ಕೇವಲ 16,990 ರೂ.ಗೆ ಬಿಡುಗಡೆಯಾಯ್ತು ಸ್ಯಾಮ್ಸಂಗ್ ಜೆ7 ಡ್ಯುಯೊ ಸ್ಮಾರ್ಟ್‌ಫೋನ್!!

ಸ್ಯಾಮ್‌ಸಂಗ್ ಕಂಪೆನಿ ಬಜೆಟ್ ಸ್ಮಾರ್ಟ್‌ಫೋನ್‌ಗಳಲ್ಲಿಯೇ ಅತ್ಯಂತ ಹೆಚ್ಚು ಜನಪ್ರಿಯತೆ ಗಳಿಸಿರುವ ಸ್ಯಾಮ್ಸಂಗ್ ಗ್ಯಾಲೆಕ್ಸಿ ಜೆ ಶ್ರೇಣಿಯ ಬಜೆಟ್ ಸ್ಮಾರ್ಟ್‌ಫೋನ್ ಭಾರತದ ಮೊಬೈಲ್ ಮಾರುಕಟ್ಟೆಯನ್ನು ಪ್ರವೇಶಿಸಿದೆ

|

ಸ್ಯಾಮ್‌ಸಂಗ್ ಕಂಪೆನಿ ಬಜೆಟ್ ಸ್ಮಾರ್ಟ್‌ಫೋನ್‌ಗಳಲ್ಲಿಯೇ ಅತ್ಯಂತ ಹೆಚ್ಚು ಜನಪ್ರಿಯತೆ ಗಳಿಸಿರುವ ಸ್ಯಾಮ್ಸಂಗ್ ಗ್ಯಾಲೆಕ್ಸಿ ಜೆ ಶ್ರೇಣಿಯ ಬಜೆಟ್ ಸ್ಮಾರ್ಟ್‌ಫೋನ್ ಭಾರತದ ಮೊಬೈಲ್ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕೇವಲ 16,990 ರೂಪಾಯಿಗೆ ಡ್ಯುಯಲ್ ರಿಯರ್ ಕ್ಯಾಮೆರಾ ಹೊಂದಿರುವ ಸ್ಯಾಮ್ಸಂಗ್ ಜೆ7 ಡ್ಯುಯೊ ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದೆ.

3000 ಎಂಎಹೆಚ್ ಬ್ಯಾಟರಿ ಸಾಮರ್ಥ್ಯ, 4 ಜಿಬಿ RAM, 32GB ಆಂತರಿಕ ಮೆಮೊರಿ ಹೊಂದಿರುವ ಸ್ಯಾಮ್ಸಂಗ್ ಜೆ7 ಡ್ಯುಯೊ ಪೋನ್, ಹಿಂಭಾಗದಲ್ಲಿ 13 ಮತ್ತು 5 ಮೆಗಾಪಿಕ್ಸೆಲ್ ಸಾಮರ್ಥ್ಯದ ಎರಡು ಕ್ಯಾಮೆರಾಗಳು ಹಾಗೂ ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿರುವುದೇ ಈ ಸ್ಯಾಮ್‌ಸಂಗ್ ಬಜೆಟ್ ಸ್ಮಾರ್ಟ್‌ಪೋನ್ ವಿಶೇಷತೆಯಾಗಿದೆ.

ಕೇವಲ 16,990 ರೂ.ಗೆ ಬಿಡುಗಡೆಯಾಯ್ತು ಸ್ಯಾಮ್ಸಂಗ್ ಜೆ7 ಡ್ಯುಯೊ ಸ್ಮಾರ್ಟ್‌ಫೋನ್!!

ಸ್ಯಾಮ್ಸಂಗ್ ಜೆ7 ಡ್ಯುಯೊ ಬಿಡುಗಡೆ ಮೂಲಕ ನಮ್ಮ ಗ್ರಾಹಕರ ಬೇಡಿಕೆಗಳಿಗೆ ನಾವು ಸ್ಪಂದಿಸುತ್ತೇವೆ ಎಂಬುದನ್ನು ತೋರುತ್ತದೆ ಎಂದು ಸ್ಯಾಮ್ ಸಂಗ್ ಇಂಡಿಯಾದ ಹಿರಿಯ ಉಪಾಧ್ಯಕ್ಷ ಮೋಹನ್ ದೀಪ್ ಸಿಂಗ್ ಹೇಳಿದ್ದು, ಹಾಗಾದರೆ, ಬಜೆಟ್ ಬೆಲೆಯ 'ಗ್ಯಾಲಾಕ್ಸಿ ಜೆ7 ಡ್ಯುಯೊ' ಸ್ಮಾರ್ಟ್‌ಫೋನ್ ಫೀಚರ್ಸ್ ಯಾವುವು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.

ಡಿಸ್‌ಪ್ಲೇ ಮತ್ತು ವಿನ್ಯಾಸ!

ಡಿಸ್‌ಪ್ಲೇ ಮತ್ತು ವಿನ್ಯಾಸ!

16 ಮಿಲಿಯನ್ ಬಣ್ಣಗಳನ್ನು ಸಪೋರ್ಟ್ ಮಾಡುವ ಸೂಪರ್ AMOLED ಕೆಪ್ಯಾಸಿಟಿವ್ ಟಚ್ಸ್ಕ್ರೀನ್ ಮೂಲಕ ಸ್ಯಾಮ್‌ಸಂಗ್ 'ಗ್ಯಾಲಾಕ್ಸಿ ಜೆ7 ಡುಯೊ' ಸ್ಮಾರ್ಟ್‌ಫೋನ್ಬಿಡುಗಡೆಯಾಗಿದೆ. ಸ್ಮಾರ್ಟ್‌ಫೋನ್ 16:9 ಅನುಪಾತದಲ್ಲಿ 5.5 ಇಂಚುಗಳು ಗಾತ್ರವನ್ನು ಹಾಗೂ 720 x 1280 ಪಿಕ್ಸೆಲ್ ರೆಸಲ್ಯೂಶನ್ ಮಲ್ಟಿಟಚ್ ಸ್ಕ್ರೀನ್ ಅನ್ನು ಸ್ಮಾರ್ಟ್‌ಫೋನ್ ಹೊಂದಿದೆ.

ಪ್ರೊಸೆಸರ್ ಮತ್ತು RAM!

ಪ್ರೊಸೆಸರ್ ಮತ್ತು RAM!

ಚಿಪ್ಸೆಟ್ ಎಕ್ಸಿನಾಸ್ 7885 ಆಕ್ಟಾ ಕೋರ್ ಚಿಪ್ಸೆಟ್ ಹಾಗೂ 2x2.2 GHz ಕಾರ್ಟೆಕ್ಸ್- A73 & 6x1.6 GHz ಕಾರ್ಟೆಕ್ಸ್- A53 CPU ಅನ್ನು 'ಗ್ಯಾಲಾಕ್ಸಿ ಜೆ7 ಡ್ಯುಯೊ' ಸ್ಮಾರ್ಟ್‌ಫೋನ್ ಹೊಂದಿದೆ. 2GB ಮತ್ತು 3GB RAM ಹಾಗೂ 32GB ಆಂತರಿಕ ಮೆಮೊರಿ ಹೊಂದಿರುವ ಫೋನಿನ ಮೆಮೊರಿಯನ್ನು 256GB ವರೆಗೆ ವಿಸ್ತರಿಸಿಕೊಳ್ಳಬಹುದಾದ ಆಯ್ಕೆ ಕೂಡ ಲಭ್ಯವಿದೆ.

How to read deleted WhatsApp messages - GIZBOT KANNADA
ಡ್ಯುಯಲ್ ರಿಯರ್ ಕ್ಯಾಮೆರಾ!!

ಡ್ಯುಯಲ್ ರಿಯರ್ ಕ್ಯಾಮೆರಾ!!

ಮೊದಲೇ ಹೇಳಿದಂತೆ ಇದೇ ಮೊದಲ ಬಾರಿಗೆ ಸ್ಯಾಮ್‌ಸಂಗ್ ಕಂಪೆನಿಯ ಬಜೆಟ್ ಸ್ಮಾರ್ಟ್‌ಪೋನ್ ಒಂದು ಡ್ಯುಯಲ್ ರಿಯರ್ ಕ್ಯಾಮೆರಾ ಮೂಲಕ ಹೊರಬಂದಿದೆ.! 13 ಎಂಪಿ + 2 ಎಂಪಿ ಡ್ಯುಯಲ್ ಕ್ಯಾಮೆರಾ ಮತ್ತು 5 ಎಂಪಿ ಸೆಲ್ಫಿ ಕ್ಯಾಮೆರಾ ಹೊಂದಿರುವ ಸ್ಮಾರ್ಟ್‌ಫೋನ್ ಎರಡೂ ಕಡೆ ಎಲ್ಇಡಿ ಫ್ಲಾಶ್, ಆಟೋಫೋಕಸ್, ಫೇಸ್ ಡಿಟೆಕ್ಷನ್, ಪನೋರಮಾ, HDRನಂತಹ ವೈಶಿಷ್ಟ್ಯಗಳನ್ನು ಹೊಂದಿವೆ.

ಬ್ಯಾಟರಿ ಮತ್ತು ಇತರೆ ಫೀಚರ್ಸ್!!

ಬ್ಯಾಟರಿ ಮತ್ತು ಇತರೆ ಫೀಚರ್ಸ್!!

ಸ್ಯಾಮ್‌ಸಂಗ್ 'ಗ್ಯಾಲಾಕ್ಸಿ ಜೆ7 ಡುಯೊ' ಸ್ಮಾರ್ಟ್‌ಫೋನಿನಲ್ಲಿ ತೆರೆಯಬಹುದಾದ 3300 mAh ಲಿ-ಇಯಾನ್ ಬ್ಯಾಟರಿಯನ್ನು ನೀಡಲಾಗಿದೆ. 3.5 ಎಂಎಂ ಹೆಡ್ಫೋನ್ ಜ್ಯಾಕ್ ಮತ್ತು ಮೈಕ್ರೋ-ಯುಎಸ್ಬಿ ಪೋರ್ಟ್, ಫಾಸ್ಟ್ ಚಾರ್ಜಿಂಗ್ 2.0 ತಂತ್ರಜ್ಞಾನ, ಮಲ್ಟಿಪರ್ಪೋಸ್ ಜಾಕ್, ಫೀಂಗರ್‌ಪ್ರಿಂಟ್ ಸೆನ್ಸಾರ್ ಹಾಗೂ ಆಂಡ್ರಾಯ್ಡ್ 8.0 (ಓರಿಯೊ) ಫೀಚರ್ಸ್ ಪೋನಿನಲ್ಲಿವೆ.

ಗೂಗಲ್ ತೇಜ್‌ಗೆ ಸೆಡ್ಡುಹೊಡೆದ ಸರ್ಕಾರ!..ಭೀಮ್ ಬಳಕೆದಾರರಿಗೆ ಬಂಪರ್ ಆಫರ್!!ಗೂಗಲ್ ತೇಜ್‌ಗೆ ಸೆಡ್ಡುಹೊಡೆದ ಸರ್ಕಾರ!..ಭೀಮ್ ಬಳಕೆದಾರರಿಗೆ ಬಂಪರ್ ಆಫರ್!!

Best Mobiles in India

English summary
Samsung Galaxy J7 Duo With Dual Rear Cameras, Selfie Flash Launched in India: Price, Specifications

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X