ಸ್ಯಾಮ್‌ಸಂಗ್‌ ''ಗ್ಯಾಲಾಕ್ಸಿ ಎಸ್ 9'' ಮಾಹಿತಿಗಳೆಲ್ಲವೂ ಲೀಕ್!..ಬೆಚ್ಚಿಬಿತ್ತು ಮೊಬೈಲ್ ಮಾರುಕಟ್ಟೆ!!

5.8 ಇಂಚಿನ ಸೂಪರ್ AMOLED ಡಿಸ್‌ಪ್ಲೇ, 12MP ಸೂಪರ್ ಸ್ಪೀಡ್ ಡ್ಯುಯಲ್ ಪಿಕ್ಸೆಲ್ ಕ್ಯಾಮರಾದಂತಹ ಫೀಚರ್‌ಗಳನ್ನು ಸ್ಯಾಮ್ಸಂಗ್ ಗ್ಯಾಲಾಕ್ಸಿ ಎಸ್ 9 ಸ್ಮಾರ್ಟ್‌ಫೋನ್ ಒಳಗೊಂಡಿದೆ.

|

ಇನ್ನೆರಡು ದಿನಗಳಲ್ಲಿ ಆಯೋಜನೆಯಾಗಿರುವ 2018ನೇ ಮೊಬೈಲ್ ಕಾಂಗ್ರೆಸ್‌ನಲ್ಲಿ ಗ್ಯಾಲಾಕ್ಸಿ ಎಸ್ 9 ಬಿಡುಗಡೆಯಾಗಲಿದೆ ಎಂದು ಸ್ಯಾಮ್ಸಂಗ್ ಮೊಬೈಲ್ ಅಧ್ಯಕ್ಷ DJ ಕೊಹ್ ಹೇಳಿದ ಕೆಲವೇ ಕ್ಷಣಗಳಲ್ಲಿ ಮೊಬೈಲ್ ಮಾರುಕಟ್ಟೆಯನ್ನು ಕುತೋಹಲದಲ್ಲಿ ಕೆಡವಿರುವ ಸ್ಯಾಮ್‌ಸಂಗ್‌ ಗ್ಯಾಲಾಕ್ಸಿ ಎಸ್ 9 ಮಾಹಿತಿಗಳೆಲ್ಲವೂ ಲೀಕ್ ಆಗಿದೆ.!!

ಹೌದು, ಚೀನಾದ ಪ್ರಮುಖ ಇ-ಕಾಮರ್ಸ್ ನೆಟ್‌ವರ್ಕ್ ಸೈಟ್ ವಿಬೋದಲ್ಲಿ ಗ್ಯಾಲಾಕ್ಸಿ ಎಸ್ 9 ಸ್ಮಾರ್ಟ್‌ಫೋನ್ ಚಿತ್ರಗಳು ಹಾಗೂ ಫೋನ್ ಫೀಚರ್‌ಗಳು ಯಾವುವು ಎಂಬೆಲ್ಲಾ ಮಾಹಿತಿಗಳನ್ನು ಪ್ರಕಟಿಸಿದೆ.! ವಿಬೋ ಪ್ರಕಟಿಸಿರುವ ಸ್ಯಾಮ್‌ಸಂಗ್ ಗ್ಯಾಲಾಕ್ಸಿಯ ಅಧಿಕೃತ ಚಿತ್ರಗಳು ಈಗಾಗಲೇ ಮೋಬೈಲ್ ಮಾರುಕಟ್ಟೆಯಲ್ಲಿ ವೈರೆಲ್ ಆಗಿವೆ.!!

ಸ್ಯಾಮ್‌ಸಂಗ್‌ ''ಗ್ಯಾಲಾಕ್ಸಿ ಎಸ್ 9'' ಮಾಹಿತಿಗಳೆಲ್ಲವೂ ಲೀಕ್!!

5.8 ಇಂಚಿನ ಸೂಪರ್ AMOLED ಡಿಸ್‌ಪ್ಲೇ, 12MP ಸೂಪರ್ ಸ್ಪೀಡ್ ಡ್ಯುಯಲ್ ಪಿಕ್ಸೆಲ್ ಕ್ಯಾಮರಾದಂತಹ ಫೀಚರ್‌ಗಳನ್ನು ಸ್ಯಾಮ್ಸಂಗ್ ಗ್ಯಾಲಾಕ್ಸಿ ಎಸ್ 9 ಸ್ಮಾರ್ಟ್‌ಫೋನ್ ಒಳಗೊಂಡಿದೆ.! ಹಾಗಾದರೆ, ನೂತನ ಗ್ಯಾಲಾಕ್ಸಿ ಎಸ್ 9 ಸ್ಮಾರ್ಟ್‌ಫೋನ್ ಫೀಚರ್ಸ್ ಯಾವುವು? ಸ್ಮಾರ್ಟ್‌ಫೋನ್ ವಿಶೇಷತೆಗಳೆನು ಎಂಬುದನ್ನು ಮುಂದೆ ತಿಳಿಯಿರಿ.!!

 ಡಿಸ್‌ಪ್ಲೇ ಮತ್ತು ವಿನ್ಯಾಸ!!

ಡಿಸ್‌ಪ್ಲೇ ಮತ್ತು ವಿನ್ಯಾಸ!!

18:9 ಅನುಪಾತದಲ್ಲಿ 5.8 ಇಂಚಿನ ಸೂಪರ್ AMOLED ಕ್ವಾಡ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಸ್ಯಾಮ್ಸಂಗ್ ಗ್ಯಾಲಾಕ್ಸಿ ಎಸ್ 9 ಸ್ಮಾರ್ಟ್‌ಫೋನಿನಲ್ಲಿ ನೀಡಲಾಗಿದೆ. ಬಹುತೇಕ ಬೆಜೆಲ್‌ಲೆಸ್ ಡಿಸ್‌ಪ್ಲೇ ಹೊಂದಿರುವ ಫೋನ್ ಹಿಂಬಾಗದಲ್ಲಿ ಫಿಂಗರ್‌ಪ್ರಿಂಟ್ ಫೀಚರ್ ಮತ್ತು ಡ್ಯುಯಲ್ ಕ್ಯಾಮೆರಾದ ವಿನ್ಯಾಸವನ್ನು ಹೊಂದಿದೆ.!!

ಸ್ನ್ಯಾಪ್‌ಡ್ರಾಗನ್ 845 soc ಪ್ರೊಸೆಸರ್!?

ಸ್ನ್ಯಾಪ್‌ಡ್ರಾಗನ್ 845 soc ಪ್ರೊಸೆಸರ್!?

ಸ್ನ್ಯಾಪ್‌ಡ್ರಾಗನ್ 845 ಎಸ್ಒಸಿ ಮತ್ತು ಯುಎಸ್‌ಲ್ಲಿ ಎಕ್ಸಿನೋಸ್ 9810 ಮೂಲಕ ಸ್ಮಾರ್ಟ್‌ಫೋನ್ ಅನ್ನು ನಿರೀಕ್ಷಿಸಲಾಗಿದೆ. ಇನ್ನು ಆಂಡ್ರಾಯ್ಡ್ ಓರೊಯೋ ಒಎಸ್ ಮೂಲಕ ರನ್ ಆಗಲಿರುವ 4GB ಮತ್ತು 6GB RAMನ ಎರಡು ವೆರಿಯಂಟ್‌ಗಳಲ್ಲಿ ಸ್ಮಾರ್ಟ್‌ಪೋನ್ ಬಿಡುಗಡೆಯಾಗಲಿದೆ ಎಂದು ವಿಬೊ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.!

ನಾಲ್ಕು ಕ್ಯಾಮೆರಾ ಹೊಂದಿದೆ.!!

ನಾಲ್ಕು ಕ್ಯಾಮೆರಾ ಹೊಂದಿದೆ.!!

ಸ್ಯಾಮ್ಸಂಗ್ ಗ್ಯಾಲಾಕ್ಸಿ ಎಸ್ 9 ಸ್ಮಾರ್ಟ್‌ಫೋನ್ ನಾಲ್ಕು ಕ್ಯಾಮೆರಾಗಳ ಮೂಲಕ ಮಾರುಕಟ್ಟೆಗೆ ಕಾಲಿಡುತ್ತಿದೆ. 12MP ಸೂಪರ್ ಸ್ಪೀಡ್ ಡ್ಯುಯಲ್ ಕ್ಯಾಮೆರಾ ಹಾಗೂ f / 1.5 ಮತ್ತು f / 2.4 ವೆರಿಯಬಲ್ ಫೋಕಸ್ ಅಪಾರ್ಚರ್‌ಗಳು ಹಿಂಬಾಗದ ಕ್ಯಾಮೆರಾ ಅಲಂಕರಿಸಿವೆ. 8MP ಸೆಲ್ಫಿ ಕ್ಯಾಮೆರಾ ಜತೆಗೆ f / 1.7 ಅಪಾರ್ಚರ್ ಅನ್ನು ನೀಡಲಾಗಿದೆ.!!

ಬ್ಯಾಟರಿ ಶಕ್ತಿ ಎಷ್ಟು?

ಬ್ಯಾಟರಿ ಶಕ್ತಿ ಎಷ್ಟು?

ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಸ್ 9 ಸ್ಮಾರ್ಟ್‌ಫೋನ್ 3000mAh ಬ್ಯಾಟರಿ ಶಕ್ತಿಯನ್ನು ಹೊಂದಿರಲಿದೆ. ಇನ್ನು ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಸ್ 9 ಪ್ಲಸ್ ಸ್ಮಾರ್ಟ್‌ಫೋನ್ 3500mAh ಬ್ಯಾಟರಿಯನ್ನು ಹೊಂದರಲಿದೆ ಎಂದು ಹೇಳಲಾಗಿದೆ. ಎರಡೂ ಫೋನ್‌ಗಳು ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿರಲಿವೆ.!!

ಮೊಬೈಲ್‌ನಲ್ಲಿಯೇ 'PF' ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?
ಇತರೆ ಫೀಚರ್ಸ್ಗಳು ಯಾವುವು?

ಇತರೆ ಫೀಚರ್ಸ್ಗಳು ಯಾವುವು?

ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಸ್ 9 ಸೀರಿಸ್ ಸ್ಮಾರ್ಟ್‌ಫೋನ್‌ಗಳು ಗಾಳಿ ಮತ್ತು ನೀರಿನ ರೆಸಿಸ್ಟೆಂಟ್ ಫೋನ್‌ಗಳಾಗಿವೆ. ಫೋನಿನಲ್ಲಿ ಫೇಸ್‌ಲಾಕ್ ಅನ್ನು ಅಳವಡಿಸಿರುವ ಬಗ್ಗೆ ಮಾಹಿತಿ ಇಲ್ಲವಾದರೂ ಕೂಡ ನಿರೀಕ್ಷಿಸಲಾಗಿದೆ.! ಉಳಿದಂತೆ ಎಲ್ಲಾ ಹೈ ಎಂಡ್ ಫೀಚರ್‌ಗಳನ್ನು ಸ್ಮಾರ್ಟ್‌ಫೋನಿನಲ್ಲಿ ನಾವು ಕಾಣಬಹುದು.!!

ಭಾರತದ 'ಚಂದ್ರಯಾನ-2' ಯೋಜನೆ ವೆಚ್ಚ ಒಂದು ಹಾಲಿವುಡ್ ಸಿನಿಮಾಗಿಂತ ಕಡಿಮೆ!!ಭಾರತದ 'ಚಂದ್ರಯಾನ-2' ಯೋಜನೆ ವೆಚ್ಚ ಒಂದು ಹಾಲಿವುಡ್ ಸಿನಿಮಾಗಿಂತ ಕಡಿಮೆ!!

Best Mobiles in India

English summary
Samsung Galaxy S9 & S9+ Leaked Again: Full Specs, Top Features, Official Images. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X