Subscribe to Gizbot

ಸ್ಯಾಮ್‌ಸಂಗ್ ಗ್ಯಾಲಕ್ಸಿ ಗ್ರ್ಯಾಂಡ್ ಫ್ರೈಮ್+ :ತಿಳಿಯಲೇಬೇಕಾದ 5 ಕೀ ಫೀಚರ್‌ಗಳು

Written By:

ವಿಶಾಲ ಸಂಖ್ಯೆಯ ನಂಬಿಕಸ್ತ ಗ್ರಾಹಕರನ್ನು ಕಳೆದುಕೊಂಡ ಕೊರಿಯಾ ಮೂಲದ ಮೊಬೈಲ್‌ ಕಂಪನಿ 'ಸ್ಯಾಮ್‌ಸಂಗ್', ಈಗ ಪುನಃ ಮಾರುಕಟ್ಟೆಯಲ್ಲಿ ಸ್ಥಾನ ಪಡೆಯಲು ಗ್ಯಾಲಕ್ಸಿ ಗ್ರ್ಯಾಂಡ್‌ ಫ್ರೈಮ್+ (Samsung Grand Prime+) ಬಿಡುಗಡೆಯೊಂದಿಗೆ ಮೊಬೈಲ್‌ ಮಾರುಕಟ್ಟೆಗೆ ಕಾಲಿಡುತ್ತಿದೆ.

ಸ್ಯಾಮ್‌ಸಂಗ್'ನ 'ಗ್ಯಾಲಕ್ಸಿ ಗ್ರ್ಯಾಂಡ್‌ ಫ್ರೈಮ್+ (Samsung Grand Prime+)' ಸ್ಮಾರ್ಟ್‌ಫೋನ್‌ ಮುಂಬರುವ ಬಜೆಟ್ ಫೋನ್‌ ಎಂದು ಹೇಳಲಾಗಿದ್ದು, ಭಾರತದಲ್ಲಿ ಗ್ಯಾಲಕ್ಸಿ ಗ್ರ್ಯಾಂಡ್‌ ಪ್ರೈಮ್‌ ಬೆಲೆಯಲ್ಲಿಯೇ ಖರೀದಿಗೆ ಸಿಗಲಿದೆ. ಅಂದ್ರೆ ರೂ.10,000 ಕ್ಕಿಂತ ಕಡಿಮೆ ಬೆಲೆಯಲ್ಲಿಯೇ ಡಿವೈಸ್‌ ಖರೀದಿಸಬಹುದು. ಆದ್ರೆ ಕಂಪನಿ ಇದುವರೆಗೂ ಅಧಿಕೃತವಾಗಿ ಡಿವೈಸ್‌ ಬಿಡುಗಡೆ ದಿನಾಂಕವನ್ನು ಪ್ರಕಟಗೊಳಿಸಿಲ್ಲ.

ದಿಪಾವಳಿ ಸೇಲ್: ಟಾಪ್ 10 ಹಳೆಯ ಸ್ಮಾರ್ಟ್‌ಫೋನ್‌ಗಳ ಮೇಲೆ 20,000 ರೂವರೆಗೆ ಎಕ್ಸ್‌ಚೇಂಜ್‌ ಆಫರ್

ಈ ಹಿಂದೆ ಕೊರಿಯಾ ಮೊಬೈಲ್‌ ತಯಾರಕ ಕಂಪನಿ ಸ್ಯಾಮ್‌ಸಂಗ್‌ ತನ್ನ 'ಗ್ಯಾಲಕ್ಸಿ ನೋಟ್ 7' ಡಿವೈಸ್‌ ಸ್ಫೋಟದಿಂದ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರ ಕಣ್ಣಿಗೆ ಗುರಿಯಾಗಿ, ಗ್ರಾಹಕರನ್ನು ಕಳೆದುಕೊಂಡಿದೆ. ಆದರೆ ಮುಂಬರುವ ಗ್ಯಾಲಕ್ಸಿ ಗ್ರ್ಯಾಂಡ್‌ ಫ್ರೈಮ್+ (Samsung Grand Prime+) ಅತ್ಯಾಕರ್ಷಕ ಲುಕ್‌ ಮತ್ತು ವಿವಿಧ ವಿಶೇಷತೆಗಳನ್ನು ಹೊಂದಿದೆ ಎಂದು ಹೇಳಲಾಗಿದೆ.

ಗ್ಯಾಲಕ್ಸಿ ಗ್ರ್ಯಾಂಡ್‌ ಫ್ರೈಮ್+ (Samsung Grand Prime+) ಸ್ಮಾರ್ಟ್‌ಫೋನ್‌ನ ಅತ್ಯಾಕರ್ಷಕ ಫೀಚರ್‌ಗಳೇನು ಎಂದು ಹಾಗೆ ಒಮ್ಮೆ ಲೇಖನದಲ್ಲಿ ಮಿಸ್‌ ಮಾಡದೇ ಓದಿಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
'ಗ್ಯಾಲಕ್ಸಿ ಗ್ರ್ಯಾಂಡ್‌ ಫ್ರೈಮ್+' 3 ಗ್ಲಾಸಿ ಬಣ್ಣಗಳಲ್ಲಿ ಲಭ್ಯ

'ಗ್ಯಾಲಕ್ಸಿ ಗ್ರ್ಯಾಂಡ್‌ ಫ್ರೈಮ್+' 3 ಗ್ಲಾಸಿ ಬಣ್ಣಗಳಲ್ಲಿ ಲಭ್ಯ

ಗ್ಯಾಲಕ್ಸಿ ಗ್ರ್ಯಾಂಡ್‌ ಫ್ರೈಮ್+ (Samsung Grand Prime+) ಸ್ಮಾರ್ಟ್‌ಫೋನ್‌ ಸಾಮಾನ್ಯವಾಗಿ ಇತರೆ ಗ್ಯಾಲಕ್ಸಿ ಡಿವೈಸ್‌ಗಳ ಲುಕ್‌ನಲ್ಲೇ ಇದ್ದು, ಪ್ರಖ್ಯಾತ ಬದಲಾವಣೆ ಏನು ಇಲ್ಲ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಡಿಸ್‌ಪ್ಲೇ ಫೀಚರ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ

ಡಿಸ್‌ಪ್ಲೇ ಫೀಚರ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ

ಬ್ಯಾಕ್‌ ಕವರ್‌ ಹೊರತುಪಡಿಸಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಗ್ರ್ಯಾಂಡ್‌ ಫ್ರೈಮ್+ (Samsung Grand Prime+) ಡಿವೈಸ್‌ ಲುಕ್ ಮತ್ತು ಡಿಸ್‌ಪ್ಲೇ ಫೀಚರ್‌ನಲ್ಲಿ ಯಾವುದೇ ರೀತಿಯ ಹೊಸ ಬದಲಾವಣೆ ಇಲ್ಲ. ಈ ಸ್ಮಾರ್ಟ್‌ಫೋನ್‌ ಹಿಂದಿನ ಮಾಡೆಲ್‌ ರೀತಿ, ಗೊರಿಲ್ಲಾ ಗ್ಲಾಸ್ ಅಥವಾ ಸುರಕ್ಷಿತ ಕವರ್‌ ಸ್ಕ್ರೀನ್ ಅನ್ನು ಸಹ ಹೊಂದಿಲ್ಲ.

ಮೀಡಿಯಾಟೆಕ್ MT6737T ಕ್ವಾಡ್‌ಕೋರ್‌ ಪ್ರೊಸೆಸರ್ ಜೊತೆಗೆ 1.5GB RAM ಹೊಂದಿದ್ದು, 5 ಇಂಚಿನ ಐಪಿಎಸ್(540*960 ಪಿಕ್ಸೆಲ್) ಡಿಸ್‌ಪ್ಲೇ ಹೊಂದಿದೆ.

ವಿವಿಧ ಸ್ಟೋರೇಜ್‌ ಸಾಮರ್ಥ್ಯದಲ್ಲಿ ಲಭ್ಯ

ವಿವಿಧ ಸ್ಟೋರೇಜ್‌ ಸಾಮರ್ಥ್ಯದಲ್ಲಿ ಲಭ್ಯ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಗ್ರ್ಯಾಂಡ್‌ ಫ್ರೈಮ್+ (Samsung Grand Prime+) ಡಿವೈಸ್ 8GB, 16GB, 32GB ಸ್ಟೋರೇಜ್‌ ಸಾಮರ್ಥ್ಯದ ಜೊತೆಗೆ, ಮೈಕ್ರೋ ಎಸ್‌ಡಿ ಕಾರ್ಡ್‌ ಮೂಲಕ 256GB ವರೆಗೂ ಮೆಮೊರಿ ವಿಸ್ತರಣೆ ಮಾಡಬಹುದು.

 ಹಿಂಭಾಗ ಮತ್ತು ಮುಂಭಾಗ ಕ್ಯಾಮೆರಾ LED ಫ್ಲ್ಯಾಶ್‌

ಹಿಂಭಾಗ ಮತ್ತು ಮುಂಭಾಗ ಕ್ಯಾಮೆರಾ LED ಫ್ಲ್ಯಾಶ್‌

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಗ್ರ್ಯಾಂಡ್‌ ಫ್ರೈಮ್+ (Samsung Grand Prime+) 8MP ಹಿಂಭಾಗ ಕ್ಯಾಮೆರಾ ಮತ್ತು 5MP ಮುಂಭಾಗ ಕ್ಯಾಮೆರಾ ಫೀಚರ್ ಹೊಂದಿದೆ. ಎರಡು ಕ್ಯಾಮೆರಾಗಳು ಸಹ LED ಫ್ಲ್ಯಾಶ್ ಫೀಚರ್ ಹೊಂದಿವೆ.

ಅಂದಹಾಗೆ ಡಿವೈಸ್‌ ಆಂಡ್ರಾಯ್ಡ್ 6.0.1 ಮಾರ್ಷ್‌ಮಲ್ಲೊ ಓಎಸ್‌ ಚಾಲಿತವಾಗಿದ್ದು, 2600mAh ಬ್ಯಾಟರಿ ಸಾಮರ್ಥ್ಯ ಹೊಂದಿದೆ.

ರಿಲಾಯನ್ಸ್ ಜಿಯೋ ಸಿಮ್‌ ಸಪೋರ್ಟ್

ರಿಲಾಯನ್ಸ್ ಜಿಯೋ ಸಿಮ್‌ ಸಪೋರ್ಟ್

ಸ್ಯಾಮ್‌ಸಂಗ್ ಗ್ಯಾಲಕ್ಸಿ ಗ್ರ್ಯಾಂಡ್‌ ಫ್ರೈಮ್+ (Samsung Grand Prime+) ಡಿವೈಸ್ ರಿಲಾಯನ್ಸ್ ಜಿಯೋ ಸಿಮ್‌ ಸಪೋರ್ಟ್ ಮಾಡಲಿದ್ದು, 4G LTE ಸಂಪರ್ಕ ಆಪ್ಶನ್‌ ಹೊಂದಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
Samsung Galaxy Grand Prime+: 5 Key Features of the Smartphone. To know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot