Subscribe to Gizbot

ಏಪ್ರಿಲ್ 19ಕ್ಕೆ ಸ್ಯಾಮ್‌ಸಂಗ್ ಗ್ಯಾಲಾಕ್ಸಿ 8 ಲಾಂಚ್!!..ಫೀಚರ್ಸ್ ಏನಿದೆ ಗೊತ್ತಾ?

Written By:

ಸ್ಯಾಮ್‌ಸಂಗ್ ಸರಣಿ ಸ್ಮಾರ್ಟ್‌ಫೋನ್‌ ಒಂದು ಮಾರುಕಟ್ಟೆಗೆ ಬರುತ್ತಿದೆ ಎಂದಾಗಲೇ ಮೊಬೈಲ್ ಮಾರುಕಟ್ಟೆಯಲ್ಲಿ ಇನ್ನಿಲ್ಲದ ಕುತೋಹಲ ಶುರುವಾಗುತ್ತದೆ.! ಸ್ಯಾಮ್‌ಸಂಗ್ ಬಿಡುಗಡೆ ಮಾಡುವ ನೂತನ ಸ್ಮಾರ್ಟ್‌ಫೊನ್ ಯಾವೆಲ್ಲಾ ಫೀಚರ್ ಹೊಂದಿರಬಹುದು ಎನ್ನುವುದೇ ದೊಡ್ಡ ಚರ್ಚಾ ವಿಷಯವಾಗಿಬಿಡುತ್ತದೆ.! ಈ ಸಾಲಿಗೆ ಇದೀಗ ಸೇರ್ಪಡೆ ಗ್ಯಾಲಾಕ್ಸಿ ಎಸ್8!!

ಹೌದು, ಕಳೆದ ವರ್ಷ ಬಿಡುಗಡೆಯಾದ ಸ್ಸಾಮ್‌ಸಂಗ್ ಗ್ಯಾಲಾಕ್ಸಿ ಎಸ್7 ನಂತರ ಇದೀಗ ಸ್ಯಾಮ್‌ಸಂಗ್ ಗ್ಯಾಲಾಕ್ಸಿ8 ಸ್ಮಾರ್ಟ್‌ಫೋನ್ ಏಪ್ರಿಲ್ 19ಕ್ಕೆ ಬಿಡುಗಡೆ ಯಾಗುತ್ತಿದ್ದು, ಬಿಡುಗಡೆ ಯಾಗುತ್ತಿರುವ ಸ್ಯಾಮ್‌ಸಂಗ್ ಗ್ಯಾಲಾಕ್ಸಿ 8 ಹೇಗಿರಲಿದೆ ಎಂದು ಮೊಬೈಲ್ ಪ್ರಿಯರು ಕಾದುಕುಳಿತಿದ್ದಾರೆ.!!

ಏಪ್ರಿಲ್ 19ಕ್ಕೆ ಸ್ಯಾಮ್‌ಸಂಗ್ ಗ್ಯಾಲಾಕ್ಸಿ 8 ಲಾಂಚ್!!.ಫೀಚರ್ಸ್ ಏನಿದೆ ಗೊತ್ತಾ?

ಓದಿರಿ: "ಫೇಸ್‌ಬುಕ್‌ ಡೈರೆಕ್ಟ್" ಆಯ್ಕೆ ಬಳಸಿದ್ದೀರಾ? ಏನಿದು ಹೊಸ ಆಯ್ಕೆ? ಉಪಯೋಗ ಹೇಗೆ?

ಇದೀಗ ಹೊರಬಿದ್ದಿರುವ ಮಾಹಿತಿಯಂತೆ ಸ್ಯಾಮ್‌ಸಂಗ್ ಗ್ಯಾಲಾಕ್ಸಿ 8 8GB RAM ಮತ್ತು 126 GB ಆಂತರಿಕ ಮೆಮೊರಿ, ಶೇಕಡ 93% ಪರ್ಸೆಂಟ್ ಟಚ್‌ಪ್ಯಾಡ್ ಡಿಸ್‌ಪ್ಲೇ ಹೊಂದಿರಲಿದೆ . ಪ್ರಖ್ಯಾತ ಚಿಪ್‌ಸೆಟ್ ತಯಾರಕ ಸಂಸ್ಥೆ ಕ್ವಾಲ್ಕಮ್ ಬಿಡುಗಡೆ ಮಾಡಿರುವ ನೂತನ ಸ್ನಾಪ್‌ಡ್ರಾಗನ್ 835 socಚಿಪ್‌ಸೆಟ್ ಹೊಂದಿದ್ದು, ಸ್ಮಾರ್ಟ್‌ಫೋನ್ ಏನೆಲ್ಲಾ ವಿಶೇಷತೆಗಳನ್ನು ಹೊಂದಿದೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕರ್ವ್‍ಡ್ ಡಿಸೈನ್ ಮತ್ತು ಡಿಸ್‌ಪ್ಲೇ!!

ಕರ್ವ್‍ಡ್ ಡಿಸೈನ್ ಮತ್ತು ಡಿಸ್‌ಪ್ಲೇ!!

ಇದೀಗ ಬಿಡುಗಡೆಯಾಗುತ್ತಿರುವ ಗ್ಯಾಲಾಕ್ಸಿ ಎಸ್8 ಎಡ್ಜ್ ಟು ಎಡ್ಜ್ ಕರ್ವ್‍ಡ್ ಡಿಸೈನ್ ಮತ್ತು ಡಿಸ್‌ಪ್ಲೇ ಫೀಚರ್ ಹೊಂದಿದೆ. ಗ್ಯಾಲಾಕ್ಸಿ ಎಸ್7 ರೀತಿಯಲ್ಲಿಯೇ ಈ ಸ್ಮಾರ್ಟ್‌ಫೋನ್ ಸಹ ರೂಪಿತವಾಗಿದ್ದು, 93% ಪರ್ಸೆಂಟ್ ಟಚ್‌ಪ್ಯಾಡ್ ಡಿಸ್‌ಪ್ಲೇ ಹೊಂದಿದೆ.!!

ವೈರ್ಲೆಸ್ ಚಾರ್ಜಿಂಗ್ ಪ್ಯಾಡ್

ವೈರ್ಲೆಸ್ ಚಾರ್ಜಿಂಗ್ ಪ್ಯಾಡ್

ಗ್ಯಾಲಾಕ್ಸಿ ಎಸ್8 ಅತ್ಯಾಧುನಿಕ ಫೀಚರ್ಸ್ ಹೊಂದಿದ್ದು, ಚಾರ್ಜ್ ಟ್ರಾನ್ಸ್‍ಲೇಟರ್ ಎನ್ನಲಾಗುವ ಲಾರ್ಜ್ ವೈರ್ಲೆಸ್ ಚಾರ್ಜಿಂಗ್ ಪ್ಯಾಡ್ ಹೊಂದಿದ್ದು, ಇದೇ ಮೊದಲ ಬಾರಿಗೆ ಇಂತಹ ತಂತ್ರಜ್ಞಾನ ಹೊಂದಿರುವ ಮೊದಲ ಸ್ಮಾರ್ಟ್‌ಫೋನ್ ಇದಾಗಿದೆ.!!

ಆಪರೆಟಿಂಗ್ ಸಿಸ್ಟಮ್ ಯಾವುದು?

ಆಪರೆಟಿಂಗ್ ಸಿಸ್ಟಮ್ ಯಾವುದು?

ಗ್ಯಾಲಾಕ್ಸಿ ಎಸ್8 ಆಂಡ್ರಾಯ್ಡ್ 6.0 ಮಾರ್ಶಮಲ್ಲೊ ಆಪರೆಟಿಂಗ್ ಸಿಸ್ಟಮ್, ಹಾಗೂ ಅತ್ಯಾಧುನಿಕ ಎನ್‌ಸ್ಕ್ರಿಪ್ಟೆಟ್ ಸಾಫ್ಟ್‌ವೇರ್ ಹೊಂದಿದೆ. ಇನ್ನು ಸ್ಮಾರ್ಟ್‌ಫೋನ್ 4GB ಅಥವಾ 8GB RAM ಹೊಂದಿರಲಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಇನ್ನು ಸ್ಪಷ್ಟವಾಗಿಲ್ಲ.!!

ಹಿಂಬದಿ ಫಿಂಗರ್‌ಪ್ರಿಂಟ್ ಸ್ಕ್ಯಾನರ್

ಹಿಂಬದಿ ಫಿಂಗರ್‌ಪ್ರಿಂಟ್ ಸ್ಕ್ಯಾನರ್

ಗ್ಯಾಲಾಕ್ಸಿ ಎಸ್8 ಸ್ಕ್ರೀನ್ ದೊಡ್ಡದಾಗಿದ್ದು, ಮುಂದೆ ಜಾಗವಿಲ್ಲದ ಕಾರಣ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಫೋನಿನ ಹಿಂದಿನ ಭಾಗಕ್ಕೆ ವರ್ಗಾಯಿಸಲಾಗಿದೆ. ಆದರೆ, ಊಹಾಪೋಹದಂತೆ ನೂತನ ಇರಿಸ್ ಸ್ಕ್ಯಾನರ್ ಬಗ್ಗೆ ಯಾವುದೇ ಸುಳಿವಿಲ್ಲಾ.!!

3,500MAh ಬ್ಯಾಟರಿ.

3,500MAh ಬ್ಯಾಟರಿ.

ಇಂದಿನ ಸ್ಮಾರ್ಟ್‌ಫೋನ್‌ಗಳು ಹೆಚ್ಚು ಬ್ಯಾಟರಿ ಶಕ್ತಿಯನ್ನು ಹೊಂದಿ ಮಾರುಕಟ್ಟೆಗೆ ಬರುತ್ತಿದ್ದರೂ. ಸ್ಯಾಮ್‌ಸಂಗ್ ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ.! ಹಾಗಾಗಿ, ಸ್ಯಾಮ್‌ಸಂಗ್‌ನ ಹಳೆ ವರ್ಷನ್‌ಗಳಂತೆ ಗ್ಯಾಲಾಕ್ಸಿ ಎಸ್8 3,500MAh ಬ್ಯಾಟರಿ ಹೊಂದಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Maark the date. April 19 is going to be a big day for the tech world.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot