ಶಿಯೋಮಿ ಫೋನ್‌ಗಳನ್ನು ಮೀರಿ ಸ್ಯಾಮ್‌ಸಂಗ್ 'ಗ್ಯಾಲಾಕ್ಸಿ ಜೆ8' ಮಾರಾಟವಾಗುತ್ತಿರುವುದೇಕೆ?!

|

ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಶಿಯೋಮಿಗೆ ಸೆಡ್ಡು ಹೊಡೆಯುತ್ತಿರುವ ಏಕೈಕ ಸ್ಮಾರ್ಟ್‌ಫೋನ್ ಸ್ಯಾಮ್‌ಸಂಗ್ 'ಗ್ಯಾಲಾಕ್ಸಿ ಜೆ8' ಭರ್ಜರಿ ಮಾರಾಟ ಕಾಣುತ್ತಿದೆ. ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ ಸರಣಿಗಳಲ್ಲಿಯೇ ಅತಿ ಹೆಚ್ಚು ಮಾರಾಟವಾಗುತ್ತಿರುವ ಸರಣಿ ಸ್ಮಾರ್ಟ್‌ಫೋನ್‌ಗಳು ಎಂಬ ಹೆಗ್ಗಳಿಕೆಯನ್ನು 'ಗ್ಯಾಲಾಕ್ಸಿ ಜೆ8' ಸ್ಮಾರ್ಟ್‌ಪೋನ್ ಉಳಿಸಿಕೊಂಡಿದೆ.!

ಕಳೆದ ವಾರವಷ್ಟೆ ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಮಾರಾಟವನ್ನು ಆರಂಭಿಸಿರುವ 'ಗ್ಯಾಲಾಕ್ಸಿ ಜೆ8' ಸ್ಮಾರ್ಟ್‌ಫೋನ್ ಕೇವಲ ಒಂದು ವಾರದಲ್ಲಿ ಭರ್ಜರಿ ಮಾರಾಟ ಕಂಡಿರುವ ಬಗ್ಗೆ ವರದಿಯಾಗಿದೆ. ಡ್ಯುಯಲ್ ರಿಯರ್ ಕ್ಯಾಮೆರಾ, ಅಮೊಲೇಡ್ ಇನ್ಫಿನಿಟಿ ಡಿಸ್‌ಪ್ಲೇಯಂತಹ ಫೀಚರ್ಸ್ ಹೊಂದಿರುವ ಈ ಫೋನ್ ಭಾರತೀಯ ಸ್ಮಾರ್ಟ್‌ಪೋನ್‌ ಪ್ರಿಯರಿಗೆ ಹೆಚ್ಚು ಹಿಡಿಸಿದೆ.

ಶಿಯೋಮಿ ಫೋನ್‌ಗಳನ್ನು ಮೀರಿ 'ಗ್ಯಾಲಾಕ್ಸಿ ಜೆ8' ಮಾರಾಟವಾಗುತ್ತಿರುವುದೇಕೆ?!

ಕೇವಲ 18,990 ರೂಪಾಯಿಗಳಿಗೆ ಮಾರುಕಟ್ಟೆಗೆ ಕಾಲಿಟ್ಟಿದ್ದ 'ಗ್ಯಾಲಾಕ್ಸಿ ಜೆ 8' 2000 ರೂ.ವರೆಗೆ ಡಿಸ್ಕೌಂಟ್ಸ್ ಹೊಂದಿದೆ. ಹಾಗಾದರೆ, ಸ್ಯಾಮ್‌ಸಂಗ್ 'ಗ್ಯಾಲಾಕ್ಸಿ ಜೆ 8' ಸ್ಮಾರ್ಟ್‌ಫೋನ್ ಹೊಂದಿರುವ ಸಂಪೂರ್ಣ ಫೀಚರ್ಸ್ ಯಾವುವು? ಸ್ಮಾರ್ಟ್‌ಫೋನ್ ಖರೀದಿಸಲು ಇರುವ ಕಾರಣಗಳು ಯಾವುವು? ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!

ಗ್ಯಾಲಾಕ್ಸಿ ಜೆ 8 ಡಿಸ್‌ಪ್ಲೇ!

ಗ್ಯಾಲಾಕ್ಸಿ ಜೆ 8 ಡಿಸ್‌ಪ್ಲೇ!

ಮೊದಲೇ ಹೇಳಿದಂತೆ ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಜೆ 8 ಸ್ಮಾರ್ಟ್‌ಫೋನ್ ಅತ್ಯುತ್ತಮ ಗುಣಮಟ್ಟದ ಸೂಪರ್ ಅಮೊಲೇಡ್ ಇನ್ಫಿನಿಟಿ ಡಿಸ್‌ಪ್ಲೇಯನ್ನು ಹೊಂದಿದೆ. 6 ಇಂಚಿನ ಫುಲ್ ಹೆಚ್‌‌ಡಿ ಪ್ಲಸ್ ಸೂಪರ್ ಅಮೊಲೇಡ್ ಇನ್ಫಿನಿಟಿ ಡಿಸ್‌ಪ್ಲೇ 18:5:9 ರ ಆಕಾರ ಅನುಪಾತದಲ್ಲಿದ್ದು, ಅತ್ಯುತ್ತಮ ಗುಣಮಟ್ಟದ ಡಿಸ್‌ಪ್ಲೇ ಸ್ಮಾರ್ಟ್‌ಫೋನ್ ಪ್ರಿಯರಿಗೆ ಇದು ಬೆಸ್ಟ್ ಸ್ಮಾರ್ಟ್‌ಫೋನ್.

ಪ್ರೊಸೆಸರ್ ಮತ್ತು RAM?

ಪ್ರೊಸೆಸರ್ ಮತ್ತು RAM?

ಎರಡು ಸಿಮ್​ನೊಂದಿಗೆ ಮಾರುಕಟ್ಟೆ ಪ್ರವೇಶಿಸಲಿರುವ J8 ಮೊಬೈಲ್​, ಸ್ನ್ಯಾಪ್​ಡ್ರಾಗನ್​ 450 ಪ್ರೊಸೆಸರ್ ಅನ್ನು ಹೊಂದಿದೆ. 4 GB RAM ಮತ್ತು 64 GB ಆಂತರಿಕ ಸಂಗ್ರಹಣಾ ವ್ಯವಸ್ಥೆಯಿರುವ ಈ ಸ್ಮಾರ್ಟ್‌ಫೋನಿನ ಸಂಗ್ರಹಣಾ ಸಾಮರ್ಥ್ಯವನ್ನು ಮೈಕ್ರೋ ಎಸ್​ಡಿ ಕಾರ್ಡ್​ ಮೂಲಕ 256 GBಗೆ ವರೆಗೂ ವಿಸ್ತರಿಸಬಹುದಾದ ಅವಕಾಶವನ್ನು ನೀಡಲಾಗಿದೆ.

ಕ್ಯಾಮೆರಾ ಫೀಚರ್ಸ್?

ಕ್ಯಾಮೆರಾ ಫೀಚರ್ಸ್?

ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಜೆ 8 ಸ್ಮಾರ್ಟ್‌ಫೋನಿನ ಹಿಂಬದಿಯಲ್ಲಿ 16 + 5 MP ಶೂಟರ್ ಕ್ಯಾಮೆರಾವನ್ನು ಅಳವಡಿಸಲಾಗಿದ್ದು ಆಟೋ ಫೋಕಸ್​, ಫೇಸ್​ ಡಿಟೆಕ್ಷನ್​, ಹೆಚ್​ಡಿಆರ್​, ಸೇರಿದಂತೆ ಹಲವು ಫೀಚರ್​ಗಳನ್ನು ನೀಡಲಾಗಿದೆ. ಸೆಲ್ಫಿ ಪ್ರಿಯರಿಗಾಗಿ 16 MP ಸೆಲ್ಫೀ ಕ್ಯಾಮೆರಾವನ್ನು ಸಹ ಈ ಸ್ಮಾರ್ಟ್‌ಫೋನ್ ಹೊಂದಿರುವುದು ಇದರ ವಿಶೇಷತೆಗಳಲ್ಲಿ ಒಂದು.

ಬ್ಯಾಟರಿ ಮತ್ತು ಕನೆಕ್ಟಿವಿಟಿ!

ಬ್ಯಾಟರಿ ಮತ್ತು ಕನೆಕ್ಟಿವಿಟಿ!

ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಜೆ 8 ಸ್ಮಾರ್ಟ್‌ಫೋನ್ 3500 mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. 4ಜಿ ವೋಲ್ಟ್, ವೈ-ಫೈ, ಬ್ಲೂಟೂತ್, ಜಿಪಿಎಸ್ / ಎ-ಜಿಪಿಎಸ್, ಮೈಕ್ರೋ-ಯುಎಸ್‌ಬಿ ಪೋರ್ಟ್ ಮತ್ತು 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಹಾಗೂ ಡ್ಯೂಪ್ಲಿಕೇಟ್ ಚಿತ್ರಗಳನ್ನು ಡಿಲೀಟ್ ಮಾಡಬಹುದಾದ ಫೀಚರ್ ಅನ್ನು ಸ್ಮಾರ್ಟ್‌ಫೋನ್ ಹೊಂದಿದೆ.

ಇತರೆ ಏನೆಲ್ಲಾ ಫೀಚರ್ಸ್!

ಇತರೆ ಏನೆಲ್ಲಾ ಫೀಚರ್ಸ್!

ಮೇಲಿನ ಎಲ್ಲಾ ಫೀಚರ್ಸ್ ಸಮಾನ್ಯ ಎಂದು ನಿಮಗನಿಸಿದರೆ, ಕೃತಕ ಬುದ್ದಿಮತ್ತೆ ತಂತ್ರಜ್ಞಾನ, ಫೇಸ್‌ ಅನ್‌ಲಾಕ್ ಆಯ್ಕೆ ಮತ್ತು ಆಂಡ್ರಾಯ್ಡ್ ಓರಿಯೋ 8.0 ಫೀಚರ್ಸ್ ಈ ಸ್ಮಾರ್ಟ್‌ಫೋನಿನ ಇನ್ನಿತರ ವಿಶೇಷತೆಗಳಾಗಿವೆ. ಇನ್ನು ಈ ಫೋನಿನಲ್ಲಿ "ವೀಡಿಯೊ ಚಾಟ್" ಸೌಲಭ್ಯವಿದ್ದು, ವೀಡಿಯೊನೋಡುವಾಗಲೇ ವಾಟ್ಸ್‌ಆಪ್‌ನಲ್ಲಿ ಚಾಟ್ ಮಾಡಲು ಸಹಾಯ ಮಾಡುತ್ತದೆ.

ಮಾರಾಟ ಮತ್ತು ಆಫರ್ಸ್!

ಮಾರಾಟ ಮತ್ತು ಆಫರ್ಸ್!

ಭಾರತದ ಸ್ಯಾಮ್‌ಸಂಗ್ ಸ್ಟೋರ್‌, ಅಫಿಷಿಯಲ್ ವೆಬ್‌ಸೈಟ್‌ ಹಾಗೂ ಅಮೆಜಾನ್, ಫ್ಲಿಪ್‌ಕಾರ್ಟ್‌ಗಳಲ್ಲಿ ಗ್ಯಾಲಾಕ್ಸಿ ಜೆ 8 ಸ್ಮಾರ್ಟ್‌ಫೋನ್ ಮಾರಾಟವಾಗುತ್ತಿದೆ . 18,990 ರೂಪಾಯಿಗಳ ಬೆಲೆಯನ್ನು ಹೊಂದಿರುವ ಗ್ಯಾಲಾಕ್ಸಿ ಜೆ 8 ಸ್ಮಾರ್ಟ್‌ಫೋನ್ ಮೇಲೆ 1,500 ರೂಪಾಯಿಗಳ ಡಿಸ್ಕೌಂಟ್ಸ್ ಅನ್ನು ಪೇಟಿಎಂ ಮತ್ತು ಐಸಿಐಸಿಐ ಬ್ಯಾಂಕ್ ಗ್ರಾಹಕರಿಗೆ ನೀಡಲಾಗಿದೆ.

Best Mobiles in India

English summary
The Infinity display phone from Samsung is here experience the bezel less screen on Samsung Galaxy J8. Shop for it on Paytm, Amazon and Flipkart now!. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X