ಸ್ಯಾಮ್‌ಸಂಗ್ ಗ್ಯಾಲಕ್ಸಿ S5ನ ಆಕರ್ಷಕ ಶ್ರೇಣಿಗಳು

By Shwetha
|

ಒಂದು ರೀತಿಯಲ್ಲಿ ಸ್ಯಾಮ್‌ಸಂಗ್ ಯಶಸ್ವಿ ಪ್ರಯಾಣವನ್ನು ಮಾಡುತ್ತಿದೆ. ದಕ್ಷಿಣ ಕೊರಿಯಾದ ಈ ಸ್ಮಾರ್ಟ್‌ಫೋನ್ ದಿಗ್ಗಜ ತನ್ನ ಪ್ರತಿಯೊಂದು ಫೋನ್ ಅನ್ನು ನಿಖರವಾದ ದರ ಮತ್ತು ಆಕರ್ಷಕ ಮಾದರಿಯಲ್ಲಿ ಮಾರಾಟ ಮಾಡುತ್ತಿದೆ.

ಭಾರತದಲ್ಲಿ ಮಾತ್ರವಲ್ಲದೆ ಜಗತ್ತಿನಾದ್ಯಂತ ಕೂಡ ಸ್ಮಾರ್ಟ್‌ಫೋನ್ ಫ್ಲ್ಯಾಗ್‌ಶಿಪ್ ಫೋನ್‌ಗಳು ಅತ್ಯಂತ ಉತ್ತಮ ಮಾರುಕಟ್ಟೆಯನ್ನು ಪಡೆದುಕೊಂಡಿದೆ. ಅದರ ಇತ್ತೀಚಿನ ಫೋನ್ ಆದ ಗ್ಯಾಲಕ್ಸಿ ಎಸ್ 5 ಒಂದು ಬಿರುಗಾಳಿಯಂತಹ ಸಂಚಾರವನ್ನು ಉತ್ಪತ್ತಿ ಮಾಡಿದೆ.

ಗ್ಯಾಲಕ್ಸಿ ಎಸ್‌ 5 ನ ಎಲ್ಲಾ ಪ್ರಸ್ತುತ ಶ್ರೇಣಿಗಳು ವಿಭಿನ್ನ ಪ್ರೇಕ್ಷಕರನ್ನು ಹೊಂದಿದೆ. ಗ್ಯಾಲಕ್ಸಿ ಕೆ ಜೂಮ್, ಫೋಟೋಗ್ರಾಫಿಗೆ ಹೆಚ್ಚು ಒತ್ತು ಕೊಟ್ಟಿರುವಂತಹ ಫೋನ್ ಆಗಿದೆ. ಅದೇ ರೀತಿ ಗ್ಯಾಲಕ್ಸಿ S5 ಬ್ರಾಡ್‌ಬ್ಯಾಂಡ್ LTE ಹೆಚ್ಚುವರಿ ಅಂತರ್ಜಾಲಕ್ಕೆ ಪ್ರವೇಶವನ್ನು ಒದಗಿಸುತ್ತದೆ.

ಇಂದು ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಗ್ಯಾಲಕ್ಸಿ S5 ನ 7 ರೂಪಾಂತರಗಳನ್ನು ನಾವಿಲ್ಲಿ ನೀಡುತ್ತಿದ್ದು ಇದರತ್ತ ನೋಟ ಹರಿಸಿ.

#1

#1

ಇದು ಓಕ್ಟಾ ಕೋರ್ ಪ್ರೊಸೆಸರ್ ಅನ್ನು ಹೊಂದಿದೆ. 5.1 ಇಂಚಿನ Super AMOLED ಡಿಸ್‌ಪ್ಲೇ ಪೂರ್ಣ ಎಚ್‌ಡಿ ರೆಸಲ್ಯೂಶನ್ ಇದರಲ್ಲಿದೆ. ಆಂಡ್ರಾಯ್ಡ್ ಕಿಟ್‌ಕ್ಯಾಟ್ 4.4.2 OS ಫೋನ್‌ನಲ್ಲಿದೆ ಇದು 16GB ಸಂಗ್ರಹಣಾ ಸಾಮರ್ಥ್ಯವನ್ನು ನೀಡುತ್ತಿದ್ದು ಇದನ್ನು ವಿಸ್ತರಿಸಬಹುದಾಗಿದೆ ಫೋನ್ ಬೆಲೆ ರೂ: 35,000 ಆಗಿದೆ.

#2

#2

ಗ್ಯಾಲಕ್ಸಿ S5 ನ 3G ರೂಪಾಂತರವು ರೂ 35,000 ದಲ್ಲಿ ಲಭ್ಯವಾಗುತ್ತಿದೆ. ಇದರ RAM ಸಾಮರ್ಥ್ಯ 2 ಜಿಬಿಯಾಗಿದೆ. 16GB ಸಂಗ್ರಹಣಾ ಸಾಮರ್ಥ್ಯವನ್ನು ಫೋನ್ ಹೊಂದಿದ್ದು 2MP ಫ್ರಂಟ್ ಶೂಟರ್ ಡಿವೈಸ್‌ನಲ್ಲಿದೆ.

#3

#3

ಇದು 5.1 QHD ಡಿಸ್‌ಪ್ಲೇಯೊಂದಿಗೆ ಬಂದಿದ್ದು ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 805 SOC ಇದರಲ್ಲಿದೆ. 3GB RAM ಫೋನ್‌ನಲ್ಲಿದ್ದು 32GB ಇದರ ಸಂಗ್ರಹಣಾ ಸಾಮರ್ಥ್ಯವಾಗಿದೆ. ಇದನ್ನು 128GB ಗೆ ವಿಸ್ತರಿಸಬಹುದಾಗಿದೆ. ಫೋನ್ 16MP ರಿಯರ್ ಕ್ಯಾಮೆರಾವನ್ನು ಹೊಂದಿದ್ದು 2.1MP ಫ್ರಂಟ್ ಕ್ಯಾಮೆರಾ ಫೋನ್‌ನಲ್ಲಿದೆ. ಆಂಡ್ರಾಯ್ಡ್ ಕಿಟ್‌ಕ್ಯಾಟ್ 4.4.2 ಡಿವೈಸ್‌ನಲ್ಲಿದೆ.

#4

#4

ಜೂನ್‌ನಲ್ಲಿ ಮೂಲತಃ ಘೋಷಣೆಯಾಗಿರುವ ಈ ಫೋನ್, ಗ್ಯಾಲಕ್ಸಿ S5 ಮಿನಿ ವೆರಿಯೇಂಟ್ ಎಂದೇ ಪ್ರಸಿದ್ಧವಾಗಿದೆ. ಇದು 4.5 ಇಂಚಿನ Super AMOLED ಡಿಸ್‌ಪ್ಲೇಯೊಂದಿಗೆ ಬಂದಿದ್ದು, ಸ್ನ್ಯಾಪ್‌ಡ್ರಾಗನ್ 400 CPU, 1.5GB RAM, 8 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ, 16 ಜಿಬಿ ಆಂತರಿಕ ಸಂಗ್ರಹಣೆ, 2,100 mAh ಬ್ಯಾಟರಿಯನ್ನು ಡಿವೈಸ್ ಒಳಗೊಂಡಿದೆ. ಇದು ಆಂಡ್ರಾಯ್ಡ್ 4.4.2 ಕಿಟ್‌ಕ್ಯಾಟ್ ಅನ್ನು ಚಾಲನೆ ಮಾಡುತ್ತಿದೆ.

#5

#5

ಅತ್ಯುನ್ನತ ಕ್ಯಾಮೆರಾವನ್ನು ಹೊಂದಿರುವ ಈ ಫೋನ್ 20.7 ರಿಯರ್ ಕ್ಯಾಮೆರಾವನ್ನು ಹೊಂದಿದೆ ಮತ್ತು ಇದರ ಬೆಲೆ ರೂ 29,990 ಆಗಿದೆ. ಇದು 4.8 ಇಂಚಿನ HD Super AMOLED ಡಿಸ್‌ಪ್ಲೇಯನ್ನು ಹೊಂದಿದ್ದು ಹೆಕ್ಸಾ ಕೋರ್ ಪ್ರೊಸೆಸರ್ ಇದರಲ್ಲಿದೆ. ಆಂಡ್ರಾಯ್ಡ್ ಕಿಟ್‌ಕ್ಯಾಟ್ 4.4 ಫೋನ್‌ನಲ್ಲಿದೆ. ಆಂತರಿಕ ಸಂಗ್ರಹಣಾ ಸಾಮರ್ಥ್ಯ 8 ಜಿಬಿಯಾಗಿದ್ದು ಇದನ್ನು 64 ಜಿಬಿವರೆಗೆ ವಿಸ್ತರಿಸಬಹುದಾಗಿದೆ.

#6

#6

ಇದು ನೀರು ಮತ್ತು ಧೂಳಿನಿಂದ ಫೋನ್ ಅನ್ನು ರಕ್ಷಿಸುವ ಗುಣವನ್ನು ಹೊಂದಿದೆ. ಇದರಲ್ಲಿ ಹಾರ್ಟ್ ರೇಟ್ ಮಾನಿಟರ್ ಅಂಶವಿದ್ದು 5.1 ಇಂಚಿನ ಸೂಪರ್ AMOLED FHD ಡಿಸ್‌ಪ್ಲೇಯೊಂದಿಗೆ ಡಿವೈಸ್ ಬಂದಿದ್ದು, 2.5GHz ಕ್ವಾಡ್‌ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 801 ಪ್ರೊಸೆಸರ್, 2GB RAM, 16 ಜಿಬಿ ಆಂತರಿಕ ಸಂಗ್ರಹಣಾ ಸಾಮರ್ಥ್ಯ ಡಿವೈಸ್‌ನಲ್ಲಿದೆ. ಕ್ಯಾಮೆರಾದಲ್ಲಿ 16 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ ಇದ್ದು ಆಂಡ್ರಾಯ್ಡ್ ಕಿಟ್‌ಕ್ಯಾಟ್ 4.4 ಓಎಸ್ ಮೊಬೈಲ್‌ನಲ್ಲಿ ಚಾಲನೆಯಾಗುತ್ತಿದೆ.

#7

#7

ಫೋನ್ 5.1 ಇಂಚಿನ Super AMOLED FHD ಡಿಸ್‌ಪ್ಲೇಯನ್ನು ಹೊಂದಿದ್ದು, 2.5GHz ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ ಡಿವೈಸ್‌ನಲ್ಲಿದೆ. 2GB RAM ಫೋನ್‌ನಲ್ಲಿದ್ದು, 16GB ಸಂಗ್ರಹಣಾ ಸಾಮರ್ಥ್ಯವನ್ನು ಡಿವೈಸ್ ಹೊಂದಿದೆ ಇದನ್ನು 16 ಮೆಗಾಪಿಕ್ಸೆಲ್ ಕ್ಯಾಮೆರಾ ಫೋನ್‌ನ ಹಿಂಭಾಗದಲ್ಲಿದ್ದು ಇತ್ತೀಚಿನ 4.4 ಕಿಟ್‌ಕ್ಯಾಟ್ ಮೊಬೈಲ್ ಓಎಸ್ ಇದರಲ್ಲಿದೆ.

Best Mobiles in India

English summary
This article tells about Samsung Galaxy S5 Top 7 Variants of Flagship Smartphone Launched.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X