ಸ್ಯಾಮ್‌ಸಂಗ್‌ನಿಂದ ಮತ್ತೊಂದು ಸ್ಮಾರ್ಟ್‌ಫೋನ್ ಲಾಂಚ್..!

By GizBot Bureau
|

ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಸದ್ದು ಮಾಡುವ ಸಲುವಾಗಿ ಸ್ಯಾಮ್ ಸಂಗ್ ಮತ್ತೊಂದು ಮಧ್ಯಮ ಸರಣಿಯ ಸ್ಮಾರ್ಟ್ ಫೋನ್ ಅನ್ನು ಲಾಂಚ್ ಮಾಡಲು ಮುಂದಾಗಿದೆ. ಸ್ಯಾಮ್ ಸಂಗ್ ಗ್ಯಾಲೆಕ್ಸಿ ಆನ್ 8 (2018) ಸ್ಮಾರ್ಟ್ ಪೋನ್ ಅನ್ನು ರೂ.16,990ಕ್ಕೆ ನೀಡಲಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಹಲವು ಸ್ಮಾರ್ಟ್ ಫೋನ್ ಗಳಿಗೆ ಸೆಡ್ಡು ಹೊಡೆಯಲಿದೆ. ಇದೇ ಮಾದರಿಯಲ್ಲಿ ಕೇಲವು ದಿನಗಳ ಹಿಂದೆ ಗ್ಯಾಲೆಕ್ಸಿ J8(2018)ಅನ್ನು ಲಾಂಚ್ ಮಾಡಿತ್ತು.

ಸ್ಯಾಮ್ ಸಂಗ್ ಗ್ಯಾಲೆಕ್ಸಿ ಆನ್ 8 (2018) ಇದೇ ಆಗಸ್ಟ್ 6 ರಿಂದ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ. ಇದು ಖ್ಯಾತ ಇ ಕಾಮರ್ಸ್ ಸ್ಟೋರ್ ಫ್ಲಿಪ್ ಕಾರ್ಟ್ ಮತ್ತು ಸ್ಯಾಮ್ ಸಂಗ್ ಸ್ಟೋರಿನಲ್ಲಿಯೂ ಲಭ್ಯವಿರಲಿದೆ. ಇದರೊಂದಿಗೆ ಆಫ್ ಲೈನ್ ಮಾರುಕಟ್ಟೆಯಲ್ಲಿಯೂ ಸ್ಯಾಮ್ ಸಂಗ್ ಗ್ಯಾಲೆಕ್ಸಿ ಆನ್ 8 (2018) ಸ್ಮಾರ್ಟ್ ಫೋನ್ ಮಾರಾಟವಾಗಲಿದೆ.

ಸ್ಯಾಮ್‌ಸಂಗ್‌ನಿಂದ ಮತ್ತೊಂದು ಸ್ಮಾರ್ಟ್‌ಫೋನ್ ಲಾಂಚ್..!

ಸ್ಯಾಮ್ ಸಂಗ್ ಗ್ಯಾಲೆಕ್ಸಿ ಆನ್ 8 (2018) ಸ್ಮಾರ್ಟ್ ಫೋನ್ ಲಾಂಚ್ ಕುರಿತಂತೆ ಮಾತನಾಡಿರುವ ಸ್ಯಾಮ್ ಸಂಗ್ ವೈಸ್ ಪ್ರೆಸಿಡೆಂಟ್ ಸಂದೀಪ್ ಸಿಂಗ್ ಆರೋರ, ಗ್ರಾಹರಿಗೆ ಸಾಕಷ್ಟು ಉತ್ತಮ ಪೋನ್ ಗಳನ್ನು ನೀಡಬೇಕು ಎನ್ನುವ ಕಾರಣಕ್ಕಾಗಿ ಇನ್ ಫಿನಿಟಿ ಡಿಸ್ ಪ್ಲೇ, ಉತ್ತಮ ಕ್ಯಾಮೆರಾ ಸೇರಿದಂತೆ ಹಲವು ಹೊಸ ಮಾದರಿಯಲ್ಲಿ ಆಯ್ಕೆಗಳೊಂದಿಗೆ ಸ್ಯಾಮ್ ಸಂಗ್ ಗ್ಯಾಲೆಕ್ಸಿ ಆನ್ 8 (2018) ಅನ್ನು ಗ್ರಾಹಕರ ಕೈಗೆ ನೀಡುತ್ತಿದ್ದೇವೆ ಎಂದಿದ್ದಾರೆ.

ಸ್ಯಾಮ್ ಸಂಗ್ ಗ್ಯಾಲೆಕ್ಸಿ ಆನ್ 8 (2018) ವಿಶೇಷತೆ:

ಸ್ಯಾಮ್ ಸಂಗ್ ಗ್ಯಾಲೆಕ್ಸಿ ಆನ್ 8 (2018) ಸ್ಮಾರ್ಟ್ ಫೋನಿನಲ್ಲಿ 6 ಇಂಚಿನ ಡಿಸ್ ಪ್ಲೇ ಯನ್ನು ಅಳವಡಿಸಲಾಗಿದೆ. ಇದು ಅಮೋಲೈಡ್ ನಿಂದ ಮಾಡಲಾಗಿದೆ. ಇದಲ್ಲದೇ 2.5D ಕರ್ವಡ್ ಗ್ಲಾಸ್ ವಿನ್ಯಾಸವನ್ನು ಇದು ಹೊಂದಿದೆ.. ಇದಲ್ಲದೇ 18.5:9 ಅನುಪಾತದಿಂದ ಮಾಡಲಾಗಿದೆ.

ಈ ಸ್ಮಾರ್ಟ್ ಫೋನ್ ಕ್ವಾಲ್ಕಮ್ ಸ್ನಾಪ್ ಡ್ರಾಗನ್ 450 ಆಕ್ಟಾ ಕೋರ್ ಚಿಪ್ ಸೆಟ್ ಅನ್ನು ಅಳವಡಿಸಲಾಗಿದೆ. ಇದು 1.8GHz ವೇಗವನ್ನು ಹೊಂದಿದೆ. ಇದರೊಂದಿಗೆ ಆಡ್ರೀನೋ 506 GPUವನ್ನು ಇದರಲ್ಲಿ ಕಾಣಬಹುದಾಗಿದೆ. ಇದರೊಂದಿಗೆ ವೇಗದ ಕಾರ್ಯಚರಣೆಗೆ 4 GB RAM ಅನ್ನು ಅಳವಡಿಸಲಾಗಿದ್ದು, 64 GB ಇಂಟರ್ನಲ್ ಮೆಮೊರಿಯೊಂದಿಗೆ ಮಾರಾಟವಾಗಲಿದೆ. ಜೊತೆಗೆ 256 GB ವರೆಗೂ ಮೆಮೊರಿ ಕಾರ್ಡ್ ಅನ್ನು ಅಳವಡಿಸುವ ಅವಕಾಶವನ್ನು ಮಾಡಿಕೊಟ್ಟಿದೆ.

ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹಿಂಭಾಗದಲ್ಲಿ ಕಾಣಬಹುದಾಗಿದೆ. 16MP + 5 MP ಕ್ಯಾಮೆರಾವನ್ನು ನೋಡಲಾಗಿದ್ದು, ಇದು ಬಳಕೆದಾರರಿಗೆ ಉತ್ತಮ ಚಿತ್ರಗಳನ್ನು ಸೆರೆಹಿಡಿಯಲು ಸಹಾಯವನ್ನು ಮಾಡಲಿದೆ. ಮುಂಭಾಗದಲ್ಲಿ ಸೆಲ್ಪೀಗಾಗಿ 16 MP ಕ್ಯಾಮೆರಾವನ್ನು ನೀಡಲಾಗಿದೆ. ಜೊತೆಗೆ ಡ್ಯುಯಲ್ ಸಿಮ್ ಹಾಕಿಕೊಳ್ಳುವ ಅವಕಾಶವು ಇದರಲ್ಲಿದೆ.

Most Read Articles
Best Mobiles in India

English summary
Samsung Galaxy On8 (2018) with a Dual camera setup launched in India for Rs 16,990. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X