Subscribe to Gizbot

ಆನ್‌ಲೈನಿನಲ್ಲಿ ಸದ್ದು ಮಾಡುತ್ತಿದೆ ಸ್ಯಾಮ್‌ಸಂಗ್ ನೋಟ್ 9 ವಿಡಿಯೋ...!

Written By:

ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಆಪಲ್ ಐಫೋನ್‌ಗಳಿಗೆ ಸೆಡ್ಡು ಹೊಡೆಯುವ ಸಾಮರ್ಥ್ಯ ಇರುವುದು ಸ್ಯಾಮ್‌ಸಂಗ್‌ಗೆ ಮಾತ್ರವೇ ಎನ್ನುವುದು ಹಲವು ಪ್ರಕರಣಗಳಲ್ಲಿ ನಿಜವಾಗಿದೆ. ಇದೇ ಮಾದರಿಯಲ್ಲಿ ಮಾರುಕಟ್ಟೆಯಲ್ಲಿ ಸದ್ಯ ಸ್ಯಾಮ್‌ಸಂಗ್ ಗ್ಯಾಲೆಕ್ಸಿ S9 ಸ್ಮಾರ್ಟ್‌ಫೋನ್ ಸದ್ದು ಮಾಡುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಸ್ಯಾಮ್‌ಸಂಗ್ ನೋಟ್ 9 ಸ್ಮಾರ್ಟ್‌ಫೋನ್ ಕಾಲಿಡಲಿದ್ದು, ಸದ್ಯ ಕಾನ್ಸೆಪ್ಟ್ ವಿಡಿಯೋ ಮೂಲಕವೇ ಸದ್ದು ಮಾಡುತ್ತಿದೆ.

ಆನ್‌ಲೈನಿನಲ್ಲಿ ಸದ್ದು ಮಾಡುತ್ತಿದೆ ಸ್ಯಾಮ್‌ಸಂಗ್ ನೋಟ್ 9 ವಿಡಿಯೋ...!

ಇನ್ನು ಕೆಲವೇ ದಿನಗಳಲ್ಲಿ ಮಾರುಕಟ್ಟೆಯನ್ನು ಪ್ರವೇಶಿಸಲಿರುವ ಸ್ಯಾಮ್‌ಸಂಗ್ ನೋಟ್ 9 ಸ್ಮಾರ್ಟ್‌ಫೋನ್, ಮುಂದಿನ ಐಫೋನಿಗೆ ಸೆಡ್ಡು ಹೊಡೆಯಲಿದೆ ಎನ್ನುವ ಮಾತು ಕೇಳಿ ಬಂದಿದೆ. ಈಗಾಗಲೇ ಸ್ಯಾಮ್‌ಸಂಗ್ ನೋಟ್ 9 ಕುರಿತ ಹಲವು ರೂಮರ್‌ಗಳು ಕೇಳಿ ಬಂದಿದೆ. ಈ ಸ್ಮಾರ್ಟ್‌ಫೋನಿನಲ್ಲಿ ಇನ್ ಡಿಸ್‌ಪ್ಲೇ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಅಳವಡಿಸಲಾಗಿದೆ ಎನ್ನಲಾಗಿದೆ.

ಓದಿರಿ: ಜಿಯೋ ಆಫರ್ ಕೊಟ್ಟ ಗಂಟೆಗಳಲ್ಲಿ ಏರ್‌ಟೆಲ್‌ನಿಂದ ಬೊಂಬಾಟ್ ಆಫರ್‌: IPL ನೋಡಲು ಏರ್‌ಟೆಲ್ ಬೆಸ್ಟ್‌..!

ಬ್ರೇಜಿಲ್ ಲೈಸ್ ವಿನ್ಯಾಸವನ್ನು ಹೊಂದಿರುವ ಸ್ಯಾಮ್‌ಸಂಗ್ ನೋಟ್ 9 ನೊಂದಿಗೆ S ಪೆನ್ ಅನ್ನು ನೀಡಲಿದ್ದು, ಒಟ್ಟು ನಾಲ್ಕು ಬಣ್ಣಗಳಲ್ಲಿ ಕಾಣಿಸಿಕೊಳ್ಳುವ ಈ ಸ್ಮಾರ್ಟ್‌ಫೋನಿನ ಪೆನ್ನುಗಳು ಅದೇ ಬಣ್ಣದಲ್ಲಿ ದೊರೆಯಲಿದೆ. ಟಾಪ್ ಎಂಡ್ ಪ್ರೋಸೆಸರ್ ಸೇರಿದಂತೆ ಟಾಪ್ ವಿಶೇಷತೆಗಳನ್ನು ಹೊಂದಿರುವ ಸಾಧ್ಯತೆ ಇದೆ.

ಆನ್‌ಲೈನಿನಲ್ಲಿ ಸದ್ದು ಮಾಡುತ್ತಿದೆ ಸ್ಯಾಮ್‌ಸಂಗ್ ನೋಟ್ 9 ವಿಡಿಯೋ...!

ಗ್ಯಾಲೆಕ್ಸಿ ನೋಟ್ 9 ಸ್ಮಾರ್ಟ್‌ಫೋನ್ ಮುಂದಿನ ತಿಂಗಳ ಅಂತ್ಯದಲ್ಲಿ ಕಾಣಿಸಿಕೊಳ್ಳಲಿದ್ದು, ಇದರಲ್ಲಿ ಟಾಪ್ ಎಂಡ್ ಪ್ರೋಸೆಸರ್ ಸ್ನಾಪ್‌ಡ್ರಾಗನ್ 845 ಅನ್ನು ನೀಡಲಾಗಿದ್ದು, ಈ ಸ್ಮಾರ್ಟ್‌ಫೋನಿನಲ್ಲಿ 6GB/8GB RAM ಅನ್ನು ಅಳವಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

How to Check Your Voter ID Card Status (KANNADA)

ಫ್ಯಾಬ್ಲೆಟ್ ಮಾದರಿಯಲ್ಲಿ ಕಾಣಿಸಿಕೊಳ್ಳುವ ಗ್ಯಾಲೆಕ್ಸಿ ನೋಟ್ 9 ಸ್ಮಾರ್ಟ್‌ಫೋನ್ 64GB, 128GB ಮತ್ತು 256GB ಇಂಟರ್ನಲ್ ಮೆಮೊರಿಯೊಂದಿಗೆ ಕಾಣಿಸಿಕೊಳ್ಳಲಿದೆ. ಅಲ್ಲದೇ ಇದರಲ್ಲಿ ಎಕ್ಸನೋಸ್ ಪ್ರೊಸೆಸರ್ ಇರುವ ಸಾಧ್ಯತೆಯೂ ದಟ್ಟವಾಗಿದೆ. ಆಂಡ್ರಾಯ್ಡ್ 8.1ನಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ. ಈಗಾಗಲೇ ಸ್ಯಾಮ್‌ಸಂಗ್ ಗ್ಯಾಲೆಕ್ಸಿ ನೋಟ್ 9 ಸ್ಮಾರ್ಟ್‌ಫೋನ್ ಬಿಡುಗಡೆಗೆ ತಯಾರಿ ನಡೆಸಿದೆ.

English summary
Samsung Galaxy Note9 concept YouTube video. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot