Subscribe to Gizbot

ಗ್ಯಾಲಕ್ಸಿ ಎಸ್ 9+ VS ಐಫೋನ್ 10 'ಡ್ರಾಪ್ ಟೆಸ್ಟ್'!!..ಯಾವ ಸ್ಮಾರ್ಟ್‌ಫೋನ್ ಬೆಸ್ಟ್?(ವಿಡಿಯೊ)

Written By:

ನಿಮಗೆ ಫೋನ್ ಬಫ್ ಎಂಬ ಯೂಟ್ಯೂಬ್ ಚಾನಲ್ ಪರಿಚಯ ಇಲ್ಲದೇ ಇರಬಹುದು. ಆದರೆ, ಸ್ಮಾರ್ಟ್‌ಪೋನ್‌ಗಳನ್ನು ವಿವಿಧ ಸಾಹಸಗಳಲ್ಲಿ ಚೆಕ್ ಮಾಡುವ ಹಾಗೂ ಅವುಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಜನರಿಗೆ ನೀಡುವ ಪ್ರಸಿದ್ದ ಯೂಟ್ಯೂಬ್ ಚಾನಲ್ ಅನ್ನು ಗ್ಯಾಜೆಟ್ ಲೋಕದ ಪ್ರಿಯರು ಹೆಚ್ಚು ವೀಕ್ಷಿಸುತ್ತಾರೆ.!!

ಪ್ರಸಿದ್ದ ಯೂಟ್ಯೂಬ್ ಚಾನಲ್ ಫೋನ್ ಬಫ್ ಯಾವಾಗಲೂ ವಿಶೇಷವಾಗಿಯೇ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಮಾಹಿತಿ ನೀಡುವುದರಿಂದ ಈ ಬಾರಿಯೂ ಅಂತಹುದೇ ವಿಶೇಷತೆಯನ್ನು ನಾವು ಎದುರುನೋಡಿದ್ದೇವೆ. ಇತ್ತೀಚಿಗೆ ಬಿಡುಗಡೆಯಾಗಿರುವ ವಿಶ್ವದ ಟಾಪ್ ಎರಡು ಸ್ಮಾರ್ಟ್‌ಫೋನ್‌ಗಳ ನಡುವೆ ಪೋನ್‌ ಬಫ್ 'ಡ್ರಾಪ್ ಟೆಸ್ಟ್' ನಡೆಸಿ ಗಮನಸೆಳೆದಿದೆ.!!

ಗ್ಯಾಲಕ್ಸಿ ಎಸ್ 9+ VS ಐಫೋನ್ 10 'ಡ್ರಾಪ್ ಟೆಸ್ಟ್'!!(ವಿಡಿಯೊ)

ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 9 + ಮತ್ತು ಐಫೋನ್ 10 ನಂತಹ ದುಬಾರಿ ಸ್ಮಾರ್ಟ್‌ಫೋನ್‌ಗಳು ವಿವಿಧ ರೀತಿಯಲ್ಲಿ ಕೆಡವಿ ಯಾವ ಫೋನ್ ಅತ್ಯುತ್ತಮ ಗುಣಮಟ್ಟದ್ದಾಗಿದೆ ಎಂದು ಫೋನ್ ಬಫ್ ತನ್ನ ಅಂಕಗಳನ್ನು ನೀಡಿದೆ.! ಎರಡೂ ಪ್ರಮುಖ ಸ್ಮಾರ್ಟ್‌ಫೋನ್‌ಗಳೇ ಆಗಿರುವುದರಿಂದ ಯಾವ ಫೋನ್ 'ಡ್ರಾಪ್ ಟೆಸ್ಟ್'ನಲ್ಲಿ ಗೆದ್ದಿದೆ ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಗ್ಯಾಲಕ್ಸಿ S9 + VS ಐಫೋನ್ 10!!

ಗ್ಯಾಲಕ್ಸಿ S9 + VS ಐಫೋನ್ 10!!

ವಿಶ್ವದ ಮೊಬೈಲ್ ಮಾರುಕಟ್ಟೆಯ ದಿಗ್ಗಜನಾಗಲೂ ಯಾವಾಗಲೂ ಪೈಪೋಟಿ ನಡೆಸುತ್ತಿರುವ ಆಪಲ್ ಮತ್ತು ಸ್ಯಾಮ್‌ಸಂಗ್ ಕಂಪೆನಿಗಳಿಗೆ ಅವುಗಳ ನೂತನ ಸ್ಮಾರ್ಟ್‌ಫೋನ್‌ಗಳು ಕೈಗನ್ನಡಿಯಾಗಲಿವೆ. ಇತ್ತೀಚಿಗೆ ಬಿಡುಗಡೆಯಾಗಿರುವ ಈ ಎರಡೂ ಕಂಪೆನಿಗಳ ಗ್ಯಾಲಕ್ಸಿ S9 + VS ಐಫೋನ್ 10 ಸ್ಮಾರ್ಟ್‌ಫೋನ್‌ಗಳ ಮೇಲೆ ಪೈಪೋಟಿ ಏರ್ಪಟ್ಟಿದೆ.!!

ಗ್ಯಾಲಕ್ಸಿ S9 + VS ಐಫೋನ್ 10! ಕುತೋಹಲಕ್ಕೆ ಕಾರಣ!!

ಗ್ಯಾಲಕ್ಸಿ S9 + VS ಐಫೋನ್ 10! ಕುತೋಹಲಕ್ಕೆ ಕಾರಣ!!

ಆಪಲ್ ಐಫೋನ್ 10 ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ S9 + ಎರಡೂ ಸ್ಮಾರ್ಟ್‌ಫೋನ್‌ಗಳು ಅತ್ಯುತ್ತಮವಾಗಿವೆ ಎಂದು ಹೇಳಬಹುದು. ಸ್ಮಾರ್ಟ್‌ಫೋನ್‌ಗಳ ಗುಣಮಟ್ಟಕ್ಕೆ ಹೆಸರುವಾಸಿಯಾಗಿರುವ ಎರಡೂ ಮೊಬೈಲ್‌ ಕಂಪೆನಿಗಳ ಸ್ಮಾರ್ಟ್‌ಫೋನ್‌ಗಳಲ್ಲಿ ಯಾವ ಫೋನ್ ಬೆಸ್ಟ್ ಎಂಬುದು ಎಲ್ಲರಿಗೂ ಕುತೋಹಲಕ್ಕೆ ಕಾರಣವಾಗಿರುತ್ತದೆ.!!

ಫೋನ್ ಬಫ್ 'ಡ್ರಾಪ್ ಟೆಸ್ಟ್'!!

ಫೋನ್ ಬಫ್ 'ಡ್ರಾಪ್ ಟೆಸ್ಟ್'!!

ಆಪಲ್ ಐಫೋನ್ 10 ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ S9 + ಸ್ಮಾರ್ಟ್‌ಫೋನ್‌ಗಳ ನಡುವೆ ಯೂಟ್ಯೂಬ್ ಚಾನಲ್ ಫೋನ್ ಬಫ್ 'ಡ್ರಾಪ್ ಟೆಸ್ಟ್' ನಡೆಸಿದೆ.! ಈ ಎರಡೂ ಸ್ಮಾರ್ಟ್‌ಫೋನ್‌ಗಳನ್ನು ವಿವಿಧ ರೀತಿಯಲ್ಲಿ ಒಂದೇ ಎತ್ತರದಿಂದ ಒಂದೇ ಸಮಯದಲ್ಲಿ ಬೀಳಿಸಿ ಯಾವ ಫೋನ್ ಬೆಸ್ಟ್ ಎಂಬುದನ್ನು ತೋರಿಸಿಕೊಟ್ಟಿದೆ.!!

How to Activate UAN Number? KANNADA
ಗ್ಯಾಲಕ್ಸಿ S9 + VS ಐಫೋನ್ 10! ಯಾವ ಫೋನ್ ಬೆಸ್ಟ್?

ಗ್ಯಾಲಕ್ಸಿ S9 + VS ಐಫೋನ್ 10! ಯಾವ ಫೋನ್ ಬೆಸ್ಟ್?

ಫೋನ್ ಬಫ್ ನಡೆಸಿದ 'ಡ್ರಾಪ್ ಟೆಸ್ಟ್' ನಲ್ಲಿ ಬಹುತೇಕ ಸ್ಯಾಮ್‌ಸಂಗ್ ಗ್ಯಾಲಕ್ಸಿ S9 + ಗೆದ್ದಿದೆ ಎಂದು ಹೇಳಬಹುದಾಗಿದೆ. ತಲೆಕೆಳಗಾಗಿ ಡಿಸ್‌ಪ್ಲೇ ಬೀಳಿಸಿದ ಹಾಗೂ ಫೋನ್ ಎಡ್ಜ್ ಸ್ಕ್ರಾಚ್‌ನಲ್ಲಿ ಗ್ಯಾಲಕ್ಸಿ S9 + ಗೆದ್ದಿದ್ದರೆ, ಹಿಂಬಾಗದ ಪ್ಯಾನಲ್ ವಿಷಯದಲ್ಲಿ ಆಪಲ್ ಐಫೋನ್ 10 ಹೆಚ್ಚು ಅಂಕಗಳನ್ನು ಪಡೆದುಕೊಂಡಿದೆ.!!

ವಿಡಿಯೋ ನೋಡಿ!!

ವಿಡಿಯೋ ನೋಡಿ!!

ಫೋನ್ ಬಫ್ ನಡೆಸಿದ 'ಡ್ರಾಪ್ ಟೆಸ್ಟ್' ಬಗ್ಗೆ ನಾವು ಏನೇ ಹೇಳಿದರೂ ಕೂಡ ವೀಡಿಯೊ ನಮಗೆ ನಿಖರವಾಗಿ ತೋರಿಸುತ್ತದೆ. ಸ್ಯಾಮ್ಸಂಗ್ ಗ್ಯಾಲಕ್ಸಿ S9 + ವರ್ಸಸ್ ಐಫೋನ್ ಎಕ್ಸ್ ಶಕ್ತಿ ಪರೀಕ್ಷೆಯಲ್ಲಿ ಯಾವ ಸ್ಮಾರ್ಟ್‌ಪೋನ್ ಎಷ್ಟು ವಿಜಯಿಯಾಗಿದೆ ಎಂಬುದನ್ನು ಈ ಕೆಳಗಿನ ವಿಡಿಯೋದಲ್ಲಿ ವೀಕ್ಷಿಸಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
the well-known YouTube channel Phone Buff has given new meaning to the term ‘Drop Test’ by dropping the expensive flagship smartphones like Samsung Galaxy S9+ and iPhone X. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot