ್ ಅನ್ನು ಒದಗಿಸುತ್ತದೆ.ಈ ಸ್ಮಾರ್ಟ್‌ಫೋನ್ ಕ್ಯುಎಚ್‌ಡಿ ಡಿಸ್‌ಪ್ಲೇಯಲ್ಲಿ ನಿಮಗೆ ದೊರೆಯಲಿದೆ. ಇದು 2.5GHZ ಕ್ವಾಡ್ - ಕೋರ್ ಕ್ವಾಲ್‌ಕಾಂ ಸ್ನ್ಯಾಪ್‌ಡ್ರಾಗನ್ 805 ಪ್ರೊಸೆಸರ್ ಒಳಗಿದ್ದು, ಇದು 3ಜಿಬಿRAM ನೊಂದಿಗೆ ಪೇರ್ ಆಗಲಿದೆ.

ಕಂಪೆನಿಯು ಫೋನ್ ಹಿಂದುಗಡೆ 16-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಬಳಸಿದ್ದು, ಇದು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಮತ್ತು 4ಕೆ ರೆಸಲ್ಯೂಶನ್‌ನಲ್ಲಿ ವೀಡಿಯೋಗಳನ್ನು ದಾಖಲಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ಪ್ರೀಮಿಯಂ, ಮೆಟಾಲಿಕ್ ಬೋಡಿಯೊಂದಿಗೆ ಬಂದಿದೆ ಎಂಬುದು ಈಗಾಗಲೇ ಲೀಕ್ ಆಗಿರುವ ಚಿತ್ರದಿಂದ ಸಾಬೀತಾಗಿದೆ.

ಈ ನಿರ್ದಿಷ್ಟ ಹ್ಯಾಂಡ್‌ಸೆಟ್ ಇತರ ಮುಂಬರಲಿರುವ ಡಿವೈಸ್‌ಗಳಾದ ಎಚ್‌ಟಿಸಿ, ಒನ್ ಎಮ್8 ಪ್ರೈಮ್ ಹಾಗೂ ಎಲ್ ಜಿ ಜಿ3 ಮೊದಲಾದ ಹ್ಯಾಂಡ್‌ಸೆಟ್‌ಗಳೊಂದಿಗೆ ಸ್ಪರ್ಧಿಸಲಿರುವುದು ನಿಚ್ಚಳವಾಗಿದೆ.

Read more about:
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot