Subscribe to Gizbot

ಶಿಯೋಮಿ ಎಫೆಕ್ಟ್!!.ಸ್ಯಾಮ್ಸಂಗ್ 'ಆನ್ ಮ್ಯಾಕ್ಸ್' ಬೆಲೆ ಭಾರೀ ಇಳಿಕೆ!..ಫೋನ್ ಖರೀದಿಸಲು ಕ್ಯೂ!!

Written By:

ಕಳೆದ ಒಂದು ವರ್ಷದಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಸ್ಯಾಮ್‌ಸಂಗ್ ಕಂಪೆನಿಯ ಸ್ಯಾಮ್ಸಂಗ್ ಗ್ಯಾಲಕ್ಸಿ ಆನ್ ಮ್ಯಾಕ್ಸ್ ಸ್ಮಾರ್ಟ್‌ಫೋನ್ ಬೆಲೆ ಇದೀಗ ಭಾರೀ ಇಳಿಕೆಯಾಗಿದೆ.! ಶಿಯೋಮಿ ಹೊಡೆತಕ್ಕೆ ನಲುಗಿರುವ ಸ್ಯಾಮ್‌ಸಂಗ್ ಕಂಪೆನಿ ಭಾರಿ ಫೀಚರ್ಸ್ ಹೊತ್ತು ಬಂದಿರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ಆನ್ ಮ್ಯಾಕ್ಸ್ ಬೆಲೆಯನ್ನು ಇಳಿಕೆ ಮಾಡಿದೆ.!!

ಚೀನಾ ಮೊಬೈಲ್ ಕಂಪೆನಿಗಳ ಏಟಿಗೆ ಹೆದರಿದ್ದ ಸ್ಯಾಮ್‌ಸಂಗ್ ಇದೀಗ ಅತ್ಯುದ್ಬುತ ಫೀಚರ್ಸ್ ಹೊಂದಿರುವ ಗ್ಯಾಲಕ್ಸಿ ಆನ್ ಮ್ಯಾಕ್ಸ್ ಸ್ಮಾರ್ಟ್‌ಫೋನ್ ಮೂಲಕ ಮತ್ತೆ ತನ್ನ ಮಾರುಕಟ್ಟೆ ಅಧಿಪತ್ಯವನ್ನು ಸ್ಥಾಪಿಸಿಕೊಳ್ಳಲು ಮುಂದಾಗಿದ್ದು, ಸ್ಪರ್ಧಾತ್ಮಕ ಮಾರುಕಟ್ಟೆಯನ್ನು ಪ್ರವೇಶಿಸಲು ಗ್ಯಾಲಕ್ಸಿ ಆನ್ ಮ್ಯಾಕ್ಸ್ ಬೆಲೆಯಲ್ಲಿ 4000 ರೂ.ಗಳಿಗಿಂತ ಹೆಚ್ಚು ಕಡಿತಗೊಳಿಸಿದೆ.!!

ಶಿಯೋಮಿ ಎಫೆಕ್ಟ್!!.ಸ್ಯಾಮ್ಸಂಗ್ 'ಆನ್ ಮ್ಯಾಕ್ಸ್' ಬೆಲೆ ಭಾರೀ ಇಳಿಕೆ!

ಇದೇ ಮೊದಲ ಬಾರಿಗೆ ಸ್ಯಾಮ್‌ಸಂಗ್‌ನ ಅತ್ಯುತ್ತಮ ಸ್ಮಾರ್ಟ್‌ಫೋನ್ ಒಂದು ಅತ್ಯಂತ ಕಡಿಮೆ ಬೆಲೆಗೆ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದ್ದು, ಹಾಗಾದರೆ, ಸ್ಯಾಮ್ಸಂಗ್ ಗ್ಯಾಲಕ್ಸಿ ಆನ್ ಮ್ಯಾಕ್ಸ್ ಸ್ಮಾರ್ಟ್‌ಫೋನ್ ಏಕೆ ಖರೀದಿಸಲು ಬೆಸ್ಟ್? ಗ್ಯಾಲಕ್ಸಿ ಆನ್ ಸ್ಮಾರ್ಟ್‌ಫೋನ್ ಏನೆಲ್ಲಾ ಫೀಚರ್ಸ್ ಹೊಂದಿದೆ? ಮತ್ತು ಬೆಲೆ ಎಷ್ಟು? ಎಂಬುದನ್ನು ಮುಂದೆ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
5.7 ಇಂಚ್ ಹೆಚ್‌ಡಿ ‌ಡಿಸ್‌ಪ್ಲೇ!!

5.7 ಇಂಚ್ ಹೆಚ್‌ಡಿ ‌ಡಿಸ್‌ಪ್ಲೇ!!

ಸ್ಯಾಮ್ಸಂಗ್ ಗ್ಯಾಲಕ್ಸಿ ಆನ್ ಮ್ಯಾಕ್ಸ್ 5.7 ಇಂಚ್ 1080x1920 ಪಿಕ್ಸೆಲ್ ‌ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ. ಮಲ್ಟಿಮೀಡಿಯಾಗೆ ಅತ್ಯುತ್ತಮವಾಗಿ ರೂಪುಗೊಂಡಿರುವ ಡಿಸ್‌ಪ್ಲೇ ಸ್ಮಾರ್ಟ್‌ಫೋನಿನಲ್ಲಿದ್ದು, ಸನ್‌ಲೈಟ್ ಇದ್ದಾಗಲೂ ಡಿಸ್‌ಪ್ಲೇ ಬ್ರೈಟ್‌ನೆಸ್ ಅಡ್ಜಸ್ಟ್ ಮಾಡಬೇಕಿರದಂತರ ತಂತ್ರಜ್ಞಾನ ಹೊಂದಿರುವ ತಂತ್ರಜ್ಞಾನವನ್ನು ಅಳವಡಿಸಲಾಗಿದೆ.!!

ಆನ್ ಮ್ಯಾಕ್ಸ್ ಕಾರ್ಯನಿರ್ವಹಣೆಗೆ ಸಾಟಿಯಿಲ್ಲ.!!

ಆನ್ ಮ್ಯಾಕ್ಸ್ ಕಾರ್ಯನಿರ್ವಹಣೆಗೆ ಸಾಟಿಯಿಲ್ಲ.!!

ಸ್ಯಾಮ್ಸಂಗ್ ಗ್ಯಾಲಕ್ಸಿ ಆನ್ ಮ್ಯಾಕ್ಸ್ ಸ್ಮಾರ್ಟ್‌ಫೋನಿನಲ್ಲಿ 2.39GHz MTK P25 ಆಕ್ಟಕೋರ್ ಪ್ರೊಸೆಸರ್ ಅನ್ನು ಅಳವಡಿಸಲಾಗಿದೆ. 4GB RAM ಮೂಲಕ ಕಾರ್ಯನಿರ್ವಹಣೆ ನೀಡಲಿರುವ ಸ್ಮಾರ್ಟ್‌ಫೋನ್‌ 32 GB ಆಂತರಿಕ ಮೆಮೊರಿಯನ್ನು ಹೊಂದಿದೆ. ಹಾಗಾಗಿ, ಸ್ಮಾರ್ಟ್‌ಫೋನ್ ಕಾರ್ಯನಿರ್ವಹಣೆಗೆ ಇತರೆ ಫೋನ್‌ಗಳು ಸಾಟಿಯಿಲ್ಲ ಎನ್ನಬಹುದು.!!

ಫ್ಲಾಗ್‌ಶಿಪ್ ಕ್ಯಾಮೆರಾ ಸ್ಮಾರ್ಟ್‌ಫೋನ್ !!

ಫ್ಲಾಗ್‌ಶಿಪ್ ಕ್ಯಾಮೆರಾ ಸ್ಮಾರ್ಟ್‌ಫೋನ್ !!

ಶಿಯೋಮಿ, ಒಪ್ಪೋ ಮತ್ತು ಲೆನೊವೊ ಕಂಪೆನಿಗಳು ಸೇರಿದಂತೆ ಬಹುತೇಕ ಎಲ್ಲಾ ಮೊಬೈಲ್‌ ಕಂಪೆನಿಗಳ ಕ್ಯಾಮೆರಾ ತಂತ್ರಜ್ಞಾನಕ್ಕೆ ಗ್ಯಾಲಕ್ಸಿ ಆನ್ ಮ್ಯಾಕ್ಸ್ ಸೆಡ್ಡು ಹೊಡೆದಿದೆ. 13MP ರಿಯರ್ ಕ್ಯಾಮೆರಾ ಮತ್ತು 13mP ಸೆಲ್ಫಿ ಕ್ಯಾಮೆರಾ ಹೊಂದಿರುವ ಸ್ಮಾರ್ಟ್‌ಫೋನಿನಲ್ಲಿ f/1.7 ಅಪಾರ್ಚರ್, ಬ್ಯೂಟಿಮೂಡ್ ಫೀಚರ್ಸ್ ಇವೆ.!!

ಇತರೆ ಏನೆಲ್ಲಾ ಫೀಚರ್ಸ್?

ಇತರೆ ಏನೆಲ್ಲಾ ಫೀಚರ್ಸ್?

ಸ್ಯಾಮ್‌ಸಂಗ್ ಗ್ಯಾಲೆಕ್ಸಿ ಆನ್ ಮ್ಯಾಕ್ಸ್ ಸ್ಮಾರ್ಟ್‌ಫೋನಿನಲ್ಲಿ 3,300mAh ಶಕ್ತಿಯ ಬ್ಯಾಟರಿಯನ್ನು ಅಳವಡಿಸಲಾಗಿದೆ. 4G VoLTE, ಇನ್‌ಸ್ಟಂಟ್ ಶೇರಿಂಗ್, FHD (1920 x 1080)@30fps ವಿಡಿಯೋ ಶೇರಿಂಗ್ ರೆಸಲ್ಯೂಶನ್, 13 ಗಂಟೆಗಳ ವಿಡಿಯೋ ಪ್ಲೇಬ್ಯಾಕ್ ಟೈಮ್‌ನಂತಹ ಅತ್ಯುತ್ತಮ ಫೀಚರ್ಸ್‌ಗಳನ್ನು ಸ್ಮಾರ್ಟ್‌ಫೋನ್ ಹೊಂದಿದೆ.!!

ಜಿಯೋ ಕ್ಯಾಶ್‌ಬ್ಯಾಕ್!!

ಜಿಯೋ ಕ್ಯಾಶ್‌ಬ್ಯಾಕ್!!

ಚೀನಾ ಮೊಬೈಲ್ ಕಂಪೆನಿಗಳಿಗೆ ಸೆಡ್ಡು ಹೊಡೆಯಲು ಸ್ಯಾಮ್‌ಸಂಗ್ ತನ್ನ ಆನ್ ಮ್ಯಾಕ್ಸ್ ಬೆಲೆ ಭಾರೀ ಆಫರ್‌ಗಳನ್ನು ಘೋಷಿಸಿದೆ. 2200ರೂ. ಜಿಯೋ ಕ್ಯಾಶ್‌ಬ್ಯಾಕ್, ಕ್ಯಾಶಿಫೈನೊಂದಿಗೆ 35% ಭರವಸೆ ಖರೀದಿ ಆಫರ್ ಹಾಗೂ ಅತ್ಯಂತ ಹೆಚ್ಚು ಎಕ್ಸ್‌ಚೇಂಜ್ ಬೆಲೆಯನ್ನು ಸ್ಯಾಮ್‌ಸಂಗ್ ಕಂಪೆನಿ ನೀಡಿದೆ.!!

How to create two accounts in one Telegram app (KANNADA)
ಪ್ರಸ್ತುತ ಸ್ಮಾರ್ಟ್‌ಫೋನ್ ಬೆಲೆ ಎಷ್ಟು?

ಪ್ರಸ್ತುತ ಸ್ಮಾರ್ಟ್‌ಫೋನ್ ಬೆಲೆ ಎಷ್ಟು?

ಇಷ್ಟೆಲ್ಲಾ ಫೀಚರ್ಸ್ ಹೊಂದಿರುವ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಆನ್ ಮ್ಯಾಕ್ಸ್ ಮಧ್ಯಮ ಬಜೆಟ್ ಬೆಲೆಯನ್ನು ಹೊಂದಿದೆ. 4GB RAM ಮತ್ತು 32 GB ಆಂತರಿಕ ಮೆಮೊರಿಯನ್ನು ಹೊಂದಿರುವ ಸ್ಯಾಮ್‌ಸಂಗ್ ಆನ್ ಮ್ಯಾಕ್ಸ್ ಸ್ಮಾರ್ಟ್‌ಫೋನ್ ಬೆಲೆ ಕೇವಲ 14,900 ರೂಪಾಯಿಗಳಾಗಿದೆ.!!

ಓದಿರಿ:ಹಕ್ಕಿಗಳಿಗೇಕೆ ವಿದ್ಯುತ್ ಶಾಕ್ ಹೊಡೆಯುವುದಿಲ್ಲ ಗೊತ್ತಾ?!..ಸ್ವಷ್ಟ ಉತ್ತರ ಇಲ್ಲಿದೆ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Samsung Galaxy On Max price has been dropped in India. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot