ಈಗ ಇನ್ನಷ್ಟು ಅಗ್ಗದಲ್ಲಿ ಸ್ಯಾಮ್‌ಸಂಗ್ ಗ್ಯಾಲೆಕ್ಸಿ ಜೆ6 ಸ್ಮಾರ್ಟ್‌ಫೋನ್‌..!

|

ಸ್ಯಾಮ್ ಸಂಗ್ ಫೋನ್ ಗಳು ಬಿಡುಗಡೆಗೊಂಡಾಗ ಇರುವ ಬೆಲೆಗೂ ನಂತರದ ದಿನಗಳಲ್ಲಿನ ಬೆಲೆಗೂ ವ್ಯತ್ಯಾಸವಾಗುತ್ತಲೇ ಇರುತ್ತದೆ. ಇದೊಂದು ರೀತಿಯ ಸ್ಯಾಮ್ ಸಂಗ್ ಮಾರ್ಕೆಟ್ ಟ್ರಿಕ್ಸ್ ಇರಬಹುದು. ತನ್ನ ಫೋನಿನ ಬಿಡುಗಡೆಗೊಂಡಾಗಿನ ಮಾರುಕಟ್ಟೆಯ ಬೆಲೆಯನ್ನು ತನ್ನ ಹೊಸ ಫೋನ್ ಮೇಲಿನ ಗ್ರಾಹಕರ ಪ್ರತಿಕ್ರಿಯೆ ಮತ್ತು ಇತರೆ ಫೋನ್ ಗಳು ಒಡ್ಡುವ ಸ್ಪರ್ಧೆಯನ್ನು ಗಮನಿಸಿ ಇಳಿಮುಖಗೊಳಿಸುತ್ತದೆ.

ಇದೀಗ ಸ್ಯಾಮ್ ಸಂಗ್ ಇತ್ತೀಚೆಗಷ್ಟೇ ಬಿಡುಗಡೆಗೊಳಿಸಿದ್ದ ಸ್ಯಾಮ್ ಸಂಗ್ ಗ್ಯಾಲಕ್ಸಿ ಜೆ6 ಬೆಲೆಯನ್ನು ಮತ್ತೊಮ್ಮೆ ಇಳಿಸಿದೆ. ಹಾಗಾದ್ರೆ ಮೊದಲಿನ ಬೆಲೆ ಮತ್ತು ಈಗಿನ ಬೆಲೆ ಎಷ್ಟು ಎಂಬುದನ್ನು ತಿಳಿದುಕೊಳ್ಳೋಣ.

ಈಗ ಇನ್ನಷ್ಟು ಅಗ್ಗದಲ್ಲಿ ಸ್ಯಾಮ್‌ಸಂಗ್ ಗ್ಯಾಲೆಕ್ಸಿ ಜೆ6 ಸ್ಮಾರ್ಟ್‌ಫೋನ್‌..!

3ಜಿಬಿ ಮೆಮೊರಿ 13,990 ಲಾಂಚ್ ಬೆಲೆ(ರೂ.), 12,990, ಮೊದಲಿನ ಬೆಲೆ(ರೂ.), 12,490 ಈಗಿನ ಬೆಲೆ(ರೂ.)

4ಜಿಬಿ ಮೆಮೊರಿ 16,490 ಲಾಂಚ್ ಬೆಲೆ(ರೂ.), 14,990 ಮೊದಲಿನ ಬೆಲೆ(ರೂ.), 13,990 ಈಗಿನ ಬೆಲೆ(ರೂ.)

ಅಂದರೆ ಒಟ್ಟಾರೆ 3ಜಿಬಿ ಫೋನ್ ಬಿಡುಗಡೆಗೊಂಡ ಬೆಲೆಗೂ ಈಗಿನ ಬೆಲೆಗೂ 1500 ರುಪಾಯಿ ವ್ಯತ್ಯಾಸವಾದರೆ, 4ಜಿಬಿ ಮೆಮೊರಿ ಫೋನ್ ಬಿಡುಗಡೆಗೊಂಡ ಬೆಲೆಗೂ ಈಗಿನ ಬೆಲೆಗೂ 2500 ರುಪಾಯಿ ವ್ಯತ್ಯಾಸವಿದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಜೆ6 ನ ವೈಶಿಷ್ಟ್ಯತೆಗಳು :

ಸ್ಯಾಮ್ ಸಂಗ್ ಗ್ಯಾಲಕ್ಸಿ ಜೆ6 ನ ವೈಶಿಷ್ಟ್ಯತೆಗಳು :

ಸ್ಯಾಮ್ ಸಂಗ್ ಗ್ಯಾಲಕ್ಸಿ ಜೆ6 5.6 ಇಂಚಿನ HD+ ಸೂಪರ್ AMOLED ಇನ್ಫಿನಿಟಿ ಡಿಸ್ಪ್ಲೇಯನ್ನು 18:5:9 ಅನುಪಾತದಲ್ಲಿ ಹೊಂದಿದೆ.ಆಂಡ್ರಾಯ್ಡ್ ಓರಿಯೋ 8.0 ಆಪರೇಟಿಂಗ್ ಸಿಸ್ಟಮ್ ಮೂಲಕ ರನ್ ಆಗುತ್ತದೆ. ಈ ಸ್ಮಾರ್ಟ್ ಫೋನ್ ಕಂಪೆನಿಯ ಸ್ವಂತ Exynos 7870 ಪ್ರೊಸೆಸರ್ ನ್ನು ಒಳಗೊಂಡಿದೆ.

ಕ್ಯಾಮೆರಾ ವೈಶಿಷ್ಟ್ಯತೆಗಳು:

ಕ್ಯಾಮೆರಾ ವೈಶಿಷ್ಟ್ಯತೆಗಳು:

ಇದರಲ್ಲಿ ಪ್ರೈಮರಿ ಕ್ಯಾಮರಾ 13MP ಮತ್ತು ಅದರ ಅಪರ್ಚರ್ f/1.9 ಆಗಿದ್ದು LED ಫ್ಲ್ಯಾಶ್ ಇದೆ. ಸೆಕೆಂಡರಿ 8MP ಕ್ಯಾಮರಾ ಸೆಲ್ಫೀ ಪ್ರಿಯರಿಗೆ ಇಷ್ಟವಾಗುವಂತಿದೆ.

ಸ್ಟೋರೇಜ್ ಅವಕಾಶಗಳು:

ಸ್ಟೋರೇಜ್ ಅವಕಾಶಗಳು:

ಸ್ಯಾಮ್ ಸಂಗ್ ಗ್ಯಾಲಕ್ಸಿ ಜೆ6 ನಲ್ಲಿ 4GB/3GB RAM ಮತ್ತು 64GB/32GB ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆ ಇರಲಿದೆ. ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಅದನ್ನು ಹಿಗ್ಗಿಸಿಕೊಳ್ಳಲು ಅವಕಾಶವಿದೆ.

ಕನೆಕ್ಟಿವಿಟಿ ಅವಕಾಶಗಳು:

ಕನೆಕ್ಟಿವಿಟಿ ಅವಕಾಶಗಳು:

3000mAh ಬ್ಯಾಟರಿಯನ್ನು ಹೊಂದಿದ್ದು 4G, VoLTE, 3G, ವೈ-ಫೈ,ಬ್ಲೂಟೂತ್ ಮತ್ತು GPS ಆಯ್ಕೆಗಳಿವೆ.

ಸ್ಯಾಮ್ ಸಂಗ್ ಜೆ4+,ಜೆ6+ ಫೋನ್ ಗಳು:

ಸ್ಯಾಮ್ ಸಂಗ್ ಜೆ4+,ಜೆ6+ ಫೋನ್ ಗಳು:

ಸ್ಯಾಮ್ ಸಂಗ್ ಇತ್ತೀಚೆಗೆ ಜೆ6+ ಮತ್ತು ಜೆ4+ ಸ್ಮಾರ್ಟ್ ಫೋನ್ ಗಳನ್ನು ಭಾರತದಲ್ಲಿ ರುಪಾಯಿ 15,990 ಮತ್ತು 10,990 ರುಪಾಯಿಗಳಿಗೆ ಕ್ರಮವಾಗಿ ಬಿಡುಗಡೆಗೊಳಿಸಿದೆ. ಸ್ಯಾಮ್ ಸಂಗ್ ಗ್ಯಾಲಕ್ಸಿ ಜೆ6+ 4ಜಿಬಿ ಮೆಮೊರಿ ಮತ್ತು 64ಜಿಬಿ ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆಯನ್ನು ಹೊಂದಿದ್ದರೆ ಗ್ಯಾಲಕ್ಸಿ ಜೆ4+ 2ಜಿಬಿ ಮತ್ತು 32ಜಿಬಿ ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆಯನ್ನು ಹೊಂದಿದೆ. ಎರಡೂ ಫೋನ್ ಗಳು ಮೈಕ್ರೋ ಎಸ್ ಡಿ ಕಾರ್ಡ್ ಗೆ ಬೆಂಬಲವನ್ನು ಸೂಚಿಸುತ್ತವೆ. ಅಷ್ಟೇ ಅಲ್ಲದೆ ಇದರಲ್ಲಿ ಸಾಫ್ಟವೇರ್ ಒಂದನ್ನು ಅಳವಡಿಸಲಾಗಿದ್ದು ಮೈಕ್ರೋ ಎಸ್ ಡಿ ಕಾರ್ಡ್ ನಲ್ಲಿ ಆಪ್ ಗಳನ್ನು ಇನ್ಸ್ಟಾಲ್ ಮಾಡುವುದಕ್ಕೆ ಕೂಡ ಅವಕಾಶವಿದೆ.

ಕ್ಯಾಮರಾ ವಿಚಾರದಲ್ಲಿ ಜೆ6+ ಡುಯಲ್ ಲೆನ್ಸ್ ಇರುವ ಹಿಂಭಾಗದ 13ಎಂಪಿ ಪ್ರೈಮರಿ ಕ್ಯಾಮರಾ ಮತ್ತು 5ಎಂಪಿ ಸೆಕೆಂಡರಿ f/1.9 ಅಪರ್ಚರ್ ನ ಕ್ಯಾಮರಾವನ್ನು ಹೊಂದಿದೆ. ಗ್ಯಾಲಕ್ಸಿ ಜೆ4+ ಸಿಂಗಲ್ ಲೆನ್ಸ್ ನ 13ಎಂಪಿ ಕ್ಯಾಮರಾವನ್ನು f/1.9 ಅಪರ್ಚರ್ ನಲ್ಲಿ ಹೊಂದಿದೆ.

Best Mobiles in India

English summary
Samsung Galaxy J6 gets another price cut, now starts at Rs 12,490. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X