ಮಡಚಬಹುದಾದ ಡಿಸ್‌ಪ್ಲೇಯೊಂದಿಗೆ ಸ್ಯಾಮ್‌ಸಂಗ್ ಟ್ಯಾಬ್ಲೆಟ್

Written By:

ಸ್ಯಾನ್ ಡಿಗೋದಲ್ಲಿ ನಡೆದ ಡಿಸ್‌ಪ್ಲೇ ಇನ್‌ಫಾರ್ಮೇಶನ್ ಕಾನ್ಫರೆನ್ಸ್‌ನಲ್ಲಿ ತನ್ನ ಇತ್ತೀಚಿನ ಮಡಚಬಹುದಾದ ಡಿಸ್‌ಪ್ಲೇಯನ್ನು ಸ್ಮಾರ್ಟ್‌ಫೋನ್‌ಗಳಿಗಾಗಿ ನೋಕಿಯಾ ಪ್ರಸ್ತುತಪಡಿಸಿತ್ತು. ಹಾಗೂ ತಂತ್ರಜ್ಞಾನದ ಹೊಸ ಯುಗದಲ್ಲಿ ಈ ರಿತಿಯ ಆವಿಷ್ಕಾರ ಮುಂದೆ ಬರಲಿರುವ ಫೋನ್‌ಗಳಲ್ಲಿ ನಿಮಗೆ ಕಾಣಬಹುದು.

ಅದಾಗ್ಯೂ ತಾನೇನು ಕಡಿಮೆಯಿಲ್ಲ ಎಂಬ ಛಲದೊಂದಿಗೆ ಟೆಕ್ ಜಯೆಂಟ್ ಎಂದೇ ಹೆಸರುವಾಸಿಯಾಗಿರುವ ಸ್ಯಾಮ್‌ಸಂಗ್ ವಿಶ್ವದ ಪ್ರಥಮ ಕರ್ವ್ ಫೋನ್ ಆದ ಗ್ಯಾಲಕ್ಸಿ ರೌಂಡ್ ಅನ್ನು ಕಳೆದ ವರ್ಷ ಬಿಡುಗಡೆಗೊಳಿಸಿತ್ತು. ಕೂಡಲೇ ಎಲ್‌ಜಿ, ಸ್ಯಾಮ್‌ಸಂಗ್‌ನ ಸ್ಥಳೀಯ ರೈವಲ್ ಕೂಡ ಇದೇ ರೀತಿಯ ಡಿಸ್‌ಪ್ಲೇ ತಂತ್ರಜ್ಞಾನದೊಂದಿಗೆ ಜಿ ಫ್ಲೆಕ್ಸ್ ಅನ್ನು ಲಾಂಚ್ ಮಾಡಿದೆ.

ಸ್ಯಾಮ್‌ಸಂಗ್ ಹೊಸ ಆವಿಷ್ಕಾರ ಫೋಲ್ಡೇಬಲ್ ಟ್ಯಾಬ್ಲೆಟ್

ತಂತ್ರಜ್ಞಾನ ರಂಗದಲ್ಲಿ ಈ ವಿಧದ ಪೈಪೋಟಿ ನಡೆಯುತ್ತಿದ್ದರೂ ಸಾಧನೆಗಳನ್ನು ಮಾಡುವ ಛಾತಿಯನ್ನು ಈ ಕಂಪೆನಿಗಳು ಕಡಿಮೆ ಮಾಡುತ್ತಿಲ್ಲ. ಈ ಸಾಧನೆಗಾಗಿ ಅಲ್ಪ ಮುಂದೆ ಸಾಗಿರುವ ಸ್ಯಾಮ್‌ಸಂಗ್ ಮಡಚಬಹುದಾದ ಡಿಸ್‌ಪ್ಲೇ ಇರುವ ಟ್ಯಾಬ್ಲೆಟ್ ಅನ್ನು ಹೊರತರುವ ನಿಟ್ಟಿನಲ್ಲಿದೆ. ಮೂರು ವಿಧದಲ್ಲಿ ಮಡಚಬಹುದಾದ ಟ್ಯಾಬ್ಲೆಟ್ ಇದಾಗಿದೆ.

ಒಂದು ಸುದ್ದಿಯ ಪ್ರಕಾರ ಈ ಟ್ಯಾಬ್ಲೆಟ್ 8 ಅಥವಾ 9 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, ಇದನ್ನು ಮಡಚಬಹುದಾಗಿದೆ. ಕಂಪೆನಿ ಈ ಟ್ಯಾಬ್ಲೆಟ್‌ಗೆ ಆಂಡ್ರಾಯ್ಡ್ ಅನ್ನು ಬಳಸುತ್ತದೆಯೇ ಅಥವಾ ತನ್ನದೇ ಆವೃತ್ತಿ ಟೈಜನ್ ಅನ್ನು ಬಳಸುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ. ಇದು OLED ಪೂರ್ಣ ಎಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದ್ದು ಈಗಾಗಲೇ ಸ್ಯಾಮ್‌ಸಂಗ್ ಪ್ರೊಟೋಟೈಪ್ ಮಾಡೆಲ್‌ಗಳನ್ನು ಪ್ರಾರಂಭಿಸುತ್ತಿದೆ.

Read more about:
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot