ಸ್ಯಾಮ್‌ಸಂಗ್‌ನಿಂದ ವಿಶ್ವದ ಆಡ್ವಾನ್ಸ್ ಸ್ಮಾರ್ಟ್‌ಫೋನ್ ಲಾಂಚ್ : ಆಪಲ್‌ಗೆ ಇನ್ನು 10 ವರ್ಷ ಬೇಕು..!

|

ಬಹು ನಿರೀಕ್ಷಿತ ಆಂಡ್ರಾಯ್ಡ್ ಟಾಪ್ ಎಂಡ್‌ ಸ್ಮಾರ್ಟ್‌ಫೋನ್ ನಿರ್ಮಾತ ಎನ್ನಿಸಿಕೊಂಡಿರುವ ಸ್ಯಾಮ್‌ಸಂಗ್ ನಿಂದ ಗ್ಯಾಲೆಕ್ಸಿ ನೋಟ್ 9 ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದೆ. ನ್ಯೂಯಾರ್ಕ್‌ನಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಈ ಫೋನ್ ಅನಾವರಣಗೊಂಡಿದೆ. ಕಳೆದ ವರ್ಷದ ಲಾಂಚ್ ಆಗಿದ್ದ ಸ್ಯಾಮ್‌ಸಂಗ್ ಗ್ಯಾಲೆಕ್ಸಿ ನೋಟ್ 8 ಮುಂದುವರೆದ ಭಾಗ ಇದಾಗಿದ್ದು, ಸದ್ಯ ಮಾರುಕಟ್ಟೆಯಲ್ಲಿ ದೊರೆಯಲಿರುವ ಆಡ್ವಾನ್ಸ್ ತಂತ್ರಜ್ಞಾನಗಳು ಈ ಸ್ಮಾರ್ಟ್‌ಫೋನಿನಲ್ಲಿ ಕಾಣಬಹುದಾಗಿದೆ.

ಸ್ಯಾಮ್‌ಸಂಗ್‌ನಿಂದ ವಿಶ್ವದ ಆಡ್ವಾನ್ಸ್ ಸ್ಮಾರ್ಟ್‌ಫೋನ್ ಲಾಂಚ್

ಹೊಸ ಮಾದರಿಯಲ್ಲಿ S ಪೆನ್‌ನೊಂದಿಗೆ ಕಾಣಿಸಿಕೊಂಡಿರುವ ಸ್ಯಾಮ್‌ಸಂಗ್ ಗ್ಯಾಲೆಕ್ಸಿ ನೋಟ್ 9 ಸ್ಮಾರ್ಟ್‌ಫೋನ್, ಮೊಸ್ಟ್ ಇಂಟಲಿಜೆಟ್ ಕ್ಯಾಮೆರಾವನ್ನು ಹೊಂದಿದೆ. ಇದಲ್ಲದೇ ಪ್ರೀಮಿಯಮ್ ಸ್ಮಾರ್ಟ್‌ಫೋನ್ ಎನ್ನಿಸಿಕೊಳ್ಳಲು ಬೇಕಾದ ಎಲ್ಲ ಅರ್ಹತೆಗಳು ಈ ಸ್ಮಾರ್ಟ್ಫೋನಿನಲ್ಲಿದೆ ಎಂದರೆ ತಪ್ಪಾಗುವುದಿಲ್ಲ. ಮಾರುಕಟ್ಟೆ ತಜ್ಞರು ಈಗಾಗಲೇ ಸ್ಯಾಮ್‌ಸಂಗ್ ಗ್ಯಾಲೆಕ್ಸಿ ನೋಟ್ 9 ಸ್ಮಾರ್ಟ್‌ಫೋನ್‌ ಅನ್ನು ಸದ್ಯ ವಿಶ್ವದ ಆಡ್ವಾನ್ಸ್ ಸ್ಮಾರ್ಟ್‌ಫೋನ್ ಎಂದು ಕರೆದಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿಯೂ ಮುಂದಿದೆ.

ಡಿಸೈನ್ :

ಡಿಸೈನ್ :

ಸ್ಯಾಮ್‌ಸಂಗ್ ಗ್ಯಾಲೆಕ್ಸಿ ನೋಟ್ 9 ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಕಾಣಿಸಿಕೊಂಡಿದೆ. ಮಧ್ಯ ಭಾಗದಲ್ಲಿ ವರ್ಟಿಕಲ್ ಡ್ಯುಯಲ್ ಲೆನ್ಸ್ ಅನ್ನ ಹೊಂದಿದೆ. ಒಟ್ಟು ನಾಲ್ಕು ಬಣ್ಣಗಳಲ್ಲಿ ಮಾರಾಟವಾಗಲಿದ್ದು, ಡಸ್ಟ್ ಮತ್ತು ವಾಟರ್ ರೆಸಿಸ್ಟೆಂಟ್ ಆಗಿದೆ. ಇದರೊಂದಿಗೆ ಡಾಲ್ಬಿ ಆಡಿಯೋವನ್ನು ಇದರಲ್ಲಿ ಕಾಣಬಹುದು.

ಡಿಸ್‌ಪ್ಲೇ:

ಡಿಸ್‌ಪ್ಲೇ:

ಸ್ಯಾಮ್‌ಸಂಗ್ ಗ್ಯಾಲೆಕ್ಸಿ ನೋಟ್ 9 ಸ್ಮಾರ್ಟ್‌ಫೋನಿನಲ್ಲಿ 6.4 ಇಂಚಿನಷ್ಟು ಅಗಲವಾದ ಡಿಸ್‌ಪ್ಲೇಯನ್ನು ನೀಡಲಾಗಿದ್ದು, ಇದರಲ್ಲಿ ನೀವು ಬೆಸ್‌ ಇನ್ ಕ್ಲಾಸ್ ಯೂಟ್ಯೂಬ್ ವಿಡಿಯೋಗಳನ್ನು ನೋಡಬಹುದಾಗಿದೆ. ಅಲ್ಲದೇ ಇದು ಅಮೊಲೈಡ್ ಇನ್‌ಫಿನಿಟಿ ಡಿಸ್‌ಪ್ಲೇಯಾಗಿದ್ದು, QHD+ ಗುಣಮಟ್ಟವನ್ನು ಹೊಂದಿದೆ. ಉತ್ತಮವಾದ ಗೇಮಿಂಗ್ ಅನುಭವನ್ನು ನೀಡಲಿದೆ.

ವೇಗದ ಪ್ರೋಸೆಸರ್:

ವೇಗದ ಪ್ರೋಸೆಸರ್:

ಸ್ಯಾಮ್‌ಸಂಗ್ ಗ್ಯಾಲೆಕ್ಸಿ ನೋಟ್ 9 ಸ್ಮಾರ್ಟ್‌ಫೋನ್ ಆಕ್ವಾ ಕೋರ್ ಪ್ರೋಸೆಸರ್ ಅನ್ನು ಹೊಂದಿದೆ. ಇದರೊಂದಿಗೆ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 845 ಪ್ರೋಸೆಸರ್ ಇಲ್ಲವೇ ಸ್ಯಾಮ್‌ಸಂಗ್ ಎಕ್ಸ್ನೋಸ್ 9810 ಪ್ರೋಸೆಸರ್ ಅನ್ನು ಹೊಂದಲಿದೆ. ಇದಲ್ಲದೇ ಇದರಲ್ಲಿ ನೆಟ್‌ವರ್ಕ್ ಸ್ಫಿಡ್ ಮತ್ತು ಗೇಮಿಂಗ್ ಬೂಸ್ಟರ್ ನೀಡಲಾಗಿದೆ. ಕೂಲಿಂಗ್ ಆಯ್ಕೆಯೂ ಈ ಸ್ಮಾರ್ಟ್‌ಫೋನಿನಲ್ಲಿದ್ದು, ಸ್ಮೂತ್ ಆಗಿ ಗೇಮ್ ಆಡಲು ಅನೂಕೂಲ ಮಾಡಲಿದೆ.

RAM:

RAM:

ಎರಡು ಆವೃತ್ತಿಯಲ್ಲಿ ಸ್ಯಾಮ್‌ಸಂಗ್ ಗ್ಯಾಲೆಕ್ಸಿ ನೋಟ್ 9 ಸ್ಮಾರ್ಟ್‌ಫೋನ್ ಮಾರಾಟವಾಗಲಿದ್ದು, 6 GB RAM ಮತ್ತು 128 GB ಇಂಟರ್ನಲ್ ಮೆಮೊರಿಯೊಂದಿಗೆ ಮತ್ತು 8 GB RAM ಮತ್ತು 512 GB ಇಂಟರ್ನಲ್ ಮೆಮೊರಿಯೊಂದಿಗೆ ಲಭ್ಯವಿರಲಿದೆ. ಇದಲ್ಲದೇ ಎರಡು ಮಾದರಿಯ ಸ್ಮಾರ್ಟ್‌ಫೋನ್‌ಗಳು SD ಕಾರ್ಡ್‌ ಸಪೋರ್ಟ್ ಮಾಡಲಿದ್ದು, 512 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳಬಹುದಾಗಿದೆ.

ಕ್ಯಾಮೆರಾ:

ಕ್ಯಾಮೆರಾ:

ಸ್ಯಾಮ್‌ಸಂಗ್ ಗ್ಯಾಲೆಕ್ಸಿ ನೋಟ್ 9 ಸ್ಮಾರ್ಟ್‌ಫೋನಿನಲ್ಲಿ ಬಳಕೆದಾರರು ಹೊಸ ಮಾದರಿಯ ಡ್ಯುಯಲ್ ಕ್ಯಾಮೆರಾವನ್ನು ಪಡೆದುಕೊಳ್ಳಲಿದ್ದಾರೆ. ಇದರಲ್ಲಿ 2X ಆಪ್ಟಿಕಲ್ ಜೂಮ್ ಮತ್ತು 10 X ಡಿಜಿಟಲ್ ಜೂಮ್ ಅನ್ನು ನೀಡಲಾಗಿದೆ. ಪ್ರೈಮರಿ ವೈಡ್ ಆಂಗಲ್ ಲೈನ್ಸ್ 12 MP ಮತ್ತೊಂದು ಟೆಲಿ ಲೆನ್ಸ್ 12 MPಯದ್ದಾಗಿದೆ. ಇದರೊಂದಿಗೆ ಮುಂಭಾಗದಲ್ಲಿ 8MP ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ.

ದೊಡ್ಡದಾದ ಬ್ಯಾಟರಿ:

ದೊಡ್ಡದಾದ ಬ್ಯಾಟರಿ:

ಸ್ಯಾಮ್‌ಸಂಗ್ ಗ್ಯಾಲೆಕ್ಸಿ ನೋಟ್ 9 ಸ್ಮಾರ್ಟ್‌ಫೋನಿನಲ್ಲಿ ದೊಡ್ಡ ಸ್ಕ್ರಿನ್‌ ಮತ್ತು ವೇಗದ ಪ್ರೋಸೆಸರ್ ಇರುವುದರಿಂದಾಗಿ ಬ್ಯಾಟರಿ ಬ್ಯಾಕಪ್ ಹೆಚ್ಚು ಮಾಡುವ ಸಲುವಾಗಿ 4000mAh ಬ್ಯಾಟರಿಯನ್ನು ಅಳವಡಿಸಲಾಗಿದೆ. ಅಲ್ಲದೇ ಫಾಸ್ಟ್ ಚಾರ್ಜಿಂಗ್ ಮತ್ತು ವೈರ್ ಲೈನ್ಸ್ ಚಾರ್ಜಿಂಗ್ ಸಪೋರ್ಟ ಮಾಡಲಿದೆ.

ಇಂಟಲಿಜೆಂಟ್ S ಪೆನ್:

ಇಂಟಲಿಜೆಂಟ್ S ಪೆನ್:

ಸ್ಯಾಮ್‌ಸಂಗ್ ಗ್ಯಾಲೆಕ್ಸಿ ನೋಟ್ 9 ಸ್ಮಾರ್ಟ್‌ಫೋನಿನೊಂದಿಗೆ ಇಂಟಲಿಜೆಂಟ್ S ಪೆನ್ ಅನ್ನು ಕಾಣಬಹುದಾಗಿದೆ. ಇದು ರಿಮೋಟ್ ಕಂಟ್ರೋಲ್ ಮಾದರಿಯಲ್ಲಿಯೂ ಕಾರ್ಯನಿರ್ವಹಿಸಲಿದೆ. ಅಲ್ಲದೇ ಸೆಲ್ಪಿಗಳನ್ನು ಕ್ಲಿಕಿಸಲು ಬಳಕೆ ಮಾಡಿಕೊಳ್ಳಬಹುದಾಗಿದೆ. ಅಲ್ಲದೇ ಒದು ಬ್ಲೂಟೂತ್ ಸಪೋರ್ಟ್ ಮಾಡಲಿದೆ.

ಬೆಲೆ ಮತ್ತು ಬಿಡುಗಡೆ:

ಬೆಲೆ ಮತ್ತು ಬಿಡುಗಡೆ:

ಸ್ಯಾಮ್‌ಸಂಗ್ ಗ್ಯಾಲೆಕ್ಸಿ ನೋಟ್ 9 ಸ್ಮಾರ್ಟ್‌ಫೋನ್ ಆಗಸ್ಟ್ 24 ರಿಂದ ಜಾಗತಿಕ ಮಾರಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ. ಈ ಹಿನ್ನಲೆಯಲ್ಲಿ ಬೆಲೆಯ ಕುರಿತು ಯಾವುದೇ ಮಾಹಿತಿಯನ್ನು ಸ್ಯಾಮ್ ಸಂಗ್ ಬಿಟ್ಟುಕೊಟ್ಟಿಲ್ಲ.

Best Mobiles in India

English summary
Samsung Galaxy Note9 announced: Specifications, features and price. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X