1 ಕೆಜಿ ಚಿನ್ನದಲ್ಲಿ ತಯಾರಾದ ಸ್ಯಾಮ್ಸಂಗ್ 'ಗ್ಯಾಲಾಕ್ಸಿ ನೋಟ್ 9​' ಬೆಲೆ ಎಷ್ಟು ಗೊತ್ತಾ?

|

ಈ ಮೊದಲು ಆಪಲ್ ಕಂಪೆನಿಯ ಸ್ಮಾರ್ಟ್‌ಫೋನ್‌ಗಳಿಗಷ್ಟೇ ಐಶಾರಾಮಿ ಮೆರಗನ್ನು ನೀಡುತ್ತಿದ್ದ ಕಲಾತ್ಮಕ ಜನರು ಈ ಬಾರಿ ದಕ್ಷಿಣ ಕೋರಿಯಾದ ಮೊಬೈಲ್​ ಕಂಪನಿ ಸ್ಯಾಮ್ಸಂಗ್ ಕಂಪೆನಿಯ ಸ್ಮಾರ್ಟ್‌ಫೋನ್ ಒಂದನ್ನು ಆಯ್ದುಕೊಂಡಿದ್ದಾರೆ. ಕೆಲ ದಿನಗಳ ಹಿಂದಷ್ಟೆ ಮಾರುಕಟ್ಟೆಗೆ ಎಂಟ್ರಿ ನೀಡಿದ ನೂತನ ನೋಟ್​ 9 ಸ್ಮಾರ್ಟ್‌ಫೋನ್ ಈಗ ಚಿನ್ನವನ್ನೇ ಹೊತ್ತಿ ಬಂದಿದೆ.

ಹೌದು, ಐಶಾರಾಮಿ ಮೊಬೈಲ್ ಪ್ರಿಯರಿಗಾಗಿ ರಷ್ಯಾದ ಗೋಲ್ಡ್ ಪ್ಲಾಂಟ್ ಸಂಸ್ಥೆಯೊಂದು ಸ್ಯಾಮ್ಸಂಗ್ ಗ್ಯಾಲಾಕ್ಸಿ ನೋಟ್ 9 ಸ್ಮಾರ್ಟ್‌ಫೋನ್ ಹಿಂಭಾಗವನ್ನು ಸಂಪೂರ್ಣ ಚಿನ್ನದೊಂದಿಗೆ ತಯಾರಿಸಿದೆ. ಇಲ್ಲಿ ಆಶ್ಚರ್ಯವೇನೆಂದರೆ, ಗ್ಯಾಲಾಕ್ಸಿ ನೋಟ್ 9 ಸ್ಮಾರ್ಟ್‌ಫೋನಿನ ಹಿಂಬಾಗದ ಪ್ಯಾನೆಲ್​ಗೆ ಬರೋಬ್ಬರಿ ಒಂದು ಕೆಜಿ 'Fine Gold 999.9' ಚಿನ್ನಲೇಪನ ಮಾಡಲಾಗಿದೆ.

1 ಕೆಜಿ ಚಿನ್ನದಲ್ಲಿ ತಯಾರಾದ ಸ್ಯಾಮ್ಸಂಗ್ 'ಗ್ಯಾಲಾಕ್ಸಿ ನೋಟ್ 9​' ಬೆಲೆ ಎಷ್ಟು?

ಕೇವಲ 201 ಗ್ರಾಂ ತೂಗುವ ನೋಟ್ 9 ಸ್ಮಾರ್ಟ್‌ಫೋನ್ ಹಿಂಭಾಗವನ್ನು ಬರೋಬ್ಬರಿ ಒಂದು ಕೆಜಿ ಚಿನ್ನದಲ್ಲಿ ತಯಾರಿಸಿ ಎಲ್ಲರ ಹುಬ್ಬೇರುವಂತೆ ಮಾಡಿರುವ ಸೇವಿಯರ್​ ಎಂಬ ಸಂಸ್ಥೆ ಬೆಲೆಯನ್ನು ಕೂಡ ಅದೇ ತಕ್ಕಡಿಯಲ್ಲಿಟ್ಟು ತೂಗಿದೆ. ಹಾಗಾದರೆ, ಕೆಜಿ ಚಿನ್ನದ ಗ್ಯಾಲಾಕ್ಸಿ ನೋಟ್​ 9 ಸ್ಮಾರ್ಟ್‌ಫೋನ್ ಬೆಲೆ ಮತ್ತು ಫೀಚರ್ಸ್ ಯಾವುವು ಎಂಬುದನ್ನು ಮುಂದೆ ತಿಳಿಯಿರಿ.

ನೋಟ್ 9 ಡಿಸೈನ್

ನೋಟ್ 9 ಡಿಸೈನ್

ನಿರೀಕ್ಷೆಯಂತೆಯೇ ಸ್ಯಾಮ್‌ಸಂಗ್ ಗ್ಯಾಲಾಕ್ಸಿ ನೋಟ್ 9 ಸ್ಮಾರ್ಟ್‌ಫೋನಿನ ಹಿಂಭಾಗದಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ನಿಡಲಾಗಿದೆ. ಮಧ್ಯ ಭಾಗದಲ್ಲಿ ವರ್ಟಿಕಲ್ ಡ್ಯುಯಲ್ ಲೆನ್ಸ್ ಅನ್ನು ಹೊಂದಿದೆರುವ ಸ್ಮಾರ್ಟ್‌ಫೋನ್ ಹೈ ಎಂಡ್ ಡಿಸೈನ್ ಹೊಂದಿದ್ದು, ಸಂಪೂರ್ಣ ಡಸ್ಟ್ ಮತ್ತು ವಾಟರ್ ರೆಸಿಸ್ಟೆಂಟ್ ಆಗಿದೆ.

ನೋಟ್ 9 ಡಿಸ್‌ಪ್ಲೇ

ನೋಟ್ 9 ಡಿಸ್‌ಪ್ಲೇ

ಸ್ಯಾಮ್‌ಸಂಗ್ ಗ್ಯಾಲಾಕ್ಸಿ ನೋಟ್ 9 ಸ್ಮಾರ್ಟ್‌ಫೋನಿನಲ್ಲಿ 6.4 ಇಂಚಿನಷ್ಟು ಅಗಲವಾದ ಡಿಸ್‌ಪ್ಲೇಯನ್ನು ನೀಡಲಾಗಿದೆ. ಬೆಸ್ ಇನ್ ಕ್ಲಾಸ್ ಯೂಟ್ಯೂಬ್ ವಿಡಿಯೋಗಳನ್ನು ನೋಡಬಹುದಾದ ಸಾಮರ್ಥ್ಯದಲ್ಲಿ ಇದು ಅಮೊಲೈಡ್ ಇನ್‌ಫಿನಿಟಿ ಡಿಸ್‌ಪ್ಲೇಯಾಗಿದ್ದು, QHD+ ಗುಣಮಟ್ಟದಲ್ಲಿ ಉತ್ತಮವಾದ ಗೇಮಿಂಗ್ ಅನುಭವನ್ನು ನೀಡಲಿದೆ.

ಪ್ರೋಸೆಸರ್ ಮತ್ತು RAM!

ಪ್ರೋಸೆಸರ್ ಮತ್ತು RAM!

ಗ್ಯಾಲಾಕ್ಸಿ ನೋಟ್ 9 ಸ್ಮಾರ್ಟ್‌ಫೋನ್ ಒಕ್ಟಾಕೋರ್​ ಎಕ್ಸಿನೋಸ್​ 9810 ಪ್ರೊಸೆಸರ್​ ಅನ್ನು ಹೊಂದಿದೆ. 6GB RAM ಮತ್ತು 128 GB ಹಾಗೂ 8GB RAM ಮತ್ತು 512 GB ಇಂಟರ್ನಲ್ ಮೆಮೊರಿಯ ಎರಡು ವೆರಿಯಂಟ್‌ಗಳಲ್ಲಿ ಸ್ಮಾರ್ಟ್‌ಫೊನ್ ಲಭ್ಯವಿವೆ. ಇನ್ನು ಎಸ್‌ಡಿ ಕಾರ್ಡ್‌ ಸಹಾಯದಿಂದ 512 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳಬಹುದಾಗಿದೆ.

ಕ್ಯಾಮೆರಾ ಹೇಗಿದೆ?

ಕ್ಯಾಮೆರಾ ಹೇಗಿದೆ?

ಸ್ಯಾಮ್‌ಸಂಗ್ ಗ್ಯಾಲಾಕ್ಸಿ ನೋಟ್ 9 ಸ್ಮಾರ್ಟ್‌ಫೋನಿನಲ್ಲಿ 2X ಮತ್ತು 10 X ಡಿಜಿಟಲ್ ಜೂಮ್ ಹೊಂದಿರುವ ಡ್ಯುಯಲ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಪ್ರೈಮರಿ ವೈಡ್ ಆಂಗಲ್ ಲೈನ್ಸ್ 12 MP ಕ್ಯಾಮೆರಾ ಹಾಗೂ 12 MP ಸಾಮರ್ಥ್ಯದ ಟೆಲಿ ಲೆನ್ಸ್ ಕ್ಯಾಮೆರಾಗಳು ಇವಾಗಿದ್ದು, ಇದರೊಂದಿಗೆ ಮುಂಭಾಗದಲ್ಲಿ 8MP ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ.

4000mAh ಬ್ಯಾಟರಿ

4000mAh ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಾಕ್ಸಿ ನೋಟ್ 9 ಸ್ಮಾರ್ಟ್‌ಫೋನಿನಲ್ಲಿ ದೊಡ್ಡ ಸ್ಕ್ರಿನ್ ಮತ್ತು ವೇಗದ ಪ್ರೋಸೆಸರ್ ಇರುವುದರಿಂದಾಗಿ ಬ್ಯಾಟರಿ ಬ್ಯಾಕಪ್ ಹೆಚ್ಚು ಮಾಡುವ ಸಲುವಾಗಿ 4000mAh ಬ್ಯಾಟರಿಯನ್ನು ಅಳವಡಿಸಲಾಗಿದೆ. ಈ ಸ್ಮಾರ್ಟ್‌ಫೋನ್ ಫಾಸ್ಟ್ ಚಾರ್ಜಿಂಗ್ ಮತ್ತು ವೈರ್ ಲೈನ್ಸ್ ಚಾರ್ಜಿಂಗ್ ಸಪೋರ್ಟ್ ಮಾಡಲಿದೆ.

ಇಂಟಲಿಜೆಂಟ್ S ಪೆನ್

ಇಂಟಲಿಜೆಂಟ್ S ಪೆನ್

ಸ್ಯಾಮ್‌ಸಂಗ್ ಗ್ಯಾಲಾಕ್ಸಿ ನೋಟ್ 9 ಸ್ಮಾರ್ಟ್‌ಫೋನಿನೊಂದಿಗೆ ಇಂಟಲಿಜೆಂಟ್ S ಪೆನ್ ಅನ್ನು ಕಾಣಬಹುದಾಗಿದೆ. ಇದು ರಿಮೋಟ್ ಕಂಟ್ರೋಲ್ ಮಾದರಿಯಲ್ಲಿಯೂ ಕಾರ್ಯನಿರ್ವಹಿಸಲಿದೆ. ಅಲ್ಲದೇ ಸೆಲ್ಪಿಗಳನ್ನು ಕ್ಲಿಕಿಸಲು ಬಳಕೆ ಮಾಡಿಕೊಳ್ಳಬಹುದಾಗಿದೆ. ಅಲ್ಲದೇ ಇದು ಬ್ಲೂಟೂತ್ ಸಪೋರ್ಟ್ ಮಾಡಲಿದೆ.

ಚಿನ್ನದ್ದು 40.6 ಲಕ್ಷ ರೂ.

ಚಿನ್ನದ್ದು 40.6 ಲಕ್ಷ ರೂ.

ರಷ್ಯಾದ ಸೇವಿಯರ್​ ಎಂಬ ಸಂಸ್ಥೆ ಒಂದು ಕೆಜಿ ಚಿನ್ನದೊಂದಿಗೆ ತಯಾರಿಸಿರುವ ಗ್ಯಾಲಾಕ್ಸಿ ನೋಟ್ 9 ಬೆಲೆ ಸುಮಾರು 40.6 ಲಕ್ಷ ರೂಪಾಯಿಗಳಾಗಿದ್ದರೆ, ಸಾಮಾನ್ಯ ಗ್ಯಾಲಾಕ್ಸಿ ನೋಟ್ 9 ಸ್ಮಾರ್ಟ್‌ಫೋನ್ ಬೆಲೆ 67,900 ರುಪಾಯಿಗಳಿಂದ ಪ್ರಾರಂಭವಾಗಿದೆ. 8GB RAM ಸ್ಮಾರ್ಟ್‌ಫೋನಿನ ಬೆಲೆ 84,900 ರೂಪಾಯಿಗಳಾಗಿವೆ.

Best Mobiles in India

English summary
GOLDEN IDEA: Samsung Galaxy Note 9 with a KILOGRAM of gold on the back on sale for £45,000. to know more visit to kannada.gizot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X