ಸ್ಯಾಮ್‌ಸಂಗ್ ಗ್ಯಾಲೆಕ್ಸಿ J7 ಪ್ರೈಮ್ 2: ವಿಶೇಷತೆ ಚೀನಾ ಫೋನ್‌ಗಿಂತಲೂ ಜಾಸ್ತಿ, ಬೆಲೆ ಅದಕ್ಕಿಂತ ಕಡಿಮೆ.!
ಮಾರುಕಟ್ಟೆಯಲ್ಲಿ ಚೀನಾ ಸ್ಮಾರ್ಟ್‌ಫೋನ್ ಕಂಪನಿಗಳ ಹಾವಳಿಯಿಂದ ಹೆಚ್ಚಿನ ಪ್ರಮಾಣದ ಗ್ರಾಹಕರನ್ನು ಕಳೆದುಕೊಂಡಿರುವ ಸ್ಯಾಮ್‌ಸಂಗ್ ಹಿನ್ನಡೆ ಅನುಭವಿಸಿದೆ. ಬಜೆಟ್ ಮತ್ತು ಮಧ್ಯಮ ಸರಣಿಯ ಸ್ಮಾರ್ಟ್‌ಫೋನ್‌ಗಳಲ್ಲಿ ಶಿಯೋಮಿ, ವಿವೋ ಮತ್ತು ಒಪ್ಪೋ ಸ್ಮಾರ್ಟ್‌ಫೋನ್‌ಗಳು ಹೆಚ್ಚು ಮಾರುಕಟ್ಟೆಯನ್ನು ಆಕ್ರಮಿಸಿರುವುದು ಇದಕ್ಕೆ ಕಾರಣವಾಗಿದೆ. ಈ ಹಿನ್ನಲೆಯಲ್ಲಿ ಮಾರುಕಟ್ಟೆಯಲ್ಲಿ ಮತ್ತೊಮ್ಮೆ ತನ್ನ ಹವಾ ಎಬ್ಬಿಸಲು ಸ್ಯಾಮ್‌ಸಂಗ್ ಗ್ಯಾಲೆಕ್ಸಿ J7 ಪ್ರೈಮ್ 2 ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಇದು ಚೀನಾ ಸ್ಮಾರ್ಟ್‌ಫೋನ್‌ಗಳಿಗೆ ಪ್ರಬಲ ಸ್ಪರ್ಧೆಯನ್ನು ನೀಡಲಿದೆ.

ಸದ್ಯ ಮಾರುಕಟ್ಟೆಯಲ್ಲಿ ಚೀನಾ ಸ್ಮಾರ್ಟ್‌ಫೋನ್‌ಗಳನ್ನು ಹಲವು ಮಂದಿ ಬಳಕೆ ಮಾಡಿಕೊಳ್ಳಲು ಬಯಸುತ್ತಿಲ್ಲ. ಹಾಗಾಗಿ ಕಡಿಮೆ ಬೆಲೆಯಲ್ಲಿ ಉತ್ತಮ ಸ್ಮಾರ್ಟ್‌ಫೋನ್ ಬೇಕು ಎನ್ನುವರರಿಗೆ ಸ್ಯಾಮ್‌ಸಂಗ್ ಬಿಡುಗಡೆ ಮಾಡಿರುವ ಗ್ಯಾಲೆಕ್ಸಿ J7 ಪ್ರೈಮ್ 2 ಸ್ಮಾರ್ಟ್‌ಫೋನ್ ಉತ್ತಮ ಆಯ್ಕೆಯಾಗಿದೆ, ಉತ್ತಮ ಕ್ಯಾಮೆರಾ, ವೇಗದ ಪ್ರೋಸೆಸರ್ ಎಲ್ಲವನ್ನು ಈ ಸ್ಮಾರ್ಟ್‌ಫೋನಿನಲ್ಲಿ ಕಾಣಬಹುದಾಗಿದ್ದು, ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್ ಕಳೆದುಕೊಂಡಿರುವ ಬಳಕೆದಾರರನ್ನು ಈ ಸ್ಮಾರ್ಟ್‌ಫೋನ್ ಹಿಂಪಡೆಯಲಿದೆ ಎನ್ನುವ ಮಾತು ಕೇಳಿ ಬಂದಿದೆ.

ಉತ್ತಮ ಡಿಸ್‌ಪ್ಲೇ:
ಸ್ಯಾಮ್‌ಸಂಗ್ ಗ್ಯಾಲೆಕ್ಸಿ J7 ಪ್ರೈಮ್ 2 ಸ್ಮಾರ್ಟ್‌ಫೋನ್ ನಲ್ಲಿ 5.5 ಇಂಚಿನ FHD ಡಿಸ್‌ಪ್ಲೇಯನ್ನು ಅಳವಡಿಲಾಗಿದ್ದು, ಇದು ಉತ್ತಮ ಗುಣಮಟ್ಟದ ವಿಡಿಯೋಗಳನ್ನು ನೋಡಲು ಮತ್ತು ಹೈ ಎಂಡ್ ಗೇಮ್‌ಗಳನ್ನು ಆಡಲು ಇದು ಹೇಳಿ ಮಾಡಿಸಿದಂತೆ ವಿನ್ಯಾಸ ಮಾಡಲಾಗಿದೆ.

3GB RAM:
3GB RAM ನೊಂದಿಗೆ 1.6GHz ವೇಗದ ಎಕ್ಸೋನಸ್ 7 ಸರಣಿಯ ಪ್ರೊಸೆಸರ್ ಅನ್ನು ಸ್ಯಾಮ್‌ಸಂಗ್ ಗ್ಯಾಲೆಕ್ಸಿ J7 ಪ್ರೈಮ್ 2 ಸ್ಮಾರ್ಟ್‌ಫೋನ್ ನ್ಲಲಿ ಕಾಣಬಹುದಾಗಿದ್ದು, ವೇಗದ ಕಾರ್ಯಚರಣೆಗೆ ಇದು ಸಹಾಯಕಾರಿಯಾಗಿದೆ. ಇದಲ್ಲದೇ ಈ ಸ್ಮಾರ್ಟ್‌ಫೋನ್ 32GB ಇಂಟರ್ನಲ್ ಮೆಮೊರಿಯೊಂದಿಗೆ ಕಾಣಿಸಿಕೊಳ್ಳಲಿದ್ದು, 256GB ವರೆಗೂ ಮೆಮೊರಿಯನ್ನು ವಿಸ್ತರಿಸಿಕೊಳ್ಳುವ ಅವಕಾಶವನ್ನು ಬಳಕೆದಾರರಿಗೆ ಮಾಡಿಕೊಟ್ಟಿದೆ.

13MP + 13MP ಕ್ಯಾಮೆರಾ:
ಸ್ಯಾಮ್‌ಸಂಗ್ ಗ್ಯಾಲೆಕ್ಸಿ J7 ಪ್ರೈಮ್ 2 ಸ್ಮಾರ್ಟ್‌ಫೋನಿನಲ್ಲಿ ಉತ್ತಮ ಫೋಟೋಗಳನ್ನು ಸೆರೆಹಿಡಿಯುವ ಸಲುವಾಗಿ ಹಿಂಭಾಗದಲ್ಲಿ 13 MP ಕ್ಯಾಮೆರಾವನ್ನು ನೀಡಲಾಗಿದ್ದು, ಇದೇ ಮಾದರಿಯಲ್ಲಿ ಮುಂಭಾಗದಲ್ಲಿಯೂ 13 MP ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಉತ್ತಮವಾದ ಸೆಲ್ಫಿ ಕ್ಲಿಕಿಸಬಹುದಾಗಿದೆ. ಇದಲ್ಲದೇ ಈ ಎರಡು ಕ್ಯಾಮೆರಾಗಳು FHD ಗುಣಮಟ್ಟದ ವಿಡಿಯೋವನ್ನು ಸೆರೆಹಿಡಿಯಲು ಶಕ್ತವಾಗಿದೆ.

3300mAh ಬ್ಯಾಟರಿ:
ಸ್ಯಾಮ್‌ಸಂಗ್ ಗ್ಯಾಲೆಕ್ಸಿ J7 ಪ್ರೈಮ್ 2 ಸ್ಮಾರ್ಟ್‌ಫೋನಿನಲ್ಲಿ ದೀರ್ಘ ಕಾಲ ಬಾಳಿಕೆಗಾಗಿ 3300mAh ಬ್ಯಾಟರಿಯನ್ನು ಕಾಣಬಹುದಾಗಿದ್ದು, ಈ ಸ್ಮಾರ್ಟ್‌ಫೋನ್ 4G/3G ಸಫೊರ್ಟ್ ಮಾಡಲಿದೆ. ಅಲ್ಲದೇ ವೈ-ಫೈ, ಬ್ಲೂಟೂತ್ ಸೇರಿದಂತೆ ಎಲ್ಲಾ ಆಯ್ಕೆಗಳನ್ನು ಒಳಗೊಂಡಿದೆ.


ಬೆಲೆ:
ಇಂದಿನಿಂದ ಸ್ಯಾಮ್‌ಸಂಗ್ ವೆಬ್ ಸೈಟಿನಲ್ಲಿ ಹಾಗೂ ಆಫ್ ಲೈನ್ ಮಾರಾಟವಾಗಲಿರುವ ಸ್ಯಾಮ್‌ಸಂಗ್ ಗ್ಯಾಲೆಕ್ಸಿ J7 ಪ್ರೈಮ್ 2 ಸ್ಮಾರ್ಟ್‌ಫೋನ್ ರೂ.13,990ಕ್ಕೆ ಲಭ್ಯವಿರಲಿದ್ದು, ಬ್ಲಾಕ್ ಮತ್ತು ಗೋಲ್ಡ್ ಬಣ್ಣಗಳಲ್ಲಿ ದೊರೆಯಲಿದೆ. ಇದು ಮಾರುಕಟ್ಟೆಯಲ್ಲಿ ಸಾಕಷ್ಟು ಸ್ಮಾರ್ಟ್‌ಫೋನ್‌ಗಳಿಗೆ ಕಂಟಕವಾಗುವ ಸಾಧ್ಯತೆ ದಟ್ಟವಾಗಿದೆ.


Click it and Unblock the Notifications








