ಐಫೋನ್ 8 ಲಾಂಚ್‌ಗೂ ಮುನ್ನವೇ ಭಾರತೀಯ ಗ್ರಾಹಕರಿಗೆ ಗಾಳ ಹಾಕಿದ ಸ್ಯಾಮ್‌ಸಂಗ್: ನೋಟ್ 8 ಲಾಂಚ್
ಸ್ಯಾಮ್‌ಸಂಗ್ ತನ್ನ ಟಾಪ್ ಎಂಡ್ ಸ್ಮಾರ್ಟ್‌ಫೋನ್ ಗ್ಯಾಲೆಕ್ಸಿ ನೋಟ್ 8 ಅನ್ನು ಲಾಂಚ್ ಮಾಡಿದ್ದು, ಈ ಮೂಲಕ ಐಫೋನ್ ಗ್ರಾಹಕರನ್ನು ತನ್ನತ್ತ ಸೆಳೆಯಲು ಸ್ಯಾಮ್‌ಸಂಗ್ ಮುಂದಾಗಿದೆ.
ಐಫೋನ್ 8 ಲಾಂಚ್ ಗೂ ಮುನ್ನವೇ ಭಾರತೀಯ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್ ತನ್ನ ಟಾಪ್ ಎಂಡ್ ಸ್ಮಾರ್ಟ್‌ಫೋನ್ ಗ್ಯಾಲೆಕ್ಸಿ ನೋಟ್ 8 ಅನ್ನು ಲಾಂಚ್ ಮಾಡಿದ್ದು, ಈ ಮೂಲಕ ಐಫೋನ್ ಗ್ರಾಹಕರನ್ನು ತನ್ನತ್ತ ಸೆಳೆಯಲು ಸ್ಯಾಮ್‌ಸಂಗ್ ಮುಂದಾಗಿದೆ.

ಓದಿರಿ: ಕರ್ನಾಟಕದಲ್ಲಿ ಮೊದಲ ಬಲಿ ಪಡೆದ ಬ್ಲೂ ವೇಲ್: ನಿಮ್ಮ ಮಕ್ಕಳ ರಕ್ಷಿಸುವುದು ಹೇಗೆ..?
ಈ ಹಿಂದೆ ಜಾಗತೀಕ ಮಾರುಕಟ್ಟೆಯಲ್ಲಿ ಲಾಂಚ್ ಆಗಿದ್ದ ಈ ಫೋನ್, ಇಂದು ದೆಹಲಿಯಲ್ಲಿ ನಡೆದ ಕಾರ್ಯಕ್ರಮದ ಮೂಲಕ ಭಾರತೀಯ ಮಾರುಕಟ್ಟೆಗೆ ಕಾಲಿರಿಸಿದೆ. ಇದೊಂದು ಫ್ಯಾಬ್ಲೆಟ್ ಮಾದರಿಯಾದ್ದಾಗಿದ್ದು, ಐಫೋನ್ 8 ಸರಿ ಸಮವಾಗಿ ಸ್ಪರ್ಧೆಯನ್ನು ನೀಡಲಿದೆ.

6.3 ಇಂಚಿನ OLED ಡಿಸ್‌ಪ್ಲೇ:
ಗ್ಯಾಲೆಕ್ಸಿ ನೋಟ್ 8 ಸ್ಮಾರ್ಟ್‌ಫೋನಿನಲ್ಲಿ 3 ಇಂಚಿನ OLED ಇನ್ಫಿನಿಟಿ ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಇದು QHD ಗುಣಮಟ್ಟವನ್ನು ಹೊಂದಿದೆ. ಇದು ಗ್ಯಾಲೆಕ್ಸಿ S8 ಗಿಂತಲೂ ದೊಡ್ಡದಾದ ಪರದೆಯನ್ನು ಹೊಂದಿದ ಎನ್ನಲಾಗಿದೆ. ಗೇಮ್ ಆಡುವ ಮತ್ತು ವಿಡಿಯೋ ನೋಡುವ ಅನುಭವವು ಅದ್ಬುತವಾಗಿರಲಿದೆ.

6GB RAM/64 GB ROM:
ಗ್ಯಾಲೆಕ್ಸಿ ನೋಟ್ 8 ಸ್ಮಾರ್ಟ್‌ಫೋನಿನಲ್ಲಿ ವೇಗದ ಕಾರ್ಯಚರಣೆಗಾಗಿ 6GB RAM ಅಳವಡಿಸಲಾಗಿದ್ದು, ಇದೊಂದಿಗೆ ಸ್ಯಾಮ್‌ಸಂಗ್ ಎಕ್ಸನೋಸ್ಸ್ 8895 ಪ್ರೋಸೆಸರ್ ಅನ್ನು ನೀಡಲಾಗಿದೆ. 64GB ಇಂಟರ್ನಲ್ ಮೆಮೊರಿಯನ್ನು ಹೊಂದಿದ್ದು, ಅತೀ ವೇಗದ ಕಾರ್ಯಾಚರಣೆಯನ್ನು ಹೊಂದಿದೆ,

ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ:
ಗ್ಯಾಲೆಕ್ಸಿ ನೋಟ್ 8 ಸ್ಮಾರ್ಟ್‌ಫೋನಿನ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಕಾಣಬಹುದಾಗಿದ್ದು, 12 MP + 12 MP ಕ್ಯಾಮೆರಾಗಳು ಇರಲಿದೆ. ಮುಂಭಾಗದಲ್ಲಿ 8MP ಕ್ಯಾಮೆರಾ ನೀಡಲಾಗಿದೆ. ಜೊತೆಗೆ S ಪೆನ್ ಸಹ ನಿಡಲಾಗಿದೆ.

ಬೆಲೆ:
ಡ್ಯುಯಲ್ ನ್ಯಾನೋ ಸಿಮ್ ಹಾಕಿಕೊಳ್ಳುವ ಅವಕಾಶವನ್ನು ಹೊಂದಿರುವ ಈ ಫೋನ್ ಆಂಡ್ರಾಯ್ಡ್ 7.1.1ನಲ್ಲಿ ಕಾರ್ಯನಿರ್ವಹಿಸಲಿದ್ದು, ಬೆಲೆ ರೂ.67,900 ಆಗಲಿದೆ. ಗೋಲ್ಡ್ ಮತ್ತು ಬ್ಲಾಕ್ ಆವೃತ್ತಿಯಲ್ಲಿ ಈ ಫೋನ್ ದೊರೆಯಲಿದೆ. ಈಗಾಗಲೇ ಪ್ರೀ ಬುಕಿಂಗ್ ಲಭ್ಯವಿದ್ದು, ಸೆಪ್ಟೆಂಬರ್ 21 ರಂದು ಗ್ರಾಹಕರಿಗೆ ಲಭ್ಯವಿರಲಿದೆ.


Click it and Unblock the Notifications








