Just In
- 18 hrs ago
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- 20 hrs ago
Tech News of this Week; ಈ ವಾರ ಟೆಕ್ ವಲಯದಲ್ಲಿ ಜರುಗಿದ ಘಟನೆಗಳೇನು?, ಇಲ್ಲಿದೆ ವಿವರ!
- 1 day ago
ಒಪ್ಪೋ ಕಂಪೆನಿಯ ಈ ಸ್ಮಾರ್ಟ್‌ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- 1 day ago
ಫ್ಲಿಪ್ಕಾರ್ಟ್ನಲ್ಲಿ ಐಫೋನ್ 14 ಪ್ಲಸ್ ಬೆಲೆಯಲ್ಲಿ ಭಾರಿ ಕಡಿತ! ಇದಕ್ಕಿಂತ ಒಳ್ಳೆ ಟೈಂ ಸಿಗೋದಿಲ್ಲ!
Don't Miss
- Sports
ರಿಷಭ್ ಪಂತ್ ಆರೋಗ್ಯದಲ್ಲಿ ಭಾರೀ ಚೇತರಿಕೆ: ಈ ವಾರವೇ ಆಸ್ಪತ್ರೆಯಿಂದ ಡಿಶ್ಚಾರ್ಜ್ ಸಾಧ್ಯತೆ
- News
Mangaluru cooker blast: ಸುಟ್ಟಗಾಯಗಳಿಂದ ಚೇತರಿಸಿಕೊಂಡ ಆರೋಪಿಯನ್ನು ವಶಕ್ಕೆ ಪಡೆಯಲಿರುವ ಎನ್ಐಎ
- Finance
ಹೊಸ ಆಫರ್: ಗೃಹ ಸಾಲದ ಬಡ್ಡಿದರ ಇಳಿಸಿದ ಎಸ್ಬಿಐ!
- Movies
ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರದ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಮಾತು
- Lifestyle
Horoscope Today 30 Jan 2023: ಸೋಮವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವಿಶ್ವವೇ ಎದುರುನೋಡುತ್ತಿರುವ 'ಗ್ಯಾಲಕ್ಸಿ ಫೋಲ್ಡ್' ಬಿಡುಗಡೆ ಸಮಯ ಫಿಕ್ಸ್!
ಇಡೀ ವಿಶ್ವವೇ ಎದುರುನೋಡುತ್ತಿರುವ ಸ್ಯಾಮ್‌ಸಂಗ್ ಕಂಪೆನಿಯ ಬಹುನಿರೀಕ್ಷಿತ ಗ್ಯಾಲಕ್ಸಿ ಫೋಲ್ಡ್ ಫೋನಿನಲ್ಲಿ ಕಂಡುಬಂದಿದ್ದ ಎಲ್ಲಾ ಸಮಸ್ಯೆಗಳೆಲ್ಲವನ್ನೂ ನಿವಾರಣೆಯಾಗಿವೆ. ಹಾಗೆಯೇ, ಇದೇ ಸೆಪ್ಟೆಂಬರ್ ವೇಳೆಗೆ ಗ್ಯಾಲಕ್ಸಿ ಫೋಲ್ಡ್ ಮಾರಾಟಕ್ಕೆ ಬರಲಿದೆ ಎಂಬ ಸಿಹಿಸುದ್ದಿ ಹೊರಬಿದ್ದಿದೆ.! ಹೌದು, 'ಫೋಲ್ಡ್ ಫೋನ್‌ನಲ್ಲಿ ಕಂಡುಬಂದಿದ್ದ ಸಮಸ್ಯೆಗಳೆಲ್ಲವನ್ನೂ ನಿವಾರಿಸಲಾಗಿದೆ. 1,980 ಡಾಲರ್‌ನ ಹೈಬ್ರಿಡ್ ಸ್ಮಾರ್ಟ್‌ಫೋನ್ ಸಿದ್ಧವಾಗಿದೆ' ಎಂದು ಸ್ಯಾಮ್‌ಸಂಗ್ ಕಂಪನಿ ಹೇಳಿಕೊಂಡಿದೆ.

ಫೋಲ್ಡಿಂಗ್ ಎಕ್ಸ್‌ಪೀರಿಯನ್ಸ್‌ಗೆ ಯಾವುದೇ ಧಕ್ಕೆ ಉಂಟಾಗದಂತೆ ಹ್ಯಾಂಡ್‌ಸೆಟ್‌ಗೆ ಹೆಚ್ಚಿನ ಸುರಕ್ಷತೆ ಒದಗಿಸುವ ಮೂಲಕ ವಿನ್ಯಾಸದಲ್ಲಿ ಬದಲಾವಣೆ ಮಾಡಲಾಗಿದೆ. ಪ್ರೊಟೆಕ್ಷನ್ ಕ್ಯಾಪ್ ಅಳವಡಿಸುವ ಮೂಲಕ ಫೋಲ್ಡಿಂಗ್ ಜಾಗವನ್ನು ಮತ್ತಷ್ಟು ಬಲಪಡಿಸಲಾಗಿದ್ದು, ಬಾಗುವ ಡಿಸ್‌ಪ್ಲೇ ಕೆಳಭಾಗಕ್ಕೆ ಹೆಚ್ಚುವರಿಯಾಗಿ ಲೋಹದ ಪದರ ಅಳವಡಿಸಲಾಗಿದೆ. ಜೊತೆಗೆ ಫೋನ್‌ನ ದೇಹ ಮತ್ತು ತಿರುಗಣಿ ಮಧ್ಯೆ ಇದ್ದ ಅಂತರವನ್ನು ಕಡಿಮೆ ಮಾಡಲಾಗಿದೆ ಎಂದು ಕಂಪೆನಿ ತಿಳಿಸಿದೆ.
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಕಳೆದ ಏಪ್ರಿಲ್‌ನಲ್ಲೇ ಪೋನ್ ಬಿಡುಗಡೆ ಆಗಬೇಕಿತ್ತು. ಆದರೆ, ಕೆಲವು ಪತ್ರಕರ್ತರಿಗೆ ರಿವ್ಯೂಗೆಂದು ನೀಡಿದ್ದ ಹ್ಯಾಂಡ್‌ಸೆಟ್‌ನ ಡಿಸ್‌ಪ್ಲೇನಲ್ಲಿ ಸಮಸ್ಯೆಗಳು ಕಾಣಿಸಿಕೊಂಡಿದ್ದವು. ಆ ಕಾರಣಕ್ಕಾಗಿ ಬಿಡುಗಡೆಯನ್ನು ಮುಂದೂಡಲಾಗಿತ್ತು. ಇದೀಗ ಕೆಲವು ಆಯ್ದ ಮಾರುಕಟ್ಟೆಗಳಲ್ಲಿ ಸೆಪ್ಟೆಂಬರ್‌ನಿಂದ ಖರೀದಿಗೆ ಲಭ್ಯವಾಗಲಿದೆ ಎಂದು ಕಂಪೆನಿ ತಿಳಿಸಿದೆ. ಹಾಗಾದರೆ, ಬಹುನಿರೀಕ್ಷಿತ ಗ್ಯಾಲಾಕ್ಸಿ ಫೋಲ್ಡ್ ಫೋನ್ ಹೇಗಿದೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಗ್ಯಾಲಕ್ಸಿ ಫೋಲ್ಡ್ ವಿನ್ಯಾಸ ಹೇಗಿದೆ?
ಭವಿಷ್ಯದಲ್ಲಿ ಇಂತಹದೊಂದು ಮೊಬೈಲ್ ಮಾರುಕಟ್ಟೆಗೆ ಬರಲಿದೆ ಎಂಬ ಊಹೆಯನ್ನು ಮಾಡಿಕೊಳ್ಳದಂತೆ ಗ್ಯಾಲಕ್ಸಿ ಫೋಲ್ಡ್ ಸ್ಮಾರ್ಟ್‌ಫೋನ್ ವಿನ್ಯಾಸಗೊಂಡಿದೆ. ಮಡುಚಿದಾಗ ಕೇವಲ 4.6 ಇಂಚಿನ ಸ್ಕ್ರೀನ್ ಹೊಂದಿರುವ ಈ ಸ್ಮಾರ್ಟ್‌ಫೋನ್ ಅನ್ನು ಪೂರ್ತಿ ತೆರೆದಾಗ 7.3 ಇಂಚಿನ ಸ್ಕ್ರೀನ್ ತೆರೆದುಕೊಳ್ಳುತ್ತದೆ. ಮುಂಬಾಗದ ಬಲಾಭಾಗದಲ್ಲಿ ಮೂರು ಸೆಲ್ಫೀ ಕ್ಯಾಮೆರಾಕ್ಕೆ ಸಪೋರ್ಟ್ ಮಾಡುವಂತಹ ನೋಚ್ ಹಾಗೂ ಹಿಂಬಾಗದಲ್ಲಿ ಮೂರು ಕ್ಯಾಮೆರಾಗಳನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್ ವಿನ್ಯಾಸಕ್ಕೆ ಸರಿಸಾಟಿಯಾದ ಸ್ಮಾರ್ಟ್‌ಫೋನ್ ಮತ್ತೊಂದಿಲ್ಲ.

ಗ್ಯಾಲಕ್ಸಿ ಫೋಲ್ಡ್ ಡಿಸ್‌ಪ್ಲೇ ಹೇಗಿದೆ?
ಇದೊಂದು ಮಡಚುವ ಸ್ಮಾರ್ಟ್‌ಫೋನ್ ಆಗಿರುವುದರಿಂದ ಎರಡು ಡಿಸ್‌ಪ್ಲೇ ಸ್ರೀನ್‌ಗಳನ್ನು ಹೊಂದಿರುವುದನ್ನು ನೀವು ಸುಲಭವಾಗಿ ತಿಳಿಯಬಹುದಾಗಿದೆ. 4.6 ಇಂಚಿನ ಹಾಗೂ 7.3 ಇಂಚಿನ ಸ್ಕ್ರೀನ್ ಎರಡು ಸ್ಕ್ರೀನ್‌ಗಳು ಗ್ಯಾಲಾಕ್ಸಿ ಫೋಲ್ಡ್ ಫೋನಿನ ಪ್ರಮುಖ ವಿಶೇಷತೆಯಾಗಿದೆ. ಸ್ಯಾಮ್ಸಂಗ್ ಹೇಳುವ ಪ್ರಕಾರ, ಇನ್ಫಿನಿಟಿ ಫ್ಲೆಕ್ಸ್ ಡಿಸ್ಪ್ಲೇ ಹೊಂದಿರುವ ಈ ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಅತ್ಯಂತ ವಿಶೇಷವಾಗಿದ್ದು, ಸ್ಮಾರ್ಟ್‌ಫೋನ್ ಅನ್ನು ಮನಬಂದಂತೆ ಪದರ ಮಾಡಲು ಅನುಮತಿಸುತ್ತದೆ ಎಂದು ತಿಳಿಸಿದೆ.

ಪ್ರೊಸೆಸರ್ ಮತ್ತು RAM!
ಮೊದಲೇ ಹೇಳಿದಂತೆ ಸ್ಯಾಮ್ಸಂಗ್ ಗ್ಯಾಲಕ್ಸಿ ಪದರ 7nm ಆಕ್ಟಾ-ಕೋರ್ ಪ್ರೊಸೆಸರ್ನಿಂದ ಶಕ್ತಿಯನ್ನು ಹೊಂದಿದೆ ಮತ್ತು ಡ್ಯುಯಲ್ ಬ್ಯಾಟರಿ ಸಿಸ್ಟಮ್ ಅನ್ನು ಪ್ಯಾಕ್ ಮಾಡುತ್ತದೆ. ಇದು ವೈರ್ಲೆಸ್ ಪವರ್ ಶೇರ್ ಸಿಸ್ಟಮ್ ಅನ್ನು ಬೆಂಬಲಿಸುತ್ತದೆ, ಇದು ಗ್ಯಾlAಕ್ಸಿ ಪದರವನ್ನು ಸ್ವತಃ ಚಾರ್ಜ್ ಮಾಡಲು ಮತ್ತು ಎರಡನೆಯ ಸಾಧನವನ್ನು ಏಕಕಾಲದಲ್ಲಿ ಅನುಮತಿಸುತ್ತದೆ. ಇನ್ನು ಫೋನ್ 12 ಜಿಬಿ ರಾಮ್ ಮತ್ತು 512 ಜಿಬಿ ಆಂತರಿಕ ಶೇಖರಣಾ ಬೆಂಬಲವನ್ನು ಹೊಂದುವ ಮೂಲಕ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದೆ.

ಒಟ್ಟು ಆರು ಕ್ಯಾಮೆರಾಗಳು!
'ಗ್ಯಾಲಕ್ಸಿ ಪೋಲ್ಡ್' ಸ್ಮಾರ್ಟ್‌ಫೋನ್ ಒಟ್ಟು ಆರು ಕ್ಯಾಮೆರಾಗಳನ್ನು ಪ್ಯಾಕ್ ಮಾಡುವ ಮೊದಲ ಸ್ಮಾರ್ಟ್‌ಫೋನ್ ಆಗಿ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಮಡುಚಿದಾದ 10MP+f/2.2 ಸಾಮರ್ಥ್ಯದ ಒಂದು ಸೆಲ್ಫೀ ಕ್ಯಾಮೆರಾ ಹೊಂದಿರುವ ಈ ಸ್ಮಾರ್ಟ್‌ಫೋನ್ 16MP ಅಲ್ಟ್ರಾ ವಿಶಾಲ ಕೋನ ಮಸೂರ ಮತ್ತು ಎರಡು 12MP ವಿಶಾಲ ಕೋನ ಮತ್ತು ಟೆಲಿಫೋಟೋ ಮಸೂರಗಳ ಟ್ರಿಪಲ್ ರಿಯರ್ ಕ್ಯಾಮೆರಾಗಳನ್ನು ಹೊಂದಿದೆ. ಇನ್ನು ಟ್ಯಾಬ್ಲೆಟ್ ಮೋಡ್‌ನಲ್ಲಿ 10MP + 8MP ಡೆಪ್ತ್ ಸಂವೇದಕದಲ್ಲಿ ಸೆಲ್ಫೀ ಕ್ಯಾಮೆರಾಗಳನ್ನು ಕಾಣಬಹುದಾಗಿದೆ.

4380mAh ಬ್ಯಾಟರಿ ಸಾಮರ್ಥ್ಯ!
ಭಾರೀ ಫೀಚರ್ಸ್ ಹೊಂದಿರುವ 'ಗ್ಯಾಲಕ್ಸಿ ಪೋಲ್ಡ್' ಸ್ಮಾರ್ಟ್‌ಫೋನ್ ಶಕ್ತಿಕೇಂದ್ರಕ್ಕೆ ಬಲವನ್ನು ಒದಗಿಸುವಲ್ಲಿ ಸ್ಯಾಮ್‌ಸಂಗ್ ಯಶಸ್ವಿಯಾಗಿದೆ. 4380mAh ಬ್ಯಾಟರಿ ಶಕ್ತಿಯನ್ನು ಹೊಂದಿರುವ ಸ್ಮಾರ್ಟ್‌ಪೋನ್ ತ್ವರಿತವಾಗಿ ಚಾರ್ಜ್ ಆಗುವಂತಹ ಇತ್ತೀಚಿನ QC2.0 ವೇಗದ ತಂತ್ರಜ್ಞಾನವನ್ನು ಹೊತ್ತು 'ಗ್ಯಾಲಕ್ಸಿ ಪೋಲ್ಡ್' ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದೆ. QC2.0 ಮತ್ತು AFC ಯೊಂದಿಗೆ ಹೊಂದಾಣಿಕೆಯ ಚಾರ್ಜಿಂಗ್ WPC ಮತ್ತು PMA ನೊಂದಿಗೆ ಹೊಂದಾಣಿಕೆಯ ವೈರ್ಲೆಸ್ ಚಾರ್ಜಿಂಗ್ ಆಗಿದೆ.!

ನೂತನ ಆಂಡ್ರಾಯ್ಡ್ 9 ಪ್ಯಾಕ್!
'ಗ್ಯಾಲಕ್ಸಿ ಪೋಲ್ಡ್' ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 9 ಮೂಲಕ ರನ್ ಆಗಲಿದೆ ಮತ್ತು ಅಪ್ಲಿಕೇಶನ್ ಮುಂದುವರಿದಂತಹ ವೈಶಿಷ್ಟ್ಯಗಳನ್ನು ಬೆಂಬಲಿಸುತ್ತದೆ ಮತ್ತು ಅದು ಮುಖಪುಟದಲ್ಲಿ ಚಾಲನೆಯಲ್ಲಿರುವ ಒಳಭಾಗದಲ್ಲಿ ಅದೇ ಅಪ್ಲಿಕೇಶನ್ ಅನ್ನು ಪ್ರವೇಶಿಸಲು ನಿಮಗೆ ಅನುಮತಿಸುತ್ತದೆ. ಸ್ಯಾಮ್ಸಂಗ್ ಗೂಗಲ್ ಮತ್ತು ಆಂಡ್ರಾಯ್ಡ್ ಡೆವಲಪರ್ ಸಮುದಾಯದೊಂದಿಗೆ ಕೆಲಸ ಮಾಡಿರುವುದರಿಮದ ಈ ಸ್ಮಾರ್ಟ್‌ಫೋನಿನಲ್ಲಿ ವಿಶಿಷ್ಟ ಅನುಭವಕ್ಕಾಗಿ ವಿಶೇಷ ಅಪ್ಲಿಕೇಶನ್‌ಗಳು ಮತ್ತು ಸೇವೆಗಳು ಲಭ್ಯವಿವೆ ಎಂದು ತಿಳಿದುಬಂದಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470