Subscribe to Gizbot

ಆಪಲ್‌ಗೂ ಸಾಧ್ಯವಾಗದನ್ನು ಮಾಡಿದ ಸ್ಯಾಮ್‌ಸಂಗ್: ಹೇಗಿರಲಿದೆ ಗೊತ್ತಾ ಗ್ಯಾಲೆಕ್ಸಿ S ಸ್ಮಾರ್ಟ್‌ಫೋನ್‌..!

Written By:

ಇದೇ ಮುಂದಿನ ತಿಂಗಳು ಮಾರುಕಟ್ಟೆಯಲ್ಲಿ ಸಾಮ್ ಸಂಗ್ ಫಾಗ್ ಶಿಪ್ ಸ್ಮಾರ್ಟ್‌ಫೋನ್'ಗಳಾದ ಗ್ಯಾಲೆಕ್ಸಿ S9 ಮತ್ತು ಗ್ಯಾಲೆಕ್ಸಿ S9 ಪ್ಲಸ್ ಬಿಡುಗಡೆಗೆ ಸಿದ್ಧವಾಗಿದೆ. ಇದೇ ಹಿನ್ನಲೆಯಲ್ಲಿ ಸ್ಯಾಮ್ ಸಂಗ್ ಪಾಳಯದಿಂದ ಹೊಸದೊಂದು ಮಾಹಿತಿಯೂ ಹೊರ ಬಿದ್ದಿದ್ದು, ಸ್ಯಾಮ್‌ಸಂಗ್ ಮುಂದೆ ಬಿಡುಗಡೆ ಮಾಡುವ ಟಾಪ್ ಎಂಡ್ ಸ್ಮಾರ್ಟ್‌ಫೋನ್ ಹೊಸ ಮಾದರಿಯ ಡಿಸ್‌ಪ್ಲೇಯನ್ನು ಹೊಂದಿರಲಿದೆ ಎನ್ನಲಾಗಿದೆ. ಆಪಲ್ ನಿಂದಲೂ ಈ ಮಾದರಿಯ ವಿನ್ಯಾಸವನ್ನು ಮಾಡಲಾಗಿಲ್ಲ ಎನ್ನುವ ಮಾತು ಕೇಳಿಬಂದಿದೆ.

ಆಪಲ್‌ಗೂ ಸಾಧ್ಯವಾಗದನ್ನು ಮಾಡಿದ ಸ್ಯಾಮ್‌ಸಂಗ್

ಸಂಪೂರ್ಣ ಬ್ರೆಜಿಲ್ ಲೈಸ್ ವಿನ್ಯಾಸವನ್ನು ಸ್ಯಾಮ್ ಸಂಗ್ ಮಾಡಿದ್ದು, ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಡಿಸ್‌ಪ್ಲೇಯ ಕೆಳಭಾಗದಲ್ಲಿ ಇರಿಸಿದೆ ಎನ್ನಲಾಗಿದೆ. ಇದರಿಂದಾಗಿ ನಿಮ್ಮ ಸ್ಮಾರ್ಟ್‌ಫೋನ್ ನ ಮುಂಭಾಗದಲ್ಲಿ ಸಂಫೂರ್ಣವಾಗಿ ಡಿಸ್‌ಪ್ಲೇಯನ್ನೇ ಕಾಣಬಹುದಾಗಿದೆ. ಅಂಡರ್ ಡಿಸ್‌ಪ್ಲೇ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಹೊಸ ಮಾದರಿಯ ಅನುಭವನ್ನು ಗ್ರಾಹಕರಿಗೆ ನೀಡಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫುಲ್ ಫ್ರಂಟ್ ಸ್ಕ್ರಿನ್

ಫುಲ್ ಫ್ರಂಟ್ ಸ್ಕ್ರಿನ್

ಎಲ್ಲಾ ಸ್ಮಾರ್ಟ್‌ಫೋನ್‌ಗಳು ಫುಲ್ ಸ್ಕ್ರಿನ್ ವಿನ್ಯಾಸವನ್ನು ಮಾಡುತ್ತಿದ್ದರೇ ಸ್ಯಾಮ್ ಸಂಗ್ ಮಾತ್ರವೇ ಹೊಸದೊಂದು ಪ್ರಯತ್ನಕ್ಕೆ ಮುಂದಾಗಿದೆ. ಸ್ಮಾರ್ಟ್‌ಫೋನ್‌ನ ಮುಂಭಾಗ ಪೂರ್ತಿಯಾಗಿ ಸ್ಕ್ರಿನ್ ಮಾತ್ರವೇ ಕಾಣಿಸಿಕೊಳ್ಳಿದೆ ಎನ್ನಲಾಗಿದೆ. ಇಡೀ ಡಿಸ್‌ಪ್ಲೇಯಲ್ಲಿ ನೀವು ಏನ್ನನು ಬೇಕಾದರು ಬಳಕೆ ಮಾಡಿಕೊಳ್ಳಬಹುದಾಗಿದೆ.

ಫಿಂಗರ್ ಪ್ರಿಂಟ್ ಸ್ಕ್ಯಾನರ್

ಫಿಂಗರ್ ಪ್ರಿಂಟ್ ಸ್ಕ್ಯಾನರ್

ಇದಲ್ಲದೇ ಸ್ಯಾಮ್‌ ಸಂಗ್ ಟಾಪ್ ಎಂಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಅಮೊಲೈಡ್ ಡಿಸ್‌ಪ್ಲೇಯನ್ನು ಕಾಣಬಹುದಾಗಿದ್ದು, ಈ ಸ್ಕ್ರಿನ್ ಕೆಳಭಾಗದಲ್ಲಿ ಯಾರಿಗೂ ಕಾಣದ ಮಾದರಿಯಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಅಳವಡಿಸಲಾಗಿದೆ ಎನ್ನಲಾಗಿದೆ. ಇದು ಮೇಲ್ನೋಟಕ್ಕೆ ಕಾಣುವುದಿಲ್ಲ. ಇದು ಬಳಕೆದಾರರಿಗೆ ಹೊಸ ಮಾದರಿಯ ಅನುಭವನ್ನು ನೀಡಲಿದೆ.

ಮುಂದಿನ ವರ್ಷ

ಮುಂದಿನ ವರ್ಷ

ಮೂಲಗಳ ಪ್ರಕಾರ ಗ್ಯಾಲೆಕ್ಸಿ S9 ಮತ್ತು ಗ್ಯಾಲೆಕ್ಸಿ S9 ಪ್ಲಸ್ ಸ್ಮಾರ್ಟ್‌ ಫೋನ್ ನಲ್ಲಿ ಈ ಮಾದರಿಯ ಡಿಸ್‌ಪ್ಲೇಯನ್ನು ನೋಡಲು ಸಾಧ್ಯವಿಲ್ಲ ಎನ್ನಲಾಗಿದೆ. ಮುಂದಿನ ವರ್ಷ ಲಾಂಚ್ ಆಗಲಿದರುವ ಸ್ಯಾಮ್‌ಸಂಗ್ ಗ್ಯಾಲೆಕ್ಸಿ S ಸ್ಮಾರ್ಟ್‌ಫೋನಿನಲ್ಲಿ ಈ ಮಾದರಿಯ ವಿಸ್ಯಾಸವನ್ನು ಕಾಣುವ ಸಾಧ್ಯತೆ ಇದೆ ಎನ್ನಲಾಗಿದೆ.

Do you know what all u can do by Downloading Hike Messenger app.?
ಆಪಲ್‌ಗೂ ಸಾಧ್ಯವಾಗಿಲ್ಲ:

ಆಪಲ್‌ಗೂ ಸಾಧ್ಯವಾಗಿಲ್ಲ:

ಆಪಲ್ ತನ್ನ ಐಫೋನ್ X ನಲ್ಲಿ ಇದೇ ಮಾದರಿಯನ್ನು ಅನುಸರಿಸಲು ಮುಂದಾಗಿತ್ತು, ಆದರೆ ಸಹ ಫುಲ್ ಬ್ರೆಜಿಲ್ ಲೈಸ್ ಮಾಡಲು ಸಾಧ್ಯವಾಗದೆ. ಫೇಸ್ IDಯನ್ನು ಅಳವಡಿಸಿತ್ತು ಎನ್ನಲಾಗಿದೆ. ಇದನ್ನು ತೆಗೆದು ಹಾಕುಲು ಮುಂದಾಗಿರುವ ಸ್ಯಾಮ್‌ಸಂಗ್ ಹೊಸ ಮಾದರಿಯಲ್ಲಿ ಕಾಣಿಸಿಕೊಳ್ಳಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Samsung's future Galaxy series flagships. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot