Subscribe to Gizbot

ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ ಎಸ್ ಆಕರ್ಷಕ ವಿಮರ್ಶೆ

Posted By:

ಕಳೆದ ವರ್ಷವನ್ನು ತೆಳುವಾದ ಟ್ಯಾಬ್ಲೆಟ್‌ಗಳ ಕಾಲ ಎಂದು ಪರಿಗಣಿಸಲಾಗಿತ್ತು ಈ ವರ್ಷ ಕೂಡ ಥಿನ್ ಟ್ಯಾಬ್ಲೆಟ್ (ತೆಳು) ನ ಗರಿಮೆಯನ್ನು ಹೆಚ್ಚಿಸುವುದಕ್ಕಾಗಿ ಸ್ಯಾಮ್‌ಸಂಗ್ ಸಕಲ ಸಿದ್ಧತೆಯನ್ನು ಮಾಡಿಕೊಂಡಿದ್ದು ಇನ್ನೂ ತಯಾರಿಯಲ್ಲಿದೆ.

ಸ್ಯಾಮ್‌ಸಂಗ್ ಇತ್ತೀಚೆಗೆ ಎರಡು ರೇಜರ್ ತೆಳುವಾದ ಟ್ಯಾಬ್ಲೆಟ್ ಕಂಪ್ಯೂಟರ್‌ಗಳನ್ನು ಭಾರತದಲ್ಲಿ ಲಾಂಚ್ ಮಾಡಿದ್ದು ಇದು ಎಸ್ ಶ್ರೇಣಿಗಳ ಅಡಿಯಲ್ಲಿ ಬರುತ್ತಿದೆ. ಈ ಪ್ರೀಮಿಯಮ್ ಟ್ಯಾಬ್ಲೆಟ್ ಶ್ರೇಣಿಯು 10.5 ಇಂಚಿನ ಗ್ಯಾಲಕ್ಸಿ ಟ್ಯಾಬ್ ಆಗಿದ್ದು ಇನ್ನೊಂದು 8.4 ಇಂಚಿನ ಗ್ಯಾಲಕ್ಸಿ ಟ್ಯಾಬ್ ಎಸ್ ಆಗಿದೆ. ಇವೆರಡೂ ಟ್ಯಾಬ್ಲೆಟ್‌ಗಳ ಅಳತೆ 6.6 ಎಮ್‌ಎಮ್ ಆಗಿದ್ದು ಆಪಲ್ ಐಪ್ಯಾಡ್‌ಗೆ ಇದು ಭರ್ಜರಿ ಪೈಪೋಟಿಯಾಗಲಿದೆ.

ಹಾಗಿದ್ದರೆ ಇಂದಿನ ವಿಮರ್ಶಾ ಲೇಖನದಲ್ಲಿ ನಾವು ಗ್ಯಾಲಕ್ಸಿ ಟ್ಯಾಬ್ ಎಸ್ 8.4 ಕುರಿತ ಮಾಹಿತಿಯನ್ನು ನೀಡಲಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ ಎಸ್ 8.4

#1

ರಚನೆ, ವಿನ್ಯಾಸ ಮತ್ತು ಆಪರೇಟಿಂಗ್ ಸಿಸ್ಟಮ್
6.6 ಎಮ್‌ಎಮ್ ದಪ್ಪವನ್ನು ಹೊಂದಿರುವ ಈ ಟ್ಯಾಬ್ಲೆಟ್, ನೆಕ್ಸಸ್ 7 ಮತ್ತು ಐಪ್ಯಾಡ್ ಮಿನಿ ರೆಟೀನಾಗಿಂತ ತೆಳುವಾಗಿದೆ. ಇದು 8.4 ಇಂಚಿನ ಟ್ಯಾಬ್ ಆಗಿದ್ದರೂ, ತುಂಬಾ ಹಗುರವಾಗಿದೆ ಮತ್ತು ಕೈಯಲ್ಲಿ ಹಿಡಿದುಕೊಳ್ಳಲು ಮಜಬೂತಾಗಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ ಎಸ್ 8.4

#2

ಡಿಸ್‌ಪ್ಲೇ

ಇದು 2,560 x 1,600 ಸ್ಕ್ರೀನ್ ರೆಸಲ್ಯೂಶನ್ ಅನ್ನು ಹೊಂದಿದ್ದು, ಐಪ್ಯಾಡ್‌ನಲ್ಲಿರುವ ಪ್ರಸ್ತುತ ರೆಟೀನಾ ಡಿಸ್‌ಪ್ಲೇಗಿಂತಲೂ ಹೆಚ್ಚಿನ ರೆಸಲ್ಯೂಶನ್ ಅನ್ನು ಇದರಲ್ಲಿ ನಾವು ಕಾಣಬಹುದು. ಇದು ಸೂಪರ್ ಅಮೋಲೆಡ್ ಡಿಸ್‌ಪ್ಲೇಯನ್ನು ಕೂಡ ಹೊಂದಿದೆ. ಇದನ್ನು ಸಂಪೂರ್ಣವಾಗಿ ಪ್ಲಾಸ್ಟಿಕ್‌ನಿಂದ ಮಾಡಲಾಗಿದ್ದು ಸುತ್ತಲೂ ಇದು ಚಿನ್ನದ ಲೇಪನವನ್ನು ಹೊಂದಿದೆ. ಇದು ಟ್ಯಾಬ್ಲೆಟ್‌ಗೆ ಆಕರ್ಷಕ ನೋಟವನ್ನು ನೀಡಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ ಎಸ್ 8.4

#3

ವೈಶಿಷ್ಟ್ಯಗಳು
ಆಂಡ್ರಾಯ್ಡ್ ಕಿಟ್‌ಕ್ಯಾಟ್ 4.4 ಇದರಲ್ಲಿ ಚಾಲನೆಯಾಗುತ್ತಿದ್ದು ಉತ್ತಮ ಗುಣಮಟ್ಟದ ವೀಡಿಯೋ ಚಾಲನೆ ಕೂಡ ಇದರಲ್ಲಿ ಸಾಧ್ಯವಾಗಿದ್ದು ಯೂಟ್ಯೂಬ್‌ನಲ್ಲಿ ವೀಡಿಯೋ ವೀಕ್ಷಣೆಯ ಅನುಭೂತಿಯನ್ನು ಇದು ನೀಡುತ್ತಿದೆ. ಇದರಲ್ಲಿ ಕುತೂಹಲಭರಿತವಾದ ಸ್ಯಾಮ್‌ಸಂಗ್‌ನದ್ದೇ ಅಪ್ಲಿಕೇಶನ್‌ಗಳಿದ್ದು ಸೈಡ್‌ಸಿಂಕ್ ಮತ್ತು ವಾಚ್‌ಆನ್ ಅಪ್ಲಿಕೇಶನ್‌ಗಳು ಹೆಚ್ಚು ಸಹಾಯಕವಾಗಿವೆ. ಟ್ಯಾಬ್ಲೆಟ್‌ನ ಮುಖ್ಯ ಬಟನ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಹೊಂದಿದ್ದು ಇದನ್ನು ಲಾಗಿನ್ ಮಾಡಲು ಬಳಸಬಹುದಾಗಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ ಎಸ್ 8.4

#4

ಕಾರ್ಯಕ್ಷಮತೆ
ಆಪಲ್ ಐಪ್ಯಾಡ್ ಮಿನಿ ರೆಟೀನಾಗಿಂತಲೂ ಒಂದು ಉತ್ತಮ ಅಂಶವನ್ನು ಗ್ಯಾಲಕ್ಸಿ ಟ್ಯಾಬ್ ಎಸ್ 8.4 ನಲ್ಲಿ ಕಾಣಬಹುದಾಗಿದೆ. ಇದು ಕಸ್ಟಮ್ ಬಿಲ್ಟ್ ಎಕ್ಸೋನಸ್ 5 ಓಕ್ಟಾಕೋರ್‌ನೊಂದಿಗೆ ಬಂದಿದ್ದು ಇದು ಎರಡು ಪ್ರತ್ಯೇಕ ಕ್ವಾಡ್ ಕೋರ್ ಪ್ರೊಸೆಸರ್ ಅನ್ನು ಹೊಂದಿದೆ ಅಂದರೆ 1.9 GHz ಒಂದಾದರೆ ಮತ್ತೊಂದು 1.3 GHz ಆಗಿದೆ. ಈ ಸ್ಲೇಟ್ 3ಜಿಬಿ RAM ಅನ್ನು ಹೊಂದಿದ್ದು 16ಜಿಬಿ ಆಂತರಿಕ ಸಂಗ್ರಹಣೆಯೊಂದಿಗೆ ಬಂದಿದೆ. ಇದರಲ್ಲಿರುವ ಸಂಪರ್ಕ ವೈಶಿಷ್ಟ್ಯಗಳೆಂದರೆ ವೈಫೈ, GPS ಮತ್ತು ಬ್ಲ್ಯೂಟೂತ್ ಆವೃತ್ತಿ 4.0 ಆಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

<center><iframe width="100%" height="510" src="//www.youtube.com/embed/z2ZZkQ2-SkY" frameborder="0" allowfullscreen></iframe></center>

Read more about:
English summary
This article tells that samsung galaxy tab s8.4 hands on review and first look
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot