Subscribe to Gizbot

ಆಪಲ್‌ಗೆ ಶುರುವಾಯ್ತು ಭಯ!!..ಲೀಕ್ ಆಯ್ತು ಗ್ಯಾಲಕ್ಸಿ S9 ಮತ್ತು ಗ್ಯಾಲಕ್ಸಿ S9 ಪ್ಲಸ್ ಫೋನ್‌ಗಳ ಬೆಲೆ!!

Written By:

ಇದೇ ಫೆಬ್ರವರಿ 25 ರಂದು ಬಾರ್ಸಿಲೋನಾದಲ್ಲಿ ಆಯೋಜನೆಯಾಗಿರುವ ವಿಶ್ವ ಮೊಬೈಲ್ ಕಾಂಗ್ರೆಸ್‌ನಲ್ಲಿ ಸ್ಯಾಮ್‌ಸಂಗ್ ಕಂಪೆನಿಯ ಗ್ಯಾಲಕ್ಸಿ S9 ಮತ್ತು ಗ್ಯಾಲಕ್ಸಿ S9 + ಸ್ಮಾರ್ಟ್‌ಫೋನುಗಳು ಬಿಡುಗಡೆಯಾಗುವುದು ಪಕ್ಕಾ ಆಗಿದೆ. ಇದೇ ಸಮಯದಲ್ಲಿ ಸ್ಮಾರ್ಟ್‌ಫೋನ್‌ಗಳ ಬೆಲೆ ಎಷ್ಟು ಎಂಬ ಮಾಹಿತಿ ಕೂಡ ಲೀಕ್ ಆಗಿದೆ.!!

ಹೌದು, ಆಪಲ್ ಐಫೋನ್ X ಬಿಡುಗಡೆಯಾದ ನಂತರ ದಕ್ಷಣಕೋರಿಯಾದ ಟೆಕ್ ದೈತ್ಯ ಸ್ಯಾಮ್‌ಸಂಗ್ ಬಿಡುಗಡೆಯಾಗುತ್ತಿರುವ ಹೈ ಎಂಡ್ ಸ್ಮಾರ್ಟ್‌ಪೋನ್‌ಗಳು ಇವಾಗಿದ್ದು, ಗ್ಯಾಲಕ್ಸಿ S9 ಮತ್ತು ಗ್ಯಾಲಕ್ಸಿ S9 + ಸ್ಮಾರ್ಟ್‌ಫೋನುಗಳು ಹೊಂದಿರಬಹುದಾದ ಬೆಲೆ ಮತ್ತು ಫೀಚರ್ಸ್ ಯಾವುವು ಎಂಬುದು ಮೊಬೈಲ್ ಜಗತ್ತಿಗೆ ಕುತೋಹಲ ಮೂಡಿಸಿದೆ.!!

ಲೀಕ್ ಆಯ್ತು ಗ್ಯಾಲಕ್ಸಿ S9 ಮತ್ತು ಗ್ಯಾಲಕ್ಸಿ S9 ಪ್ಲಸ್ ಫೋನ್‌ಗಳ ಬೆಲೆ!!

ಬಿಡುಗಡೆಗೆ ಇನ್ನು ಎರಡು ದಿವಸಗಳು ಇರುವಂತೆಯೇ ಪ್ರಖ್ಯಾತ ಟಿಪ್‌ಸ್ಟಾರ್ ಇವಾನ್ ಬ್ಲಾಸ್ ಟ್ವಿಟರ್‌ನಲ್ಲಿ ಗ್ಯಾಲಕ್ಸಿ S9 ಮತ್ತು ಗ್ಯಾಲಕ್ಸಿ S9 + ಫೋನುಗಳ ಬೆಲೆಯನ್ನು ಪ್ರಕಟಿಸಿದ್ದಾನೆ. ಹಾಗಾದರೆ, ಗ್ಯಾಲಕ್ಸಿ S9 ಮತ್ತು ಗ್ಯಾಲಕ್ಸಿ S9 + ಫೋನುಗಳ ಬೆಲೆ ಎಷ್ಟು ಮತ್ತು ಫೀಚರ್ಸ್ ಏನು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬೆಜೆಲ್ ಲೆಸ್ ಡಿಸ್‌ಪ್ಲೇ!!

ಬೆಜೆಲ್ ಲೆಸ್ ಡಿಸ್‌ಪ್ಲೇ!!

ಲೀಕ್ ಆಗಿರುವ ಗ್ಯಾಲಕ್ಸಿ S9 ಮತ್ತು ಎಸ್‌9 ಪ್ಲಸ್ ಸ್ಮಾರ್ಟ್‌ಫೋನ್‌ ಚಿತ್ರಗಳಲ್ಲಿ ಕಾಣುವಂತೆ ಗ್ಯಾಲಕ್ಸಿ S9 ಮತ್ತು ಎಸ್‌9 ಪ್ಲಸ್ ಸ್ಮಾರ್ಟ್‌ಫೋನ್‌ಗಳು ಬೆಜೆಲ್ ಲೆಸ್ ಡಿಸ್‌ಪ್ಲೇ ಹೊಂದಿವೆ.! ಹೋಮ್ ಬಟನ್ ಹೊಂದಿರದ ಗ್ಯಾಲಕ್ಸಿ S9 ಸೀರಿಸ್ ಫಿಂಗರ್‌ಪ್ರಿಂಟ್ ಆಯ್ಕೆಯನ್ನು ಸ್ಕ್ರೀನ್ ಓಳಗೆ ನೀಡಿರುವುದು ಚಿತ್ರಗಳಲ್ಲಿ ತಿಳಿದುಬಂದಿದೆ.!!

ಫೇಸ್‌ಲಾಕ್ ಫೀಚರ್.!!

ಫೇಸ್‌ಲಾಕ್ ಫೀಚರ್.!!

ಆಪಲ್ ಐಫೋನ್ 10 ಫೇಸ್‌ಲಾಕ್ ಫೀಚರ್ ತಂದ ನಂತರ ಇದೀಗ ಗ್ಯಾಲಕ್ಸಿ S9 ಮತ್ತು ಎಸ್‌9 ಪ್ಲಸ್ ಸ್ಮಾರ್ಟ್‌ಫೋನ್‌ಗಳಲ್ಲಿ ಫೇಸ್‌ಲಾಕ್ ಆಯ್ಕೆಯನ್ನು ತರಲಾಗಿದೆ. ಲೀಕ್ ಆಗಿರುವ ಚಿತ್ರದಲ್ಲಿ ಫೇಸ್‌ಲಾಕ್ ಫೀಚರ್ ಅಳವಡಿಸಿರುವ ಸ್ಪಷ್ಟ ಮಾಹಿತಿ ಇದೆ ಎಂದು ಟೆಕ್ ತಜ್ಞರು ಹೇಳಿದ್ದಾರೆ.!!

ಬೇರೆ ಬೇರೆ ವೆರಿಯಂಟ್ ಫೋನ್‌ಗಳು!!

ಬೇರೆ ಬೇರೆ ವೆರಿಯಂಟ್ ಫೋನ್‌ಗಳು!!

5.8-ಇಂಚಿನ QHD + ಡಿಸ್‌ಪ್ಲೇ, 4 ಜಿಬಿ RAM ಮತ್ತು 64 ಜಿಬಿ ಆಂತರಿಕ ಸಂಗ್ರಹದೊಂದಿಗೆ ಗ್ಯಾಲಕ್ಸಿ S9 ಮಾರುಕಟ್ಟೆಗೆ ಬರುತ್ತಿದ್ದರೆ, ಗ್ಯಾಲಕ್ಸಿ S9 + 6.2-ಇಂಚಿನ QHD ಡಿಸ್‌ಪ್ಲೇ 6GB RAM ಮತ್ತು 64 ಜಿಬಿ ಆಂತರಿಕ ಮೆಮೊರಿ ವೆರಿಯಂಟ್‌ನಲ್ಲಿ ಬಿಡುಗಡೆಯಾಗುತ್ತಿದೆ ಎನ್ನಲಾಗಿದೆ.!!

ಕ್ಯಾಮೆರಾ ಹೇಗಿದೆ !?

ಕ್ಯಾಮೆರಾ ಹೇಗಿದೆ !?

ಗ್ಯಾಲಕ್ಸಿ S9 ಮತ್ತು S9 + ಸ್ಮಾರ್ಟ್‌ಫೋನ್‌ಗಳೂ ಭವಿಷ್ಯದ ಜೆನ್ ಕ್ಯಾಮೆರಾಗಳನ್ನು ಹೊಂದಿರಲಿವೆ ಎಂದು ಹೇಳಲಾಗಿದೆ. ಸೆಲ್ಫಿಗೆ ಡ್ಯುಯಲ್ ಕ್ಯಾಮೆರಾ ಇರಲಿದೆ ಎನ್ನುವುದು ಈವರೆಗೂ ಸ್ಪಷ್ಟವಾಗಿಲ್ಲವಾದರೂ, ಹಿಂಬದಿ 12MP ಕ್ಯಾಮೆರಾಗಳು ಹಾಗೂ f / 2.4 ರಿಂದ f / 1.5 ಅಪಾರ್ಚರ್‌ಗೆ ವ್ಯತ್ಯಾಸಗೊಳ್ಳುವ ರಂಧ್ರವನ್ನು S9 ಮತ್ತು S9 + ಸ್ಮಾರ್ಟ್‌ಫೋನ್‌ಗಳು ಹೊಂದಿರಲಿವೆ.!!

ಬ್ಯಾಟರಿ ಮಾಹಿತಿಯೂ ಲೀಕ್!!

ಬ್ಯಾಟರಿ ಮಾಹಿತಿಯೂ ಲೀಕ್!!

ಗ್ಯಾಲಕ್ಸಿ ಎಸ್ 8 ಮತ್ತು ಎಸ್ 8 + ಸ್ಮಾರ್ಟ್‌ಫೋನ್‌ಗಳು ಹೊಂದಿದ್ದ ಬ್ಯಾಟರಿ ಶಕ್ತಿಯನ್ನು ಉಳಿಸಿಕೊಳ್ಳಲು ಸ್ಯಾಮ್‌ಸಂಗ್ ನಿರ್ಧರಿಸಿದೆಯಂತೆ.! ಗ್ಯಾಲಕ್ಸಿ S9 3000mAh ಬ್ಯಾಟರಿಯನ್ನು ಹೊಂದಿದ್ದರೆ ಮತ್ತು ಎಸ್‌9 ಪ್ಲಸ್ 3500mAh ಬ್ಯಾಟರಿ ಶಕ್ತಿಯನ್ನು ಹೊಂದಿರಲಿದೆ ಎಂದು ಮಾಧ್ಯಮಗಳು ತಿಳಿಸಿವೆ!!

ಮೊಬೈಲ್‌ನಲ್ಲಿಯೇ 'PF' ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?
ಸ್ಮಾರ್ಟ್‌ಫೋನ್‌ಗಳ ಬೆಲೆ ಎಷ್ಟು?

ಸ್ಮಾರ್ಟ್‌ಫೋನ್‌ಗಳ ಬೆಲೆ ಎಷ್ಟು?

ಪ್ರಖ್ಯಾತ ಟಿಪ್‌ಸ್ಟಾರ್ ಇವಾನ್ ಬ್ಲಾಸ್ ಟ್ವಿಟರ್‌ನಲ್ಲಿ ಬಹಿರಂಗಪಡಿಸಿರುವಂತೆ ಸ್ಯಾಮ್‌ಸಂಗ್ ಗ್ಯಾಲಕ್ಸಿ S9 ಸ್ಮಾರ್ಟ್‌ಫೋನಿನ ಬೆಲೆ 67034 ರೂ.ಗಳಾಗಿರಲಿದೆ. ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ S9 + ಸ್ಮಾರ್ಟ್‌ಫೋನಿನ ಬೆಲೆ 79,579 ರೂಪಾಯಿಗಳಾಗಿದೆ ಎಂದು ತಿಳಿದುಬಂದಿದೆ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Samsung is set to unveil their two flagship devices, the Galaxy S9 and the Galaxy S9+ at the company’s “Unpacked 2018” event on February 25 in Barcelona.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot