ಗ್ಯಾಲೆಕ್ಸಿ ನೋಟ್ 9 ಬೆಲೆ ಲೀಕ್ ಆಯ್ತು..! ಆಫರ್ ಮೇಲೆ ಆಫರ್..!
ಆಡ್ವಾನ್ಸ್ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಎನ್ನುವ ಖ್ಯಾತಿಗೆ ಪಾತ್ರವಾಗಿರುವ ಸ್ಯಾಮ್‌ಸಂಗ್ ಗ್ಯಾಲೆಕ್ಸಿ ನೋಟ್ 9 ಸ್ಮಾರ್ಟ್‌ಫೋನ್ ನಿನ್ನೇ ಬಿಡುಗಡೆಗೊಂಡಿದ್ದು, ಲಾಂಚ್ ಸಂದರ್ಭದಲ್ಲಿ ಬೆಲೆ ಕುರಿತ ಮಾಹಿತಿ ಲಭ್ಯವಿರಲಿಲ್ಲ. ಸದ್ಯ ಸ್ಯಾಮ್‌ಸಂಗ್ ಗ್ಯಾಲೆಕ್ಸಿ ನೋಟ್ 9 ಸ್ಮಾರ್ಟ್‌ಫೋನ್ ಬೆಲೆ ಕುರಿತ ಮಾಹಿತಿ ಲೀಕ್ ಆಗಿದ್ದು, ರೂ.67,900ಕ್ಕೆ ಗ್ಯಾಲೆಕ್ಸಿ ನೋಟ್ 9 ಸ್ಮಾರ್ಟ್‌ಫೋನ್ ದೊರೆಯಲಿದೆ. ಆಗಸ್ಟ್ 24 ರಿಂದ ಸೇಲ್ ಆರಂಭವಾಗಲಿದ್ದು, ಈ ಕುರಿತ ಮಾಹಿತಿಯೂ ಮುಂದಿದೆ.

ನೀವು ಈಗಲೇ ಸ್ಯಾಮ್‌ಸಂಗ್ ಇ ಸ್ಟೋರಿನಲ್ಲಿ ಗ್ಯಾಲೆಕ್ಸಿ ನೋಟ್ 9 ಸ್ಮಾರ್ಟ್‌ಫೋನ್ ಅನ್ನು ಪ್ರೀ ಬುಕ್ ಮಾಡುವ ಅವಕಾಶವನ್ನು ಮಾಡಿಕೊಡಲಾಗಿದೆ. ಪ್ರೀ ಬುಕ್ ಮಾಡಿದರೆ ಸ್ಯಾಮ್‌ಸಂಗ್ ಗೇರ್ ಸ್ಟೋಡ್ಸ್ ಸ್ಮಾರ್ಟ್‌ವಾಚ್ ಅನ್ನು ಕೇವಲ ರೂ.4999ಕ್ಕೆ ಪಡೆಯುವ ಅವಕಾಶವನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ. ಈ ಹಿನ್ನಲೆಯಲ್ಲಿ ಸ್ಯಾಮ್‌ಸಂಗ್ ಗ್ಯಾಲೆಕ್ಸಿ ನೋಟ್ 9 ಸ್ಮಾರ್ಟ್‌ಫೋನ್ ಖರೀದಿ ಕುರಿತ ಮಾಹಿತಿಯೂ ಮುಂದಿದೆ.

ಬೆಲೆಗಳು:
ಸ್ಯಾಮ್‌ಸಂಗ್ ಗ್ಯಾಲೆಕ್ಸಿ ನೋಟ್ 9 ಸ್ಮಾರ್ಟ್‌ಫೋನ್ ಬೆಲೆ ಕುರಿತ ಮಾಹಿತಿಯೂ ಸ್ಯಾಮ್‌ಸಂಗ್ ಇ ಸ್ಟೋರಿನಲ್ಲಿ ತಿಳಿದು ಬಂದಿದ್ದು, 6 GB RAM ಮತ್ತು 128 GB ಇಂಟರ್ನಲ್ ಮೆಮೊರಿಯನ್ನು ಹೊಂದಿರುವ ಸ್ಮಾರ್ಟ್‌ಫೋನ್ ಬೆಲೆ ರೂ.67,900 ಆಗಿದೆ. ಇದೇ ಮಾದರಿಯಲ್ಲಿ 8 GB RAM ಮತ್ತು 512 GB ಇಂಟರ್ನಲ್ ಮೆಮೊರಿಯ ಸ್ಮಾರ್ಟ್‌ಫೋನ್ ಬೆಲೆ ರೂ.84,900 ಆಗಿದೆ ಎನ್ನಲಾಗಿದೆ.

ಪ್ರೀ ಬುಕಿಂಗ್:
ಸ್ಯಾಮ್‌ಸಂಗ್ ಗ್ಯಾಲೆಕ್ಸಿ ನೋಟ್ 9 ಸ್ಮಾರ್ಟ್‌ಫೋನ್ ಪ್ರೀ ಬುಕ್ಕಿಂಗ್ ಆಗಸ್ಟ್ 10 ರಿಂದ ಸ್ಯಾಮ್‌ಸಂಗ್ ಇ ಸ್ಟೋರಿನಲ್ಲಿ ಆರಂಭವಾಗಲಿದೆ. ಆಗಸ್ಟ್ 20ರ ನಂತರದಲ್ಲಿ ಸ್ಮಾರ್ಟ್‌ಫೋನ್‌ಗಳು ಬಳಕೆದಾರರಿಗೆ ದೊರೆಯಲಿದೆ ಎನ್ನಲಾಗಿದೆ.

ಕ್ಯಾಷ್ ಬ್ಯಾಕ್ ಇದೆ:
ಪೇಟಿಎಂ ಮಾಲ್‌ನಲ್ಲಿ ಸ್ಯಾಮ್‌ಸಂಗ್ ಗ್ಯಾಲೆಕ್ಸಿ ನೋಟ್ 9 ಸ್ಮಾರ್ಟ್‌ಫೋನ್ ಖರೀದಿ ಮಾಡಿದರೆ ರೂ.6000 ಕ್ಯಾಷ್ ಬ್ಯಾಕ್ ಪಡೆದಯಕೊಳ್ಳಬಹುದಾಗಿದೆ. ಇದಲ್ಲದೇ HDFC ಕಾರ್ಡ್‌ನಿನಲ್ಲಿ EMI ಮೇಲೆ ಈ ಸ್ಮಾರ್ಟ್ಫೋನ್ ಖರೀದಿ ಮಾಡಿದರೆ ರೂ,6000 ಕ್ಯಾಷ್ ಬ್ಯಾಕ್ ತಮ್ಮದಾಗಿಸಿಕೊಳ್ಳಬಹುದಾಗಿದೆ.

ಸ್ಯಾಮ್ ಸಂಗ್ ಆಫರ್:
ಸ್ಯಾಮ್‌ಸಂಗ್ ಗ್ಯಾಲೆಕ್ಸಿ ನೋಟ್ 9 ಸ್ಮಾರ್ಟ್‌ಫೋನ್ ಅನ್ನು ಆಗಸ್ಟ್ 22 ರಂದು ಭಾರತದಲ್ಲಿ ಲಾಂಚ್ ಮಾಡುವ ಯೋಜನೆಯನ್ನು ಸ್ಯಾಮ್‌ಸಂಗ್ ಹಾಕಿಕೊಂಡಿದ್ದು, ಸ್ಯಾಮ್‌ಸಂಗ್ ಫೋನಿನಿಂದಲೇ ಸ್ಯಾಮ್‌ಸಂಗ್ ಗ್ಯಾಲೆಕ್ಸಿ ನೋಟ್ 9 ಸ್ಮಾರ್ಟ್‌ಫೋನ್‌ಗೆ ಆಪ್‌ಗ್ರೇಡ್ ಆಗುವವರಿಗೆ ರೂ.6000 ಕ್ಯಾಷ್ ಬ್ಯಾಕ್ ನೀಡಲಿದೆ ಎನ್ನಲಾಗಿದೆ.

ಡಿಸ್‌ಪ್ಲೇ:
ಸ್ಯಾಮ್‌ಸಂಗ್ ಗ್ಯಾಲೆಕ್ಸಿ ನೋಟ್ 9 ಸ್ಮಾರ್ಟ್‌ಫೋನಿನಲ್ಲಿ 6.4 ಇಂಚಿನಷ್ಟು ಅಗಲವಾದ ಡಿಸ್‌ಪ್ಲೇಯನ್ನು ನೀಡಲಾಗಿದ್ದು, ಇದರಲ್ಲಿ ನೀವು ಬೆಸ್ ಇನ್ ಕ್ಲಾಸ್ ಯೂಟ್ಯೂಬ್ ವಿಡಿಯೋಗಳನ್ನು ನೋಡಬಹುದಾಗಿದೆ. ಅಲ್ಲದೇ ಇದು ಅಮೊಲೈಡ್ ಇನ್‌ಫಿನಿಟಿ ಡಿಸ್‌ಪ್ಲೇಯಾಗಿದ್ದು, QHD+ ಗುಣಮಟ್ಟವನ್ನು ಹೊಂದಿದೆ. ಉತ್ತಮವಾದ ಗೇಮಿಂಗ್ ಅನುಭವನ್ನು ನೀಡಲಿದೆ.

ವೇಗದ ಪ್ರೋಸೆಸರ್:
ಸ್ಯಾಮ್‌ಸಂಗ್ ಗ್ಯಾಲೆಕ್ಸಿ ನೋಟ್ 9 ಸ್ಮಾರ್ಟ್‌ಫೋನ್ ಆಕ್ವಾ ಕೋರ್ ಪ್ರೋಸೆಸರ್ ಅನ್ನು ಹೊಂದಿದೆ. ಇದರೊಂದಿಗೆ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 845 ಪ್ರೋಸೆಸರ್ ಇಲ್ಲವೇ ಸ್ಯಾಮ್‌ಸಂಗ್ ಎಕ್ಸ್ನೋಸ್ 9810 ಪ್ರೋಸೆಸರ್ ಅನ್ನು ಹೊಂದಲಿದೆ. ಇದಲ್ಲದೇ ಇದರಲ್ಲಿ ನೆಟ್‌ವರ್ಕ್ ಸ್ಫಿಡ್ ಮತ್ತು ಗೇಮಿಂಗ್ ಬೂಸ್ಟರ್ ನೀಡಲಾಗಿದೆ. ಕೂಲಿಂಗ್ ಆಯ್ಕೆಯೂ ಈ ಸ್ಮಾರ್ಟ್‌ಫೋನಿನಲ್ಲಿದ್ದು, ಸ್ಮೂತ್ ಆಗಿ ಗೇಮ್ ಆಡಲು ಅನೂಕೂಲ ಮಾಡಲಿದೆ.

ಕ್ಯಾಮೆರಾ:
ಸ್ಯಾಮ್‌ಸಂಗ್ ಗ್ಯಾಲೆಕ್ಸಿ ನೋಟ್ 9 ಸ್ಮಾರ್ಟ್‌ಫೋನಿನಲ್ಲಿ ಬಳಕೆದಾರರು ಹೊಸ ಮಾದರಿಯ ಡ್ಯುಯಲ್ ಕ್ಯಾಮೆರಾವನ್ನು ಪಡೆದುಕೊಳ್ಳಲಿದ್ದಾರೆ. ಇದರಲ್ಲಿ 2X ಆಪ್ಟಿಕಲ್ ಜೂಮ್ ಮತ್ತು 10 X ಡಿಜಿಟಲ್ ಜೂಮ್ ಅನ್ನು ನೀಡಲಾಗಿದೆ. ಪ್ರೈಮರಿ ವೈಡ್ ಆಂಗಲ್ ಲೈನ್ಸ್ 12 MP ಮತ್ತೊಂದು ಟೆಲಿ ಲೆನ್ಸ್ 12 MPಯದ್ದಾಗಿದೆ. ಇದರೊಂದಿಗೆ ಮುಂಭಾಗದಲ್ಲಿ 8MP ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ.


Click it and Unblock the Notifications








