ಯಂಗ್ ಸ್ಟರ್ಸ್ ಗೆಂದೇ ಇದೆ ಸ್ಯಾಮ್ ಸಂಗ್ ಡ್ಯೂಯೊಸ್ ಮೊಬೈಲ್

Posted By: Staff
ಯಂಗ್ ಸ್ಟರ್ಸ್ ಗೆಂದೇ ಇದೆ ಸ್ಯಾಮ್ ಸಂಗ್ ಡ್ಯೂಯೊಸ್ ಮೊಬೈಲ್

 

ಯಶಸ್ಸಿನ ಹಾದಿಯಲ್ಲಿರುವ ಕೆಲವೇ ಮೊಬೈಲ್ ಕಂಪನಿಗಳಲ್ಲಿ ಸ್ಯಾಮ್ ಸಂಗ್ ಕೂಡ ಒಂದು. ಗೂಗಲ್ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಬೆಂಬಲಿತವಾಗಿರುವ ಸ್ಯಾಮ್ ಸಂಗ್ ಫೋನ್ ಗಳು ಮಾರುಕಟ್ಟೆಯಲ್ಲಿ ಹೆಚ್ಚು ಪ್ರಚಲಿತದಲ್ಲಿದೆ. ಜನರಿಂದ ಸ್ಯಾಮ್ ಸಂಗ್ ಮೊಬೈಲ್ ಗಳು ಹೆಚ್ಚು ಪ್ರಶಂಸೆಯನ್ನೂ ಪಡೆದುಕೊಂಡಿದೆ. ಅಂತಹವುಗಳಲ್ಲಿ ಗ್ಯಾಲಕ್ಸಿ ಸಿರೀಸ್ ಮೊಬೈಲ್ ಹೆಚ್ಚು.

ಇನ್ನೂ ಬಿಡುಗಡೆಯಾಗಬೇಕಿರುವ ಸ್ಯಾಮ್ ಸಂಗ್ ಗ್ಯಾಲಕ್ಸಿ ವೈ ಪ್ರೊ ಡ್ಯೂಯೊಸ್ ಮೊಬೈಲ್ ಬಗ್ಗೆ ಕೆಲವು ಮಾಹಿತಿಗಳು ಹೊರಬಿದ್ದಿವೆ. ಈ ಡ್ಯೂಯೊಸ್ ಹ್ಯಾಂಡ್ ಸೆಟ್ ಡ್ಯೂಯಲ್ ಸಿಮ್ ಹೊಂದಿರುವುದು ವಿಶೇಷವಾಗಿದೆ.

ಜಿಎಸ್ ಎಂ 850 / 900 / 1800 / 1900 ಫ್ರಿಕ್ವೆನ್ಸಿಗಳನ್ನು ಮೊಬೈಲ್ ಬೆಂಬಲಿಸಲಿರುವ ಮೊಬೈಲ್ 3ಜಿ ಸಂಪರ್ಕವನ್ನೂ ಹೊಂದಿದೆ. ಟ್ರ್ಯಾಕ್ ಪ್ಯಾಡ್ ಕೂಡ ಇದರಲ್ಲಿದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ವೈ ಪ್ರೊ ಮೊಬೈಲ್ ಆಂಡ್ರಾಯ್ಡ್ ಜಿಂಜರ್ ಬ್ರೆಡ್ ಆಪರೇಟಿಂಗ್ ಸಿಸ್ಟಮ್ ಹೊಂದಿದ್ದರಿಂದ ಡ್ಯೂಯೊಸ್ ಮೊಬೈಲ್ ಕೂಡ ಜಿಂಜರ್ ಬ್ರೆಡ್ ಹೊಂದಿರುವ ಸಾಧ್ಯತೆ ಇದ್ದು, ಸದ್ಯಕ್ಕೆ ದೊರೆತಿರುವ ಮಾಹಿತಿ ಪ್ರಕಾರ ಈ ಫೋನ್ ಗೂಗಲ್ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಬೆಂಬಲಿತವಾಗಿದೆ ಎಂದು ತಿಳಿದುಬಂದಿದೆ. ಮೊಬೈಲ್ ನಲ್ಲಿ ಅಕ್ಸೆಲೆರೊಮೀಟರ್ ಮತ್ತು ಪ್ರಾಕ್ಸಿಮಿಟಿ ಸೆನ್ಸಾರ್ ಅಳವಡಿಸಲಾಗಿದೆ. ಜೊತೆಗೆ ಅಡಾಬ್ ಫ್ಲಾಶ್ HTML ವೆಬ್ ಬ್ರೌಸರ್ ಕೂಡ ಇದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ವೈ ಪ್ರೊ ಮೊಬೈಲ್:

* 2.6 ಇಂಚಿನ TFT ಡಿಸ್ಪ್ಲೇ, 320 x 240 ಪಿಕ್ಸಲ್ ರೆಸೊಲ್ಯೂಷನ್

* ಕ್ವೆರ್ಟಿ ಕೀ ಪ್ಯಾಡ್

* ಡ್ಯೂಯಲ್ ಸಿಮ್

* 3.2 ಮೆಗಾ ಪಿಕ್ಸಲ್ ಕ್ಯಾಮೆರಾ

* 3.5 ಎಂಎಂ ಆಡಿಯೋ ಜ್ಯಾಕ್

* GPRS ಮತ್ತು EDGE ಸಂಪರ್ಕ

* A2DP v3.0 ಬ್ಲೂಟೂಥ್, 802.11 b/g/n ವೈ-ಫೈ, ವೈ-ಫೈ ಹಾಟ್ ಸ್ಪಾಟ್

* ಮೈಕ್ರೊ v2.0 USB

* ಮೈಕ್ರೊ SD ಮೆಮೊರಿ ಕಾರ್ಡ್ ಸ್ಲಾಟ್

* ಎಫ್ ಎಂ, A-GPSನೊಂದಿಗೆ GPS

ಇಷ್ಟೇ ಅಲ್ಲ, ಮೊಬೈಲ್ ನಲ್ಲಿ ಗೂಗಲ್ ಸರ್ಚ್, ಜಿಮ್ಯಾಪ್, ಜಿಮೇಲ್, ಜಿಟಾಕ್, ಯು ಟ್ಯೂಬ್ ಕೂಡ ಲಭ್ಯವಿದೆ. Li-on ಬ್ಯಾಟರಿ ಹೊಂದಿರು ಈ ಮೊಬೈಲನ್ನು ಯುವಜನರ ಅಭಿರುಚಿಗೆ ತಕ್ಕಂತೆ ರೂಪಿಸಲಾಗಿದೆ.

ಆದರೆ ಈ ಮೊಬೈಲ್ ಭಾರತದಲ್ಲಿ ಯಾವಾಗ ಬಿಡುಗಡೆಗೊಳ್ಳಲಿದೆ ಮತ್ತು ಇದರ ಬೆಲೆ ಎಷ್ಟು ಎಂಬುದನ್ನು ಕಂಪನಿ ಇನ್ನೂ ತಿಳಿಸಿಲ್ಲ. ಕೆಲವೇ ದಿನಗಳಲ್ಲಿ ಇದು ಲಭ್ಯವಾಗಲಿದೆ ಎಂಬ ಮಾಹಿತಿ ಇದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot