Subscribe to Gizbot

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 4ನಲ್ಲಿ ರೆಟೀನಾ ಸ್ಕ್ಯಾನರ್‌!!!

Posted By:

ಸ್ಯಾಮ್‌ಸಂಗ್ ನಿವಾಸದಿಂದ ಒಂದು ಅತ್ಯಪೂರ್ಣ ಫೋನ್ ಮಾರುಕಟ್ಟೆಗೆ ಹೊರಬರಲು ಎಲ್ಲಾ ತಯಾರಿಯನ್ನು ನಡೆಸುತ್ತಿದೆ. ಗ್ಯಾಲಕ್ಸಿ ನೋಟ್ 4 ಎಂಬ ಹೆಸರನ್ನು ಹೊಂದಿರುವ ಈ ಫೋನ್ ಹಲವರು ಬಾರಿ ಆನ್‌ಲೈನ್‌ನಲ್ಲಿ ತನ್ನ ವಿಶೇಷತೆಗಳನ್ನು ಸೋರಿಕೆ ಮಾಡಿದ್ದು, ಕಂಪೆನಿಯು ಅಧಿಕೃತ ಎಕ್ಸೋನಸ್ ಟ್ವಿಟ್ಟರ್ ಖಾತೆಯಲ್ಲಿ ಫೋನ್‌ ಕುರಿತಾದ ಇನ್ನೊಂದು ಆಕರ್ಷಕ ಮಾಹಿತಿಯನ್ನು ನೀಡಿದೆ.

ಚಿತ್ರದಲ್ಲಿ ತೋರಿಸಿರುವಂತೆ, ಗ್ಯಾಲಕ್ಸಿ ನೋಟ್ 4 ದಪ್ಪನೆಯ ಬೆಜಿಲ್ ಗಾತ್ರವನ್ನೂ ಕಣ್ಣನ್ನು ಹೊಂದಿದ್ದು, ಫೋನ್‌ನಲ್ಲಿ ಇದು ಕಂಡುಬಂದಿದೆ. ನಮ್ಮ ಹಾರೈಕೆಯಂತೆಯೇ ನಮ್ಮ ಮುಂದಿನ ಫೋನ್‌ಗಳಲ್ಲಿ ಭದ್ರತೆಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಿದ್ದು ಬಳಕೆದಾರರೂ ಇದನ್ನೇ ನಮ್ಮಿಂದ ನಿರೀಕ್ಷಿಸುತ್ತಿದ್ದಾರೆ ಎಂದು ಕಂಪೆನಿ ಟ್ವೀಟ್ ಮಾಡಿದೆ.

ರೆಟೀನಾ ಸ್ಕ್ಯಾನರ್ ವಿಶೇಷತೆಯೊಂದಿಗೆ ಗ್ಯಾಲಕ್ಸಿ ನೋಟ್

ಈ ಅಂಶಗಳನ್ನು ನೋಡುವಾಗ ಇಲ್ಲಿ ವ್ಯಕ್ತವಾಗುವುದು ಏನೆಂದರೆ ಕೆಲವೊಂದು ರೆಟೀನಾ ಸ್ಕ್ಯಾನರ್ ವೈಶಿಷ್ಟ್ಯದೊಂದಿಗೆ ಈ ಫೋನ್ ಬಂದಿದೆ ಎಂದಾಗಿದೆ. ಇದನ್ನು ಪೋನ್ ಇಲ್ಲವೇ ಡಿವೈಸ್‌ನಲ್ಲಿರುವ ಕೆಲವೊಂದು ಖಾಸಗಿ ಖಾತೆಗಳನ್ನು ಅನ್‌ಲಾಕ್ ಮಾಡಲು ಬಳಸಲಾಗುತ್ತದೆ.

ಕೆಲವೊಂದು ಉದ್ದೇಶಗಳಿಗಾಗಿ ಸ್ಯಾಮ್‌ಸಂಗ್ ಈಗಾಗಲೇ ಬೆರಳಚ್ಚು ಸ್ಕ್ಯಾನರ್ ಅನ್ನು ಪರಿಚಯಿಸಿತ್ತು ಆದರೆ ಇದು ಸ್ವಲ್ಪ ಭಿನ್ನವಾಗಿದೆ. ಆದರೆ ಗ್ಯಾಲಕ್ಸಿ ನೋಟ್ 4 ನಲ್ಲಿರುವ ಈ ಅಂಶಗಳ ಕುರಿತಾದ ಮಾಹಿತಿಯು ಇನ್ನೂ ಸ್ಪಷ್ಟವಾಗಬೇಕಾಗಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 4: ವದಂತಿ ವಿಶೇಷತೆಗಳು
ಗ್ಯಾಲಕ್ಸಿ ನೋಟ್ 4 ನಲ್ಲಿರುವ ವಿಶೇಷತೆಯ ಬಗ್ಗೆ ನಾವೀಗಷ್ಟೇ ತಿಳಿದುಕೊಂಡಿದ್ದೇವೆ. ಆದರೆ ವದಂತಿಗಳ ಪ್ರಕಾರ, ಡಿವೈಸ್ 5.7 ಇಂಚಿನ QHD ಪರದೆಯನ್ನು ಹೊಂದಿದೆ. SoCs ಅನ್ನು ಆಧರಿಸಿ ಕಂಪೆನಿಯು ಎರಡು ಪ್ರಕಾರಗಳಲ್ಲಿ ಡಿವೈಸ್ ಅನ್ನು ಲಾಂಚ್ ಮಾಡಲಿದೆ ಎಂದು ಹೇಳಲಾಗುತ್ತಿದೆ.

ಇದು 5433 ಓಕ್ಟಾ ಕೋರ್ ಪ್ರೊಸೆಸರ್ ಜೊತೆಗೆ Mali-T760 GPU ಚಾಲನೆಯಲ್ಲಿದೆ. ಇದರಲ್ಲಿ ಸ್ನ್ಯಾಪ್‌ಡ್ರಾಗನ್ 805 SoC ಜೊತೆಗೆ ಅಡ್ರೆನೋ 420 GPU ನಲ್ಲಿದೆ. ಫೋನ್‌ನ RAM ಸಾಮರ್ಥ್ಯ 3ಜಿಬಿಯಾಗಿದ್ದು, ಆಂತರಿಕ ಮೆಮೊರಿ ಸಂಗ್ರಹಣೆ 32ಜಿಬಿಯಾಗಿದೆ. ಫೋನ್ 16 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ ಹಾಗೂ ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಆವೃತ್ತಿ ಫೋನ್‌ನಲ್ಲಿದೆ ಎಂದು ವದಂತಿಗಳು ಸುದ್ದಿ ಹರಡಿಸಿವೆ.

ಕಂಪೆನಿಯು ಇನ್ನೂ ಈ ಫೋನ್‌ನ ಬೆಲೆಯನ್ನು ನಿಗದಿಪಡಿಸಿಲ್ಲ ಅಲ್ಲದೆ ಗ್ಯಾಲಕ್ಸಿ ನೋಟ್ 4 ಸಪ್ಟೆಂಬರ್ IFA 2014 ಸಮಯದಲ್ಲಿ ಲಾಂಚ್ ಆಗುವ ಸಾಧ್ಯತೆ ಇದೆ.

Read more about:
English summary
This article tells that Samsung galaxy note 4 might come with retina scanner which is more highlighted in the device.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot