ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 4 ಆಕರ್ಷಕ ಫೋನ್ ಹೇಗೆ?

Written By:

ಗ್ಯಾಲಕ್ಸಿ ಮತ್ತು ಗ್ಯಾಲಕ್ಸಿ ನೋಟ್ ಶ್ರೇಣಿಗಳ ಹ್ಯಾಂಡ್‌ಸೆಟ್‌ಗಳೊಂದಿಗೆ ಸ್ಯಾಮ್‌ಸಂಗ್ ಈಗ ಮುಂದಿದೆ. ಈ ಎರಡೂ ಶ್ರೇಣಿಗಳ ಸ್ಮಾರ್ಟ್‌ಫೋನ್ ಮಾಡಿರುವ ಮೋಡಿ ಅತ್ಯದ್ಭುತವಾಗಿದ್ದು ಬಳಕೆದಾರರು ಈ ಸ್ಮಾರ್ಟ್‌ಫೋನ್‌ಗಳನ್ನು ಕುರಿತು ನೀಡಿರುವ ಪ್ರತಿಕ್ರಿಯೆ ಅದ್ಭುತವಾಗಿದೆ. ಸ್ಯಾಮ್‌ಸಂಗ್ ಈಗ ತಾನೇ ಹೊಸ ಗ್ಯಾಲಕ್ಸಿ ನೋಟ್ 4 ಫ್ಯಾಬ್ಲೆಟ್ ಅನ್ನು ಬಿಡುಗಡೆ ಮಾಡಿದ್ದು ಇನ್ನು ಯಶಸ್ಸಿನ ಮುಂಬಾಗಿಲನ್ನು ಸ್ಯಾಮ್‌ಸಂಗ್ ಪ್ರವೇಶಿಸಿದಂತೆ ಎಂಬಂತಾಗಿದೆ.

ಇದನ್ನೂ ಓದಿ: ದೀಪಾವಳಿ ಭರ್ಜರಿ ಕೊಡುಗೆ ಅಮೋಘ ದರ ಕಡಿತ

2014 ರ ಹೈಲೈಟ್ ಎಂದೇ ಬಿಂಬಿತವಾಗಿರುವ ನೋಟ್ 4 ಮಾರುಕಟ್ಟೆಯಲ್ಲಿರುವ ಇತರ ಹ್ಯಾಂಡ್‌ಸೆಟ್‌ಗಳಿಗೆ ಭರ್ಜರಿ ಪೈಪೋಟಿಯನ್ನು ನೀಡುವಂತಿದೆ. ಇನ್ನು ನೋಟ್ 4 ತನ್ನದೇ ಆದ ವಿಶೇಷತೆಗಳು ಮತ್ತು ಅಂಶಗಳೊಂದಿಗೆ ಬಂದಿದ್ದು ನಿಜಕ್ಕೂ ಇದನ್ನು ಗುಂಪಿನಲ್ಲಿ ಎದ್ದುಗಾಣಿಸುವಂತೆ ಮಾಡಿದೆ.

ಇನ್ನು ನೋಟ್ 4 ಹ್ಯಾಂಡ್‌ಸೆಟ್‌ಗಿಂತಲೂ ಇದರ ವಿಶೇಷತೆ ಹೆಚ್ಚು ಮನಮುಟ್ಟುವಂತಿದ್ದು ಫೋನ್ ಅನ್ನು ಅತ್ಯುತ್ತಮವಾಗಿಸುವಲ್ಲಿ ಇವುಗಳ ಅಂಶ ಪ್ರಧಾನವಾಗಿದೆ ಎಂಬುದನ್ನು ಇಲ್ಲಿ ಕಂಡುಕೊಳ್ಳಬಹುದಾಗಿದೆ. ಹಾಗಿದ್ದರೆ ಇಂದಿನ ಲೇಖನದಲ್ಲಿ ಹೊಸ ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 4 ನ ಫೀಚರ್‌ಗಳ ಬಗ್ಗೆ ತಿಳಿದುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಅಲ್ಟ್ರಾ ಪವರ್ ಸೇವಿಂಗ್ ಮೋಡ್

ಅಲ್ಟ್ರಾ ಪವರ್ ಸೇವಿಂಗ್ ಮೋಡ್

#1

ಕೊನೆಯ ಕ್ಷಣದಲ್ಲಿ ಹೆಚ್ಚು ಸಹಕಾರಿಯಾಗುವ ಫೋನ್‌ನ ಈ ಅಂಶ ನಿಜಕ್ಕೂ ಮೆಚ್ಚುವಂಥದ್ದಾಗಿದೆ. ನೆಟ್‌ವರ್ಕ್ ಇಲ್ಲದಿರುವಾಗ ಅಥವಾ ಬ್ಯಾಟರಿ ಕೊನೆಯಾಗಲಿದೆ ಎಂಬ ಅಂಶವನ್ನು ನಮಗೆ ತಿಳಿದುಕೊಳ್ಳಲು ಇದರಲ್ಲಿ ಬಣ್ಣವನ್ನು ನಿರ್ದಿಷ್ಟಪಡಿಸಬಹುದಾಗಿದೆ. ಇದನ್ನು ಸಕ್ರಿಯಗೊಳಿಸಲು ಸೆಟ್ಟಿಂಗ್ಸ್> ಪವರ್ ಸೇವಿಂಗ್ - ಅಲ್ಟ್ರಾ ಪವರ್ ಸೇವಿಂಗ್ ಮೋಡ್ ಮತ್ತು "ಅಲ್ಟ್ರಾ ಪವರ್ ಸೇವಿಂಗ್ ಮೋಡ್ ಸ್ವಿಚ್" ಇದನ್ನು ತಟ್ಟಿ.

ಕಾರ್ ಮೋಡ್ ತಿಳಿದುಕೊಳ್ಳಲು

ಕಾರ್ ಮೋಡ್ ತಿಳಿದುಕೊಳ್ಳಲು

#2

ಹೊಸ ನೋಟ್ 4 ನಲ್ಲಿ ಬಿಲ್ಟ್ ಇನ್ ಕಾರ್ ಮೋಡ್ ಅಂಶವಿದ್ದು ನೀವು ಡ್ರೈವ್ ಮಾಡುತ್ತಿರುವಾಗ ನಿಮಗೆ ಅಪಾಯವಾಗದ ರೀತಿಯಲ್ಲಿ ಮೊಬೈಲ್ ಕಾರ್ಯನಿರ್ವಹಣೆಯನ್ನು ಮಾಡಬಹುದಾಗಿದೆ.

ಒನ್ ಹ್ಯಾಂಡ್ ಆಪರೇಶನ್

ಒನ್ ಹ್ಯಾಂಡ್ ಆಪರೇಶನ್

#3

ಫೋನ್ ಮೂಲಕ ಒಂದೇ ಕೈಯಲ್ಲಿ ನೀವು ಕಾರ್ಯನಿರ್ವಹಿಸಬಹುದಾದ ಹಲವಾರು ಅಂಶಗಳನ್ನು ನೋಟ್ 4 ನಿಮಗೆ ಒದಗಿಸುತ್ತದೆ. "ಪರದೆ ಗಾತ್ರವನ್ನು ಕಿರಿದುಗೊಳಿಸಿರುವ ಅಂಶವು" ಬಲ ಭಾಗಕ್ಕೆ ಪರದೆಯನ್ನು ಶ್ರಿಂಕ್ ಮಾಡಲು ಅನುಮತಿಸುತ್ತದೆ.

ಸುಲಭ ಮೋಡ್

ಸುಲಭ ಮೋಡ್

#4

ನೋಟ್ 4 ಮತ್ತು ಅದರ ಇಂಟರ್ಫೇಸ್ ನಿಮಗೆ ತುಂಬಾ ಕಷ್ಟವಾಗಿದ್ದರೆ, ಸುಲಭ ಮೋಡ್‌ನ ಸಹಾಯವನ್ನು ನಿಮಗೆ ಪಡೆದುಕೊಳ್ಳಬಹುದು.

ಹೆಚ್ಚಿನ ಕ್ಯಾಮೆರಾ ಮೋಡ್

ಹೆಚ್ಚಿನ ಕ್ಯಾಮೆರಾ ಮೋಡ್

#5

ನೀವು ಕ್ಯಾಮೆರಾ ಅಪ್ಲಿಕೇಶನ್ ಅನ್ನು ತೆರೆದಂತೆಯೇ ಸ್ಯಾಮ್‌ಸಂಗ್ ನಿಮಗೆ ಒದಗಿಸುತ್ತಿರುವ ಹಲವಾರು ಆಯ್ಕೆಗಳನ್ನು ನೋಡಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about Samsung Galaxy Note 4 Simplified: 5 Best Tips and Tricks to Know.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot