'ಗ್ಯಾಲಾಕ್ಸಿ ಎಂ30' ಬೆಲೆ ಮತ್ತು ಬಿಡುಗಡೆ ಸುದ್ದಿ ಕೇಳಿ ಪತರಗುಟ್ಟಿದ ಮಾರುಕಟ್ಟೆ!

|

ಭಾರತದಲ್ಲಿ ಮೊನ್ನೆ ಮೊನ್ನೆಯಷ್ಟೇ 'ಗ್ಯಾಲಾಕ್ಸಿ ಎಂ 10' ಮತ್ತು 'ಗ್ಯಾಲಾಕ್ಸಿ ಎಂ 20' ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿ ಚೀನಾ ಮೊಬೈಲ್ ಕಂಪೆನಿಗಳಿಗೆ ಬಿಗ್ ಸ್ಟ್ರೋಕ್ ನೀಡಿದ ಸ್ಯಾಮ್‌ಸಂಗ್ ಇದೀಗ ಮತ್ತೊಂದು ಹೊಡೆತ ನೀಡಲು ತಯಾರಾಗಿದೆ. ಭಾರತದಲ್ಲಿ ಬಜೆಟ್ ಸ್ಮಾರ್ಟ್‌ಫೋನ್ ಪ್ರಿಯರನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುವ ನಿಟ್ಟಿನಲ್ಲಿ ಸ್ಯಾಮ್‌ಸಂಗ್ ಈಗ ಅತೀ ಕಡಿಮೆ ಬೆಲೆಯಲ್ಲಿ ಭಾರೀ ಫೀಚರ್ಸ್ ಹೊಂದಿರುವ ಗ್ಯಾಲಾಕ್ಸಿ ಎಂ30 ಸ್ಮಾರ್ಟ್‌ಪೋನ್ ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ತಿಳಿಸಿದೆ.

ಹೌದು, ಭಾರತದಲ್ಲಿ ಭರ್ಜರಿ ಮಾರಾಟ ಕಾಣುತ್ತಿರುವ ನೂತನ ಸ್ಯಾಮ್‌ಸಂಗ್ 'ಗ್ಯಾಲಾಕ್ಸಿ ಎಂ 10' ಮತ್ತು 'ಗ್ಯಾಲಾಕ್ಸಿ ಎಂ 20' ಸ್ಮಾರ್ಟ್‌ಫೋನ್‌ಗಳ ಸಾಲಿಗೆ 'ಗ್ಯಾಲಾಕ್ಸಿ ಎಂ 30' ಎಂಬ ಮತ್ತೊಂದು ಅತ್ಯುತ್ತಮ ಬಜೆಟ್ ಸ್ಮಾರ್ಟ್‌ಫೋನ್ ಒಂದು ಬಿಡುಗಡೆಯಾಗುತ್ತಿದೆ. ಈಗಾಗಲೇ ಲೀಕ್ ಆಗಿರುವ ಫೀಚರ್ಸ್ ಮತ್ತು ಬೆಲೆಗಳಿಂದ ಸ್ಯಾಮ್‌ಸಂಗ್ 'ಗ್ಯಾಲಾಕ್ಸಿ ಎಂ 30' ಸ್ಮಾರ್ಟ್‌ಪೋನಿನ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳು ಹೆಚ್ಚಾಗಿವೆ.

'ಗ್ಯಾಲಾಕ್ಸಿ ಎಂ30' ಬೆಲೆ ಮತ್ತು ಬಿಡುಗಡೆ ಸುದ್ದಿ ಕೇಳಿ ಪತರಗುಟ್ಟಿದ ಮಾರುಕಟ್ಟೆ!

'ಗ್ಯಾಲಾಕ್ಸಿ ಎಂ 10' ಮತ್ತು 'ಗ್ಯಾಲಾಕ್ಸಿ ಎಂ 20' ಸ್ಮಾರ್ಟ್‌ಫೋನ್‌ಗಳ ಬಿಡುಗಡೆಗೆ ಚೀನಾ ಮೊಬೈಲ್ ಕಂಪೆನಿಗಳು ಬೆಚ್ಚಿಬಿದ್ದಿದ್ದರೆ, 'ಗ್ಯಾಲಾಕ್ಸಿ ಎಂ 30' ಬಿಡುಗಡೆಗೆ ಪತರಗುಟ್ಟುತ್ತವೆ ಎಂದು ಹೇಳಲಾಗುತ್ತಿದೆ. ಹಾಗಾದರೆ, ಭಾರತದಲ್ಲಿ ಚೀನಾ ಮೊಬೈಲ್ ಕಂಪೆನಿಗಳನ್ನು ಹೆಡೆಮುರಿ ಕಟ್ಟಲು ಬರುತ್ತಿರುವ ನೂತನ 'ಗ್ಯಾಲಾಕ್ಸಿ ಎಂ 30' ಸ್ಮಾರ್ಟ್‌ಫೋನ್ ಹೇಗಿರಲಿದೆ?, ಲೀಕ್ ಆಗಿರುವ ಮಾಹಿತಿಗಳಂತೆ ಸ್ಮಾರ್ಟ್‌ಫೋನ್ ಫೀಚರ್ಸ್ ಮತ್ತು ಬೆಲೆಗಳು ಯಾವುವು ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಮಾರ್ಚ್ ತಿಂಗಳಿನಲ್ಲಿ 'ಗ್ಯಾಲಾಕ್ಸಿ ಎಂ 30'?

ಮಾರ್ಚ್ ತಿಂಗಳಿನಲ್ಲಿ 'ಗ್ಯಾಲಾಕ್ಸಿ ಎಂ 30'?

ಭಾರತೀಯರಿಗಾಗಿಯೇ ಮೊನ್ನೆ ಮೊನ್ನೆಯಷ್ಟೇ ಕಾಲಿಟ್ಟ 'ಗ್ಯಾಲಾಕ್ಸಿ ಎಂ 10' ಮತ್ತು 'ಗ್ಯಾಲಾಕ್ಸಿ ಎಂ 20' ಸ್ಮಾರ್ಟ್‌ಫೋನ್ ಸರಣಿಯ ಮುಂದಿನ ಸ್ಮಾರ್ಟ್‌ಪೋನ್ ಆಗಿ 'ಗ್ಯಾಲಾಕ್ಸಿ ಎಂ 30' ಮಾರುಕಟ್ಟೆಗೆ ಕಾಲಿಡುತ್ತಿದೆ. ಈಗಾಗಲೇ ಲೀಕ್ ಆಗಿರುವ ಮಾಹಿತಿಯಂತೆ, ಇದೇ ಮಾರ್ಚ್ ತಿಂಗಳಾಂತ್ಯಕ್ಕೆ ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ 'ಗ್ಯಾಲಾಕ್ಸಿ ಎಂ 30' ಮೋಡಿ ಮಾಡಲಿದೆ ಎಂದು ಹೇಳಲಾಗುತ್ತಿದೆ. ಈ ಸುದ್ದಿ ಚೀನಾ ಮೊಬೈಲ್ ಕಂಪೆನಿಗಳನ್ನು ಪತರಗುಟ್ಟಿಸಿದೆ.

'ಗ್ಯಾಲಾಕ್ಸಿ ಎಂ 30' ಬೆಲೆ ಕೂಡ ಲೀಕ್!

'ಗ್ಯಾಲಾಕ್ಸಿ ಎಂ 30' ಬೆಲೆ ಕೂಡ ಲೀಕ್!

ಮಾರ್ಚ್ ತಿಂಗಳಾಂತ್ಯಕ್ಕೆ ಭಾರತದ ಮೊಬೈಲ್ ಮಾರುಕಟ್ಟೆಗೆ ಕಾಲಿಡಲಿರುವ 'ಗ್ಯಾಲಾಕ್ಸಿ ಎಂ 30' ಬೆಲೆ ಕೂಡ ಲೀಕ್ ಆಗಿರುವುದು ಮೊಬೈಲ್ ಪ್ರಿಯರಿಗೆ ಖುಷಿ ತಂದಿದೆ. ಜನಪ್ರಿಯ ವೆಬ್‌ಸೈಟ್ ಮೈ ಸ್ಮಾರ್ಟ್‌ಪ್ರೈಸ್ ಈ ಬಗ್ಗೆ ಮಾಹಿತಿ ನೀಡಿದ್ದು, ಕೇವಲ 15 ಸಾವಿರ ರೂಪಾಯಿಗಳಿಂದ 'ಗ್ಯಾಲಾಕ್ಸಿ ಎಂ 30' ಬೆಲೆ ಆರಂಭವಾಗಲಿದೆ ಎಂದು ಹೇಳಿದೆ. ಈಗಾಗಲೆ ಬೆಲೆಯ ವಿಷಯದಲ್ಲಿ ಗದ್ದಲ ಎಬ್ಬಿಸಿರುವ 'ಗ್ಯಾಲಾಕ್ಸಿ ಎಂ 10' ಮತ್ತು 'ಗ್ಯಾಲಾಕ್ಸಿ ಎಂ 20' ಸ್ಮಾರ್ಟ್‌ಫೋನ್‌ಗಳಿಗಿಂತ 'ಗ್ಯಾಲಾಕ್ಸಿ ಎಂ 30' ಸದ್ದು ಮಾಡಲಿದೆ.

ಹೇಗಿದೆ 'ಗ್ಯಾಲಾಕ್ಸಿ ಎಂ 30'?

ಹೇಗಿದೆ 'ಗ್ಯಾಲಾಕ್ಸಿ ಎಂ 30'?

'ಗ್ಯಾಲಾಕ್ಸಿ ಎಂ 30' ಹೇಗಿದೆ ಎಂದು ತಿಳಿದರೆ ಕೇವಲ 15 ಸಾವಿರ ರೂಪಾಯಿಗಳಿಂದ 'ಗ್ಯಾಲಾಕ್ಸಿ ಎಂ 30' ಬೆಲೆ ಆರಂಭವಾಗಲಿದೆ ಎಂಬ ಊಹೆ ಕೂಡ ಸಿಲುಕದಂತಿದೆ. 6.38 ಇಂಚಿನ ಸೂಪರ್ ಅಮೊಲೆಡ್ ಡಿಸ್‌ಪ್ಲೇ, ಎಕ್ಸಿನೊಸ್ 7904 ಎಸ್‌ಒಸಿ, 5000mAh ಬ್ಯಾಟರಿ, ಮೂರು ಕ್ಯಾಮೆರಾಗಳಂತಹ ಫೀಚರ್ಸ್ ಹೊಂದಿರುವ 'ಗ್ಯಾಲಾಕ್ಸಿ ಎಂ 30' ವಿನ್ಯಾಸವಂತೂ ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಡಿಸ್‌ಪ್ಲೇ ಇನ್‌ ಫಿಂಗರ್‌ಪ್ರಿಂಟ್ ಆಯ್ಕೆ ಮೊಬೈಲ್ ಪ್ರಿಯರನ್ನು ಸೆಳೆಯಲು ಕಾರಣವಾಗಿದೆ.

'ಗ್ಯಾಲಾಕ್ಸಿ ಎಂ 30' ವಿನ್ಯಾಸ ಮತ್ತು ಡಿಸ್‌ಪ್ಲೇ ?

'ಗ್ಯಾಲಾಕ್ಸಿ ಎಂ 30' ವಿನ್ಯಾಸ ಮತ್ತು ಡಿಸ್‌ಪ್ಲೇ ?

ನೋಚ್ ವಿನ್ಯಾಸದಲ್ಲಿ ಬಿಡುಗಡೆಯಾಗಲಿರುವ 'ಗ್ಯಾಲಾಕ್ಸಿ ಎಂ 30' 2220 x 1080 ಪಿಕ್ಸೆಲ್‌ಗಳ ಸಾಮರ್ಥ್ಯದೊಂದಿಗೆ FHD + ರೆಸೊಲ್ಯೂಶನ್ನಿನ 6.38-ಇಂಚಿನ ಸೂಪರ್ AMOLED ಡಿಸ್‌ಪ್ಲೇಯನ್ನು ಹೊಂದಿದೆ ಎಂದು ಹೇಳಲಾಗಿದೆ. ಇದು 2.5 ಡಿ ವಕ್ರ ಮೃದುವಾದ ಗಾಜಿನಿಂದ ರಕ್ಷಣೆಯಾಗಿರಲಿದ್ದು, ಹಿಂಬಾಗದಲ್ಲಿ ಮೂರು ರಿಯರ್ ಕ್ಯಾಮೆರಾಗಳನ್ನು ಹೊಂದಿರುವ ಬೆಸ್ಟ್ ಸ್ಮಾರ್ಟ್‌ಫೋನ್ ಇದಾಗಿರಲಿದೆ ಎಂದು ಹೇಳಲಾಗಿದೆ.

'ಗ್ಯಾಲಾಕ್ಸಿ ಎಂ 30' ಕ್ಯಾಮೆರಾಗಳು!

'ಗ್ಯಾಲಾಕ್ಸಿ ಎಂ 30' ಕ್ಯಾಮೆರಾಗಳು!

ಈಗಾಗಲೇ ಲೀಕ್ ಆಗಿರುವ ಚಿತ್ರಗಳಲ್ಲೇ 'ಗ್ಯಾಲಾಕ್ಸಿ ಎಂ 30' ಸ್ಮಾರ್ಟ್‌ಫೋನ್ ಮೂರು ಕ್ಯಾಮೆರಾಗಳನ್ನು ಹೊಂದಿರುವುದು ಸ್ಪಷ್ಟವಾಗಿದೆ. ಎಫ್ / 1.9 ದ್ಯುತಿರಂಧ್ರದೊಂದಿಗೆ 13MP ಪ್ರಾಥಮಿಕ ಸಂವೇದಕ ತ್ರಿ ಕ್ಯಾಮೆರಾ ಘಟಕವನ್ನು ಹೊಂದಿರಲಿದೆ. f / 2.2 ದ್ಯುತಿರಂಧ್ರದೊಂದಿಗೆ 5MP ಮಾಧ್ಯಮಿಕ ವಿಶಾಲ ಕೋನ ಸಂವೇದಕ ಮತ್ತು f / 2.2 ದ್ಯುತಿರಂಧ್ರದೊಂದಿಗೆ ಮತ್ತೊಂದು 5MP ಆಳ ಸಂವೇದಕ ಸಂವೇದಕವನ್ನು ಹೊಂದಿರುತ್ತದೆ. ಸೆಲ್ಫೀ ಕ್ಯಾಮೆರಾವು f / 2.0 ದ್ಯುತಿರಂಧ್ರದೊಂದಿಗೆ 16MP ಸಂವೇದಕವನ್ನು ಹೊಂದಿರಲಿದೆ ಎಂದು ಹೇಳಲಾಗಿದೆ.

'ಗ್ಯಾಲಾಕ್ಸಿ ಎಂ 30' ಹಾರ್ಡ್‌ವೇರ್!

'ಗ್ಯಾಲಾಕ್ಸಿ ಎಂ 30' ಹಾರ್ಡ್‌ವೇರ್!

4 ಜಿಬಿ RAM + 64 ಜಿಬಿ ಆಂತರಿಕ ಸಂಗ್ರಹ ಮತ್ತು 6 ಜಿಬಿ RAM + 128 ಆಂತರಿಕ ಸಂಗ್ರಹವಿರುವ ಎರಡು ರೂಪಾಂತರಗಳಲ್ಲಿ 'ಗ್ಯಾಲಾಕ್ಸಿ ಎಂ 30' ಸ್ಮಾರ್ಟ್‌ಪೋನ್ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ. ಅತ್ಯುತ್ತಮ ಎಕ್ಸಿನೊಸ್ 7904 ಎಸ್‌ಒಸಿ ಪ್ರೊಸೆಸರ್ ಮೂಲಕ ಕಾರ್ಯನಿರ್ವಹಣೆ ನೀಡುವ ಸ್ಮಾರ್ಟ್‌ಫೋನ್ ಡ್ಯುಯಲ್ ಸಿಮ್ ಸಪೋರ್ಟ್ ಮತ್ತು ಯುಎಸ್‌ಬಿ ಟೈಪ್ ಸಿ ಪೊರ್ಟ್‌ ಅನ್ನು ಹೊಂದಿರಲಿದೆ ಎಂದು ಪ್ರಮುಖ ಟೆಕ್ ಮಾಧ್ಯಮಗಳು ವರದಿ ಮಾಡಿವೆ.

ಇತರೆ ಏನೆಲ್ಲಾ ಫೀಚರ್ಸ್?

ಇತರೆ ಏನೆಲ್ಲಾ ಫೀಚರ್ಸ್?

5000mAh ಬ್ಯಾಟರಿ ಶಕ್ತಿಯನ್ನು ಹೊಂದಿರುವ 'ಗ್ಯಾಲಾಕ್ಸಿ ಎಂ 30' ಸ್ಮಾರ್ಟ್‌ಪೋನ್, 4G VoLTE, ಬ್ಲೂಟೂತ್ 5.0, ಡ್ಯೂಯಲ್ ಸಿಮ್ ಬೆಂಬಲ ಮತ್ತು ಯುಎಸ್‌ ಟೈಪ್ ಸಿ ಪೋರ್ಟ್‌ನಂತರ ಫೀಚರ್ಸ್‌ಗಳನ್ನು ಹೊಂದಿದೆ ಎಂದು ಹೇಳಲಾಗಿದೆ. ಇದರ ಜೊತೆಗೆ ಇತ್ತೀಚಿನ ಸ್ಮಾರ್ಟ್‌ಪೋನ್ ಫೀಚರ್ಸ್‌ಗಳಾದ ಫೇಸ್‌ ಅನ್‌ಲಾಕ್, ಹಿಂಬಾಗದಲ್ಲಿ ಗ್ಲಾಸ್ ಡಿಸೈನ್ ಮತ್ತು ಗ್ರೇಡಿಯಂಟ್ ಬಣ್ಣಗಳು ಸ್ಮಾರ್ಟ್‌ಫೋನಿನಲ್ಲಿ ಇರಲಿವೆ ಎಂದು ನಾವು ನಿರೀಕ್ಷಿಸಬಹುದಾಗಿದೆ.

ಸ್ಮಾರ್ಟ್‌ಪೋನ್ ಬೆಲೆಗಳು!

ಸ್ಮಾರ್ಟ್‌ಪೋನ್ ಬೆಲೆಗಳು!

ಮಾರ್ಚ್ ತಿಂಗಳಾಂತ್ಯಕ್ಕೆ ಭಾರತದ ಮೊಬೈಲ್ ಮಾರುಕಟ್ಟೆಗೆ ಕಾಲಿಡಲಿರುವ 'ಗ್ಯಾಲಾಕ್ಸಿ ಎಂ 30' ಬೆಲೆ ಕೂಡ ಲೀಕ್ ಆಗಿವೆ. ಜನಪ್ರಿಯ ವೆಬ್‌ಸೈಟ್ ಮೈ ಸ್ಮಾರ್ಟ್‌ಪ್ರೈಸ್ ಈ ಬಗ್ಗೆ ಮಾಹಿತಿ ನೀಡಿದ್ದು, ಕೇವಲ 15 ಸಾವಿರ ರೂಪಾಯಿಗಳಿಂದ 'ಗ್ಯಾಲಾಕ್ಸಿ ಎಂ 30' ಬೆಲೆ ಆರಂಭವಾಗಲಿದೆ ಎಂದು ಹೇಳಿದೆ. 4 ಜಿಬಿ RAM + 64 ಜಿಬಿ ಆಂತರಿಕ ಸಂಗ್ರಹದ ಸ್ಮಾರ್ಟ್‌ಫೋನ್ ಬೆಲೆ 15 ಸಾವಿರ ರೂ.ಗಳಾದರೆ, 6 ಜಿಬಿ RAM + 128 ಆಂತರಿಕ ಸಂಗ್ರಹದ ಪೋನ್ ಬೆಲೆ 19 ಸಾವಿರ ರೂ.ಗಳಾಗಿರಬಹುದು ಎಂದು ಹೇಳಲಾಗಿದೆ.

Best Mobiles in India

English summary
Samsung was expected to launch three smartphones in the Galaxy M lineup. to be priced under Rs. 15,000 However, only two devices - Galaxy M10 and Galaxy M20 saw the light of the day. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X