ಸ್ಯಾಮ್ಸಂಗ್ ಕಂಪನಿ ಗೆಲಾಕ್ಸಿ ಎಸ್9+ ತಯಾರಿಸಲು ಮಾಡಿದ ಖರ್ಚೆಷ್ಟು ಗೊತ್ತೇ ?

By Prateeksha Hosapattankar
|

ಸ್ಯಾಮ್ಸಂಗ್ ಇತ್ತೀಚೆಗೆ ಗೆಲಾಕ್ಸಿ ಎಸ್9 ಮತ್ತು ಗೆಲಾಕ್ಸಿ ಎಸ್9+ ಬಿಡುಗಡೆ ಮಾಡಿತು. ಇದು ಮೆಚ್ಚುವಂತಹ ಹಾರ್ಡ್‍ವೇರ್ ಸ್ಪೆಸಿಫಿಕೇಷನ್ಸ್ ಮತ್ತು ಫೀಚರ್ಸ್ ಹೊಂದಿದೆ. ದುರದೃಷ್ಟವಶಾತ್ ಎಲ್ಲರ ಕೈ ಎಟಕುವಂತಹುದಲ್ಲಾ. ಹಾಗಾದರೆ ಇದರ ಬೆಲೆಯೆಷ್ಟು ? ಟೆಕ್ ಇನ್ಸೈಟ್ಸ್ ನವರ ಬಳಿಯಿದೆ ಉತ್ತರ.

ಸ್ಯಾಮ್ಸಂಗ್ ಕಂಪನಿ ಗೆಲಾಕ್ಸಿ ಎಸ್9+ ತಯಾರಿಸಲು ಮಾಡಿದ ಖರ್ಚೆಷ್ಟು ಗೊತ್ತೇ ?


ನಾವು ಎಸ್9 ಬಿಟ್ಟು ಎಸ್9+ ಬಗ್ಗೆ ಮಾತಾಡೋಣ. ಎಸ್9+ ನ ಬೆಲೆ ವರದಿ ಪ್ರಕಾರ $379(ಸುಮಾರು ರೂ. 24,724). ಯು.ಎಸ್ ನ ಸ್ಮಾರ್ಟ್‍ಫೋನ್ ರೀಟೆಲ್ ನಲ್ಲಿ $839.99(ಸುಮಾರು ರೂ. 54,800). ಇದರ ಬೆಲೆ ಸರಿ ಸುಮಾರು ಪ್ರಪಂಚದ ಅತಿ ದುಬಾರಿ ಬೆಲೆಯ ಆಪಲ್ ಐಫೋನ್ ಎಕ್ಸ್ ನಷ್ಟಿದೆ.

ದುಡ್ಡು ಎಲ್ಲಿ ಖರ್ಚು ಆಯಿತು ?

ವಿವರವಾಗಿ ನೋಡಿದಾಗ ಪ್ರತಿ ಕೊಂಪೊನೆಂಟ್ ನ ಬೆಲೆ ಗೊತ್ತಾಗುತ್ತದೆ. ಟೆಕ್ ಇನ್ಸೈಟ್ಸ್ ಪ್ರಕಾರ ಬಹಳಷ್ಟು ಹಣ ಡಿಸ್ಪ್ಲೆ ($72.50), ಚಿಪ್‍ಸೆಟ್($68), ಕ್ಯಾಮೆರಾ ಮೊಡ್ಯುಲ್($48) ಮತ್ತು ಮೆಮೊರಿ ಡಿಪಾರ್ಟಮೆಂಟ್ ($39) ಮೇಲೆ ಖರ್ಚಾಯಿತು. ನಾನ್ ಎಲೆಕ್ಟ್ರಾನಿಕ್ ಕೊಂಪೊನೆಂಟ್ಸ್ ಗಳ ಮೇಲೆ $29 ಅನ್ನು ಸ್ಯಾಮ್ಸಂಗ್ ಖರ್ಚು ಮಾಡಿದೆ.

ಐಫೋನ್ ಎಕ್ಸ್ ನ ಕೊಂಪೊನೆಂಟ್ ಬೆಲೆ

ಐಫೋನ್ ಎಕ್ಸ್ ನ ಕೊಂಪೊನೆಂಟ್ ಬೆಲೆ $389.50(ಸುಮಾರು ರೂ.25,405). ಕುತೂಹಲಕಾರಿ ಅಂಶವೆಂದರೆ 64ಜಿಬಿ ವರ್ಷನ್ ನ ಇದೇ ಡಿವೈಜ್ ಗೆ ಯು.ಎಸ್ ನಲ್ಲಿ ಇರುವ ಬೆಲೆ $999(ಸುಮಾರು ರೂ. 65,160). ಇದರಿಂದ, ಆಪಲ್ ತನ್ನ ಪ್ರತಿ ಸ್ಪರ್ಧಿ ಸ್ಯಾಮ್ಸಂಗ್ ಗಿಂತಲೂ ಹೆಚ್ಚಿನ ಲಾಭ ಗಳಿಸುತ್ತಿದೆ. ಐಫೋನ್ ಎಕ್ಸ್ ವಿಷಯದಲ್ಲಿ ಕೂಡ ಅದರ ಡಿಸ್ಪ್ಲೆ ದುಬಾರಿ ಕೊಂಪೊನೆಂಟ್ ($77) ಆಗಿದೆ.

ಅತ್ಯಂತ ದುಬಾರಿಯ ಸ್ಯಾಮ್ಸಂಗ್ ಫೋನ್

ನಾವಿಲ್ಲಿ ಹೇಳಲೇಬೇಕು ಸ್ಯಾಮ್ಸಂಗ್ ನ ಇಲ್ಲಿವರೆಗಿನ ಎಲ್ಲಾ ಸ್ಮಾರ್ಟ್‍ಫೋನುಗಳಲ್ಲಿ ಗೆಲಾಕ್ಸಿ ಎಸ್9+ ಅತ್ಯಂತ ದುಬಾರಿ ಸ್ಮಾರ್ಟ್‍ಫೋನ್ ಆಗಿದೆ. ಕಳೆದ ವರ್ಷದ ಗೆಲಾಕ್ಸಿ ನೋಟ್ 8 ಗಿಂತ ಇದರ ಕೊಂಪೊನೆಂಟ್ ಕೊಸ್ಟ್ ಜಾಸ್ತಿ ಇದೆ. ಸೌತ್ ಕೋರಿಯನ್ ಜನರು ಸಂತಸಗೊಂಡಿಲ್ಲಾ. ಗೆಲಾಕ್ಸಿ ಎಸ್8 ಗಿಂತ ಎಸ್9 ಬೇಡಿಕೆ ಕಡಿಮೆ ಇದೆ. ಆದರೆ, ಮುಂದಿನ ದಿನಗಳಲ್ಲಿ ಇದರ ಬೇಡಿಕೆ ಖಂಡಿತ ಹೆಚ್ಚುವುದೆಂಬ ನಂಬಿಕೆ ಇದೆ.

Best Mobiles in India

English summary
Samsung has spent this much to make the Galaxy S9+. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X