'ಸ್ಯಾಮ್‌ಸಂಗ್‌ ಗ್ಯಾಲಕ್ಸಿ ನೋಟ್ 7' ಸ್ಮಾರ್ಟ್‌ಫೋನ್‌ ವಿಮಾನಗಳಲ್ಲಿ ಬ್ಯಾನ್: 5 ಅಘಾತಕಾರಿ ವಿಷಯಗಳು!

Written By:

'ಸ್ಯಾಮ್‌ಸಂಗ್‌ ಗ್ಯಾಲಕ್ಸಿ ನೋಟ್ 7' ಸ್ಮಾರ್ಟ್‌ಫೋನ್‌ ಸ್ಫೋಟದ ಬಗ್ಗೆ ಈಗಾಗಲೇ ಗಿಜ್‌ಬಾಟ್‌ ಓದುಗರು ತಿಳಿದಿರಬಹುದು. ಇತ್ತೀಚೆಗೆ ತಾನೆ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಕಾಲಿಟ್ಟ ದಕ್ಷಿಣ ಕೊರಿಯಾ ಎಲೆಕ್ಟ್ರಾನಿಕ್ಸ್ ದೈತ್ಯ ಕಂಪನಿ ಸ್ಯಾಮ್‌ಸಂಗ್ ತನ್ನ ಗ್ಯಾಲಕ್ಸಿ ನೋಟ್ 7 ನಿಂದ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ.

ಅಂದಹಾಗೆ 'ಸ್ಯಾಮ್‌ಸಂಗ್‌ ಗ್ಯಾಲಕ್ಸಿ ನೋಟ್ 7' ಸ್ಮಾರ್ಟ್‌ಫೋನ್‌ ಕುರಿತ ಇತ್ತೀಚಿನ ಸುದ್ದಿ ಎಂದರೆ ಜಪಾನ್‌ ವಿಮಾನಗಳಲ್ಲಿ ಈ ಡಿವೈಸ್‌ ಅನ್ನು ಬ್ಯಾನ್‌ ಮಾಡಿದೆ. ಅಮೆರಿಕ ವಿಮಾನ ನಿಯಂತ್ರಕರು ಸಹ ವಿಮಾನಗಳಲ್ಲಿ 'ಗ್ಯಾಲಕ್ಸಿ ನೋಟ್ 7' ಅನ್ನು ಅದರ ಸ್ಫೋಟ ಕಾರಣದಿಂದ ಬ್ಯಾನ್‌ ಮಾಡಿದ್ದಾರೆ. ಇಂದಿನ ಲೇಖನದಲ್ಲಿ 'ಗ್ಯಾಲಕ್ಸಿ ನೋಟ್ 7' ಬಗೆಗಿನ ಆಘಾತಕಾರಿ ವಿಷಯಗಳು ಮತ್ತು ಬ್ಯಾನ್‌ ಬಗೆಗಿನ ಮಾಹಿತಿಗಳನ್ನು ತಿಳಿಯಿರಿ.

ಸ್ಮಾರ್ಟ್‌ಫೋನ್‌ ಸ್ಫೋಟಗೊಳ್ಳುವುದೇ ಎಂಬುದರ ಪತ್ತೆ ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಜಪಾನ್‌ ವಿಮಾನಯಾನದಿಂದ ಗ್ಯಾಲಕ್ಸಿ ನೋಟ್ 7 ಬ್ಯಾನ್‌

ಜಪಾನ್‌ ವಿಮಾನಯಾನದಿಂದ ಗ್ಯಾಲಕ್ಸಿ ನೋಟ್ 7 ಬ್ಯಾನ್‌

ಜಪಾನ್‌ ಸಾರಿಗೆ ಸಚಿವಾಲಯ ಕಳೆದ ವೀಕೆಂಡ್‌ನಿಂದ ತನ್ನ ವಿಮಾನಯಾನದಲ್ಲಿ ಯಾವುದೇ ಫೋನ್‌ ಅನ್ನು ಆನ್‌ ಮಾಡುವ ಹಾಗಿಲ್ಲ ಮತ್ತು ಸ್ಮಾರ್ಟ್‌ಫೋನ್‌ಗಳನ್ನು ಚಾರ್ಜ್‌ ಮಾಡುವ ಹಾಗಿಲ್ಲ ಎಂದು ಪ್ರಯಾಣಿಕರಿಗೆ ಎಚ್ಚರಿಕೆ ನೀಡಲು ಆರಂಭಿಸಿದೆ. ಅಂದಹಾಗೆ ಇದಕ್ಕೆ ಮಹತ್ತರ ಕಾರಣವೆಂದರೆ ಈತ್ತೀಚೆಗೆ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಕಾಲಿಟ್ಟ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ನೋಟ್ 7' ಸ್ಫೋಟ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸ್ಯಾಮ್‌ಸಂಗ್‌ ಕಂಪನಿಗೆ $5 ಬಿಲಿಯನ್‌ ಲಾಸ್

ಸ್ಯಾಮ್‌ಸಂಗ್‌ ಕಂಪನಿಗೆ $5 ಬಿಲಿಯನ್‌ ಲಾಸ್

'ಸ್ಯಾಮ್‌ಸಂಗ್‌ ಗ್ಯಾಲಕ್ಸಿ ನೋಟ್ 7' ಸ್ಮಾರ್ಟ್‌ಫೋನ್‌ ಸ್ಫೋಟದ ಕಾರಣದಿಂದ ಕಂಪನಿಯು ಸುಮಾರು $5 ಬಿಲಿಯನ್‌(ಶತಕೋಟಿ) ನಷ್ಟವನ್ನು ಹೊಂದಿದೆ. 'ಸ್ಯಾಮ್‌ಸಂಗ್‌ ಗ್ಯಾಲಕ್ಸಿ ನೋಟ್ 7' ಮೊದಲ ಡಿವೈಸ್‌ಗಳ ಬದಲಿಗೆ ಹೊಸ ಪ್ರಾಡಕ್ಟ್‌ಗಳನ್ನು ಗ್ರಾಹಕರ ಸುರಕ್ಷತೆ ದೃಷ್ಟಿಯಿಂದ ನೀಡಲು ಹೊರಟರು ಸಹ ಕಂಪನಿಯ ನೋಟ್‌ 7 ಫ್ಲ್ಯಾಗ್‌ಶಿಪ್ ಡಿವೈಸ್‌ಗಳು ಪುನಃ ಸ್ಫೋಟಕ್ಕೆ ಒಳಗಾದವು. ಈ ಕಾರಣದಿಂದ ಕಂಪನಿ ಹೆಚ್ಚಿನ ನಷ್ಟ ಅನುಭವಿಸುತ್ತಿದೆ.

ನೋಟ್ 7 ಬದಲಿಗೆ $100 ಮತ್ತು ಇತರೆ ಸ್ಯಾಮ್‌ಸಂಗ್‌ ಫೋನ್‌

ನೋಟ್ 7 ಬದಲಿಗೆ $100 ಮತ್ತು ಇತರೆ ಸ್ಯಾಮ್‌ಸಂಗ್‌ ಫೋನ್‌

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ನೋಟ್‌ 7 ಡಿವೈಸ್ ಅಧಿಕೃತವಾಗಿ ಕಂಪನಿಯಿಂದಲೇ ಬ್ಯಾನ್‌ ಆಗಿದ್ದು, ಕಂಪನಿಯು ಈಗಾಗಲೇ ನೋಟ್‌ 7 ಖರೀದಿಸಿರುವವರಿಗೆ ಅದರ ಬದಲು ಇತರೆ ಸ್ಯಾಮ್‌ಸಂಗ್‌ ಡಿವೈಸ್‌ ಅನ್ನು ಜೊತೆಗೆ $100 ಹಣವನ್ನು ಬದಲಿ ಡಿವೈಸ್‌ ಬೆಲೆ ಆಧಾರಿತವಾಗಿ ನೀಡುವ ಬಗ್ಗೆ ಹೇಳಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಗ್ಯಾಲಕ್ಸಿ ನೋಟ್ 7 ಎಲ್ಲೆಲ್ಲಿ ಬ್ಯಾನ್‌?

ಗ್ಯಾಲಕ್ಸಿ ನೋಟ್ 7 ಎಲ್ಲೆಲ್ಲಿ ಬ್ಯಾನ್‌?

ಆಸ್ಟ್ರೇಲಿಯ, ನ್ಯೂಜಿಲ್ಯಾಂಡ್, ಹಾಂಗ್‌ ಕಾಂಗ್, ಸಿಂಗಾಪುರ, ತೈವಾನ್‌, ಮೊದಲೇ ಹೇಳಿದಂತೆ ಅಮೆರಿಕ ಮತ್ತು ಜಪಾನ್‌ ವಿಮಾನಯಾನಗಳು ಗ್ಯಾಲಕ್ಸಿ ನೋಟ್ 7 ಅನ್ನು ಬ್ಯಾನ್‌ ಮಾಡಿವೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ನೋಟ್ 7 ಕುರಿತ ಇತರೆ ಲೇಖನಗಳು

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ನೋಟ್ 7 ಕುರಿತ ಇತರೆ ಲೇಖನಗಳು

ಸ್ಮಾರ್ಟ್‌ಫೋನ್‌ ಸ್ಫೋಟಗೊಳ್ಳುವುದೇ ಎಂಬುದರ ಪತ್ತೆ ಹೇಗೆ?
ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 7 ಸ್ಫೋಟ, ವಿಮಾನದಲ್ಲಿ ಡಿವೈಸ್ ಬ್ಯಾನ್
ಸ್ಯಾಮ್‌ಸಂಗ್ ಗ್ಯಾಲಕ್ಸಿ 7 ಸ್ಫೋಟ, ಬಳಕೆದಾರರ ಪ್ರತಿಕ್ರಿಯೆ ಹೀಗಿದೆ

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Samsung Galaxy Note 7 banned on airplanes over fire risk in Japan. To know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot