ಭಾರತದಲ್ಲಿ 'ಗ್ಯಾಲಾಕ್ಸಿ ಎಸ್ 9 'ಸರಣಿ ಸ್ಮಾರ್ಟ್‌ಫೋನ್‌ಗಳ ಬಿಡುಗಡೆ ದಿನಾಂಕ ಫಿಕ್ಸ್!!

ಆಪಲ್ ಐಫೋನ್ 10ಗೆ ಸೆಡ್ಡುಹೊಡೆಯಲು ಮಾರುಕಟ್ಟೆಗೆ ಎಂಟ್ರಿ ನೀಡಿರುವ ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಸ್ 9 ಸರಣಿ ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ ಬಿಡುಗಡೆಯಾಗುವ ದಿನಾಂಕ ಪ್ರಕಟವಾಗಿದೆ.!

|

ಆಪಲ್ ಐಫೋನ್ 10ಗೆ ಸೆಡ್ಡುಹೊಡೆಯಲು ಮಾರುಕಟ್ಟೆಗೆ ಎಂಟ್ರಿ ನೀಡಿರುವ ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಸ್ 9 ಸರಣಿ ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ ಬಿಡುಗಡೆಯಾಗುವ ದಿನಾಂಕ ಪ್ರಕಟವಾಗಿದೆ.! ವಿಶ್ವ ಮಾರುಕಟ್ಟೆಯಲ್ಲಿ ಈಗಾಗಲೇ ಬಿಡುಗಡೆಯಾಗಿರುವ ಗ್ಯಾಲಾಕ್ಸಿ ಎಸ್ 9 ಸರಣಿ ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ ಬಹುಬೇಗ ಬಿಡುಗಡೆಯಾಗುತ್ತಿವೆ.!!

ವಿಶ್ವ ಮಾರುಕಟ್ಟೆಯಲ್ಲಿ ಗ್ಯಾಲಾಕ್ಸಿ ಎಸ್ 9 ಮತ್ತು ಗ್ಯಾಲಾಕ್ಸಿ ಎಸ್‌ 9 ಪ್ಲಸ್ ಎರಡೂ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾದ ತಕ್ಷಣವೇ ಭಾರತದಲ್ಲಿಯೂ ಸಹ ಪ್ರಿ ಬುಕ್ಕಿಂಗ್ ಆರಂಭಿಸಿದ್ದ ಸ್ಯಾಮ್‌ಸಂಗ್ ಕಂಪೆನಿ, ಇದೇ ಮಾರ್ಚ್ 6 ನೇ ತಾರೀಖು ಭಾರತದಲ್ಲಿ ಗ್ಯಾಲಾಕ್ಸಿ ಎಸ್ 9 ಸರಣಿ ಸ್ಮಾರ್ಟ್‌ಫೋನ್‌ಗಳ ಬಿಡುಗಡೆ ಮಾಡುವುದಾಗಿ ತಿಳಿಸಿದೆ.!!

ಭಾರತದಲ್ಲಿ 'ಗ್ಯಾಲಾಕ್ಸಿ ಎಸ್ 9 'ಸರಣಿ ಸ್ಮಾರ್ಟ್‌ಫೋನ್‌ಗಳ ಬಿಡುಗಡೆ ದಿನಾಂಕ ಫಿಕ್

ಹಾಗಾಗಿ, ಅತ್ಯುದ್ಬುತ ಫೀಚರ್‌ಗಳಿಂದ ಈಗಾಗಲೇ ಸ್ಮಾರ್ಟ್‌ಫೋನ್ ಪ್ರಿಯರ ಮನಗೆದ್ದಿರುವ ಗ್ಯಾಲಾಕ್ಸಿ ಎಸ್ 9 ಮತ್ತು ಗ್ಯಾಲಾಕ್ಸಿ ಎಸ್‌ 9 ಪ್ಲಸ್ ಸ್ಮಾರ್ಟ್‌ಫೋನುಗಳನ್ನು ಖರೀದಿಸಲು ತಡವಾಗುವುದಿಲ್ಲ ಎಂದು ಹೇಳಬಹುದಾಗಿದ್ದು, ಹಾಗಾದರೆ, ಗ್ಯಾಲಾಕ್ಸಿ ಎಸ್ 9 ಮತ್ತು ಗ್ಯಾಲಾಕ್ಸಿ ಎಸ್‌ 9 ಪ್ಲಸ್ ಸ್ಮಾರ್ಟ್‌ಫೋನ್‌ಗಳ ಫೀಚರ್ಸ್ ಏನು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಡಿಸ್‌ಪ್ಲೇ ಮತ್ತು ವಿನ್ಯಾಸ!!

ಡಿಸ್‌ಪ್ಲೇ ಮತ್ತು ವಿನ್ಯಾಸ!!

ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಸ್ 9 ಸ್ಮಾರ್ಟ್‌ಪೋನ್ 5.8 ಇಂಚ್ ಕ್ವಾಡ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಹೊಂದಿದ್ದರೆ, ಗ್ಯಾಲಾಕ್ಸಿ ಎಸ್‌ 9 ಪ್ಲಸ್ 6.2 ಇಂಚ್ ಕ್ವಾಡ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಒಳಗೊಂಡಿದೆ. 18.5:9 ಅನುಪಾತದಲ್ಲಿ ಅತ್ಯುತ್ತಮ ವಿನ್ಯಾಸಹೊಂದಿರುಸ್ಮಾರ್ಟ್‌ಫೋನ್‌ ಹಿಂಬಾಗದಲ್ಲಿ ಎರಡು ರಿಯರ್ ಕ್ಯಾಮೆರಾ ಹಾಗೂ ಫಿಂಗರ್‌ಪ್ರಿಂಟ್ ಆಯ್ಕೆ ಹೊಂದಿದೆ.!!

ಪ್ರೊಸೆಸರ್ ಮತ್ತು ಒಎಸ್!!

ಪ್ರೊಸೆಸರ್ ಮತ್ತು ಒಎಸ್!!

ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಸ್‌ 9 ಮತ್ತು ಗ್ಯಾಲಾಕ್ಸಿ ಎಸ್‌ 9 ಪ್ಲಸ್ ಎರಡೂ ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ ಸ್ಯಾಮ್ಸಂಗ್ ಎಕ್ಸಿನೋಸ್ 9810 SoC ಪ್ರೊಸೆಸರ್ ಅನ್ನು ಹೊಂದಿವೆ (ಕೆಲವು ಮಾರುಕಟ್ಟೆಗಳಲ್ಲಿ ಸ್ನ್ಯಾಪ್‌ಡ್ರಾಗನ್ 845soc ಪ್ರೊಸೆಸರ್). ಇನ್ನು ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ ಓರಿಯೋ ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಣೆ ನೀಡಲಿದೆ.!!

RAM ಮತ್ತು ಮೆಮೊರಿ!!

RAM ಮತ್ತು ಮೆಮೊರಿ!!

ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಸ್‌ 9 ಸ್ಮಾರ್ಟ್‌ಫೋನ್ 4GB RAM ಮತ್ತು 64 GB/256 GB ವೆರಿಯಂಟ್‌ಗಳಲ್ಲಿ ಬಿಡುಗಡೆಯಾಗಿದ್ದರೆ, ಗ್ಯಾಲಾಕ್ಸಿ ಎಸ್‌ 9 ಪ್ಲಸ್ 6GB RAM ಮತ್ತು 64 GB/256 GB ವೆರಿಯಂಟ್‌ಗಳಲ್ಲಿ ಬಿಡುಗಡೆಯಾಗಿದೆ. ಎಸ್‌ಡಿ ಕಾರ್ಡ್ ಮೂಲಕ ಎರಡೂ ಸ್ಮಾರ್ಟ್‌ಫೋನ್‌ಗಳ ಮೆಮೊರಿಯನ್ನು 400GB ವರೆಗೂ ವಿಸ್ತರಿಸಬಹುದಾದ ಆಯ್ಕೆಯನ್ನು ನೀಡಲಾಗಿದೆ.!!

ಡ್ಯುಯಲ್ ಕ್ಯಾಮೆರಾ !!

ಡ್ಯುಯಲ್ ಕ್ಯಾಮೆರಾ !!

ಕ್ಯಾಮೆರಾ ವಿಷಯದಲ್ಲಿ ಗ್ಯಾಲಾಕ್ಸಿ ಎಸ್‌ 9 ಮತ್ತು ಗ್ಯಾಲಾಕ್ಸಿ ಎಸ್‌ 9 ಪ್ಲಸ್ ಎರಡೂ ಸ್ಮಾರ್ಟ್‌ಫೋನ್‌ಗಳು ಒಂದೇ ಫೀಚರ್ಸ್ ಹೊಂದಿವೆ.! ಸೂಪರ್ ಸ್ಪೀಡ್ ಡ್ಯುಯಲ್ ಪಿಕ್ಸೆಲ್‌ನ 12 (F1.5/F2.4) ಮೆಗಾಪಿಕ್ಸಲ್ ಇರುವ ಎರಡು ರಿಯರ್ ಕ್ಯಾಮೆರಾಗಳನ್ನು ಎರಡೂ ಸ್ಮಾರ್ಟ್‌ಫೋನುಗಳಲ್ಲಿ ನೀಡಲಾಗಿದ್ದು, 8MP AF (F1.7) ಸೆಲ್ಫಿ ಕ್ಯಾಮೆರಾವನ್ನು ಸ್ಮಾರ್ಟ್‌ಫೋನ್‌ಗಳಲ್ಲಿ ಕಾಣಬಹುದಾಗಿದೆ.!!

ಸೆಕ್ಯುರಿಟಿ ಮತ್ತು ಸೆನ್ಸಾರ್‌ಗಳು!!

ಸೆಕ್ಯುರಿಟಿ ಮತ್ತು ಸೆನ್ಸಾರ್‌ಗಳು!!

ಐರಿಸ್ ಸ್ಕ್ಯಾನರ್, ಫಿಂಗರ್ಪ್ರಿಂಟ್ ಸ್ಕ್ಯಾನರ್, ಫೇಸ್ ಡಿಟೆಕ್ಷನ್ ಸೆಕ್ಯುರಿಟಿ ಆಯ್ಕೆಗಳನ್ನು ಎರಡೂ ಸ್ಮಾರ್ಟ್‌ಫೋನ್‌ಗಳಲ್ಲಿ ತರಲಾಗಿದೆ. ಅಕ್ಸೆಲೆರೊಮೀಟರ್, ಗೈರೋ ಸೆನ್ಸಾರ್, ಕಂಪಾಸ್ ಹಾಲ್ ಸೆನ್ಸಾರ್, ಪ್ರಾಕ್ಸಿಮಿಟಿ ಸೆನ್ಸಾರ್, RGB ಲೈಟ್ ಸೆನ್ಸಾರ್ ಮತ್ತು ಪ್ರೆಶರ್ ಸೆನ್ಸಾರ್‌ಗಳನ್ನು ಸ್ಮಾರ್ಟ್‌ಪೋನ್‌ಗಳು ಒಳಗೊಂಡಿವೆ.!!

How To Link Aadhaar With EPF Account Without Login (KANNADA)
ಬ್ಯಾಟರಿ ಶಕ್ತಿ ಮತ್ತು ಕನೆಕ್ಟಿವಿಟಿ!!

ಬ್ಯಾಟರಿ ಶಕ್ತಿ ಮತ್ತು ಕನೆಕ್ಟಿವಿಟಿ!!

ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಸ್‌ 9 ಸ್ಮಾರ್ಟ್‌ಪೋನಿನಲ್ಲಿ 3,000 mAh ಬ್ಯಾಟರಿಯನ್ನು ನೀಡಲಾಗಿದೆ. ಅದೇ ಗ್ಯಾಲಾಕ್ಸಿ ಎಸ್‌ 9 ಪ್ಲಸ್ ಸ್ಮಾರ್ಟ್‌ಫೋನಿನಲ್ಲಿ 3,500 mAh ಬ್ಯಾಟರಿಯನ್ನು ನೀಡಲಾಗಿದೆ. ಬ್ಲೂಟೂತ್ ® ವಿ 5.0 (2 Mbps ವರೆಗೆ), ANT +, ಯುಎಸ್ಬಿ ಟೈಪ್ ಸಿ ಕನೆಕ್ಟಿವಿಟಿಯನ್ನು ಸ್ಮಾರ್ಟ್ಪೋನ್ ಹೊಂದಿದೆ.!!

ಸ್ಮಾರ್ಟ್‌ಫೋನುಗಳ ಬೆಲೆ ಎಷ್ಟು?

ಸ್ಮಾರ್ಟ್‌ಫೋನುಗಳ ಬೆಲೆ ಎಷ್ಟು?

ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಸ್‌9 ಬೆಲೆ $719.99 (46,600 ರೂ.) ಡಾಲರ್‌ಗಳಿಂದ ಶುರುವಾಗಿದ್ದರೆ, ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಸ್‌9 ಪ್ಲಸ್ ಸ್ಮಾರ್ಟ್‌ಫೋನ್ ಬೆಲೆ $839.99 (54,400 ರೂ.) ಡಾಲರ್‌ಗಳಿಂದ ಶುರುವಾಗಿದೆ.

ಪಿಎಫ್ ಖಾತೆಗೆ 'ಆಧಾರ್' ಜೋಡಣೆಗೆ ಚಾಲನೆ!!..ಈ ಒಂದೇ ಆಪ್‌ನಲ್ಲಿ ಮಾತ್ರ ಸೇವೆ!!ಪಿಎಫ್ ಖಾತೆಗೆ 'ಆಧಾರ್' ಜೋಡಣೆಗೆ ಚಾಲನೆ!!..ಈ ಒಂದೇ ಆಪ್‌ನಲ್ಲಿ ಮಾತ್ರ ಸೇವೆ!!

Best Mobiles in India

English summary
Samsung Galaxy S9, Galaxy S9+ were launched globally on Sunday.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X