ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ6 (4GB RAM) ಬೆಲೆಯಲ್ಲಿ ಭಾರೀ ಕಡಿತ..!

By GizBot Bureau
|

ಜೀವನದಲ್ಲಿ ಸ್ವಲ್ಪ ಲೆಕ್ಕಾಚಾರ ಇರಬೇಕು, ಆಗಲೇ ನೋಡಿ ನಾವು ಬಜೆಟ್ ಪ್ರಕಾರ ಬದುಕಿ ಏನೋ ಅಲ್ಪಸ್ವಲ್ಪ ಉಳಿತಾಯ ಅಂತ ಮಾಡ್ಬಹುದು. ಅದ್ರಲ್ಲೂ ಗೆಜೆಟ್ ಪ್ರಿಯರು ಯಾವುದೇ ವಸ್ತುವನ್ನು ಖರೀದಿಸುವ ಮುನ್ನ ಅದರ ಬೆಲೆ, ಆಫರ್, ಉಳಿತಾಯ, ರಿಯಾಯಿತಿ ಇಂತಹವುಗಳನ್ನೆಲ್ಲ ಗಮನಿಸುತ್ತಾ ಇದ್ದರೆ ಅವರಿಗೆ ಒಟ್ಟು ಲಾಭ ಹೆಚ್ಚಾಗುತ್ತದೆ.

ಹೀಗ ಲೆಕ್ಕಾಚಾರ ಹಾಕಬೇಕು ಅಂದರೆ ಗೆಜೆಟ್ ಗಳ ಬಗೆಗಿನ ಸುದ್ದಿಗಳನ್ನು ಓದುತ್ತಿರಬೇಕು. ನಿಮ್ಮ ಲೆಕ್ಕಾಚಾರಕ್ಕೆ ಸಹಾಯ ಮಾಡುವ ಒಂದು ಸುದ್ದಿಯನ್ನೇ ನಾವು ನಿಮಗೆ ಇಲ್ಲಿ ನೀಡುತ್ತಿದ್ದೇವೆ. ಇತ್ತೀಚೆಗೆ ಸ್ಯಾಮ್ ಸಂಗ್ ಫೋನ್ ಗಳ ಬೆಲೆಯು ಭಾರತದಲ್ಲಿ ಕಡಿತವಾಗುತ್ತಿರುವ ಸುದ್ದಿಯಲ್ಲಿ ನಾವೇ ನಿಮಗೆ ತಿಳಿಸಿದ್ದೆವು. ಖಂಡಿತ ಇದು ಸ್ಯಾಮ್ ಸಂಗ್ ಫೋನ್ ಪ್ರಿಯರಿಗೆ ಖುಷಿಯ ವಿಚಾರವೇ ಆಗಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ6 (4GB RAM) ಬೆಲೆಯಲ್ಲಿ ಭಾರೀ ಕಡಿತ..!

ಮೊನ್ನೆಮೊನ್ನೆಯಷ್ಟೇ ಗ್ಯಾಲಕ್ಸಿ ಎ6 ಮತ್ತು ಗ್ಯಾಲಕ್ಸಿ ಎ6+ ಫೋನ್ ಗಳ ಬೆಲೆಯು ಕಡಿಮೆಯಾಗಿದೆ ಎಂಬುದು ತಿಳಿದಿತ್ತು. ಈಗ ಮತ್ತೊಂದು ಸ್ಯಾಮ್ ಸಂಗ್ ಫೋನಿನ ಸರದಿ. ಅದುವೇ ಸ್ಯಾಮ್ ಸಂಗ್ ಗ್ಯಾಲಕ್ಸಿ ಜೆ6 . 4ಜಿಬಿ ಮೆಮೊರಿಯ ಸ್ಯಾಮ್ ಸಂಗ್ ಫೋನಿನ ಬೆಲೆಯಲ್ಲಿ ಇಳಿಮುಖವಾಗುವ ಸುದ್ದಿ ಕೇಳಿ ಬರುತ್ತಿದೆ.

ಈ ಡಿವೈಸ್ ಮೇ ತಿಂಗಳಲ್ಲಿ ಭಾರತದಲ್ಲಿ 16,490 ರುಪಾಯಿಗೆ ಬಿಡುಗಡೆಗೊಂಡಿತ್ತು. ಈಗ ಇದರ ಬೆಲೆ 15,990 ರುಪಾಯಿಯಾಗಿದ್ದು, 500 ರುಪಾಯಿಯ ಇಳಿಕೆ ಕಂಡಿದೆ.

ಕೆಲವೇ ದಿನಗಳಲ್ಲಿ ಈ ಬೆಲೆ ಇಳಿಕೆಯನ್ನು ಆನ್ ಲೈನ್ ಪೋರ್ಟಲ್ ಗಳಲ್ಲೂ ಕೂಡ ಗಮನಿಸಬಹುದು. ಈ ಇಳಿಕೆಯ ಜೊತೆಗೆ ಐಸಿಐಸಿಐ ಬ್ಯಾಂಕ್ ನ ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಬಳಸಿ ಫ್ಲಿಪ್ ಕಾರ್ಟ್ ನಲ್ಲಿ ಖರೀದಿಸುವವರು 1,500 ರುಪಾಯಿಯ ಕ್ಯಾಷ್ ಬ್ಯಾಕ್ ಪಡೆಯಬಹುದು. ಆಗ ಗ್ಯಾಲಕ್ಸಿ ಜೆ6 ನ ಬೆಲೆ 14,490 ರುಪಾಯಿ ಆಗಲಿದೆ. ಒಟ್ಟು ಕ್ಯಾಷ್ ಬ್ಯಾಕ್ ಮತ್ತು ಬೆಲೆ ಇಳಿಕೆಯೂ ಸೇರಿ ನಿಮಗೆ ಈ ಮೊಬೈಲಿನ ಮೇಲೆ 2000 ರುಪಾಯಿ ಕಡಿಮೆಯಾಗಲಿದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಜೆ6 ನ ವೈಶಿಷ್ಟ್ಯತೆಗಳು

ಈ ಸ್ಮಾರ್ಟ್ ಫೋನ್ 5.6 ಇಂಚಿನ ಸೂಪರ್ AMOLED ಇನ್ಫಿನಿಟಿ ಡಿಸ್ಪ್ಲೇ ಜೊತೆಗೆ HD+ ರೆಸಲ್ಯೂಷನ್ 1480 x 720 ಪಿಕ್ಸಲ್ ಮತ್ತು 18.5:9 ಅನುಪಾತವನ್ನು ಹೊಂದಿದೆ.. ಡಿವೈಸ್ ನಲ್ಲಿ ಆಕ್ಟಾ- ಕೋರ್- Exynos 7870 ಚಿಪ್ ಸೆಟ್ ಇದ್ದು ಅದು 1.6GHz ನೊಂದಿಗೆ ಪೇರ್ ಆಗಿದೆ ಜೊತೆಗೆ 3ಜಿಬಿ/4ಜಿಬಿ RAM ಮತ್ತು 32ಜಿಬಿ/64ಜಿಬಿ ಸ್ಟೋರೇಜ್ ಅವಕಾಶವನ್ನು ಹೊಂದಿದೆ. ಆದರೆ ಎರಡೂ ವೇರಿಯಂಟ್ ನ ಫೋನ್ ಗಳು ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 256 ಜಿಬಿ ವರೆಗೆ ಹಿಗ್ಗಿಸಿಕೊಳ್ಳಬಹುದಾದ ಅವಕಾಶವನ್ನು ಹೊಂದಿದ.

ಕ್ಯಾಮರಾ ವಿಚಾರಕ್ಕೆ ಬಂದರೆ, 13ಎಂಪಿ ಹಿಂಭಾಗದ ಕ್ಯಾಮರಾ ಹೊಂದಿದ್ದು f/1.9 ದ್ಯುತಿರಂಧ್ರವನ್ನು ಹೊಂದಿದೆ. ಈ ಕ್ಯಾಮರಾವು FHD 1080p ನಲ್ಲಿ ವೀಡಿಯೋ ರೆಕಾರ್ಡಿಂಗ್ ಮಾಡಲು ಅವಕಾಶ ನೀಡುತ್ತದೆ.ಸೆಲ್ಫೀ ಕ್ಯಾಮರಾವು 8ಎಂಪಿ ಆಗಿದ್ದು,ಮುಖಚರ್ಯೆ ಗುರುತಿಸುವಿಕೆ ತಂತ್ರಜ್ಞಾನವನ್ನು ಬೆಂಬಲಿಸುತ್ತದೆ. ಹಿಂಭಾಗದಲ್ಲಿ ಫಿಂಗರ್ ಪ್ರಿಂಟ್ ಸೆನ್ಸರ್ ಇದೆ. ಕನೆಕ್ಟಿವಿಟಿ ವಿಚಾರಕ್ಕೆ ಬಂದರೆ ಬ್ಲೂಟೂತ್ 4.2 LE, ಜಿಪಿಎಸ್, ಎಫ್ ಎಂ ರೇಡಿಯೋ, 4G VoLTE ಗೆ ಅವಕಾಶವಿದೆ. 3000mAh ಬ್ಯಾಟರಿಯನ್ನು ಇದು ಹೊಂದಿದೆ.

ಒಟ್ಟಿನಲ್ಲಿ ಸ್ಯಾಮ್ ಸಂಗ್ ಫೋನ್ ಗಳ ಬೆಲೆಯಲ್ಲಿ ಇಳಿಕೆ ಆಗುತ್ತಿರುವುದರಿಂದ ನಿಮಗೂ ಈ ಫೋನ್ ಖರೀದಿಸಬೇಕು ಎಂಬ ಇಚ್ಛೆ ಇದ್ದಲ್ಲಿ ಒಂದೆರಡು ದಿನ ಕಾದು ಖರೀದಿಸಿ. ಒಳ್ಳೆಯ ಆಫರ್ ಸಿಗಲಿದೆ.

Most Read Articles
Best Mobiles in India

English summary
SAMSung Galaxy J6 with 4GB RAM gets price cut. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X