8ಜಿಬಿ ಎಲ್.ಪಿ.ಡಿ.ಡಿ.ಆರ್4 ಡಿರ್ಯಾಮ್ ಹೊಂದಲಿರುವ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್8.

Written By:

ಬ್ಯಾಟರಿಯ ಸಮಸ್ಯೆಯಿಂದಾಗಿ ಗ್ಯಾಲಕ್ಸಿ ನೋಟ್ 7ನ ಉತ್ಪಾದನೆ ನಿಂತು ಹೋದ ನಂತರ ಸ್ಯಾಮ್ಸಂಗ್ ಕಷ್ಟದ ಸಮಯವನ್ನೆದುರಿಸುತ್ತಿದೆ. ಹಾಗಿದ್ದರೂ ಇದು ಕಂಪನಿ ಹೊಸ ಉತ್ಪನ್ನಗಳನ್ನು ತಯಾರಿಸುವುದಕ್ಕೆ ಅಡ್ಡಿಯುಂಟುಮಾಡಿಲ್ಲ.

8ಜಿಬಿ ಎಲ್.ಪಿ.ಡಿ.ಡಿ.ಆರ್4 ಡಿರ್ಯಾಮ್ ಹೊಂದಲಿರುವ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್8.

ಕಂಪನಿಯು ಹೊಸ ಹೈಬ್ರಿಡ್ ನೋಟ್ ಬುಕ್ ಕ್ರೋಮ್ ಬುಕ್ ಪ್ರೋ ಅನ್ನು ಬಿಡುಗಡೆಗೊಳಿಸುತ್ತಿರುವುದರ ಬಗ್ಗೆ ನಿಮಗೆ ತಿಳಿಸಿದ್ದೆವು. ಹೈಬ್ರಿಡ್ ನೋಟ್ ಬುಕ್ ಕ್ರೋಮ್ ಬುಕ್ ಪ್ರೋ ಆ್ಯಪಲ್ ಮ್ಯಾಕ್ ಬುಕ್, ಹೆಚ್.ಪಿ ಎಲೈಟ್ ಮತ್ತು ಇತರೆ ಪ್ರೀಮಿಯಂ ನೋಟ್ ಬುಕ್ ಜೊತೆ ಸ್ಪರ್ಧೆಗಿಳಿಯಲಿದೆ.

ಓದಿರಿ: ಜಿಯೋ ಸಿಮ್ ಕುರಿತಾದ ಮತ್ತಷ್ಟು ರಹಸ್ಯಗಳು

ಈಗ ಕಂಪನಿಯು ಪ್ರಪ್ರಥಮ ಬಾರಿಗೆ 8ಜಿಬಿ ಎಲ್.ಪಿ.ಡಿ.ಡಿ.ಆರ್4 (ಲೋ ಪವರ್, ಡಬಲ್ ಡಾಟಾ ರೇಟ್ 4) ಮೊಬೈಲ್ ಡಿರ್ಯಾಮ್ ಅನ್ನು ಪರಿಚಯಿಸುತ್ತಿದೆ. ಇದು ಮೊಬೈಲ್ ಬಳಕೆದಾರರ ಅನುಭವವನ್ನು ಮತ್ತಷ್ಟು ಉತ್ತಮಗೊಳಿಸುತ್ತದೆ, ವಿಶೇಷವಾಗಿ ಅಲ್ಟ್ರಾ ಹೆಚ್.ಡಿ ದೊಡ್ಡ ಪರದೆಯ ಸಾಧನಗಳನ್ನು ಉಪಯೋಗಿಸುವವರ ಅನುಭವವನ್ನು ಉತ್ತಮಗೊಳಿಸುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಗ್ಯಾಲಕ್ಸಿ ಎಸ್8 ನಲ್ಲಿ 8ಜಿಬಿ ರ್ಯಾಮ್.

ಗ್ಯಾಲಕ್ಸಿ ಎಸ್8 ನಲ್ಲಿ 8ಜಿಬಿ ರ್ಯಾಮ್.

ಹೊಸ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್8ನಲ್ಲಿ ಈ ಹೊಸ ರ್ಯಾಮ್ ಇರಲಿದೆ. ಇದು ನಾವು ನೋಡಲಿರುವ ಮೊದಲ 8ಜಿಬಿ ಫೋನ್ ಆಗಲಿದೆ.

ಎರಡು ಆವೃತ್ತಿಯಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್8.

ಎರಡು ಆವೃತ್ತಿಯಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್8.

ಸ್ಯಾಮ್ಸಂಗ್ ತನ್ನ ಗ್ಯಾಲಕ್ಸಿ ಎಸ್8 ಫೋನನ್ನು ಎರಡು ಆವೃತ್ತಿಗಳಲ್ಲಿ ಬಿಡುಗಡೆಗೊಳಿಸುತ್ತದೆ ಎಂದು ನಮ್ಮ ನಂಬಿಕೆ. ಒಂದು 4 ಅಥವಾ 6ಜಿಬಿಯ ಫೋನ್ ಆಗಿದ್ದರೆ ಮತ್ತೊಂದರಲ್ಲಿ ಹೊಸದಾದ 8ಜಿಬಿ ರ್ಯಾಮ್ ಇರಲಿದೆ.

ಹೊಸ ರ್ಯಾಮ್ ನಿಂದಾಗಿ ಹೊಸ ತಲೆಮಾರಿನ ಮೊಬೈಲ್ ಸಾಧನದ ಸಂಪೂರ್ಣ ಉಪಯೋಗ ಪಡೆದುಕೊಳ್ಳಬಹುದು.8ಜಿಬಿ ಎಲ್.ಪಿ.ಡಿ.ಡಿ.ಆರ್4 ಡಿರ್ಯಾಮ್ ಇರುವ ಫೋನಿನಲ್ಲಿ 4ಕೆ ಯು.ಹೆಚ್.ಡಿ ವೀಡಿಯೋಗಳನ್ನು ವೀಕ್ಷಿಸುವುದು ಸರಾಗವಾಗಲಿದೆ. ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್8 ಫೋನಿನಲ್ಲಿ 2160x3840 ಪಿಕ್ಸೆಲ್ಸ್ 4ಕೆ ಪರದೆ ಇರುವ ನಿರೀಕ್ಷೆಗಳಿವೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

8ಜಿಬಿ ರ್ಯಾಮ್ ನ ವಿಶೇಷತೆಗಳೇನು?

8ಜಿಬಿ ರ್ಯಾಮ್ ನ ವಿಶೇಷತೆಗಳೇನು?

ಹೊಸ 8ಜಿಬಿ ಮೊಬೈಲ್ ರ್ಯಾಮ್ ಹೊಸ 16ಜಿಬಿ ಎಲ್.ಪಿ.ಡಿ.ಡಿ.ಆರ್4 ಮೆಮೊರಿ ಚಿಪ್ ಗಳಲ್ಲಿ ನಾಲ್ಕನ್ನು ಮತ್ತು ಸುಧಾರಿತ 10 ನ್ಯಾನೋಮೀಟರ್ ಕ್ಲಾಸ್ ಪ್ರೊಸೆಸ್ ತಂತ್ರಜ್ಞಾನವನ್ನು ಉಪಯೋಗಿಸಿಕೊಳ್ಳಲಿದೆ. ಹೊಸ 8ಜಿಬಿ ಎಲ್.ಪಿ.ಡಿ.ಡಿ.ಆರ್4 4.266ಎಂಬಿಪಿಎಸ್ ವೇಗದಲ್ಲಿ ಕಾರ್ಯನಿರ್ವಹಿಸಲಿದೆ, ಇದು ಡಿಡಿಆರ್4 ಡಿರ್ಯಾಮ್ ಬಳಸುವ ಕಂಪ್ಯೂಟರುಗಳಿಗಿಂತ ವೇಗವಾಗಿದೆ (2.133ಎಂಬಿಪಿಎಸ್). 10ಎನ್.ಎಂ ಪ್ರೊಸೆಸ್ ಬಳಸುವುದರಿಂದ ಹಳೆಯ 20ಎನ್.ಎಂ 4ಜಿಬಿ ಡಿರ್ಯಾಮ್ ಗಿಂತ ಎರಡು ಪಟ್ಟು ಶಕ್ತಿಯುತವಾಗಲಿದೆ.

ಸ್ಯಾಮ್ಸಂಗ್ ಏನು ಹೇಳುತ್ತದೆ?

ಸ್ಯಾಮ್ಸಂಗ್ ಏನು ಹೇಳುತ್ತದೆ?

ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್ ನ ಮೊಮೊರಿ ಸೇಲ್ಸ್ ಮತ್ತು ಮಾರ್ಕೆಟಿಂಗ್ ವಿಭಾಗದ ಉಪಾಧ್ಯಕ್ಷ ಜೂ ಸುನ್ ಚುಯಿ ಪ್ರಕಾರ "8ಜಿಬಿ ರ್ಯಾಮ್ ಹೊಸ ತಲೆಮಾರಿನ ಶಕ್ತಿಯುತ ಮೊಬೈಲ್ ಸಾಧನಗಳು ಪ್ರಪಂಚದಾದ್ಯಂತ ಹೊರಹೊಮ್ಮಲು ಕಾರಣವಾಗುತ್ತದೆ".

ಡುಯಲ್ ಕ್ಯಾಮೆರಾ, 4ಕೆ ಯು.ಹೆಚ್.ಡಿ ಮತ್ತು ವಿ.ಆರ್ ಫೀಚರ್ರುಗಳಿರುವ ಫೋನುಗಳ ಅವಶ್ಯಕತೆಗಳನ್ನು ಪೂರೈಸಲು ಕಂಪನಿಯು ನಿರಂತರವಾಗಿ ಹೊಸ ಪರಿಹಾರಗಳನ್ನು ನೀಡಲಿದೆ ಎಂದು ಅವರು ತಿಳಿಸಿದ್ದಾರೆ.

ಉತ್ತಮ ಪವರ್ ದಕ್ಷತೆ ಹೊಂದಲಿರುವ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್8.

ಉತ್ತಮ ಪವರ್ ದಕ್ಷತೆ ಹೊಂದಲಿರುವ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್8.

ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್8ರಲ್ಲಿ 8ಜಿಬಿ ರ್ಯಾಮ್ ಬಂದರೆ ಅದರಲ್ಲಿ ಪವರ್ ದಕ್ಷತೆಯೂ ಉತ್ತಮಗೊಳ್ಳಲಿದೆ. ಹೊಸ ರ್ಯಾಮ್ ನಲ್ಲಿರುವ 10ಎನ್.ಎಂ ಕ್ಲಾಸ್ ಪ್ರೊಸೆಸ್ ತಂತ್ರಜ್ಞಾನ ಮತ್ತು ಸ್ಯಾಮ್ಸಂಗ್ ನ ಲೋ ಪವರ್ ಸರ್ಕ್ಯೂಟ್ ವಿನ್ಯಾಸ ಇದನ್ನು ಸಾಧ್ಯವಾಗಿಸಲಿದೆ.

ಈ ಸರ್ಕ್ಯೂಟ್ ವಿನ್ಯಾಸವು 20ಎನ್.ಎಂ ಕ್ಲಾಸ್ 4ಜಿಬಿ ಡಿರ್ಯಾಮ್ ಗೆ ಹೋಲಿಸಿದರೆ ಮೊಮೊರಿ ಚಿಪ್ ನ ಸಾಮರ್ಥ್ಯವನ್ನು ದ್ವಿಗುಣಗೊಳಿಸುತ್ತದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Samsung Galaxy S8 might be the first smartphone from the company to utilize the latest 8GB LPDDR4 DRAM Package.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot